Breaking News

ದೊಡ್ಡಬಳ್ಳಾಪುರ

ಸಾಲಕ್ಕೆ ಬೇಸತ್ತು ಕನ್ನಡಪರ ಹೋರಾಟಗಾರ ಲೋಕೇಶ್ ಆತ್ಮಹತ್ಯೆ.!!

ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದರಿಂದ ಕಳೆದ ಒಂದು ವಾರದಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಅವರಿಗೆ ಆತ್ಮೀಯರು, ಹಿತೈಷಿಗಳು ಧೈರ್ಯ ತುಂಬಿದ್ದರು. ಆದರೆ, ಸೋಮವಾರ ತಡರಾತ್ರಿ ನಗರದ ಗಂಗಾಧರಪುರ ಮನೆ ಹೊರಗೆ ಟರ್ಪೆಂಟೈಲ್‌ ಆಯಿಲ್‌ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಶೇ40ರಷ್ಟು ಸುಟ್ಟ ಹೋಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ನಗರದ ಮುಕ್ತಿಧಾಮದಲ್ಲಿ ಮಂಗಳವಾರ ಅಂತ್ಯಕ್ರಿಯೆ ನಡೆಯಿತು.ಕರ್ನಾಟಕ ರಕ್ಷಣಾ ವೇದಿಕೆ …

Read More »

ಸರ್ಕಾರಿ ಶಾಲಾ ಕಟ್ಟಡಗಳ ನವೀಕರಣ ಮತ್ತು ಅಭಿವೃದ್ದಿಗೆ ಇನ್ಫೋಸಿಸ್ ಸಂಸ್ಥೆ ನೆರವು: ಸಚಿವ ಕೆ.ಎಚ್.ಮುನಿಯಪ್ಪ

ದೊಡ್ಡಬಳ್ಳಾಪುರ: ಇನ್ಫೋಸಿಸ್ ಸಂಸ್ಥೆ ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್‌ಆರ್)ಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಶಾಲಾ ಕಟ್ಟಡಗಳ ನವೀಕರಣ ಮತ್ತು ಅಭಿವೃದ್ಧಿಪಡಿಸಲು ಮುಂದೆ ಬಂದಿರುವುದು ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು. ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಿಎಸ್‌ಆರ್ ಅನುದಾನದಡಿ ಸರ್ಕಾರಿ ಶಾಲಾ ಕಟ್ಟಡಗಳ ಅಭಿವೃದ್ಧಿ ಪಡಿಸುವ ಸಲುವಾಗಿ ಚರ್ಚಿಸಲು …

Read More »

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಕೃಷ್ಣ ಬೈರೇಗೌಡ

ದೊಡ್ಡಬಳ್ಳಾಪುರ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಗುರುವಾರ ಇಲ್ಲಿಯ ತಾಲ್ಲೂಕು ಕಚೇರಿ, ಉಪವಿಗಾಧಿಕಾರಿಗಳ ಹಾಗೂ ಉಪನೋಂದಣಿ ಅಧಿಕಾರಿಗಳ ಕಚೇರಿಗೆ ದಿಢೀರ್‌ ಭೇಟಿ ನೀಡಿದರು. ಬೆಳಗ್ಗೆ 10.20ಕ್ಕೆ ಭೇಟಿ ನೀಡಿದಾಗ ಸಾರ್ವಜನಿಕರ ಹೊರತಾಗಿ ಯಾವ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಯಲ್ಲಿ ಇರಲಿಲ್ಲ. ಎಲ್ಲಾ ಖುರ್ಚಿಗಳು ಖಾಲಿ ಇರುವುದನ್ನು ಕಂಡ ಸಚಿವರು ಗರಂ ಆದರು. ಕೂಡಲೇ ಜಿಲ್ಲಾಧಿಕಾರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಕಚೇರಿಯಲ್ಲಿ ತಾವು ಕಂಡ ದೃಶ್ಯವನ್ನು ಖಾರವಾಗಿಯೇ ಹೇಳಿದರು. …

Read More »

ಬೆಳೆ ಸಮೀಕ್ಷೆಗೆ ಹೋದ ಕಂದಾಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ

ದೊಡ್ಡಬಳ್ಳಾಪುರ: ಬೆಳೆ ಸಮೀಕ್ಷೆ ಮಾಡಲು ಹೋದ ಕಂದಾಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರದ ಖಾಸ್ ಬಾಗ್ ನ ಕೃಷ್ಣಪ್ಪ ನವರ ಜಮೀನಿನಲ್ಲಿ ನಡೆದಿದೆ. ಸಿದ್ದೇನಾಯಕನಹಳ್ಳಿ ವೃತ್ತದ ಗ್ರಾಮ ಲೆಕ್ಕಾಧಿಕಾರಿ ರಾಜೇಂದ್ರ ಬಾಬು ಹಲ್ಲೆಗೊಳಗಾದ ಗ್ರಾಮಲೆಕ್ಕಾಧಿಕಾರಿಯಾಗಿದ್ದು, ಬೆಳೆ ಸಮೀಕ್ಷೆ ನಡೆಸಲು ಮೊಬೈಲ್ ನಲ್ಲಿ ಪೋಟೋ ತೆಗೆಯುತ್ತಿದ್ದ ವೇಳೆ ಗ್ರಾಮಲೆಕ್ಕಾಧಿಕಾರಿ ಮೇಲೆ ಜಮೀನಿನ ಮಾಲಿಕನ ಮಗ ವಂಸತ್ ಕುಮಾರ್ ನಿಂದ ಹಲ್ಲೆ ಮಾಡಲಾಗಿದೆ. ತೆಂಗಿನ ಮೊಟ್ಟೆಯಿಂದ ಗ್ರಾಮಲೆಕ್ಕಾಧಿಕಾರಿ ತಲೆ …

