BigTv News
May 31, 2025
Breaking News, Crime
ಅರಸೀಕೆರೆಯ ಸುಬ್ರಹ್ಮಣ್ಯ ನಗರ ಬಡಾವಣೆಯಲ್ಲಿ ಗುತ್ತಿಗೆದಾರ ವಿಜಯ್ ಕುಮಾರ್ (46) ಎಂಬವರನ್ನು ಚಿನ್ನಾಭರಣಗಳಿಗಾಗಿ ಕಾರ್ಮಿಕರೇ ಬರ್ಬರವಾಗಿ ಕೊಲೆಗೈದ ಘಟನೆ ನಡೆದಿದೆ. ಕೊಲೆಯ ನಂತರ ಆರೋಪಿಗಳು ವಿಜಯ್‌ರ ಕೈ ಬೆರಳಿನ ಚಿನ್ನದ ಉಂಗುರವನ್ನು ತೆಗೆಯಲಾಗದೇ, ಬೆರಳನ್ನೇ ಕತ್ತರಿಸಿ ಒಡವೆಯೊಂದಿಗೆ ಪರಾರಿಯಾಗಿದ್ದಾರೆ.ಕೂಡಲೇ ಸ್ಥಳಕ್ಕೆ ತೆರಳಿದ ಶ್ರೀನಿವಾಸ್, ವಿಜಯ್ ಕುಮಾರ್‌ರನ್ನು ಕೊಲೆಗೈದಿರುವುದನ್ನು ಕಂಡು ಅರಸೀಕೆರೆ ನಗರ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಬಂಧನಕ್ಕೆ ತನಿಖೆ ಆರಂಭಿಸಿದ್ದಾರೆ.
Read More »
BigTv News
May 31, 2025
Breaking News, Crime
ಆಸ್ತಿ ವಿಚಾರದ ನಲ ಸಹೋದರರ ಮಧ್ಯೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ನಡೆದಿದೆ.52ವರ್ಷದ ರಮೇಶ್ ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದ್ದು, ಸಹೋದರ ಸಂಗಮೇಶ ಹಾಗೂ ಆತನ ಮಕ್ಕಳು ಭೀಕರ ಹಲ್ಲೆ ನಡೆಸಿದ್ದರಿಂದ ರಮೇಶ್ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ರಮೇಶ ಕುಟುಂಬಸ್ಥರು ಆರೋಪಿಸಿದ್ದಾರೆ.
Read More »
BigTv News
May 30, 2025
Breaking News, Crime
ಒಡಿಶಾದಲ್ಲಿ ಇಂದು ವಿಚಕ್ಷಣ ದಳದ ಅಧಿಕಾರಿಗಳು ದಾಳಿ ಮಾಡಿದ್ದು, ದೊಡ್ಡ ತಿಮಿಂಗಿಲವನ್ನೇ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದೆ. ಸರ್ಕಾರಿ ನೌಕರನ ಭುವನೇಶ್ವರದ ಫ್ಲಾಟ್‌ನಲ್ಲಿ ಒಂದು ಕೋಟಿ ರೂಪಾಯಿ ನಗದು ಜಪ್ತಿಯಾಗಿದ್ರೆ, ಅಂಗೂಲ್ ಎಂಬಲ್ಲಿನ ಮನೆಯಲ್ಲಿ 1 ಕೋಟಿ 10 ಲಕ್ಷ ನಗದು ಸಿಕ್ಕಿದೆ.ತಕ್ಷಣವೇ ಸಾಹೇಬ್ರು ಕೋಟ್ಯಾಂತರ ರೂಪಾಯಿ ನೋಟಿನ ಕಂತೆಯನ್ನು ಕಿಟಕಿ ಮೂಲಕ ಹೊರಗೆ ಎಸೆದಿದ್ದಾರೆ.ಚೀಫ್ ಇಂಜಿನಿಯರ್ ಪ್ಲ್ಯಾಟ್‌ನ ಕಿಟಕಿಯಿಂದ ಹೊರಗೆ ಎಸೆದ ಹಣವನ್ನು ಅಧಿಕಾರಿಗಳು ಕೂಡಲೇ ವಶಪಡಿಸಿಕೊಂಡಿದ್ದಾರೆ. ಈಗ ಸುಮಾರು …
Read More »
BigTv News
May 30, 2025
Breaking News, Crime
ಪತ್ನಿ ಕಾಟಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಅನಗೋಳದ ದುರ್ಗಾ ಕಾಲೋನಿಯಲ್ಲಿ ಘಟನೆ ನಡೆದಿದೆ.ತನ್ನ ಸಾವಿಗೆ ಪತ್ನಿ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಸುನಿಲ್ ಮಾಡಿಕೊಂಡಿದ್ದಾರೆ.ನಾಲ್ಕು ವರ್ಷದ ಹಿಂದೆ ಪೂಜಾ ಎಂಬಾಕೆಯನ್ನು ಸುನಿಲ್ ಮದುವೆಯಾಗಿದ್ದರು. ದಂಪತಿಗೆ ಮೂರು ವರ್ಷದ ಒಂದು ಮಗು ಇದೆ. ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Read More »
