Breaking News

Crime

Featured Video Play Icon

ಸರ್ಕಾರಕ್ಕೆ ತೀವ್ರ ಹಿನ್ನಡೆ: ಆದೇಶದಿಂದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದ ಸರ್ಕಾರಕ್ಕೆ ತೀವ್ರ ಹಿನ್ನಡೆ…

ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ವಿಚಾರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ನಲ್ಲಿ ತೀವ್ರ ಹಿನ್ನಡೆ, 43 ಕ್ರಿಮಿನಲ್ ಕೇಸ್ ಹಿಂಪಡೆದಿದ್ದ ಸರ್ಕಾರದ ಆದೇಶ ರದ್ದು, ಬೆಂಗಳೂರು: ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳು ಸೇರಿದಂತೆ ಹಲವು ಪ್ರಭಾವಿಗಳ ವಿರುದ್ಧದ 43 ಕ್ರಿಮಿನಲ್‌ ಪ್ರಕರಣಗಳನ್ನು ಹಿಂಪಡೆದು ಹೊರಡಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಬೆಂಗಳೂರಿನ ವಕೀಲ ಗಿರೀಶ್‌ ಭಾರದ್ವಾಜ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ …

Read More »

ಮಂಗಳೂರು: ಗಣಿ ಇಲಾಖೆಯ ಉಪನಿರ್ದೇಶಕಿ ಲೋಕಾಯುಕ್ತ ಬಲೆಗೆ!!

ಉಪನಿರ್ದೇಶಕರೊಬ್ಬರು ಇರಾ ಗ್ರಾಮದ ವ್ಯಕ್ತಿಯೊಬ್ಬರಿಗೆ ಮನೆ ನಿರ್ಮಾಣಕ್ಕೆ ಕಟ್ಟಡಕಲ್ಲು ತೆಗೆದು ಸಮತಟ್ಟು ಮಾಡುವುದಕ್ಕಾಗಿ ಅನುಮತಿ ನೀಡಲು ಬುಧವಾರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳ ಬಲೆ ಬಿದ್ದಿರುವ ಘಟನೆ ವರದಿಯಾಗಿದೆ.ಉಳ್ಳಾಲ ತಹಶೀಲ್ದಾರರು ಸಮತಟ್ಟು ಮಾಡುವ ಸಲುವಾಗಿ ಜಮೀನಿನಲ್ಲಿ ಲಭ್ಯವಿರುವ ಕಟ್ಟಡಕಲ್ಲು ತೆಗೆಯಲು ಪ್ರಮಾಣಪತ್ರ, ದೃಢಿಕರಣ ಪತ್ರ ನೀಡಬಹುದಾಗಿದೆ ಎಂದು 2025 ಮಾರ್ಚ್ 21 ರಂದು ವರದಿ ಸಲ್ಲಿಸಿದ್ದರೂ ಕೂಡ ಗಣಿ ಇಲಾಖೆಯಿಂದ ಅನುಮತಿ ನೀಡಿಲ್ಲ ಎಂದು ಆರೋಪಿಸಲಾಗಿದೆ.ಉಪನಿರ್ದೇಶಕರಾದ ಕೃಷ್ಣವೇಣಿ ರವರು ಸಿಬ್ಬಂದಿ …

Read More »

ಗಾಂಜಾ ಸಾಗಣೆ ಆರೋಪಿಗಳಿಗೆ ಸಾರ್ವಜನಿಕವಾಗಿ ಥಳಿಸಿದ ಪೊಲೀಸರು!!

ತೆನಾಲಿ ಮಂಗಳಗಿರಿಯಲ್ಲಿ ಮೂವರು ಯುವಕರು ಗಾಂಜಾ ಸಾಗಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಕಾನ್‌ಸ್ಟೆಬಲ್ ಒಬ್ಬರು ಅವರ ಬಂಧನಕ್ಕೆ ತೆರಳಿದ್ದರು.ಆದರೆ, ಆರೋಪಿಗಳು ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ.ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಮಾಡಿದ್ದ ಸ್ಥಳಕ್ಕೆ ಕರೆದುಕೊಂಡು ಬಂದು ಕಾಲಿಗೆ ಹಗ್ಗ ಕಟ್ಟಿ ಲಾಠಿಯಿಂದ ಥಳಿಸಲಾಗಿದೆ. ಇನ್‌ಸ್ಟೆಪಕ್ಟರ್ ಚಿರಂಜೀವಿ ಎನ್ನುವರು ಹಾಗೂ ಸಿಬ್ಬಂದಿ ಯುವಕರಿಗೆ ಥಳಿಸಿದ್ದಾರೆ.

Read More »

ಬಳ್ಳಾರಿ :ಜೈಲಿನಲ್ಲಿ ಹರ್ಷ ಕೊಲೆ ಆರೋಪಿಗಳು ಕಿರಿಕ್‌!!

