Breaking News

ಅಪರಾಧ

ಆರಕ್ಷಕರಿಂದಲ್ಲೆ ಹಣಕ್ಕಾಗಿ ಕೊಲೆ ಆಗಿದಿಯಾ..?

ಆರಕ್ಷಕರಿಂದಲ್ಲೆ ಹಣಕ್ಕಾಗಿ ಕೊಲೆ ಆಗಿದಿಯಾ..? ವಾಣಿಜ್ಯ ನಗರೀ ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ನೋಡುವುದಾದ್ರೇ ಇಲ್ಲಿ ಕದ್ದವನು ಸೇಫ್ , ಸುಮ್ಮನಿದ್ದವನು ಅರೆಸ್ಟ್ ಎಂಬುವ ಹಾಗಿದೆ ಖಾಕಿಪಡೆಯ ನಡೆ. ಕಳೆದ 19 ರಂದು ಶಹರ ಪೋಲಿಸ್ ಠಾಣೆಯಲ್ಲಿ ಲಾರಿ ಕಳ್ಳತನ ಆರೋಪದಡಿಯಲ್ಲಿ ಐದಕ್ಕೂ ಹೆಚ್ಚು ಜನರನ್ನು ಪೋಲಿಸರು ಬಂಧಿಸಿ ಠಾಣೆ ಕರೆತಂದು ಅದರಲ್ಲಿ ಇಬ್ಬರನ್ನು ಅಂದರ್ ಮಾಡಿದ್ದರು. ಆದ್ರೇ ಅಂದರ್ ಆದವರಲ್ಲಿ ಒಬ್ಬ ಇಂದು ಸಾವನ್ನಪ್ಪಿದ್ದಾನೆ. ಅಷ್ಟಕ್ಕೂ ಈ ಸಾವಿನ ಸುತ್ತ …

Read More »

ಬ್ಯಾಟರಿ ಕದ್ದವನ ಪ್ರಾಣ ತೆಗೆದ್ರಾ ಪೋಲೀಸರು …!

ಹಣ ಕೊಡದಿದ್ದಕ್ಕೆ ಪೊಲೀಸರಿಂದಲೇ ಕೊಲೆ ? ಹುಬ್ಬಳ್ಳಿ-ಕಳ್ಳತನ ಆರೋಪದ ಅಡಿಯಲ್ಲಿ ನ್ಯಾಯಂಗ ಬಂಧನದಲ್ಲಿದ್ದ ವ್ಯಕ್ತಿ ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕಳೆದ ೧೯ರಂದು ಲಾರಿ ಕಳ್ಳತನ ಪ್ರಕರಣದಲ್ಲಿ ಶಹರ ಪೋಲಿಸ್ ಠಾಣೆಯ ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದರು. ಆದ್ರೆ ಪ್ರಕರಣ ಸಂಬಂಧಿಸಿದಂತೆ ಒಟ್ಟು ಒಂಬತ್ತು ಜನರನ್ನು ಅರೆಸ್ಟ್ ಮಾಡಿದ್ದರು ಬಳಿಕ ಅವರ ಬಳಿ ಹಣ ಪಡೆದು ಅವರನ್ನು ಬಿಟ್ಟು ಕಳಿಸಿದ್ದಾರಂತೆ , ಮೃತ ದಾವಲ್ …

Read More »

ಹೈಟೆಕ್ ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ

ಹೈಟೆಕ್ ಜೂಜು ಅಡ್ಡೆ ಮೇಲೆ ಪೊಲೀಸರುದಾಳಿ ಮಾಡಿರುವ ಘಟನೆ ಕೋಲಾರದ ಶ್ರೀನಿವಾಸಪುರ ತಾಲೂಕಿನ ಗುಂಟಪಲ್ಲಿ ಕ್ರಾಸ್ ಬಳಿಯ ಕೆನ್ ಟ್ರೀ ರಿಕ್ರಿಯೇಷನ್ ಕ್ಲಬ್ ನಲ್ಲಿ ನಡೆದಿದೆ. ಜೂಜಿನಲ್ಲಿ ಭಾಗಿಯಾಗಿದ್ದ 67 ಜನರ ಬಂಧನ ಮಾಡಲಾಗಿದ್ದು, ಜೂಜಾಡಿಗಳಿಂದ 5 ಲಕ್ಷ ರೂಪಾಯಿ ನಗದು ಸೇರಿದಂತೆ 50 ಮೊಬೈಲ್ ಗಳು ವಶಕ್ಕೆ ಪಡೆಯಲಾಗಿದ್ದು, ರಾಯಲ್ಪಾಡು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ವಿಷಪೂರಿತ ಹಾಲಿನ ಅಡ್ಡೆಯ ಮೇಲೆ ದಾಳಿ

