BigTv News
June 4, 2025
Breaking News, Crime
ಆರೋಪಿ ಶ್ಯಾಡೊ ಸಚಿನ್ ಎಂಬಾತನ ಮೇಲೆ ಸುಮಾರು 30 ಪ್ರಕರಣಗಳಿದ್ದು ಈತ ಕಳೆದ 6 ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ನಡೆಸಿದ್ದ.ಆತನನ್ನು ಬಂಧಿಸಲು ಯತ್ನಿಸಿದಾಗ ಹೆಡ್ ಕಾನ್ಸ್ ಸ್ಟೇಬಲ್ ಅಶೋಕ್ ಎಂಬವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದು, ಪಿಎಸ್‌ಐ ಯುವರಾಜ್ ಕಂಬಳಿ ಅವರ ಮೇಲೆಯೂ ಹಲ್ಲೆಗೆ ಯತ್ನಿಸಿದಾಗ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಿರುವುದಾಗಿ ಪೊಲೀಸ್ ಮಾಹಿತಿ ದೊರೆತಿದೆ.
Read More »
BigTv News
June 4, 2025
Breaking News, Crime
ತನ್ನ ಅನೈತಿಕ ಸಂಬಂಧಕ್ಕೆ ತೊಂದರೆಯಾಗುತ್ತಾರೆ ಎಂದು ಮಹಿಳೆ, ತನ್ನ ಪತಿ, ಮಕ್ಕಳು, ಅತ್ತೆ, ಮಾವನಿಗೆ ಊಟದಲ್ಲಿ ವಿಷ ಹಾಕಿ ಕೊಲೆ ಮಾಡಲು ಯತ್ನಿಸಿರುವ ಆರೋಪದಡಿ ಮಹಿಳೆಯನ್ನು ಬಂಧಿಸಿರುವ ಘಟನೆ ತಾಲೂಕಿನ ಕೆರಳೂರು ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.ಬಂಧಿತ ಆರೋಪಿಯನ್ನು ಕೆರಳೂರು ಗ್ರಾಮದ ನಿವಾಸಿ ಗಜೇಂದ್ರ ಎಂಬವರ ಪತ್ನಿ ಚೈತ್ರಾ ಎಂದು ಗುರುತಿಸಲಾಗಿದೆ. ಮಹಿಳೆಯನ್ನು ವಶಕ್ಕೆ ಪಡೆದಿರುವ ಬೇಲೂರು ಪಿಎಸ್‌ಐ ಎಸ್.ಜಿ. ಪಾಟೀಲ್ ಹಾಗೂ ಸಿಬ್ಬಂದಿ ವಿಚಾರಣೆಗೆ ಒಳಪಡಿಸಿದ್ದಾರೆ.
Read More »
BigTv News
June 4, 2025
Breaking News, Crime
ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಭೀಕರವಾದ ಕೊಲೆ ನಡೆದಿದ್ದು ವ್ಯಕ್ತಿ ಒಬ್ಬರನ್ನು ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಬಿ.ಬಿ ರಸ್ತೆಯ SBI ಬ್ಯಾಂಕ್ ಬಳಿ ಇಂದು ಮುಂಜಾನೆ ನಡೆದಿದೆ.ಹತ್ಯೆಯಾದ ವ್ಯಕ್ತಿಯನ್ನು ನಗರದ ಚಾಮರಾಜಪೇಟೆ ಕಾಲೊನಿಯ ಶ್ರೀಕಾಂತ್ (29) ಎಂದು ತಿಳಿದುಬಂದಿದೆ.ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
June 4, 2025
Breaking News, Crime
