BigTv News
April 24, 2025
Breaking News, Crime, ಹುಬ್ಬಳ್ಳಿ-ಧಾರವಾಡ
ಆಟೋಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಯುವಕ ನೊಬ್ಬ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ. ಹುಬ್ಬಳ್ಳಿ ತಾಲೂಕು ಅಂಚಟಗೆರೆ ಗ್ರಾಮದ ಪ್ರಕಾಶ್ ಭೀಮಪ್ಪ ವಾಲಿಕರ್ ಮೃತ ಯುವಕ. ಆಟೋದಲ್ಲಿ ಎಲ್ಲಮ್ಮನ ಗುಡ್ಡಕ್ಕೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ಮಿನಿ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡಿದ್ದ ಪ್ರಕಾಶನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಸಾವನ್ನಪ್ಪಿದ್ದಾನೆ. ಆಟೋದಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ ಗ್ರಾಮೀಣ ಠಾಣೆಯಲ್ಲಿ …
Read More »
BigTv News
April 24, 2025
Breaking News, Crime, ಧಾರವಾಡ
ಧಾರವಾಡದಲ್ಲಿ ಅಪ್ರಾಪ್ತ ಮೇಲೆ ಅತ್ಯಾಚಾರ ಎಸೆಗಿದ ಆರೋಪದಡಿ ವ್ಯಕ್ತಿ ಒಬ್ಬನನ್ನು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಗುಜರಿ ವಸ್ತುಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದ ಕಡೆದೆಪ್ಪ ಶೃಂಗೇರಿ ಎಂಬತ 10 ವರ್ಷದ ಬಾಲಕಿಯನ್ನು ಪುಸಲಾಯಿಸಿ ವಸ್ತುಗಳನ್ನು ಸಂಗ್ರಹಿಸಲು ಇಟ್ಟಿದ್ದ ಗುಡಾನಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಿಗಿದ್ದಾನೆ. ಈ ಕುರಿತು ಬಾಲಕಿಯ ತಂದೆ ನೀಡಿದ ದೂರಿನ ಅನ್ವಯ ವಿದ್ಯಾಗಿರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
Read More »
BigTv News
April 24, 2025
Breaking News, Crime, ಹುಬ್ಬಳ್ಳಿ-ಧಾರವಾಡ
ಲಾರಿ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ನರೇಂದ್ರ ಕ್ರಾಸ್ ಬಳಿ ಬುಧವಾರ ನಡೆದಿದೆ. ನವಲಗುಂದದ ಬಸವರಾಜ ಮಹದೇವಪ್ಪ ಮೃತ ಯುವಕ. ಈತ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಲಾರಿ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read More »
BigTv News
April 24, 2025
Breaking News, Crime, ಹುಬ್ಬಳ್ಳಿ-ಧಾರವಾಡ