ಕೆಮಿಕಲ್‌ ಹಾಲು ತಯಾರಿಕಾ ಘಟಕದ ಮೇಲೆ ಪೊಲೀಸರು ದಾಳಿ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ನಡೆದಿದೆ. ಕೆಮಿಕಲ್ ಮಿಶ್ರಣ ಮಾಡಿ ಹಾಲಿನ ಪ್ಯಾಟ್ ಜಾಸ್ತಿ ಮಾಡುತ್ತಿದ್ದ ಖದೀಮರ ಅಡ್ಡೆಯ ಮೇಲೆ ಖಚಿತ ಮಾಹಿತಿ ಮೇರೆಗೆ ರಾತ್ರೋರಾತ್ರಿ ಪೋಲಿಸರು ದಾಳಿ ನಡೆಸಿದ್ದು, ೬ ಜನ ಖದೀಮರನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯಿಂದ ಕೆಮಿಕಲ್ ತರುವಾಗ ಆರೋಪಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಕುಮಾರ ಹಾರೂಗೇರಿ ಎಂಬುವವರಿಗೆ …

Read More »

ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದವರ ಬಂಧನ

ಆನೇಕಲ್:- ಖಚಿತ ಮಾಹಿತಿ ಮೇರೆಗೆ ಪೋಲಿಸರು ಗಾಂಜಾ ಮಾರಾಟ ಮಾಡುತ್ತಿದ್ದ ಮನೆಯ ಮೇಲೆ ದಾಳಿ ಮಾಡಿದ್ದು, ಗಾಂಜಾ ಮಾರುತ್ತಿದ್ದ ಇಬ್ಬರು ಆರೋಪಿಗಳು ವಶಕ್ಕೆ ಪಡೆದಿದ್ದಾರೆ. ಆನೇಕಲ್ ತಾಲೂಕಿನ ಹಿಲಲಿಗೆ ಗ್ರಾಮದ ಮನೆಯಲ್ಲಿ ಗಾಂಜಾ ಮಾರುತ್ತಿದ್ದ ಆರೋಪಿಗಳಿಂದ 1ಕೆಜಿ 200ಗ್ರಾಮ್ ಗಾಂಜಾ ವಶ ಪಡೆಸಿಕೊಂಡಿದ್ದಾರೆ. ಹಿಲಲಿಗೆ ಗ್ರಾಮದ ಶ್ರೀನಿವಾಸ್(34), ನೆರಳೂರು ಗ್ರಾಮದ ಶ್ರೀಕಾಂತ್(24) ಬಂಧಿತ ಆರೋಪಿಗಳಾಗಿದ್ದಾರೆ. ಖಚಿತ ಮಾಹಿತ ಮೇರೆಗೆ ಸೂರ್ಯಸಿಟಿ ಪೋಲಿಸರಿಂದ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

Read More »

ಒಂದೇ ಹೊಡೆತಕ್ಕೆ ಗಂಡ ಫೀನಿಷ್

ಚಾಮರಾಜನಗರ: ಕಂಠಪೂರ್ತಿಕುಡಿದು ಬಂದ ಗಂಡನಿಗೆ ಪತ್ನಿ ಕಪಾಳಮೋಕ್ಷ ಮಾಡಿದ ಪರಿಣಾಮವಾಗಿ ಆತ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಚಾಮರಾಜನಗರ ತಾಲೂಕಿನ ಉತ್ತುವಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪ್ರಭುಸ್ವಾಮಿ ಮೃತ ಪತಿ. ಸದಾ ಫುಲ್ ಟೈಟಾಗಿ ಮನೆಗೆ ಬಂದು ಪತ್ನಿ ಅಂಬಿಕಾ ಜೊತೆ ಜಗಳ ಮಾಡುತ್ತಿದ್ದನು. ಶನಿವಾರ ಕೂಡ ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಕೋಪಗೊಂಡ ಅಂಬಿಕಾ, ಪತಿ ಪ್ರಭುಸ್ವಾಮಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಈ ವೇಳೆ ಪ್ರಭುಸ್ವಾಮಿ ಕುಸಿದುಬಿದ್ದು ಸ್ಥಳದಲ್ಲಿಯೇ …

Read More »

ಬಸ್- ಸ್ಕೂಟರ್ ನಡುವೆ ಮುಖಾಮುಖಿ ಡಿಕ್ಕಿ ಒರ್ವ ಸಾವು

ಕೆ.ಎಸ್.ಆರ್.ಟಿಸಿ. ಬಸ್- ಸ್ಕೂಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಒಬ್ಬ ವಿದ್ಯಾರ್ಥಿ ಸಾವನಾಪ್ಪಿದ್ದು ಹಾಗೂ ಮತ್ತೊಬ್ಬನಿಗೆ ಗಾಯಗೊಂಡಿರುವ ಘಟನೆ ಮಂಡ್ಯ ತಾಲೂಕಿನ ಪೀಹಳ್ಳಿ ಬಳಿ ನಡೆದಿದೆ. ಗ್ರಾಮದಿಂದ ಮಂಡ್ಯ ಕಡೆಗೆ ಬರುತ್ತಿದ್ದ ವೇಳೆ ಖಾಸಗಿ ಬಸ್ ಓವರ್ ಟೇಕ್ ಮಾಡಲು ಹೋಗಿ ಎದುರು ಬರುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಶ್ರೀರಂಗಪಟ್ಟಣ ತಾಲೂಕಿನ ಬನ್ನಹಳ್ಳಿ ಗ್ರಾಮದ ಸಂಜು(16) ಸಾವನಾಪ್ಪಿದ್ದಾರೆ. ಗಾಯಾಳು ವಿದ್ಯಾರ್ಥಿ ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲು …

Read More »

ವ್ಯಕ್ತಿಯೊರ್ವನ ಮೇಲೆ ಮಾರಣಾಂತಿಕ ಹಲ್ಲೆ

ಚಿತ್ರದುರ್ಗ ನಗರದ ಐಶ್ವರ್ಯ ಫೋರ್ಟ್ ಹೋಟೆಲ್ ನಲ್ಲಿ ಮಾರಾಮಾರಿ ನಿನ್ನೆ ಸಂಜೆ ಸಂಭವಿಸಿದೆ. ಓರ್ವನ ಮೇಲೆ ಏಳು ಜನರ ತಂಡವೊಂದು ಆಟ್ಯಾಕ್ ಮಾಡಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿ ಹಾವೇರಿ ಮೂಲದ ಪ್ರಸಾದ್ ಚನ್ನಬಸಪ್ಪ ನೆಲವಿ ಎಂದು ತಿಳಿದು ಬಂದಿದೆ. ತನ್ನ ಮೇಲೆ ಹಲ್ಲೆ ನಡೆದರೂ ಸಹ ತಾನೇ ಹೋಟೆಲ್ ಆವರಣದಿಂದ ನಡೆದುಕೊಂಡೇ ಆಸ್ಪತ್ರೆ ತಲುಪಿದ್ದಾನೆ. ಚಿತ್ರದುರ್ಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಖೋಟಾನೋಟು ಚಲಾವಣೆ ಮಾಡುತ್ತಿದ್ದ ದಂಪತಿ ಬಂಧನ

ಖೋಟಾನೋಟು ಚಲಾವಣೆ ಮಾಡುತ್ತಿದ್ದ ದಂಪತಿ ಬಂಧನ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ನಡೆದಿದೆ. 1.31 ಲಕ್ಷ ಮೌಲ್ಯದ ಖೋಟಾನೋಟು, ಪ್ರಿಂಟರ್, ಇಂಕ್ ಬಾಟಲಿಗಳನ್ನು ಹರಿಹರ ನಗರ ಪೊಲೀಸರ ಕಾರ್ಯಾಚರಣೆ ಮಾಡುವ ಮೂಲಕ ವಶಪಡಿಸಿಕೊಂಡಿದ್ದಾರೆ. ಹನುಮಂತಪ್ಪ(50), ಶಾಂತ(40) ಬಂಧಿತ ದಂಪತಿಗಳು. ಚನ್ನಗಿರಿ ತಾಲೂಕಿನ ನವಿಲೇಹಾಳ ಗ್ರಾಮದ ದಂಪತಿ. ಬಂಧಿತರಿಂದ 2000,500,200 ಮುಖಬೆಲೆ ಖೋಟಾ ನೋಟುಗಳನ್ನು ಹರಿಹರ ಸಂತೆಯಲ್ಲಿ ಚಲಾವಣೆಗೆ ಯತ್ನಿಸಿದ ವೇಳೆ ಪೊಲೀಸರ ದಾಳಿ ನಡೆಸಿದ್ದಾರೆ. ಸಾರ್ವಜನಿಕರ ಮಾಹಿತಿ …

Read More »

ದರೋಡೆಕೋರರಿಂದ ವೃದ್ಧ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ.

ಆನೇಕಲ್: ವೃದ್ಧರಿದ್ದ ಮನೆಗೆ ನುಗ್ಗಿದ ಇಬ್ಬರು ದರೊಡೆಕೋರು ದರೋಡೆ ತಡೆಯಲು ಬಂದ ವೃದ್ಧರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ. ಮುನಿರೆಡ್ಡಿ. ಜಯಮ್ಮ ಹಲ್ಲೆಗೊಳಗಾದ ವೃದ್ಧ ದಂಪತಿಯಾಗಿದ್ದು ಇಂದು ಸಂಜೆ 5 ಗಂಟೆ ವೇಳೆಗೆ ಮನೆಗೆ ನುಗ್ಗಿದ ಇಬ್ಬರು ಅಂಗುತಕರು ಮನೆಯಲ್ಲಿದ್ದ ವೃದ್ಧರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಜಯಮ್ಮ ತೀವ್ರವಾಗಿ ಗಾಯಗೊಂಡಿದ್ದರೆ ಇನ್ನು ದರೋಡೆಕೋರರು ದಂಪತಿಗೆ ತಿಳಿದವರೆ …

Read More »