BigTv News
May 30, 2025
Breaking News, Crime
ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಆರೋಪಿ ಯನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.ಮಗಳ ಅಪಹರಣದ ಬಗ್ಗೆ ತಾಯಿ ಮೂಲ್ಕಿ ಠಾಣೆಯಲ್ಲಿ ದೂರು ನೀಡಿದ್ದರು. ಆರೋಪಿಯು ಬಾಲಕಿಯೊಂದಿಗೆ ಗುರುವಾರ ಮಂಗಳೂರಿಗೆ ಬಂದಿರುವ ಮಾಹಿತಿ ಪಡೆದ ಮೂಲ್ಕಿ ಪೊಲೀಸರು ಆತನನ್ನು ಬಂಧಿಸಿದರು. ಆತ ತನ್ನನ್ನು ಅಪಹರಿಸಿ ಅತ್ಯಾಚಾರ ಎಸಗಿರುವುದಾಗಿ ವಿಚಾರಣೆ ವೇಳೆ ಬಾಲಕಿ ತಿಳಿಸಿದ್ದು, ಅದರಂತೆ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ್ ಅವರು ಪೋಕೊà ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read More »
BigTv News
May 30, 2025
Breaking News, Crime
ಮನೆಯ ಬಳಿ ಗ್ಯಾಸ್ ಸಿಲಿಂಡರ್ ವಾಹನ ತಂದು ನಿಲ್ಲಿಸಿ, ಮನೆ ಬಾಗಿಲು ಬಡಿದು ಗ್ಯಾಸ್ ಸಿಲಿಂಡರ್ ತೆಗೆದುಕೊಳ್ಳಿ ಎಂದಿದ್ದ. ಆಗ ಮಹಿಳೆ ತಾನು ಸಿಲಿಂಡರ್ ಬುಕ್ ಮಾಡಿಲ್ಲ ಎಂದು ಹೇಳಿದ್ದಾಳೆ. ಆದರೂ ಕೇಳದ ಆರೋಪಿ ಗ್ಯಾಸ್ ಖಾಲಿಯಾಗಿದ್ದರೆ ತೆಗೆದುಕೊಳ್ಳಿ ಎಂದು ಒತ್ತಾಯಿಸಿದ್ದಾನೆ. ಇದಕ್ಕೆ ಮಹಿಳೆ ಒಪ್ಪಿ 950 ರೂ. ನೀಡಿ ಸಿಲಿಂಡರ್ ಪಡೆದಿದ್ದಾರೆ.ಅಷ್ಟಕ್ಕೆ ಸ್ಥಳದಿಂದ ಹೋಗದ ಆಸಾಮಿ ಮಹಿಳೆಯನ್ನು ಯಾಮಾರಿಸಿದ್ದಾನೆ. ಆತನ ಮಾತನ್ನು ನಂಬಿ ಮಹಿಳೆ ಮನೆಯೊಳಗೆ ಬಿಟ್ಟಿದ್ದಾಳೆ.ಮಹಿಳೆಯನ್ನು ಅಡುಗೆ …
Read More »
BigTv News
May 30, 2025
Breaking News, Crime
ತಾಯಿ ಕೊಲೆ ಪ್ರಕರಣ ಸಂಬಂಧಿಸಿದಂತೆ ತೋರವಿ ಹಕ್ಕಲ್ ನಲ್ಲಿರೋ ಮನೆಗೆ ಭೇಟಿ ನೀಡಿ ಶಶಿಕುಮಾರ್ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದ ಎನ್ ಶಶಿಕುಮಾರ್, ಮಹಿಳೆಯೊಂದಿಗಿನ ಅನೈತಿಕ ಸಂಬಂಧವೆ ಕೊಲೆಗೆ ಕಾರಣ ಎಂದು ತಿಳಿಸಿದ್ದಾರೆ.ಮಂಜುನಾಥ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ,ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಮನೆಯಲ್ಲಿ ಆಗಾಗ ಜಗಳ ಆಗುತ್ತಿತ್ತು. ನಿನ್ನೆ ಜಗಳ ವಿಕೋಪಕ್ಕೆ ಹೋಗಿದೆ ಕಿಟಕಿಯ ಗಾಜಿನಿಂದ ಹೊಟ್ಟೆಗೆ ತಿವಿಯಲಾಗಿದೆ ಮುವ್ವರ ಪೈಕಿ ಯಾರು ಚಾಕುವಿನಿಂದ ಇರಿದಿದ್ದರೆ …
