BigTv News
May 9, 2025
Breaking News, Crime
ಚಿತ್ತಾರಿಕ್ಕಲ್ ನ ಕಂಬಳ್ಳೂರಿನಲ್ಲಿ ಯುವತಿಯ ಮೇಲೆ ಆಸಿಡ್ ದಾಳಿ ನಡೆದಿದೆ. ಕಂಬಳ್ಳೂರಿನಲ್ಲಿ ಫ್ಯಾನ್ಸಿ ಅಂಗಡಿ ನಡೆಸುತ್ತಿರುವ ಸಿಂಧು ಮೋಲ್ (34) ದಾಳಿಗೆ ಬಲಿಯಾದವರು. ಕಂಬಳ್ಳೂರು ಮೂಲದ ರತೀಶ್, ಅಂಗಡಿಯಲ್ಲಿ ಕುಳಿತಿದ್ದ ಸಿಂಧು ಅವರ ದೇಹದ ಮೇಲೆ ಆಸಿಡ್ ಸುರಿದಿದ್ದಾನೆ.ನಂತರ ಆತ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎನ್ನಲಾಗಿದೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.ರತೀಶ್ ಮತ್ತು ಸಿಂಧು ನೆರೆಹೊರೆಯವರಾಗಿದ್ದು ಆಪ್ತ ಸ್ನೇಹಿತರಾಗಿದ್ದರು ಎಂದು ಹೇಳಲಾಗಿದೆ. ಯಾವುದೋ ಕಾರಣಕ್ಕೆ ಅವರ ನಡುವೆ …
Read More »
BigTv News
May 9, 2025
Breaking News, Crime
ಬಾಗಲಕೋಟೆ ತಾಲೂಕಿನ ಸೀಮಿಕೇರಿ ಬೈಪಾಸ್‌ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಹನುಮ ಜಯಂತಿ ಮೆರವಣಿಗೆ ವೀಕ್ಷಿಸಲು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.ಎಡಗಡೆಯಿಂದ ಓವರ್ ಟೇಕ್ ಮಾಡಲು ಹೋಗಿ ಬಾಲಕರ ಯಡವಟ್ಟು ಮಾಡಿಕೊಂಡಿದ್ದಾರೆ. ರಸ್ತೆ ಬದಿ ಐವರು ಯುವಕರು ಹೊರಟಿದ್ದರು. ಅವರಿಗೆ ಡಿಕ್ಕಿ ಹೊಡೆದು ಬೈಕ್ ಪಲ್ಟಿ ಆಗಿದ್ದು, ನೇರವಾಗಿ ಕ್ಯಾಂಟರ್ ಅಡಿಗೆ ಸಿಲುಕಿದ್ದಾರೆ.
Read More »
BigTv News
May 9, 2025
Breaking News, Crime
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 48 ಬಳಿ ಘಟನೆ ನಡೆದಿದ್ದು, ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ 6 ಜನರು ಸ್ಥಳದಲ್ಲೇ ದುರ್ಮರಣಕ್ಕೀಡಾದ ದಾರುಣ ಘಟನೆ ನಡೆದಿದೆ.ದುಬಾರಿ ಬೆಲೆ ಬಾಳುವ ಆಡಿ ಕಾರು ವೇಗವಾಗಿ ಹೋಗಿ ರಸ್ತೆ ಬದಿಗೆ ನಿಂತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಲಾರಿಯ ಹಿಂಬದಿಗೆ ಗುದ್ದಿದ ರಭಸಕ್ಕೆ ಆಡಿ ಕಾರು ಗುರುತೇ ಸಿಗದಂತಾಗಿದೆ. ಸಂಪುರ್ಣ ನಜ್ಜುಗುಜ್ಜಾಗಿದ್ದು, ಅಪಘಾತ ಭಾರೀ ಭಯಾನಕವಾಗಿದೆ. ಇನ್ನು …
Read More »
Shaikh BigTv
May 8, 2025
Breaking News, Crime