ಕುಂದಗೋಳ ತಾಲೂಕಿನ ಹಿರೇನಿರ್ತಿ ಗ್ರಾಮದ ರೈತನೊಬ್ಬನ ಬ್ಯಾಂಕ್ ಖಾತೆಯಲ್ಲಿದ್ದ 98 ಸಾವಿರ ಅನ್ನು ದುಷ್ಕರ್ಮಿಗಳು ವರ್ಗಾವಣೆ ಮಾಡಿಕೊಂಡು ವಂಚಿಸಿದ ಘಟನೆ ಪಟ್ಟಣದಲ್ಲಿ ಸೋಮವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಹತ್ತಾರು ಸಂಕಷ್ಟಗಳ ಮಧ್ಯೆ ಕಷ್ಟ ಕಾಲಕ್ಕೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ ರೈತ ಕುಂದಗೋಳದ ಕೆನರಾ ಬ್ಯಾಂಕ್ ನಲ್ಲಿ ಹಣ ಇಟ್ಟಿದ್ದರು. ಆದರೆ ರೈತನ ಖಾತೆಯಿಂದ ಎರಡು ಹಂತದಲ್ಲಿ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ …
Read More »
BigTv News
April 24, 2025
Breaking News, Crime, ಧಾರವಾಡ
ಧಾರವಾಡ ಗಾಂಧಿ ಚೌಕ್ ಬಳಿ ಸಿಗರೇಟಿನಲ್ಲಿ ಗಾಂಜಾ ಬೆರೆಸಿ ಸೇದುತ್ತಿದ್ದ ಯುವಕರ ಗುಂಪನ್ನು ಅಲ್ಲಿಯ ಮನೆ ಹೊಂದಿರುವ ಆರ್ ಎಸ್ಕಾರ್ಯ ವಾಹಕ ಶಿರೀಶ್ ಬಳ್ಳಾರಿ ಎಂಬವರು ಪ್ರಶಸ್ತಿದ್ದಾರೆ. ಕುಟುಂಬಸ್ಥರು ವಾಸಿಸುವ ಸ್ಥಳದಲ್ಲಿ ಈ ರೀತಿ ಮಾಡುವುದು ತಪ್ಪು ಎಂದು ಬುದ್ಧಿ ಹೇಳಿದ್ದಾರೆ. ಇದನ್ನು ನೆಪವಾಗಿಟ್ಟುಕೊಂಡು ಆ ಯುವಕರ ಗುಂಪು ಶಿರಿಶ್ ಅಲ್ಲದೆ ಅವರ ಮನೆಗೆ ಹೋಗಿ ಗಲಾಟೆ ಮಾಡಿ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ. ಸುದ್ದಿ ತಿಳಿದು ಹಿಂದೂ ಕಾರ್ಯಕರ್ತರು …
Read More »
BigTv News
April 24, 2025
Breaking News, Crime, ಧಾರವಾಡ
ಧಾರವಾಡದಲ್ಲಿ ಮನೆ ಮನೆಗೆ ತೆರಳಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸುತ್ತಿದ್ದ ಮೂವರು ಮಹಿಳೆಯರನ್ನು ಹಿಡಿದ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಪೊಲೀಸರ ವಶಕ್ಕೆ ನೀಡಿದ್ದಾರೆ. ಧಾರವಾಡದ ಲಕ್ಷ್ಮಿಸಿಂಗನಕೆರೆಯಲ್ಲಿರುವ ರಾಜು ಪೂಜಾರ್ ಎಂಬುವವರ ಮನೆಗೆ ಬೈಬಲ್ ಹಿಡಿದುಕೊಂಡು ಹೋದ ಮಹಿಳೆಯರು ನೀವು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿ. ನಿಮ್ಮ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ನಿಮ್ಮ ಅನಾರೋಗ್ಯ ಸಮಸ್ಯೆ ಯೇಸು ನಿವಾರಿಸುತ್ತಾನೆ ಎಂದು ಒತ್ತಡ ಹೇರಿದ್ದಾರೆ. ಒತ್ತಡ ತಾಳಲಾರದೆ …
Read More »
BigTv News
April 24, 2025
Breaking News, Crime
ಅಸ್ಸಾ ನ ಕಚಾರ್ ಜಿಲ್ಲೆಯಲ್ಲಿ 3 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯಗಳೊಂದಿಗೆ ಶಂಕಿತ ಪೆಡ್ಲರ್ ನನ್ನು ಬಂಧಿಸಲಾಗಿದೆ. ಡ್ರಗ್ಸ್ ಪೆಡ್ಲರ್ ಬಂಧನವನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯ ಸಿಲ್ದುಬಿ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ಹೇಳಿದರು.ಪ್ರಮುಖ ಮಾದಕವಸ್ತು ದಾಳಿ 3 ಕೋಟಿ ರೂ.ಗಳ ಮೌಲ್ಯದ 10,000 ಯಾಬಾ ಮಾತ್ರೆಗಳನ್ನು ವಶಪಡಿಸಿಕೊಂಡಿದೆ. ಒಬ್ಬ ಪೆಡ್ಲರ್ ನನ್ನು ಬಂಧಿಸಲಾಗಿದೆ ಎಂದು ಶರ್ಮಾ ಎಕ್ಸ್ ನಲ್ಲಿ …
