Breaking News

ಅಪರಾಧ

ಅಪ್ರಾಪ್ತ ಬಾಲಕಿ ಅಪಹರಿಸಿ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಅರೆಸ್ಟ್

ಚಿತ್ರದುರ್ಗ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು, ಮಹಿಳಾ ಪೊಲೀಸ್  ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂಡಲಗಿರಿಯಪ್ಪ(35) ಬಂಧಿತ ಆರೋಪಿ. ಹೊಸದುರ್ಗ ತಾಲ್ಲೂಕಿನ ಪಾಣಿ ಕಿಟ್ಟದಹಳ್ಳಿ ಗ್ರಾಮದವನಾಗಿರುವ ಮೂಡಲಗಿರಿಯಪ್ಪ, ನಗರದ ವಿವೇಕಾನಂದ ನಗರದ ಅಪ್ರಾಪ್ತ ಬಾಲಕಿಯ ಮನೆ ಮುಂಭಾಗದಲ್ಲಿ ವಾಸವಾಗಿದ್ದ, ಅಪ್ರಾಪ್ತ ಬಾಲಕಿಯನ್ನು ಬಟ್ಟೆ ತೊಳೆದುಕೊಂಡು ಬರೋಣ ಎಂದು ಪುಸಲಾಯಿಸಿ ಹತ್ತಿರದಲ್ಲಿ ಇದ್ದ ಗುಡ್ಡಕ್ಕೆ ಕರೆದುಕೊಂಡು ಹೋಗಿ, ಯಾರು ಇಲ್ಲದ ಸಮಯದಲ್ಲಿ ಬಾಲಕಿಯ ಕೈ ಕಾಲಿಗೆ …

Read More »

ಅವೈಜ್ಞಾನಿಕ ಹೈವೇ ಕಾಮಗಾರಿ – ಸರಣಿ ಅಪಘಾತ 7 ಮಂದಿಗೆ ಗಾಯ

ಚಿಕ್ಕಬಳ್ಳಾಪುರ: ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ಸರಣಿ ಅಪಘಾತ ಸಂಭವಿಸಿರುವ ಘಟನೆ ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಸೇತುವೆ ಬಳಿ ನಡೆದಿದೆ. ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ವಾಪಸಂದ್ರ ಸೇತುವೆ ಬಳಿ ಹೆದ್ದಾರಿಯಲ್ಲಿ ಭಾರೀ ಪ್ರಮಾಣದ ಗುಂಡಿ ಬಿದ್ದಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ತಾತ್ಕಾಲಿಕವಾಗಿ ತೇಪೆ ಹಾಕಲಾಗಿದೆ. ಆದರೆ ತೇಪೆ ಹಾಕಿರುವ ಜಾಗದಲ್ಲಿ ಮತ್ತೆ ಹಳ್ಳ ಬಿದ್ದಿದ್ದು, ಹೈವೇಯಲ್ಲಿ ಅತಿ ವೇಗವಾಗಿ ಬರುವ ವಾಹನಗಳು ಹಳ್ಳದಲ್ಲಿ ಬಿದ್ದು ಜಂಪ್ ಹೊಡೆಯುತ್ತಿದೆ. ಇಂದು ಸಹ …

Read More »