ಹುಬ್ಬಳ್ಳಿಯ ಹಳೆ ಸಿಎಆರ್ ಮೈದಾನದಲ್ಲಿ ನಡೆದ ರೌಡಿ ಪರೇಡ್ ನಲ್ಲಿ ಕಮಿಷನರ್ ಶಶಿಕುಮಾರ್ ರೌಡಿಶೀಟರ್ ಗಳಿಗೆ ಫುಲ್ ಕ್ಲಾಸ್ ತಗೊಂಡಿದ್ದಾರೆ.ರಾಜ್ಯದಲ್ಲಿ ರೌಡಿ ಶೀಟರ್ ಗಳು ಸಾರ್ವಜನಿಕರ ಮೇಲೆ ಹಲ್ಲೆ, ಕೊಲೆ ಮಾಡಿರುವ ಹಿನ್ನೆಲೆಯಲ್ಲಿ ಪರೆಡ್ ಮಾಡಲಾಗಿದೆ. ಪ್ರತಿ ಠಾಣೆ ವ್ಯಾಪ್ತಿಯಲ್ಲಿ 50-60 ರಿಂದ 200ರವರೆಗೆ ರೌಡಿ ಶೀಟರ್ ಇದ್ದಾರೆ. 50 ಜನರನ್ನ ಬೀದರ್ , ಕಲಬುರಗಿ, ಚಾಮರಾಜನಗರ ಸೇರಿ ಹಲವೆಡೆ ಗಡಿಪಾರು ಮಾಡಿದ್ದೇವೆ. ಅವರು ಗಡಿಪಾರು ಮಾಡಿದ ವ್ಯಾಪ್ತಿಯಲ್ಲಿ ಇದ್ದಾರಾ …
Read More »
BigTv News
May 8, 2025
Breaking News, Crime
ಮದುವೆ ಊಟ ಸೇವಿಸಿದ್ದ 150ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥರಾದ ಘಟನೆ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕಿನ ಮಲ್ಲಿಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಮದುವೆಗೆ ಬಂದಿದ್ದವರಿಗೆ ಸೋಮವಾರ ಬೆಳಗ್ಗೆಯಿಂದ ಹೊಟ್ಟೆ ನೋವು, ವಾಂತಿ, ಭೇದಿ, ಜ್ವರ ಕಾಣಿಸಿಕೊಂಡಿದೆ. ಬೆಳಗಾಗುತ್ತಿದ್ದಂತೆ ತೀವ್ರ ಅಸ್ವಸ್ಥರಾದವರು ಒಬ್ಬೊಬ್ಬರಾಗಿಯೇ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯಲ್ಲಿ ಬೆಡ್ ಗಳೆಲ್ಲಾ ಭರ್ತಿಯಾಗಿವೆ.ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬಂದ ಕಾರಣ ಮಲ್ಲಿಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಗೂಳಿಹಳ್ಳಿ, ಸುಡಗಾಡನ ಪಾಳ್ಯ …
Read More »
BigTv News
May 8, 2025
Breaking News, Crime
ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಲಾರಿ ಚಾಲಕ ದೀಪಕ್ ಕುಮಾರ್ ಲಾರಿಯನ್ನು ಅತೀ ವೇಗದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರವಿ ಕುಮಾರ್ ಅವರಿಗೆ ಢಿಕ್ಕಿ ಹೊಡೆದಿದ್ದಾನೆ.ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಅನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಅದಾಗಲೇ ಸಾವನ್ನಪ್ಪಿದ್ದರು.ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
May 8, 2025
Breaking News, Crime
ಆನೇಕಲ್ನ ಅರಣ್ಯ ಪ್ರದೇಶದ ಅಂಚಿನಲ್ಲಿ ವ್ಯಕ್ತಿಯೋರ್ವನ ಶವ ಅರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳದಲ್ಲಿದ್ದ ಸಿಕ್ಕ ಒಂದು ದ್ವಿಚಕ್ರ ವಾಹನದ ವಿವರಗಳಿಂದ ಮೃತನು ಜೆಪಿ ನಗರದ ನಿವಾಸಿ ಮಧುಸೂದನ್ (27) ಎಂದು ಗುರುತಿಸಿದ್ದಾರೆ.ಬೆಳಗ್ಗೆ ದನಗಾಹಿಯೋರ್ವನು ಬನ್ನೇರುಘಟ್ಟ ಅರಣ್ಯದ ಶಿಲೀಂದ್ರದೊಡ್ಡಿಯಲ್ಲಿ ಶವ ಕಂಡಾಗ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಭೂತನಹಳ್ಳಿ ಸರ್ವೆ ನಂಬರ್ 67ರ ಸ್ಥಳದಲ್ಲಿ ಶವ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಮೃತ ಮಧೂಸೂದನ್ ಆನ್ಲೈನ್ ಟ್ರೇಡಿಂಗ್ …