Read More »
BigTv News
April 24, 2025
Breaking News, Crime, ಕರ್ನಾಟಕ, ಕಲಬುರಗಿ
ಮಹಾರಾಷ್ಟ್ರ-ಕರ್ನಾಟಕ ಗಡಿ ಭಾಗದಲ್ಲಿರುವ ಹೈದ್ರಾ ದರ್ಗಾದಲ್ಲಿ ಆಯಿಷಾ ಸಂಬಂಧಿಕರ ಮಗುವಿನ ಕೇಶ ಮುಂಡನ ಕಾರ್ಯಕ್ರಮಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಬೀದಿನಾಯಿಯನ್ನು ಉಳಿಸಲು ಹೋಗಿ ಕಾರು ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ರಸ್ತೆಯಲ್ಲಿ ಉರುಳಿ ಬಿದ್ದಿದೆ. ಅಫಜಲಪುರ ತಾಲೂಕಿನ ಗೊಬ್ಬೂರ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಘಟನೆ ನಡೆದಿದ್ದು, ಮೃತರನ್ನು ಕಲಬುರಗಿಯ ಮಿಲ್ಲತ್ ನಗರದ ನಿವಾಸಿಗಳಾದ ಆಯಿಷಾ ಅಜ್ಮೇರಾ ಹಾಗೂ ಜೈನಬ್ ಎಂದು ಗುರುತಿಸಲಾಗಿದೆ.ಸ್ಥಳಕ್ಕೆ ದೇವಲ ಗಾಣಗಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ …
Read More »
BigTv News
April 24, 2025
Breaking News, Crime
ಬಸ್ರೂರು ಗ್ರಾಮದ ಕೊಳ್ಕೆರೆ ಸುರೇಂದ್ರ ಅವರು ಮನೆಯಲ್ಲಿದ್ದಾಗ, ವನಜಾ, ರಾಜ, ರಕ್ಷತ ಅವರು ಮನೆಯೊಳಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಹಿಗ್ಗಾ ಮುಗ್ಗಾ ಥಳಿಸಿ ಕೊಲ್ಲಬೇಕು ಎಂದು ಪಂಚಾಯತ್ ಸದಸ್ಯ ನಾಗರಾಜ್ ಹೇಳಿದ ಕಾರಣ, ನಿನ್ನನ್ನು ಬಿಡುವುದಿಲ್ಲ ಕೊಲ್ಲುತ್ತೇವೆ ಎಂದವರು ಬೆದರಿಕೆ ಹಾಕಿದ್ದಾರೆ.ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
April 24, 2025
Breaking News, Crime
ಬುಕ್ಕಾಪಟ್ಟಣದ ಪಾನಿಪೂರಿ ಅಂಗಡಿಯೊಂದರಲ್ಲಿ ಪಾನಿಪುರಿ ತಿಂದ 25ಕ್ಕೂ ಹೆಚ್ಚು ಮಂದಿಗೆ ಹೊಟ್ಟೆ ನೋವು, ವಾಂತಿ, ಭೇದಿ ಕಾಣಿಸಿಕೊಂಡಿದೆ. ಬುಕ್ಕಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.ಜಿಲ್ಲಾ ಆಹಾರ ಗುಣಮಟ್ಟ ಸುರಕ್ಷತೆ ಅಧಿಕಾರಿ ಚಂದ್ರಪ್ಪ ಅವರು ಗ್ರಾಮಕ್ಕೆ ಭೇಟಿ ನೀಡಿ ಅಂಗಡಿ ಮಾಲೀಕನನ್ನು ಕರೆಸಿ ನೋಟಿಸ್ ನೀಡಿದ್ದಾರೆ.ಹಿಂದೆ ಒಂದು ಬಾರಿ ಸ್ಥಳಕ್ಕೆ ಭೇಟಿ ನೀಡಿ ಎಚ್ಚರಿಕೆ ನೀಡಿ ನೋಟಿಸ್ ನೀಡಿದ್ದರೂ ಈತ ಸ್ವಚ್ಛತೆ ಹಾಗೂ …
Read More »