ಹುಬ್ಬಳ್ಳಿ: ಬೆಳಗಿನ ವಾಯು ವಿಹಾರಕ್ಕೆ ಹೋಗಿದ್ದ ಸಚಿವ ಸಂತೋಷ್ ಲಾಡ್ ರೈತರೊಬ್ಬರ ಮೇವಿನ ಗಾಡಿಯಲ್ಲಿ ತಳ್ಳಿಕೊಂಡು ಊರಿಗೆ ಬಂದಿದ್ದಾರೆ. ಅಲ್ಲದೇ ರೈತನ ಮನೆವರೆಗೂ ಮೇವಿನ ಗಾಡಿಯನ್ನು ತಲುಪಿಸಿದ್ದಾರೆ.
ಕಲಘಟಗಿ ತಾಲ್ಲೂಕಿನ ಮಡಕಿಹೊನ್ನಳ್ಳಿ ಗ್ರಾಮದಲ್ಲಿ ರೈತ ದಂಪತಿ ಹೊಲದಿಂದ ಹುಲ್ಲು ತೆಗೆದುಕೊಂಡು ಹೋಗುತ್ತಿದ್ದರು. ಸಚಿವ ಸಂತೋಷ ಲಾಡ್ ಅವರು, ತಮ್ಮ ಕಲಘಟಗಿ ನಿವಾಸಕ್ಕೆ ಬಂದಾಗ ಎಂದಿನಂತೆ ಅದೇ ಮಾರ್ಗದಲ್ಲಿ ವಾಕಿಂಗ್ ಹೋಗುತ್ತಿದ್ದರು. ರೈತನ ಹುಲ್ಲಿನ ಬಂಡಿ ನೋಡಿ ಸ್ವತಃ ಸಂತೋಷ ಲಾಡ್ ಅವರೇ, ರೈತನ ಬಳಿ ಬಂಡಿ ತೆಗೆದುಕೊಂಡು ತಳ್ಳುತ್ತಾ ಊರು ತಲುಪಿಸಿದ್ದಾರೆ. ಸಂತೋಷ್ ಲಾಡ್ ಸರಳತೆಗೆ ಗ್ರಾಮಸ್ಥರು ಫುಲ್ ಖುಷಿಯಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