ಹರ್ಷ ಕೊಲೆ ಪ್ರಕರಣದ ಹತ್ತು ಜನ ಆರೋಪಿಗಳ ಪೈಕಿ ಜಿಲಾನ್ ಹಾಗೂ ಸೈಯ್ಯದ್ ನಿಹಾಲ್ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಈ ಇಬ್ಬರೂ ಜೈಲಿನ ಸಿಬ್ಬಂದಿ, ಅಧಿಕಾರಿಗಳ ಜೊತೆ ನಿತ್ಯ ಜಗಳ ಮಾಡಿ ಅವಾಜ್ ಹಾಕಿ, ಕಿರಿಕ್ ಮಾಡುತ್ತಿದ್ದಾರೆ. ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳು ಬಳ್ಳಾರಿ ಜೈಲಿನಲ್ಲಿ ರಂಪಾಟ ಮಾಡಿದ್ದಾರೆ.ಜೈಲಿನಲ್ಲಿ ಬೇರೇ ಬೇರೆ ಕೋಣೆಗೆ ಅಥವಾ ಜೈಲರ್ ಕೊಠಡಿಗೆ ಹೋಗುವಾಗ ಕಡ್ಡಾಯವಾಗಿ ಚೆಕಪ್ ಮಾಡಲಾಗುತ್ತದೆ. ಆದರೆ ನಮ್ಮನ್ನು …

Read More »

ಗಂಗಾವತಿ: 18.06 ಲಕ್ಷ ಮೌಲ್ಯದ ಹೈಡ್ರೋ ಗಾಂಜಾ ವಶ; 8 ಮಂದಿ ಆರೋಪಿಗಳ ಬಂಧನ!

ಗಂಗಾವತಿ ನಗರದಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಾಗುಸುತ್ತಿದ್ದ 1.8 ಕೆ.ಜಿ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.ಒಟ್ಟು ಎಂಟು ಜನರ ವಿರುದ್ಧ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಬಂಧಿತ ಆರೋಪಿಗಳನ್ನು ಸೌಜೇಶ ಕೆ.ಕೆ.(28), ಸಲಿಂ ಪಿ.ಪಿ.(27) , ಬಿ.ದುರ್ಗಾ ಪ್ರಸಾದ್(27), ಬಾದ್‌ ಷಾ(32), ಮದನ್(26), ಸೂರ್ಯ ಪ್ರತಾಪ್ ರೆಡ್ಡಿ(19), ಮುಹಮ್ಮದ್‌ ಹಮೀದ್(22), ಮಣಿಕಂಠ(23) ಎಂದು …

Read More »

ಅಜ್ಜಿ ಮನೆಯಲ್ಲಿಯೇ ₹10 ಲಕ್ಷ ಹಣ ಕದ್ದ ಮೊಮ್ಮಗನ ಬಂಧನ!

ಸಿಲಿಕಾನ್ಲ್ಲ ವಾಸ ಮಾಡುತ್ತಿದ್ದ ಅಜ್ಜಿಯ ಬಳಿ ಹಣ ಇರುವುದನ್ನು ಮನಗಂಡಿದ್ದ ಮೊಮ್ಮಗ ನನಗೆ ದುಡಿಮೆಗಾಗಿ ಆಟೋ ಕೊಡಿಸು ಎಂದು ಕೇಳಿದ್ದನು. ಆದರೆ, ಮೊಮ್ಮಗನಿಗೆ ಹಣ ಕೊಡದೇ, ಆಟೋ ಕೊಡಿಸದ ಅಜ್ಜಿಯ ಮೇಲೆ ಕೋಪಗೊಂಡ ಮೊಮ್ಮಗ ಅಜ್ಜಿ ಮನೆಯಲ್ಲಿರದ ವೇಳೆ 81 ಗ್ರಾಂ ಚಿನ್ನಾಭರಣ ಹಾಗೂ 9.41 ಲಕ್ಷ ರೂ.ಹಣವನ್ನು ಕದ್ದು ಪರಾರಿ ಆಗಿದ್ದಾನೆ. ಈ ಕುರಿತು ಅಜ್ಜಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿ ಮೊಮ್ಮಗನನ್ನು ಬಂಧಿಸಿದ್ದಾರೆ.ಕಳ್ಳತನದಿಂದ ಪಡೆದುಕೊಂಡ …

Read More »

ಜಗಳ ಬಿಡಿಸಲು ಹೋದ ವ್ಯಕ್ತಿಗೆ ಬಿಯರ್​ ಬಾಟಲಿಯಿಂದ ಹತ್ಯೆ!!

