Breaking News

Crime

ಹೊಸಪೇಟ: ವೈದ್ಯರ ನಿರ್ಲಕ್ಷ್ಯ,ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಾಣಂತಿ ಸಾವು!

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರ ಗ್ರಾಮದ 25 ವರ್ಷದ ಶಾಂತಾ ಎಂಬ ಬಾಣಂತಿ, ಹೆರಿಗೆಯ ಮೂರನೇ ದಿನದಂದು ಹೊಸಪೇಟೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಮೃತಳ ತಾಯಿಯೇ ಆರೋಪಿಸಿದ್ದಾರೆ.ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಗುಣಮಟ್ಟ ಮತ್ತು ಸಿಬ್ಬಂದಿಯ ಜವಾಬ್ದಾರಿಯ ಕೊರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಶಾಂತಾ ಅವರ ಕುಟುಂಬದ ಆಕ್ರಂದನವು ಸ್ಥಳೀಯರಲ್ಲಿ ಸಹಾನುಭೂತಿಯನ್ನು ಹುಟ್ಟುಹಾಕಿದ್ದು, …

Read More »

ಗುರುಗ್ರಾಮ : ಆಕಸ್ಮಿಕವಾಗಿ ಪೇಂಟ್ ಆಯಿಲ್ ಕುಡಿದು ಒಂದೂವರೆ ವರ್ಷದ ಮಗು ಸಾವು!!

ಮನೆಯಲ್ಲಿ ಕೂಲರ್‌ ಗೆ ಪೇಂಟ್ ಮಾಡುತ್ತಿದ್ದಾಗ ಮಗಳು ದೀಕ್ಷಾ ಆಟವಾಡುತ್ತ ಅವನ ಬಳಿಗೆ ಬಂದಿದ್ದಳು. ಬಾಲಕಿ ನೆಲದ ಮೇಲೆ ಇಟ್ಟಿದ್ದ ಬಣ್ಣದ ಎಣ್ಣೆ ಡಬ್ಬವನ್ನು ಎತ್ತಿಕೊಂಡು ಕುಡಿದಳು. ಕೆಲವೇ ನಿಮಿಷಗಳಲ್ಲಿ ಬಾಲಕಿಯ ಆರೋಗ್ಯ ಹದಗೆಟ್ಟಿತು, ನಂತರ ಕುಮಾರ್ ತಕ್ಷಣ ಆಕೆಯನ್ನು ಬಿಲಾಸ್ಪುರದ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಪ್ರಾಥಮಿಕ ಚಿಕಿತ್ಸೆಯ ನಂತರ, ಬಾಲಕಿಯನ್ನು ಗುರುಗ್ರಾಮ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗುರುವಾರ ಶವಪರೀಕ್ಷೆಯ ನಂತರ ಪೊಲೀಸರು ಶಿಶುವಿನ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು …

Read More »

ದಿಲೀಪ್‌ ಕುಮಾರ್‌ ಮೇಲೆ ಲೈಂಗಿಕ ಕಿರುಕುಳದ ಆರೋಪ! ಬಂಧನದ ಭೀತಿ!!

ಜೀನಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಮಹಿಳೆಯರು ದೀಲಿಪ್‌ ಕುಮಾರ್‌ ವಿರುದ್ದ ಆರೋಪಿಸಿ ಕಳ್ಳಂಬೆಳ್ಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದೂರು ದಾಖಲು ಮಾಡಿಕೊಳ್ಳುವುದಕ್ಕೆ ಕೂಡ ಹಿಂದೇಟು ಹಾಕಿದ್ದರು ಎನ್ನುವ ಆರೋಪಕೇಳಿ ಬಂದಿದೆ. ಇನ್ನೂ ದೀಲಿಪ್‌ ಕುಮಾರ್‌ ಕೆಲಸ ಮಾಡುವ ವೇಳೇಯಲ್ಲಿ ಇನ್ನಿಲ್ಲದ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪವನ್ನು ಕೇಳಿ ಬಂದಿದೆ.ಇನ್ನೂ ಜೀನಿ ಕುಡಿಯುವುದರಿಂದ ಆರೋಗ್ಯ ಎನ್ನಲಾಗುತ್ತಿದ್ದರು,. ಕೂಡ ಹಲವು ಮಂದಿ, ಇದನ್ನು ಕುಡಿದು ಹಲವು ಮಂದಿಯ ಆರೋಗ್ಯದಲ್ಲಿ ಏರುಪೇರು …

Read More »

ಕನ್ನಡಿ ಮೇಲೆ ಕಾರಣ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಸಾಫ್ಟ್​ವೇರ್​ ಯುವತಿ!!