ಪ್ರತಿ ಶುಕ್ರವಾರ ಆರ್ಯನ್ ಖಾನ್​ ಎನ್​​ಸಿಬಿಗೆ ಹೋಗುವ ಅಗತ್ಯವಿಲ್ಲ: ಬಾಂಬೆ ಹೈಕೋರ್ಟ್​

ಹೈದರಾಬಾದ್ : ಕ್ರೂಸ್ ಡ್ರಗ್ಸ್ ಪ್ರಕರಣ ಸಂಬಂಧ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್​ಗೆ ಬಾಂಬೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಆರ್ಯನ್ ಖಾನ್ ಇನ್ಮುಂದೆ ಪ್ರತಿ ಶುಕ್ರವಾರ ಎನ್​ಸಿಬಿ ಕಚೇರಿಗೆ ಹಾಜರಾಗುವ ಅಗತ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಆರ್ಯನ್​ ಖಾನ್​ಗೆ ಸಾಕಷ್ಟು ಷರತ್ತುಗಳನ್ನು ವಿಧಿಸಿ ಕೋರ್ಟ್​​​ ಜಾಮೀನು ನೀಡಿತ್ತು. ಅದರಂತೆ ಎನ್​ಸಿಬಿ ಕಚೇರಿಗೆ ಪ್ರತಿ ಶುಕ್ರವಾರ ಆರ್ಯನ್​​ ತೆರಳಿ ಸಹಿ ಹಾಕುವುದು ಷರತ್ತಿನಲ್ಲಿತ್ತು. ಜಾಮೀನು ಪಡೆದ ಆರೋಪಿ ಊರು …

Read More »

ಕಾರು-ಬೈಕ್ ಡಿಕ್ಕಿ – ಬೈಕ್ ಸವಾರ ಬೀಳುತ್ತಿರುವ ವೀಡಿಯೋ ವೈರಲ್

ಹಾಸನ: ವೇಗವಾಗಿ ಬಂದ ಕಾರು ಹಿಂಬದಿಯಿಂದ ಬೈಕ್‌ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಕೆಳಗೆ ಬೀಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಸನ ಜಿಲ್ಲೆಯ ಮೊಸಳೆಹೊಸಹಳ್ಳಿ ಸಮೀಪದಲ್ಲಿ ಈ ಘಟನೆ ನಡೆದಿದೆ. ಬಸ್ತಿಹಳ್ಳಿಯ ಮಂಜುನಾಥ್ ಗಾಯಗೊಂಡ ಬೈಕ್ ಸವಾರ. ವೇಗವಾಗಿ ಬರುತ್ತಿದ್ದ ಕಾರು, ಬೈಕ್‌ಗೆ ಡಿಕ್ಕಿ ಹೊಡೆದಿದೆ. ಕಾರಿನ ಡಿಕ್ಕಿ ರಭಸಕ್ಕೆ ಬೈಕ್ ಸವಾರ, ಬೈಕ್ ಸಮೇತ ಕಾರಿನ ಮೇಲೆ ಜಂಪ್ ಆಗಿ ಬಿದ್ದಿದ್ದಾರೆ. ಈ ಭೀಕರ ಅಪಘಾತದ ದೃಶ್ಯ …

Read More »

ಆಂಧ್ರಪ್ರದೇಶದಲ್ಲಿ ನದಿಗೆ ಉರುಳಿದ ಬಸ್: 8 ಪ್ರಯಾಣಿಕರು ಸಾವು

ಪಶ್ಚಿಮ ಗೋದಾವರಿ: ಆಂಧ್ರಪ್ರದೇಶದಲ್ಲಿ ಖಾಸಗಿ ಬಸ್ ( Privet Bus ) ಒಂದು ಸೇತುವೆಯ ಮೇಲಿನಿಂದ ನದಿಗೆ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ, 8 ಮಂದಿ ಪ್ರಯಾಣಿಕರು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಪಶ್ಚಿಮ ಗೋದಾವರಿ ಜಿಲ್ಲೆಯ ಜಂಗಾರೆಡ್ಡಿ ಗುಡೇರಿ ಸಮೀಪದ ಜಲ್ಲೇರು ಬಳಿಯಲ್ಲಿ ಖಾಸಗಿ ಬಸ್ ಒಂದು ನಿಯಂತ್ರಣ ತಪ್ಪಿ ನದಿಗೆ ಉರುಳಿ ಬಿದ್ದಿದೆ. ಇದರಿಂದಾಗಿ ಬಸ್ ನಲ್ಲಿದ್ದಂತ 8 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. …

Read More »

ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ ಮೂವರ ಸ್ಥಿತಿ ಗಂಭೀರ- ಈಗಷ್ಟೇ ನೆಡೆದದ್ದು

ಹುಬ್ಬಳ್ಳಿ : ಕಾರು ಹಾಗೂ ಗೂಡ್ಸ್ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಬವಿಸಿದ ಪರಿಣಾಮ ಎರಡು ವಾಹನಗಳು ನುಜ್ಜುಗುಜ್ಜಾಗಿ ಮೂರು ಜನ ಗಂಭೀರವಾಗಿ ಗಾಯಗೊಂಡ ಘಟನೆ ಈಗಷ್ಟೇ ನಡೆದಿದೆ. ಹುಬ್ಬಳ್ಳಿ ಗದಗ ರಸ್ತೆಯ ಬಂಡಿವಾಡ ಬಳಿಯಲ್ಲಿ ಕಾರು ಹಾಗೂ ಟಾಟಾ ಏಸ್ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ,ಮೂವರ ಸ್ಥಿತಿ ಚಿಂತಾಜನಕವಾಗಿದ್ದು. ಸ್ಥಳಕ್ಕೆ ಈಗಾಗಲೇ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಗಾಯಾಳುಗಳನ್ನು ಕೀಮ್ಸ್ ಆಸ್ಪತ್ರೆಗೆ ರವಾನಿಸಿದ್ದು, …

Read More »

ವರದಕ್ಷಿಣೆ ಕಿರುಕುಳದಿಂದ ಚಾಮರಾಜನಗರದ ಮಹಿಳೆ ಸಾವು-ಮಹಿಳೆ ಸಾವಿನ ಸುತ್ತ ಅನುಮಾನದ ಹುತ್ತ

ಚಾಮರಾಜನಗರ : ವರದಕ್ಷಿಣೆ ಕಿರುಕುಳದಿಂದಾಗಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಉಡಿಗಾಲದಲ್ಲಿ ಸೋಮವಾರ ನಡೆದಿದೆ. ಉಡಿಗಾಲದ ಜಯಶಂಕರ್‌ ಎಂಬುವವರ ಪತ್ನಿ 24 ವರ್ಷದ ದಿವ್ಯಾ ಅವರು ಮೃತಪಟ್ಟವರು. ಮಗಳನ್ನು ವರದಕ್ಷಿಣೆಗಾಗಿ ಹಿಂಸಿಸಿ, ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ದಿವ್ಯ ಅವರ ತಂದೆ ದೇವಪ್ಪ ಅವರು ಚಾಮರಾಜನಗರದ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ದಿವ್ಯ ಅವರ ಪತಿ ಜಯಶಂಕರ್‌, ಮಾವ ಸಿದ್ದಮಲ್ಲಪ್ಪ, ಅತ್ತೆ ಸುಂದ್ರಮ್ಮ, ಬಾವ ಚಂದ್ರಶೇಖರ್‌ ಹಾಗೂ ಅವರ …

Read More »

ಸೆಕ್ಸ್ ಗೆ ಬಲವಂತ ಮಾಡಿದ ಪತಿ: ಸಿಟ್ಟಿಗೆದ್ದು ಮರ್ಮಾಂಗವನ್ನೇ ಕತ್ತರಿಸಿದ ಪತ್ನಿ!

