Breaking News

ಅಪರಾಧ

ಭಾವಿಪತಿಯ ಕಿರುಕುಳಕ್ಕೆ ಯುವತಿ ಬಲಿ-2 ತಿಂಗಳ ಹಿಂದೆ ನಿಶ್ಚಿತಾರ್ಥವಾಗಿತ್ತು..!

ಹುಬ್ಬಳ್ಳಿ : ಸುಂದರ ಜೀವನದ ಹೊಂಗನಸು ಹೊತ್ತು ಮದುವೆಯ ನಿಶ್ಚಿತಾರ್ಥ ಮಾಡಿಕೊಂಡಿದ್ದ ಭಾವಿ ಪತಿಯ ಕಿರುಕುಳದಿಂದ ಮನನೊಂದು ಯುವತಿಯೋರ್ವಳು ನೇಣಿಗೆ ಶರಣಾದ ಧಾರುಣ ಘಟನೆ ನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.ಅಶೋಕನಗರ ಪೊಲೀಸ್‍ಠಾಣೆ ವ್ಯಾಪ್ತಿಯ ಸಂತೋಷ ನಗರ ನಿವಾಸಿ ಪವಿತ್ರ (25) ನಿನ್ನೆರಾತ್ರಿ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ನತದೃಷ್ಟೆಯಾಗಿದ್ದಾಳೆ.ನೆರೆಯ ಹಾವೇರಿ ಮೂಲದ ಅಭಿನಂದನ್ ಎಂಬುವವನ ಜೊತೆ ಸೆ.1ರಂದು ಪವಿತ್ರಾಗೆ ಮದುವೆಯ ನಿಶ್ಚಿತಾರ್ಥ ನೆರವೇರಿತ್ತು. ಆದರೆ ಸಂಶಯದ ಪಿಶಾಚಿಯಂತಿದ್ದ …

Read More »

ಹೊಸೂರು ಸರ್ಕಲ್‌ ಬಳಿ ಭೀಕರ ಅಪಘಾತ,ಪಾದಾಚಾರಿ ಸ್ಥಳದಲ್ಲೇ ಸಾವು.

ಹುಬ್ಬಳ್ಳಿ : ರಸ್ತೆ ದಾಟುತ್ತಿದ್ದ ಪಾದಾಚಾರಿಯ ಮೇಲೆ ಮರಳು ಸಾಗಾಟ ಮಾಡುತ್ತಿದ್ದ ಲಾರಿಯೊಂದು ಹರಿದ ಪರಿಣಾಮ ಪಾದಾಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಈಗಷ್ಟೇ ನಡೆದಿದೆ.ಹುಬ್ಬಳ್ಳಿಯ ಗಾಳಿ ದುರ್ಗಮ್ಮ ದೇವಸ್ಥಾನದ ಬಳಿಯಲ್ಲಿ ರಸ್ತೆ ದಾಟುತ್ತಿದ್ದಾಗ ಲಾರಿ ಪಾದಚಾರಿ ಮೇಲೆ ಹರಿದು ಈ ಘಟನೆ ನಡೆದಿದೆ. ಇನ್ನು ಮೃತಪಟ್ಟ ವ್ಯಕ್ತಿ ಯಾರು ಎಂಬ ಮಾಹಿತಿ ಇನ್ನು ಲಭ್ಯವಾಗಿಲ್ಲ.ಸ್ಥಳಕ್ಕೆ ಉತ್ತರ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹುಬ್ಬಳ್ಳಿಯ ಕೀಮ್ಸ್ …

Read More »

ಆಟೋ ಚಾಲಕನನ್ನು ವಿವಸ್ತ್ರಗೊಳಿಸಿ, ಮೂತ್ರ ವಿಸರ್ಜನೆ ಮಾಡಿ ಹಲ್ಲೆ ಆರೋಪ; ವೈದ್ಯನನ್ನು ಬಂಧಿಸಿದ ಪೊಲೀಸ್