ಬಾಲಾಜಿ ಲೇಔಟ್‌ನ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ನೇಪಾಳ ಮೂಲದ ದಂಪತಿಗಳಾದ ಲೋಕೇಶ್ ಮತ್ತು ಅಮೃತ ದಂಪತಿಗಳ ಮಗುವಿನ ಮೇಲೆ ಈ ದೌರ್ಜನ್ಯ ನಡೆದಿದೆ.ತಂದೆಯೊಬ್ಬ ತನ್ನ ಹೆಣ್ಣು ಮಗುವಿನ ಮೇಲೆ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ಕ್ರೂರವಾಗಿ ಹಲ್ಲೆ ಮಾಡಿದ್ದಾನೆ.ವಿದ್ಯಾರಣ್ಯಪುರ ಹೊಯ್ಸಳ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ತಂದೆ ಲೋಕೇಶ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣವನ್ನು ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 323 …
Read More »
BigTv News
June 3, 2025
Breaking News, Crime
ಮೋಟಾರು ಪಂಪಸೆಟ್ ಕಳವು ಮಾಡಿದ್ದ 4 ಜನರನ್ನು ಪೊಲೀಸರು ಬಂಧಿಸಿದ್ದಾರೆ.ಹಿರೆಮೇಗಳಗೆರೆ ಗ್ರಾಮದ ಗಾಯಪ್ಪರ ಹನುಮಂತ, ಕರಳೇರ ಅಣ್ಣಪ್ಪ, ಪೂಜಾರ ಪರಶುರಾಮ ಹಾಗೂ ನಾಗಪ್ಳರ ಅರುಣ ಬಂಧಿತ ಆರೋಪಿಗಳು. ಅವರಿಂದ 10 ಎಚ್.ಪಿ ಮತ್ತು 7 ಎಚ್.ಪಿ. ಸಾಮರ್ಥ್ಯದ ಪಂಪಸೆಟ್ ಮೋಟಾರು, ಎರಡು ಬೈಕ್ ಜಪ್ತಿ ಮಾಡಲಾಗಿದೆ
Read More »
BigTv News
June 3, 2025
Breaking News, Crime
ಪ್ರಕರಣವೊಂದರ ಆರೋಪಿಯೊಬ್ಬನನ್ನು ಜೈಲಿಗೆ ಬಿಡಬೇಕಾದ ಸಂದರ್ಭದಲ್ಲಿ ಆತನಿಂದ ಮೊಬೈಲ್ ಮತ್ತು ಫೊನ್ ಪೇ ಪಾಸ್‌ವರ್ಡ್ ಪಡೆದ ಸಂಗಮೇಶ್ ಮೇಟಿ ಆನ್‌ಲೈನ್ ಬೆಟ್ಟಿಂಗ್ ಆಡಿದ್ದರು ಎಂಬ ಆರೋಪ ಕೇಳಿಬಂದಿತ್ತು.ಆರೋಪಿ ದೂರಿನ ತನಿಖೆ ಮಾಡಿದಾಗ, ಆರೋಪಿಯ ಮೊಬೈಲ್‌ನಿಂದ ಸಬ್ ಇನ್‌ಸ್ಪೆಕ್ಟರ್ ಆನ್‌ಲೈನ್ ಬೆಟ್ಟಿಂಗ್‌ಗಾಗಿ ಆತನ ₹95 ಸಾವಿರ ದುರುಪಯೋಗಪಡಿಸಿಕೊಂಡಿರುವುದು ಸಾಬೀತಾಗಿದೆ
Read More »
BigTv News
June 3, 2025
Breaking News, Crime
ಚಾಮರಾಜನಗರ ರಸ್ತೆಯಲ್ಲಿರುವ ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ಹೊನ್ನೂರು ಗ್ರಾಮದ ಕುಮಾರ್ ಎಂಬುವರು ಬೈಕ್ ನಿಲ್ಲಿಸಿ ಹೋಗಿದ್ದರು.ಈ ವೇಳೆಯಲ್ಲಿ ಬೈಕ್ ಕಳವಾಗಿತ್ತು. ಈ ಸಂಬಂಧವಾಗಿ ಸಂತೇಮರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಬೈಕ್‌ನಲ್ಲಿ ಟಿ.ನರಸೀಪುರದಿಂದ ಕುಂತೂರು ಮೋಳೆ ಗ್ರಾಮಕ್ಕೆ ಟಗರಪುರ ಮುಖ್ಯ ರಸ್ತೆ ತೆರಳುತ್ತಿದ್ದ ವೇಳೆ ಬಂಧಿಸಲಾಗಿದೆ. ಬೈಕ್ ವಶಕ್ಕೆ ಪಡೆಯಲಾಗಿದೆ.