ನಲ್ಲಿ ಇಬ್ಬರು ನಡುವೆ ಗಲಾಟೆ ನಡೆಯುತ್ತಿದ್ದ ವೇಳೆ ಜಗಳ ಬಿಡಿಸಲು ಹೋದ ಮೂರನೇ ವ್ಯಕ್ತಿಗೆ ಬಿಯರ್​ ಬಾಟಲಿಯಿಂದ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಘಟನೆ ಹೈದರಾಬಾದ್​ನ ಉಪ್ಪಳ ಪ್ರದೇಶದ ವ್ಯಾಪ್ತಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.ಭಾಸ್ಕರ್ ಪುತ್ರ ಪವನ್​(26)ಮೃತ ಯುವಕ. ಮೃತನ ತಂದೆ ಭಾಸ್ಕರ್​ ನಗರ ಅಂಬರ್‌ಪೇಟೆಯಲ್ಲಿ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಬಾರ್​​ ಮ್ಯಾನೇಜರ್ ವಿರುದ್ಧ ಹಾಗೂ ತನ್ನ ಮಗನನ್ನು ಕೊಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಂದೆ …

Read More »

ಮುಂಬೈ :23ನೇ ಮಹಡಿಯಿಂದ ಜಿಗಿದು ಮಹಿಳೆ ಸಾವಿಗೆ ಶರಣು!!

ಕಳೆದ ಕೆಲವು ದಿನಗಳಿಂದ ಹರ್ಷದಾ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂಬುದು ಮೇಲ್ನೋಟಕ್ಕೆ ತಿಳಿದಿದ್ದೇ ಆದರೂ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಟ್ಟಡದಿಂದ ಕೆಳಗೆ ಪಾರ್ಕ್​ ಮಾಡಿದ್ದ ಬೈಕ್​ ಮೇಲೆ ಹರ್ಷದಾ ಬಿದ್ದ ಪರಿಣಾಮ ದೇಹವು ಎರಡು ಭಾಗವಾಗಿದೆ.ಮೃತ ಯುವತಿಯನ್ನು ಹರ್ಷದಾ ತೆಂಡೊಲ್ಕರ್ (25) ಎಂದು ಗುರತಿಸಲಾಗಿದೆ.ಶೀಘ್ರದಲ್ಲೇ ಆಕೆಯ ಸಾವಿನ ಹಿಂದಿರುವ ಕಾರಣವೇನು? ಎಂಬುದನ್ನು ಪತ್ತೆಹಚ್ಚಲು ಮುಂದಾಗಿರುವ ಪೊಲೀಸರು, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Read More »

ಮಂಗಳೂರು : ಪಿಕಪ್ ಚಾಲಕನನ್ನು ಕಡಿದು ಕೊಲೆ!!

ಪಿಕಪ್ ಚಾಲಕನನ್ನು ಬರ್ಬರವಾಗಿ ಕಡಿದು ಕೊಲೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪದ ಇರಾಕೋಡಿ ಎಂಬಲ್ಲಿ ನಡೆದಿದೆ.ಮೃತನನ್ನು ರಹೀಮ್ ಎಂದು ಗುರುತಿಸಲಾಗಿದ್ದು, ಈತ ಕೊಳತ್ತಮಜಲು ನಿವಾಸಿ ಪಿಕಪ್ ಚಾಲಕ. ರಹೀಮ್‌ ಅವರು ಇಂದು ಇರಾಕೋಡಿ ಎಂಬಲ್ಲಿ ಮರಳು ಅನ್ ಲೋಡ್ ಮಾಡುತ್ತಿದ್ದ ವೇಳೆ ಮಾರಕಾಸ್ತ್ರಗಳೊಂದಿಗೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.

Read More »

ಅಬ್ದುಲ್ ರಹೀಂ ಹತ್ಯೆ ಪ್ರಕರಣ ಮಾಹಿತಿ ಅಡಿ 15 ಮಂದಿ ವಿರುದ್ದ FIR!

ಬಂಟ್ವಾಳದ ಅಬ್ದುಲ್ ರಹೀಂ ಹತ್ಯೆ ಪ್ರಕರಣ ಸಂಬಂಧ ಮಹತ್ವದ ಬೆಳವಣಿಗೆಯಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ಅಬ್ದುಲ್ ರಹೀಮ್ ಹಾಗೂ ಕಲಂದರ್ ಶಫೀ ಮೇಲೆ ದಾಳಿ ಮಾಡಿದ ಆರೋಪಿಗಳ ಕೆಲ ಸುಳಿವು ಪತ್ತೆಯಾಗಿದೆ.ಡಿವೈಎಸ್ಪಿ ವಿಜಯ ಪ್ರಕಾಶ್ ನೇತೃತ್ವದಲ್ಲಿ 5 ಪೊಲೀಸ್ ತಂಡಗಳ ರಚನೆ ಮಾಡಲಾಗಿದೆ. ಈ ತಂಡದಲ್ಲಿ ಮಂಗಳೂರು ನಗರ ಸಿಸಿಬಿ ತಂಡ ಮತ್ತು ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಜಂಟಿ …

Read More »