Read More »
BigTv News
May 30, 2025
Breaking News, Crime
ಅಣ್ಣನ ಅಕ್ರಮ ಸಂಬಂಧದ ಬಗ್ಗೆ ಕೇಳಿದಕ್ಕೆ ತಮ್ಮನ ಕೊಲೆ ಮಾಡಲು ಯತ್ನ ನಡೆದಿತ್ತು. ಜಗಳ ಬಿಡಿಸಲು ನಡುವೆ ಹೋದ ತಾಯಿ ಬಲಿಯಾಗಿದ್ದು, ಮದುವೆಯಾದರೂ ಪರ ಸ್ತ್ರೀ ಜೊತೆಗೆ ಸಂಬಂಧ ಇಟ್ಟುಕೊಂಡಿದ, ಮಂಜುನಾಥನ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ತಮ್ಮ ಲಕ್ಷ್ಮಣ ಮೇಲೆ ಹಲ್ಲೆಗೆ ಯತ್ನ ನಡೆಸಿ, ಗಲಾಟೆ ಬಿಡಿಸಲು ಹೋದಾಗ ಗ್ಲಾಸ್ ನಿಂದ ಇರಿದಿದ್ದ,ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಪದ್ಮಾ ಕಿಮ್ಸ್ ಗೆ ರವಾನೆ ಮಾಡಲಾಗಿತ್ತು. ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪದ್ಮಾ …
Read More »
BigTv News
May 30, 2025
Breaking News, Crime
ಹುಬ್ಬಳ್ಳಿಯ ತೊರವಿ ಹಕ್ಕಲದಲ್ಲಿ ನಡೆದ ಘಟನೆ ಕಟಿಂಗ್ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಸಹೋದರರು,ಮಂಜುನಾಥ ಮತ್ತು ಲಕ್ಷ್ಮಣ ನಡುವೆ ಜಗಳ ಬಿಡಿಸಲು ಬಂದ ತಾಯಿಯ ಕೊಲೆ!.ವಿಂಡೋ ಗ್ಲಾಸ್ ತೆಗೆದುಕೊಂಡು ತಾಯಿ ಪದ್ಮಾ ಹೊಟ್ಟೆಯ ಭಾಗಕ್ಕೆ ಇರಿದ ಮಂಜುನಾಥ.ಪದ್ಮಾ ಚಲೂರಿ(45) ಕೊಲೆಯಾದ ತಾಯಿ. ತೀವ್ರ ರಕ್ತಸ್ರಾವ ಆಗಿದ್ದರಿಂದ ಕಿಮ್ಸ್ ಗೆ ದಾಖಲಿಸಿದ್ದು,,ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನಪ್ಪಿದರೆ. ಇಬ್ಬರು ಸಹೋದರರನ್ನ ವಶಕ್ಕೆ ಪಡೆದ ಪೊಲೀಸರು.ಕಮರಿಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
Shaikh BigTv
May 29, 2025
Breaking News, Crime, ಕರ್ನಾಟಕ, ಮಂಗಳೂರು
ಮಂಗಳೂರಿನಲ್ಲಿ ಕೋಮು ದಳ್ಳುರಿ ಬಿಸಿಯಾಗಿದ್ದರೇ, ಮತ್ತೊಂದೆಡೆ ಅದರ ನಿಯಂತ್ರಣ ಕ್ರಮವಾಗಿ ಕರವಾಳಿ ಜಿಲ್ಲೆಯ ಹಿರಿಯ ಐಪಿಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿದೆ. ಈ ಮೂಲಕ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ.ಇಂದು ಅಧಿಸೂಚನೆ ಹೊರಡಿಸಿರುವಂತ ರಾಜ್ಯ ಸರ್ಕಾರವು, ಅನುಪಮ್ ಅಗರವಾಲ್, ಐಪಿಎಸ್ (2008) ಮಂಗಳೂರು ನಗರದ ಉಪ ನಿರೀಕ್ಷಕ ಮತ್ತು ಪೊಲೀಸ್ ಆಯುಕ್ತರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ …
Read More »