Read More »
BigTv News
May 8, 2025
Breaking News, Crime
ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವಕನೊಬ್ಬ ಮಾಲೀಕರು ತಮ್ಮ ಮನೆಯಲ್ಲಿಟ್ಟಿದ್ದ 11 ಲಕ್ಷ ರೂ. ಹಣ ಕಳ್ಳತನ ಮಾಡಿ ಪರಾರಿಯಾಗಿದ್ದು, ಆತನ ಸುಳಿವು ಸಿಗದ ಹಿನ್ನೆಲೆ ಅಂಗಡಿ ಮಾಲೀಕ ದೂರು ನೀಡಿದ್ದಾರೆ.ಮಧ್ಯಾಹ್ನದ ಅಡುಗೆ ಮಾಡುವಂತೆ ಸೂಚಿಸಿ ಸೆಯನ್ ಸಿಂಗ್ ತಮ್ಮ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಂದ್ರ ಎಂಬಾತನಿಗೆ ಮನೆ ಬೀಗ ಕೊಟ್ಟು ಕಳುಹಿಸಿದ್ದರು.ಸಂಜೆ 4 ಗಂಟೆಯಾದರು ಮಹೇಂದ್ರ ಅಂಗಡಿಗೆ ಹಿಂತಿರುಗಿರಲಿಲ್ಲ. ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅನುಮಾನಗೊಂಡ ಸೆಯನ್ ಸಿಂಗ್ …
Read More »
BigTv News
May 8, 2025
Breaking News, Crime
ಕೆಲಸ ಕಳೆದುಕೊಂಡು ಖಿನ್ನತೆಗೆ ಒಳಗಾದ ಬಸ್ಸಿನ ನಿರ್ವಾಹಕರೊಬ್ಬರು ತನ್ನ ಮಗನನ್ನೇ ಕತ್ತು ಹಿಸುಕಿ ಕೊಲೆಗೈದು ಬಳಿಕ ತಾನು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಘಟನೆ ಕುರಿತು ಮನೆಮಂದಿಗೆ ವಿಚಾರ ಗೊತ್ತಾಗುತ್ತಿದ್ದಂತೆ ಠಾಣೆಗೆ ಮಾಹಿತಿ ನೀಡಿದ್ದಾರೆ, ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೃಹನ್ ಮುಂಬೈ …
Read More »
BigTv News
May 8, 2025
Breaking News, Crime
ಹೋಬಳಿಯ ಕೊಂಡಜ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಗೊರಾಘಟ್ಟ ಗ್ರಾಮದ ಪೋಷಿತ್ ಶೆಟ್ಟಿ (4) ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮಂಗಳವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ದೊಡ್ಡಗೊರಾಘಟ್ಟದ ಚಂದನ್ ಶೆಟ್ಟಿಯವರ ಮಗು ಪೋಷಿತ್ ಶೆಟ್ಟಿ ಮನೆಯ ಮುಂಭಾಗ ಆಟವಾಡುವ ವೇಳೆ ಮನೆಗೆ ಹೊಂದಿಕೊಂಡಿರುವ ತೋಟಕ್ಕೆ ಹಾಕಲಾಗಿದ್ದ ವಿದ್ಯುತ್ ತಂತಿಬೇಲಿಯ ಮೇಲೆ ತುಂಡಾಗಿ ಬಿದ್ದಿದ್ದ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಸ್ಥಳಕ್ಕೆ ಸಿಪಿಐ ಲೋಹಿತ್ ಕುಮಾರ್, ಮೂರ್ತಿ, ಬೆಸ್ಕಾಂನ ಎಇಇ ಎನ್.ಸಿ.ರಾಜಶೇಖರ್, ಶಾಖಾಧಿಕಾರಿ ಜಾನ್ ಮಧುಕರ್ …
Read More »