ಬೆಂಗಳೂರು: ಆಟೋ ಚಾಲಕನ ಮೇಲೆ ವೈದ್ಯರ ತಂಡದಿಂದ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಆಟೋ ಚಾಲಕನನ್ನು ವಿವಸ್ತ್ರಗೊಳಿಸಿ, ಮೂತ್ರ ವಿಸರ್ಜನೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.ಯಲಹಂಕ ನಿವಾಸಿ 26 ವರ್ಷದ ಮುರುಳಿ ಹಲ್ಲೆಗೊಳಗಾದ ಆಟೋ ಚಾಲಕ. ಸದ್ಯ ಚಾಲಕ ನೀಡಿದ‌ ದೂರಿನ ಮೇರೆಗೆ ಖಾಸಗಿ ಆಸ್ಪತ್ರೆಯೊಂದರ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ವೈದ್ಯರು ಪಾರ್ಟಿ ಮಾಡುತ್ತಿದ್ದರು. …

Read More »

ಅವಳಿನಗರದಲ್ಲಿ ಹೆಚ್ಚುತ್ತಿವೆ ಸೈಬರ್‌ ಕ್ರೈಂ- ಸಾಲದ ನೆಪದಲ್ಲಿ 1.50 ಲಕ್ಷ ರೂ ಎಗರಸಿದ ಭೂಪ

ಹುಬ್ಬಳ್ಳಿ: ಅವಳಿ ನಗರಗಳಲ್ಲಿ ಸೈಬರ್​ ಅಪರಾಧ ಪ್ರಕರಣಗಳು (cyber crime)ಹೆಚ್ಚಾಗುತ್ತಿವೆ. ಅಪರಿಚಿತನೊಬ್ಬ ಲೋನ್ ನೀಡುವುದಾಗಿ ಕರೆ ಮಾಡಿ ವ್ಯಕ್ತಿಯೊಬ್ಬರ ಖಾತೆಯಿಂದ 1.50 ಲಕ್ಷ ವರ್ಗಾಯಿಸಿಕೊಂಡು ಹುಬ್ಬಳ್ಳಿಯಲ್ಲಿ ವಂಚಿಸಿದರೆ, ಗೋಧಿ ಹಿಟ್ಟು ಖರೀದಿ ನೆಪದಲ್ಲಿ 59 ಸಾವಿರ ರೂಪಾಯಿ ಎಗರಿಸಿದ ಘಟನೆ ಧಾರವಾಡದಲ್ಲಿ ವರದಿಯಾಗಿದೆ.ಧಾರವಾಡದ ಜೈಭೀಮ ನಗರದ ಕೃಷ್ಣ ಕಟ್ಟಿಮನಿ ಎಂಬುವವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಲೋನ್​ ನೀಡುವುದಾಗಿ ತಿಳಿಸಿದ್ದಾನೆ. ವಿಳಾಸ ದಾಖಲೆ, ಬ್ಯಾಂಕ್​ ಖಾತೆ, ಎಟಿಎಂ ಮತ್ತಿತರ ದಾಖಲೆಗಳನ್ನು ಪಡೆದಿದ್ದಾನೆ. …

Read More »