Read More »
BigTv News
June 3, 2025
Breaking News, Crime
ಕನ್ನಡದ ಬಗ್ಗೆ ಕೀಳಾಗಿ ಮಾತನಾಡಿದ್ದಲ್ಲದೆ ಕಮಲ್ ಹಾಸನ್ ಕನ್ನಡಿಗರಿಗೆ ಅವಮಾನ ಮಾಡಿಯೂ ಮೊಂಡಾಟ ಮುಂದುವರಿಸಿದ್ದಾರೆ. ಈ ಹಿನ್ನೆಲೆ ಮಾಡಿದ ತಪ್ಪಿಗೆ ಕ್ಷಮೆಯೂ ಕೇಳದ ಕಾರಣ ಕಾರಣ ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ ಖಡಕ್ ಸಂದೇಶವೊಂದನ್ನು ಕಮಲ್ ಹಾಸನ್‌ಗೆ ರವಾನಿಸಿದ್ದಾರೆ.ಕಮಲ್ ಥಗ್‌ಲೈಫ್ ಸಿನಿಮಾ ಮಾತ್ರವಲ್ಲ, ಅವರಿಗೂ ಕರ್ನಾಟಕದಲ್ಲಿ ಎಂಟ್ರಿ ಇಲ್ಲ. ಕಮಲ್ ಅವರನ್ನೂ ಕರ್ನಾಟಕದಲ್ಲಿ ಬ್ಯಾನ್ ಮಾಡುತ್ತೇವೆ ಎಂದು ಕರವೇ ನಾರಾಯಣಗೌಡ ಹೇಳಿದ್ದಾರೆ. ಈ ಸಿನಿಮಾ ಮಾತ್ರವಲ್ಲ, ಇನ್ನು ಮುಂದೆ ಕಮಲ್ …
Read More »
BigTv News
June 3, 2025
Breaking News, Crime
ಮಸೀದಿಯಲ್ಲಿ ಮೌಲ್ವಿಯಾಗಿ ಕೆಲಸ ಮಾಡುತ್ತಿದ್ದುದರಿಂದ ಮೌಲ್ವಿಯ ಆಶ್ರಯಕ್ಕೆ ಮಸಿದಿಯ ಕೊಠಡಿಯನ್ನು ಜಮಾತ್ ನೀಡಿತ್ತು. ಅದೇ ಕೊಠಡಿಯನ್ನು ಆರೋಪಿ ದುರುಪಯೋಗಪಡಿಸಿಕೊಂಡಿದ್ದಾನೆ. ಚಾಕೊಲೇಟ್ ಕೊಡಿಸುವ ಆಮಿಷವೊಡ್ಡಿ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.ಸಂತ್ರಸ್ತೆ ಬಾಲಕಿಯ ತಾಯಿ ಆರೋಪಿಸಿದ್ದು, ಅವರು ನೀಡಿದ ದೂರಿನ ಆಧಾರದಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Read More »
BigTv News
June 3, 2025
Breaking News, Crime
ಖುರ್ಷಿದ್ ಇತ್ತೀಚೆಗೆ ದೆಹಲಿ ಪೊಲೀಸರ ವಿಶೇಷ ದಳಕ್ಕೆ ನೇಮಕಗೊಂಡಿದ್ದ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಖುರ್ಷಿದ್‌ನನ್ನು ಗುರುತಿಸಿ ಮೇ 31 ರಂದು ಬಂಧಿಸಿದ್ದಾರೆ. ಖುರ್ಷಿದ್ ಸ್ವಲ್ಪ ಸಮಯ ಮಾಲ್‌ಖಾನೆಯಲ್ಲಿ ನೇಮಕಗೊಂಡಿದ್ದ. ಅದೇ ಅವಧಿಯಲ್ಲಿ ಅವನು ತನ್ನದೇ ಆದ ಒಂದು ಕೀಲಿಯನ್ನು ಮಾಡಿಸಿಕೊಂಡು ಕಳ್ಳತನವನ್ನು ಮಾಡಿದ್ದಾನೆ.50 ಲಕ್ಷ ರೂಪಾಯಿ ನಗದು ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದಾನೆ.
Read More »