ಎರಡು ವರ್ಷಗಳ ಹಿಂದೆ ವೆಲ್ಗಟೂರ್ ಮಂಡಲದ ರಾಮನೂರು ಗ್ರಾಮದ ತಿರುಪತಿ ಎಂಬುವವನ ಜತೆ ವಿವಾಹ ಮಾಡಿಕೊಡಲಾಗಿತ್ತು. ಮದುವೆಯ ಸಮಯದಲ್ಲಿ, ಯುವತಿಯ ಪೋಷಕರು 55 ಲಕ್ಷ ರೂ. ವರದಕ್ಷಿಣೆ ಕೊಡಲು ಒಪ್ಪಿಕೊಂಡಿದ್ದರು. ಆದರೆ, 10 ಲಕ್ಷ ರೂ. ನೀಡಲು ಹಿಂದೇಟು ಹಾಕಿದರು. ಇದು ಪತಿಯ ಅಸಲಿ ಮುಖ ಕಳಚಲು ಒಂದು ಕಾರಣ.ಕನ್ನಡಿ ಮೇಲೆ ಬರೆದಿದ್ದ ಡೆತ್​ನೋಟ್​ನಲ್ಲಿ, ‘ಅಮ್ಮ, ಅಪ್ಪ, ನನಗೆ ಬದುಕಲು ಇಷ್ಟವಿಲ್ಲ. ನನ್ನ ಮಗನ ಬಗ್ಗೆ ಎಚ್ಚರದಿಂದಿರಿ. ದಯವಿಟ್ಟು ಆತನಿಗೆ …

Read More »

ಚಿನ್ನಾಭರಣ ವಂಚನೆ ಪ್ರಕರಣ : ಐಶ್ವರ್ಯ ಗೌಡಗೆ 14 ದಿನ ‘ED’ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ!!

ಸಹೋದರಿ ಎಂದು ಹೇಳಿ ವಂಚನೆ ಎಸಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐಶ್ವರ್ಯ ಗೌಡಳನ್ನು 14 ದಿನ ಜಾರಿ ನಿರ್ದೇಶನಾಲಯ ಕಸ್ಟಡಿಗೆ ನೀಡಿ ಇದೀಗ ಕೋರ್ಟ್ ಆದೇಶ ಹೊರಡಿಸಿದೆ.ಪ್ರಕರಣದ ಪ್ರಮುಖ ಆರೋಪಿ ಐಶ್ವರ್ಯ ಗೌಡ ಅವರ ಆರ್.ಎಂ.ಸಿ‌. ಯಾರ್ಡ್​ನಲ್ಲಿರುವ ನಿವಾಸದ ಮೇಲೆಯೂ ದಾಳಿ ನಡೆಸಿ, ನಿನ್ನೆ ಸಂಜೆವರೆಗೂ ಪರಿಶೀಲಿಸಿದರು. ಬಳಿಕ ಐಶ್ವರ್ಯಳನ್ನು ವಶಕ್ಕೆ ಪಡೆದು ಶಾಂತಿನಗರ ಇ.ಡಿ. ಕಚೇರಿಗೆ ಅಧಿಕಾರಿಗಳು ಕರೆತಂದು ಜಡ್ಜ್ ಮುಂದೆ ಹಾಜರುಪಡಿಸಿದ್ದರು ಇದೀಗ ವಿಚಾರಣೆ ನಡೆಸಿದ ನ್ಯಾಯಾಧೀಶರು ಐಶ್ವರ್ಯ …

Read More »

ಕೋಲ್ಕತ್ತಾ : ಲೈಂಗಿಕ ಕಿರುಕುಳ ತಡೆಯಲು ಹೋದ ವ್ಯಕ್ತಿಯನ್ನು ಹೊಡೆದು ಕೊಂದ ಗುಂಪು!!

