ಹುಬ್ಬಳ್ಳಿ : ನಗರದ ನಾಟ್ಯಾಂಜಲಿ ಕಲಾ ಮಂದಿರ ಪ್ರಸ್ತುತ ಪಡಿಸುವ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಿಂದಿಗೆ ನೃತ್ಯಾರ್ಪಣ-೨೦೨೨ ರ ಭರತನಾಟ್ಯ ಹಾಗೂ ಜಾನಪದ ನೃತ್ಯಗಳ ಸಮ್ಮೇಳನ ಇದೇ ದಿ. ೨೯ ರಂದು ಸಂಜೆ ೫ ಗಂಟೆಗೆ ನಗರದ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಅದ್ದುರಿಯಾಗಿ ಜರುಗಿತು.
ದಿ. ೨೯ ರಂದು ನಡೆದ ಕಾರ್ಯಕ್ರಮದಲ್ಲಿ ೧೫೦ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಭರ ನಾಟ್ಯ ವಿದ್ವತ್ ಅಂತಿಮದಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆಗೊಂಡ ರನ್ನು ನಾಟ್ಯ ರಮಣಿ ರಂಬ ಹೆಸರಿನಿಂದ ಸನ್ಮಾನಿಸಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಿರಸಿ ನಾಟ್ಯಾಂಜಲಿ ಕಲಾ ಕೇಂದ್ರದ ಡಾ. ಸಹನಾ ಭಟ್ ನೆರವೇರಿಸಿದರು. ಅಧ್ಯಕ್ಷತೆ ಧಾರವಾಡ ಜಾನಪದ ನೃತ್ಯ ಕಲಾವಿದ ಡಾ. ಪ್ರಕಾಶ ಮಲ್ಲಿಗವಾಡ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಮಹಿಳಾ ವಿದ್ಯಾಪೀಠದ ಆಡಳಿತಧಿಕಾರಿ ಗದಗ ಎಸ್.ಜಿ ನಿರೂಪಣೆ ಮಾಡಿದರು, ಶ್ರೀಲಕ್ಷ್ಮಿ ಬೆಳಮಕರ, ಸಂತೋಷ ಸಾಲಿಯಾನ್, ಸಂತೋಷ ಮಹಾಲೆ ಅನೇಕ ನಾಟ್ಯ ವಿದ್ಯಾರ್ಥಿಗಳು ಸೇರಿದಂತೆ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

