Breaking News

ಹುಬ್ಬಳ್ಳಿ-ಧಾರವಾಡ: 1700 ಪುಡಿರೌಡಿಗಳಿಗೆ ಕಮಿಷನರ್‌ ಶಶಿಕುಮಾರ್ ಫುಲ್‌ ಕ್ಲಾಸ್‌!

ಹುಬ್ಬಳ್ಳಿಯ ಹಳೆ ಸಿಎಆರ್ ಮೈದಾನದಲ್ಲಿ ನಡೆದ ರೌಡಿ ಪರೇಡ್ ನಲ್ಲಿ ಕಮಿಷನರ್‌ ಶಶಿಕುಮಾರ್‌ ರೌಡಿಶೀಟರ್‌ ಗಳಿಗೆ ಫುಲ್‌ ಕ್ಲಾಸ್‌ ತಗೊಂಡಿದ್ದಾರೆ.ರಾಜ್ಯದಲ್ಲಿ ರೌಡಿ ಶೀಟರ್ ಗಳು ಸಾರ್ವಜನಿಕರ ಮೇಲೆ ಹಲ್ಲೆ, ಕೊಲೆ ಮಾಡಿರುವ ಹಿನ್ನೆಲೆಯಲ್ಲಿ ಪರೆಡ್‌ ಮಾಡಲಾಗಿದೆ. ಪ್ರತಿ ಠಾಣೆ ವ್ಯಾಪ್ತಿಯಲ್ಲಿ 50-60 ರಿಂದ 200ರವರೆಗೆ ರೌಡಿ ಶೀಟರ್ ಇದ್ದಾರೆ. 50 ಜನರನ್ನ ಬೀದರ್‌ , ಕಲಬುರಗಿ, ಚಾಮರಾಜನಗರ ಸೇರಿ ಹಲವೆಡೆ ಗಡಿಪಾರು ಮಾಡಿದ್ದೇವೆ. ಅವರು ಗಡಿಪಾರು ಮಾಡಿದ ವ್ಯಾಪ್ತಿಯಲ್ಲಿ ಇದ್ದಾರಾ ಅಂತ ಸಹ ನಾವು ಪರಿಶೀಲನೆ ಮಾಡಿದ್ದೇವೆ. ಮಾರಕಾಸ್ತ್ರ ಇಟ್ಟುಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ಮೇಲೆ ಕ್ರಮ ಕಗೊಂಡಿದ್ದೇವೆ ಎಂದು ಶಶಿಕುಮಾರ್‌ ಹೇಳಿದ್ದಾರೆ.ರೌಡಿ ಪಟ್ಟಿಯಿಂದ ತೆಗೆಯುವ ಪ್ರಕ್ರಿಯೆ ಸಹ ಆರಂಭ ಮಾಡಿದ್ದೇವೆ. ಕೆಲವರದ್ದು 2,000 ಇಸ್ವಿಯಲ್ಲಿ ಆಗಿದೆ, 65 ವರ್ಷದ ಮೇಲಿನವರನ್ನ ಸಹ ಗಣನೆಗೆ ತೆಗೆದುಕೊಂಡಿದ್ದೇವೆ ಎಂದು ಕಮಿಷನರ್‌ ತಿಳಿಸಿದರು.

Share News

About Shaikh BigTv

Check Also

ದೀಪಾವಳಿ ಹಬ್ಬದ ದಿನವೇ ಕುಟುಂಬಸ್ಥರು ಕಣ್ಣೀರು! ಅಡ್ಡಾದಿಡ್ಡಿ ಕಾರು ಚಲಾಯಿಸಿ ಬೈಕ್​ ಸವಾರನ ಪ್ರಾಣ ತೆಗೆದ ಮಹಿಳೆ ಪರಾರಿ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಹಿಳೆಯೊಬ್ಬರು ವೇಗವಾಗಿ ಚಲಾಯಿಸುತ್ತಿದ್ದ ಮಹೀಂದ್ರಾ ಥಾರ್ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ 55 ವರ್ಷದ …

Leave a Reply

Your email address will not be published. Required fields are marked *