ಸ್ನೇಹಿತೆಯನ್ನು ಹುಡುಕುತ್ತಾ ಅಪಾರ್ಟ್‌ಮೆಂಟ್‌ನಿಂದ ಹೊರಬಂದ ಸಂಕೇತ್, ಪುರುಷರು ಆಕೆಗೆ ಕಿರುಕುಳ ನೀಡುತ್ತಿರುವುದನ್ನು ನೋಡಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದನು. ಸಂಕೇತ್ ತನ್ನ ಸ್ನೇಹಿತನಿಗೆ ಸಹಾಯ ಮಾಡಲು ಪ್ರಯತ್ನಿಸಿದಾಗ ಮತ್ತು ಆಕೆಗೆ ಕಿರುಕುಳ ನೀಡುವುದನ್ನು ಪ್ರತಿಭಟಿಸಿದಾಗ ಮೂವರು ಆರೋಪಿಗಳು ಆತನನ್ನು ಹೊಡೆಯಲು ಪ್ರಾರಂಭಿಸಿದ್ದಾರೆ.ಬಿದಿರಿನ ದಿಮ್ಮಿಯಿಂದ ಸಂಕೇತ್ ಚಟರ್ಜಿ ತಲೆಗೆ ಹಲವು ಬಾರಿ ಹೊಡೆದಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು, ತಲೆಗೆ ವೈದ್ಯರು ಹಲವಾರು ಹೊಲಿಗೆಗಳನ್ನು ಕೂಡ ಹಾಕಿದ್ದರು. ಕೆಲವು ಗಂಟೆಗಳ ಬಳಿಕ ನಿಧನರಾಗಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ …

Read More »

ವ್ಯವಸ್ಥಾಪಕರ ಕಚೇರಿಯಲ್ಲಿ ಗಲಾಟೆ, ಚಾಲಕ ಹೊರ ಬಂದು ಕ್ರಿಮಿನಾಶಕ ಸೇವಿನೆ!!

ಪಟ್ಟಣದ ಸಾರಿಗೆ ಘಟಕದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಬ್ದುಲ್ ಶಿರೂರು ವಿಷ ಸೇವಿಸಿದ್ದು, ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.ಡ್ಯೂಟಿ ಸಂದರ್ಭದಲ್ಲಿ ಕೆಎಂಪಿಎಲ್ ತರುವಂತೆ ಹಾಗೂ ಹೈದರಾಬಾದ್ ತಲುಪಿದ ನಂತರ ಡೇ ಡ್ಯೂಟಿ ಸೇರಿದಂತೆ ಹಲವು ರೀತಿಯಲ್ಲಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಹೀಗಿದ್ದರೂ ಇಷ್ಟು ದಿನ ಸಹಿಸಿಕೊಂಡಿದ್ದೆ. ಇಂದು ರಾತ್ರಿ ಹೈದರಾಬಾದ್‌ಗೆ ಹೋಗಿ ಬೆಳಿಗ್ಗೆ ವಾಪಸ್‌ ಬರುವಂತೆ ಹೇಳಿದರು. ವಿಶ್ರಾಂತಿ ಇಲ್ಲದೇ ಡ್ಯೂಟಿ ಮಾಡಲು ನನ್ನಿಂದ ಆಗಲ್ಲ ಎಂದಾಗ ಅಮಾನತು …

Read More »

ಟಿಕೆಟ್‌ ವಿಚಾರದಲ್ಲಿ ವಾಗ್ವಾದ, ನಿರ್ವಾಹಕನಿಂದ ಮಹಿಳೆ ಮೇಲೆ ಹಲ್ಲೆ!!

ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಬಸ್ಸಿನಲ್ಲಿ ಗುರುವಾರ ರಾತ್ರಿ ಮಗುವೊಂದಕ್ಕೆ ಅರ್ಧ ಟಿಕೆಟ್‌ ತೆಗೆಯುವ ವಿಚಾರವಾಗಿ ನಿರ್ವಾಹಕ ಟಿಕೆಟ್‌ ಯಂತ್ರದಲ್ಲಿ ಮಹಿಳೆಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಾಗ್ವಾದ ನಡೆದು ಬಳಿಕ ಬಿ.ಸಿ.ರೋಡಿನಲ್ಲಿ ಪೊಲೀಸರು ಮಾತುಕತೆ ನಡೆಸಿ ಬಸ್ಸನ್ನು ಕಳುಹಿಸಿಕೊಟ್ಟಿದ್ದಾರೆ. ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಬಂಟ್ವಾಳ ನಗರ ಪೊಲೀಸರಿಗೆ ಮಾಹಿತಿ ನೀಡಿದರು. ಬಂಟ್ವಾಳ ನಗರ ಠಾಣಾ ಪಿಎಸ್‌ಐ ರಾಮಕೃಷ್ಣ ಹಾಗೂ ಸಿಬಂದಿ ಬಸ್ಸನ್ನು ಬಿ.ಸಿ.ರೋಡು ನಿಲ್ದಾಣದಲ್ಲಿ ನಿಲ್ಲಿಸಿ ವಿಚಾರಣೆ ನಡೆಸಿದರು.

Read More »

ಶ್ರೀನಗರ : ವಿದ್ಯಾರ್ಥಿನಿಗೆ ಬೆದರಿಕೆ, ಶಿಕ್ಷಕ ವಾರಿಸ್ ಅಲಿಯ ಬಂಧನ!!

ದೈಹಿಕ ಸಂಬಂಧ ಹೊಂದಿದರೆ, ಪಂಜಾಬಿನ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಸಹಾಯ ಮಾಡುವುದಾಗಿ ಅಲಿ ಹೇಳಿದ್ದ. ಅಲ್ಲದೇ, ವಾಟ್ಸಾಪ್ ನಲ್ಲಿ ನನಗೆ ಕೆಲವು ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದನು. ಅವನು ಅನ್ಯ ವಿದ್ಯಾರ್ಥಿನಿಯರಿಗೂ ಕೂಡ ದೈಹಿಕ ಸಂಬಂಧಕ್ಕಾಗಿ ಒತ್ತಾಯಿಸಿದ್ದನು ಎಂದು ಸಂತ್ರಸ್ತ ವಿದ್ಯಾರ್ಥಿನಿಯು ಮಾಹಿತಿ ನೀಡಿದ್ದಾಳೆ. “ಒಂದು ವೇಳೆ ನೀನು ನಿನ್ನ ಮನೆಯವರಿಗೆ ಈ ಬಗ್ಗೆ ಹೇಳಿದರೆ ಅಥವಾ ಸಂಬಂಧ ಹೊಂದಲು ನಿರಾಕರಿಸಿದರೆ, ನಾನು ನಿನ್ನನ್ನು ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸುತ್ತೇನೆ” ಎಂದೂ ಸಹ …

Read More »

ನಂಬಿಸಿ ಕೈಕೊಟ್ಟ ಪ್ರಿಯಕರ,ಮನನೊಂದು ಮಹಿಳೆ ನೇಣಿಗೆ ಶರಣು!!

ರೋಷನ್ ಪತ್ನಿ ಹಾಗೂ ಅಮ್ಮಾಜಾನ್ ನಡುವೆ ಮಾತಿನ ಚಕಮಕಿ ಹಾಗೂ ಗಲಾಟೆ ನಡೆದಿತ್ತು. ಈ ಗಲಾಟೆಯಿಂದ ಮನನೊಂದ ಅಮ್ಮಾಜಾನ್ ಮದ್ಯಾಹ್ನದ ವೇಳೆಯಲ್ಲಿ ತಾನು ನಡೆಸುತ್ತಿದ್ದ ಕಾಂಡಿಮೆಂಟ್ಸ್ ಅಂಗಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.ಅಂಗಡಿಗೆ ಬಂದ ಗ್ರಾಹಕರಿಂದ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರಿಗೆ ಮಾಹಿತಿ ಕೊಟ್ಟ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸೀನ್ ಆಫ್ ಕ್ರೈಂ ತಂಡವೂ ಸ್ಥಳಕ್ಕೆ ಭೇಟಿ ನೀಡಿದ್ದು, ಇದೊಂದು ತಾನಾಗಿ …

Read More »