Breaking News

33ಲಕ್ಷ ರೂ. ಮೌಲ್ಯದ ​ಬಿಯರ್ ಬ್ರಾಂಡ್ ಬಾಟಲಿಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ನಾಶ..

ದೊಡ್ಡಬಳ್ಳಾಪುರ: ಬಿಯರ್​ನಲ್ಲಿ ಸೆಡಿಮಂಟ್ ಅಂಶ ಶೇಖರಣೆಯಾಗಿರುವ ಹಿನ್ನೆಲೆ ಸುಮಾರು 33ಲಕ್ಷ ರೂ. ಮೌಲ್ಯದ ​ಬಿಯರ್ ಬ್ರಾಂಡ್ ಬಾಟಲಿಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ನಾಶಪಡಿಸಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿರುವ ಯುನೈಟೆಡ್ ಬ್ರಿವರೀಸ್ ಲಿಮಿಟೆಡ್​ನಲ್ಲಿ ಜುಲೈ 15 ರಂದು 7 ಇ ಮತ್ತು 7ಸಿ ಬ್ಯಾಚ್​ನಲ್ಲಿ ತಯಾರಾದ ಪ್ರತಿಷ್ಠಿತ ಬ್ರಾಂಡ್​ನ ಸ್ಟ್ರಾಂಗ್ ಮತ್ತು ಅಲ್ಟ್ರಾ ಲ್ಯಾಗರ್ ಬಿಯರ್​ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿತ್ತು. ಮಾನವ ಆರೋಗಕ್ಕೆ ಸೆಡಿಮೆಂಟ್ ಅಂಶ ಹಾನಿ ಮಾಡುವ ಹಿನ್ನೆಲೆ ಬಿಯರ್ ನಾಶ ಮಾಡುವಂತೆ ಅಬಕಾರಿ ಇಲಾಖೆಯ ಅಧಿಕಾರಿಗಳು ಆದೇಶ ನೀಡಿದ್ದರು.

ಅಬಕಾರಿ ಇಲಾಖೆಯ ಉಪ ಆಯುಕ್ತರ ಆದೇಶದ ಹಿನ್ನೆಲೆಯಲ್ಲಿ 1,272 ಪೆಟ್ಟಿಗೆಗಳನ್ನು ಮತ್ತು ದೊಡ್ಡಬಳ್ಳಾಪುರ ವಲಯದ 06 ಸನ್ನದುಗಳಿಗೆ ಕೆ.ಎಸ್.ಬಿ.ಸಿ.ಎಲ್​. ಮದ್ಯ ಮಳಿಗೆ ಬಾಶೆಟ್ಟಿಹಳ್ಳಿಯಿಂದ ಸರಬರಾಜಾದ 149 ಬಾಟಲಿಗಳನ್ನು ಸನ್ನದುಗಳಿಂದ ವಾಪಸ್​​ ಪಡೆದು ಒಟ್ಟು 33 ಲಕ್ಷ ಮೌಲ್ಯದ ದಾಸ್ತಾನನ್ನು ನಾಶಪಡಿಸಲಾಗಿದೆ.

Share News

About BigTv News

Check Also

ಎನಿ ಕಂಡೀಶನ್… ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ ಎಂಟ್ರಿ! ಬೆಳಗ್ಗೆಯೇ ಅಧಿಕಾರ ಸ್ವೀಕಾರ…!

ಭೂಷಣ್ ಬೋರ್ಸೆ ಹೆಗಲಿಗೆ ಅವಳಿ ನಗರದ ಖಾಕಿ ಹೊಣೆ! ನಾಳೆಯಿಂದ ಹುಬ್ಬಳ್ಳಿ–ಧಾರವಾಡಕ್ಕೆ ಹೊಸ ಕಮಿಷನರ್! ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ …

Leave a Reply

Your email address will not be published. Required fields are marked *