ಭೀಕರ ರಸ್ತೆ ಅಪಘಾತ: ರಸ್ತೆಯಲ್ಲೇ ಹೊತ್ತಿ ಉರಿದ ಟಿಪ್ಪರ್,ಬೈಕ ಸವಾರ ಸ್ಥಳದಲ್ಲೇ ದುರ್ಮರಣ

ಚಿತ್ರದುರ್ಗ: ಬೈಕ್ ಮತ್ತು ಟಿಪ್ಪರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಹಿನ್ನೆಲೆ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಟಿಪ್ಪರ್ ಧಗಧಗನೆ ಹೊತ್ತಿ ಉರಿದ ಘಟನೆ ಚಿತ್ರದುರ್ಗ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.ಚಿತ್ರದುರ್ಗ ತಾಲೂಕಿನ ಇಂಗಳದಾಳ್ ಗ್ರಾಮದ ರಂಗಪ್ಪ (60) ಮೃತ ವ್ಯಕ್ತಿ. ಜೋಗಿಮಟ್ಟಿ ರಸ್ತೆ ನಿವಾಸಿ ಹನುಮಂತಪ್ಪ ಗಂಭೀರವಾಗಿ ಗಾಯಗೊಂಡಿದ್ದು, ದಾವಣಗೆರೆ ಎಸ್ ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಂಧರ್ಭಿಕ ಚಿತ್ರ ಚಿತ್ರದುರ್ಗದಿಂದ ಚಳ್ಳಕೆರೆ ಕಡೆಗೆ ಟಿಪ್ಪರ್ ಹೊರಟಿತ್ತು. …

Read More »

ಪ್ರೀತಿಸಿದಾಕೆ ಕೈ ಕೋಟ್ಟಿದ್ದಕ್ಕೇ ಈ ಪಾಗಲ್‌ ಮಾಡಿದ್ದೇನು-14 ದಿನ ನ್ಯಾಯಾಂಗ ಬಂಧನಕ್ಕೆ ಒಳಗಾದ ಪಾಗಲ್‌ ಪೇಮಿ…

ಆರೋಪಿ ಬಸವರಾಜು ಹೈದರಾಬಾದ್​: ಪ್ರಿಯತಮೆ ಮೋಸ ಮಾಡಿದ್ದಾಳೆ ಎಂದು ಆಕೆಯ ಮೇಲೆ ಮನಬಂದಂತೆ ಚಾಕುವಿನಿಂದ ಹಲ್ಲೆ ಮಾಡಿದ್ದ ಆರೋಪಿ ಬಸವರಾಜು ಎಂಬಾತನನ್ನು ಬಂಧಿಸಲಾಗಿದ್ದು, ಪೊಲೀಸರು ರಂಗಾರೆಡ್ಡಿ ನ್ಯಾಯಾಲಯಕ್ಕೆ (Rangareddy Court) ಹಾಜರುಪಡಿಸಿದ್ದರು. ಈಗ ನ್ಯಾಯಾಲಯ ಆತನಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಪೊಲೀಸರು ಬಸವರಾಜುನನ್ನು ಚರ್ಲಪಲ್ಲಿ ಜೈಲಿಗೆ (Charlapalli jail) ಸ್ಥಳಾಂತರಿಸಿದ್ದಾರೆ. ಪ್ರಿಯಕರ ಬಸವರಾಜುನಿಂದ ಗಾಯಗೊಂಡಿರುವ ಯುವತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 24 ಗಂಟೆಗಳ …

Read More »

ಅಕ್ರಮ ಗಾಂಜಾ ಮಾರಾಟ ಮಡುತ್ತಿದ್ದವರ ಇಬ್ಬರ ಬಂಧನ

ಗಾಂಜಾ ಮಾರುತ್ತಿದ್ದ ಆರೋಪಿಗಳು ಧಾರವಾಡ :ಧಾರವಾಡದ ಸಪ್ತಾಪುರ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.ನಗರದ ಶಿವಗಿರಿ, ಸಾಯಿ ಹಾಸ್ಟೇಲ್‌,ಜಯನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ದೃವ ಅನಿಲ್ ಮದನ್‌,ಶಿವಕುಮಾರ ಮಡಿವಾಳ ಬಂಧಿತ ಆರೋಪಿಗಳು.ವಿದ್ಯಾರ್ಥಿಗಳನ್ನು ದಾಳವಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ.ಖಚಿತ ಮಾಹಿತಿ ಮೇರೆಗೆ ದಾಳಿ ನೆಡೆಸಿದ ಅಬಕಾರಿ ಅಧಿಕಾರಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Read More »