Read More »

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಬಳಿಯ ವೀರಾಪುರ ಗ್ರಾಮದಲ್ಲಿ ಚಿರತೆಯ ಓಡಾಡಿರುವು ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ…

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಬಳಿಯ ವೀರಾಪುರ ಗ್ರಾಮದಲ್ಲಿ ಚಿರತೆಯ ಓಡಾಡಿರುವು ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕೈಗಾರಿಕಾ ಪ್ರದೇಶದಲ್ಲಿನ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿರುವ ವೀರಾಪುರ ಗ್ರಾಮ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಅಂಟಿಕೊಂಡಿದೆ, ಗ್ರಾಮದ ರಾಮಮೂರ್ತಿ ಮನೆಯಂಗಳದಲ್ಲಿ ಚಿರತೆ ಒಡಾಡಿತ ದೃಶ್ಯಗಳು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ, ಮಧ್ಯರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ಮನೆ ಮುಂದಿನ ಅಡಿಕೆ ತೋಟದಲ್ಲಿ ಚಿರತೆ ದೃಶ್ಯ ಸೆರೆಯಾಗಿದೆ. ರಾಮಮೂರ್ತಿಯವರ ಕೊಳಿಯನ್ನು …

Read More »

33ಲಕ್ಷ ರೂ. ಮೌಲ್ಯದ ​ಬಿಯರ್ ಬ್ರಾಂಡ್ ಬಾಟಲಿಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ನಾಶ..

ದೊಡ್ಡಬಳ್ಳಾಪುರ: ಬಿಯರ್​ನಲ್ಲಿ ಸೆಡಿಮಂಟ್ ಅಂಶ ಶೇಖರಣೆಯಾಗಿರುವ ಹಿನ್ನೆಲೆ ಸುಮಾರು 33ಲಕ್ಷ ರೂ. ಮೌಲ್ಯದ ​ಬಿಯರ್ ಬ್ರಾಂಡ್ ಬಾಟಲಿಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ನಾಶಪಡಿಸಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿರುವ ಯುನೈಟೆಡ್ ಬ್ರಿವರೀಸ್ ಲಿಮಿಟೆಡ್​ನಲ್ಲಿ ಜುಲೈ 15 ರಂದು 7 ಇ ಮತ್ತು 7ಸಿ ಬ್ಯಾಚ್​ನಲ್ಲಿ ತಯಾರಾದ ಪ್ರತಿಷ್ಠಿತ ಬ್ರಾಂಡ್​ನ ಸ್ಟ್ರಾಂಗ್ ಮತ್ತು ಅಲ್ಟ್ರಾ ಲ್ಯಾಗರ್ ಬಿಯರ್​ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿತ್ತು. ಮಾನವ ಆರೋಗಕ್ಕೆ ಸೆಡಿಮೆಂಟ್ ಅಂಶ ಹಾನಿ ಮಾಡುವ ಹಿನ್ನೆಲೆ …

Read More »

ಮನೆ ಕಟ್ಟುವ ವಿಚಾರಕ್ಕೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬರ ಕೈ ಬೆರಳನ್ನೇ ಕತ್ತರಿಸಿದ ಕ್ರೂರಿ…

ದೊಡ್ಡಬಳ್ಳಾಪುರ: ಮನೆ ಕಟ್ಟುವ ವಿಚಾರಕ್ಕೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬರ ಕೈ ಬೆರಳನ್ನೇ ಕತ್ತರಿಸಿ ಕ್ರೂರತ್ವ ಮೆರೆದ ಘಟನೆ ತಾಲೂಕಿನ ಮರಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮರಳೇನಹಳ್ಳಿ ಅಂಬರೀಷ್ ಮಾರಣಾಂತಿಕವಾಗಿ ಹಲ್ಲೆಗೊಳಗಾದ ವ್ಯಕ್ತಿ. ಅದೇ ಗ್ರಾಮದ ತಿಮ್ಮರಾಜು‌ ಮತ್ತು ಕುಟುಂಬದವರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಗಾಯಾಳು ಅಂಬರೀಷ್ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿದ ತಿಮ್ಮರಾಜು, ಶಶಿಕಲಾ, ರಘು, ಮುನಿರಾಮಯ್ಯ, ಅರವಿಂದ ಹರ್ಷವರ್ಧನ್, ಸಿಂಧು‌ …

Read More »