ಮಧ್ಯಪ್ರದೇಶ : ಇಷ್ಟವಿಲ್ಲದೇ ಇದ್ದರೂ ಬಲವಂತವಾಗಿ ಸೆಕ್ಸ್​​ ಮಾಡಲು ಮುಂದಾದ ಪತಿಯ ಮರ್ಮಾಂಗವನ್ನೇ ಪತ್ನಿ ಕತ್ತರಿಸಿದ ಘಟನೆ ಮಧ್ಯಪ್ರದೇಶದ ಟಿಕಮ್​​ಗಢದಲ್ಲಿ ನಡೆದಿದೆ. ಟಿಕಮ್ ​​ಗಢ ಜಿಲ್ಲೆಯಿಂದ 40 ಕಿಮೀ​ ದೂರದ ಜತಾರಾ ಪೊಲೀಸ್​ ಠಾಣಾ ವ್ಯಾಪ್ತಿಯ ರಾಮನಗರದಲ್ಲಿ ಡಿ.​​ 7ರಂದು ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 24 ವರ್ಷದ ಪತ್ನಿ ಬೇಡ ಅಂದರೂ ಬಲವಂತವಾಗಿ ರಾತ್ರಿ ದೈಹಿಕ ಸಂಬಂಧ ಬೆಳೆಸಲು 26 ವರ್ಷದ ಗಂಡ ಮುಂದಾಗಿದ್ದಾನೆ. ಇದರಿಂದ …

Read More »

ಪ್ರಿಯಕರನಿಗಾಗಿ ಸಾಮೂಹಿಕ ಅತ್ಯಾಚಾರದ ಕತೆ ಕಟ್ಟಿದ ಯುವತಿ: ಬೆಸ್ತುಬಿದ್ದ 1000 ಪೊಲೀಸರು!!

ನಾಗ್ಪುರ : ಪ್ರಿಯಕರನನ್ನು ಮದುವೆ ಆಗಲು 19 ವರ್ಷದ ಯುವತಿಯೊಬ್ಬಳು ಸಾಮೂಹಿಕ ಅತ್ಯಾಚಾರ ಆಗಿದೆ ಎಂದು ಸುಳ್ಳು ದೂರು ನೀಡಿದ್ದರಿಂದ ಹಿರಿಯ ಅಧಿಕಾರಿಗಳು ಸೇರಿದಂತೆ 1000 ಪೊಲೀಸರು ದಿನವೀಡಿ ತನಿಖೆ ನಡೆಸಿ ಬೆಸ್ತು ಬಿದ್ದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಸೋಮವಾರ ಮಧ್ಯಾಹ್ನ 11 ಗಂಟೆಗೆ ಯುವತಿ ಕಲ್ಮನಾ ಪೊಲೀಸ್ ಠಾಣೆಗೆ ಬಂದು ನನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ದೂರು ನೀಡಿದಳು. ದೂರು ಸ್ವೀಕರಿಸುತ್ತಿದ್ದಂತೆ ನಾಗ್ಪುರ ಪೊಲೀಸ್ …

Read More »

ಮೂವರು ಮೊಬೈಲ್ ಕಳ್ಳರ ಬಂಧನ: ಗೋಕುಲ ರೋಡ್ ಪೊಲೀಸರ ಯಶಸ್ವಿ ಕಾರ್ಯಾಚರಣೆ

ಹುಬ್ಬಳ್ಳಿ: ಸಂತೆ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಮೊಬೈಲ್ ಫೋನ್‌ಗಳನ್ನು ಕದಿಯುತ್ತಿದ್ದ ಮೂವರು ಕಳ್ಳರನ್ನು ಗೋಕುಲ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಆರೋಪಿತರಿಂದ 6 ಲಕ್ಷ ರೂ. ಮೌಲ್ಯದ 25 ಮೊಬೈಲ್ ಫೋನ್‌ಗಳು ಹಾಗೂ ಅಟೋ ರಿಕ್ಷಾ ವಶಕ್ಕೆ ಪಡೆದುಕೊಂಡಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಹುಲಗಿನಕೊಪ್ಪದ ಹನುಮಂತಪ್ಪ ಬಂಡಿವಡ್ಡರ, ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಕುಮಾರ ಕುಳ್ಳ ಹಾಗೂ ಹುಬ್ಬಳ್ಳಿ ಜಗದೀಶ ನಗರದ ಸೋಮಶೇಖರ ಕುಂದಗೋಳ ಬಂಧಿತ ಆರೋಪಿಗಳು. ನಗರದ ವಿವಿಧ ಮಾರುಕಟ್ಟೆ, …

Read More »