100 ಮಹಿಳಾ ಶವಗಳ ಮೇಲೆ ಅತ್ಯಾಚಾರ- 24 ವರ್ಷಗಳ ಬಳಿಕ ಡೇವಿಡ್ ಬಂಧನ

ಲಂಡನ್ : ನೂರು ಮಹಿಳಾ ಶವಗಳ (Female Corpses) ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಯನ್ನು 34 ವರ್ಷಗಳ ಬಳಿಕ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇಂಗ್ಲೆಂಡ್ ನ ಈಸ್ಟ್ ಸುಸೆಕ್ಸ್ ನಲ್ಲಿ ನಡೆದಿದೆ. ಇಲ್ಲಿಯ ಟೌನ್ ಹಿಥಫ್ಲೀಡ್ (Heathfield East Sussex ) ಮೂಲದ ವ್ಯಕ್ತಿಗೆ ಶಿಕ್ಷೆ ಪ್ರಕಟವಾಗುತ್ತಿದೆ.ಸದ್ಯ ಅಪರಾಧಿಗೆ 67 ವರ್ಷ. ಅಪರಾಧಿ ಡೇವಿಡ್ ಫುಲ್ಲರ್ (David Fuller) ಸಹ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ದೋಷಿ 12 …

Read More »

ಬೆಳಗಾವಿ ಹೊರವಲಯದಲ್ಲಿ ಬೈಪಾಸ್​ ರಸ್ತೆ ನಿರ್ಮಾಣಕ್ಕೆ ಭಾರಿ ವಿರೋಧ: ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ರೈತ!

ಸಾಂದರ್ಭಿಕ ಚಿತ್ರ ಬೆಳಗಾವಿ: ಬೆಳಗಾವಿ ನಗರದ ಹೊರವಲಯದಲ್ಲಿ ಉದ್ದೇಶಿತ ಹಲಗಾ – ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿಗೆ ಭಾರಿ ವಿರೋಧ ವ್ಯಕ್ತವಾಗಿದೆ. ಕಾಮಗಾರಿ ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ರೈತನ ಮಗನೊಬ್ಬ ಮರವೇರಿ ಆತ್ಮಹತ್ಯೆ ಬೆದರಿಕೆ ಹಾಕಿದರೆ, ಇನ್ನೊಬ್ಬ ರೈತ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಘಟನೆ ನಡೆದಿದೆ. ಅಲ್ಲದೇ, ಇನ್ನೊಬ್ಬ ರೈತ ಕೈಯಲ್ಲಿ ಕುಡುಗೋಲು ಹಿಡಿದು ಕತ್ತು ಕುಯ್ದುಕೊಳ್ಳಲು ಯತ್ನಿಸಿದ್ದಾನೆ. ಹಲಗಾ- ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ಆರಂಭಿಸಲು ರಾಷ್ಟ್ರೀಯ …

Read More »

ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ

ವಿಜಯಪುರ : ಬಿಜೆಪಿ ಕಾರ್ಯಕರ್ತನ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ನಾಗಾವಿ ಬಿಕೆ ಗ್ರಾಮದಲ್ಲಿ ನಡೆದಿದೆ. ಹೌದು ಬಿಜೆಪಿ ಕಾರ್ಯಕರ್ತ ಗುರುಗೌಡ ಬಿರಾದಾರ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು , ಬಿಜೆಪಿ ಪಕ್ಷದ ಕಾರ್ಯಕರ್ತರಾಗಿದ್ದಾರೆ , ಗುರುಗೌಡ ತಮ್ಮ ಹೋಲಕ್ಕೆ ನೀರು ಬಿಡಲುತೆರಳಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ದಾಳಿ ನಡೆಸಿದ್ದಾರೆ. ಅಪರಿಚಿತರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಹಲ್ಲೆಗೈದು ಪರಾರಿಯಾಗಿದ್ದಾರೆ. ಗುರುಗೌಡನಿಗೆ ಕತ್ತು ಮತ್ತು …

Read More »