Breaking News

ಅಪರಾಧ

ಜೈಲಾಧಿಕಾರಿಯ ಲಂಚದ ದಾಹಕ್ಕೆ, ಖೈದಿ ಸಾವು.

ಜೈಲಿನಲ್ಲಿ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಖೈದಿಯ ಬಳಿ ಚಿಕಿತ್ಸೆ ಕೊಡಿಸಲು ಹಣ ಕೇಳಿದ ಜೈಲಾಧಿಕಾರಿ ಹಣ ನೀಡದ ಕಾರಣ ಖೈದಿ ಸಾವನ್ನಪ್ಪಿರುವುದರಿಂದ ಜೈಲಿನ ಖೈದಿಗಳಿಂದ ಪ್ರತಿಭಟನೆ ನಡೆಸಿರುವಂತಹ ಘಟನೆ ಬೆಂಗಳೂರಿನಪರಪ್ಪನ ಅಗ್ರಹಾರದ ಜೈಲಿನಲ್ಲಿ ನಡೆದಿದೆ,ಹೌದು ಪರಪ್ಪನ ಅಗ್ರಹಾರ ಕಾರಾಗೃಹ ಒಂದಲೋಂದು ಕಾರಣಗಳಿಂದ ಪದೇ ಪದೇ ಪ್ರತಿಭಟನೆಗಳು ಮರುಕಳಿಸುತ್ತಿರುವುದರಿಂದ ಎಲ್ಲಾ ಸರಿಯಿಲ್ಲ ಎನ್ನುವ ಅನುಮಾನ ಗಟ್ಟಿಗೊಳ್ಳುತ್ತಿದೆ. ಇದೀಗ ಕೈದಿ ಅಮೀರ್ ಮೂರನೇ ಬ್ಯಾರಕ್ ನಾಲ್ಕನೇ ಕೊಠಡಿಯಲ್ಲಿ ನರಳುತ್ತಿದ್ದರೂ ಚಿಕಿತ್ಸೆಕೊಡಿಸಲು ಹಣ ಬೇಡಿಕೆಯಿಟ್ಟಿದ್ದ …

Read More »

ಸ್ವಾಮೀಜಿ ಮೇಲೆ ದುಷ್ಕರ್ಮಿಗಳಿಂದ ಏಕಾಎಕಿ ಹಲ್ಲೆ,

ಸ್ವಾಮೀಜಿಯ ಮೇಲೆ ಕೆಲ ದುಷ್ಕರ್ಮಿಗಳು ತಡರಾತ್ರಿ ಮಠಕ್ಕೆ ನುಗ್ಗಿ ಏಕಾಎಕಿ ಹಲ್ಲೆ‌ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಪನಾಳ ಗ್ರಾಮದಲ್ಲಿ ನಡೆದಿದೆ. ನಿಪನಾಳದ ಸೇವಾಶ್ರಮ ಮಠದ ಪೀಠಾಧಿಪತಿಗಳಾದ ಪ್ರಭುಮಹರಾಜ(೪೦) ಸ್ವಾಮೀಜಿಗಳ ಮೇಲೆ‌ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ತಡರಾತ್ರಿ ೬ ಜನ‌ ದುಷ್ಕರ್ಮಿಗಳಿಂದ ಏಕಾಎಕಿ ಸ್ವಾಮೀಜಿ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ ತೀವ್ರವಾಗಿ ಗಾಯಗೊಂಡ ಪ್ರಭುಮಹರಾಜ ಸ್ವಾಮೀಜಿ ಆಸ್ಪತ್ರಗೆ ದಾಖಲಾಗಿದ್ದಾರೆ, ಈ ಕುರಿತು ೬ ಜನ ಆರೋಪಿಗಳ ಪರ …

Read More »

ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿ ಅಪರಿಚಿತ ಶವ ಪತ್ತೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಸುಮಾರು 38 ವಯಸ್ಸಿನ ವ್ಯಕ್ತಿಯ ಬರ್ಬರವಾಗಿ ಕೊಲೆ ಮಾಡಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಮುಖದ ಮೆಲೆ ಕಲ್ಲು ಹಾಕಿ ಕೊಲೆ ಮಾಡಿ ನಿಪ್ಪಾಣಿ_ಮುಧೋಳ ಹೆದ್ದಾರಿ ಪಕ್ಕ ಶವ ಎಸೆದಿದ್ದಾರೆ. ಈ ಕುರಿತು ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದರು. ಪ್ರಕರಣ ದಾಖಲಿಸಿ ಕೊಂಡಿರುವ ಪೋಲಿಸ್ ಇಲಾಖೆ ಆರೋಪಿಗಳಿಗೆ ಬಲೆ ಬೀಸಿದ್ದಾರೆ.

Read More »

ಮೂರ್ತಿಯ ಹಣೆಯಲ್ಲಿ ಅಪಾರ ಸಂಪತಿನ‌ ಆಸೆಗೆ ಧ್ವಂಸ.

ಬೂದನಗುಡ್ಡ ಬಸವೇಶ್ವರ ಮೂರ್ತಿ ಭಗ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಘಟಗಿ ಪೊಲೀಸರು 8 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಕ್ಷ್ಮಣ ಚಂಡೂನವರ್, ಲಾಲಸಾಬ್ ಬಾವಿ, ಮಹಾಂತೇಶ ಮಾಳಗಿ, ಶಿವರಾಜ್ ಜೀವಕನವರ್, ನಾಗರಾಜ್ ಚೌಡಣವರ್, ಸಿದ್ದರಾಮ ಮರದಣವರ್, ರವಿ‌ ಕೊಳೂರ್, ಮಂಜುನಾಥ ಮೊಸಳಣವರ್ ಎಂಬುವವರನ್ನು ಬಂಧಿಸಿದ್ದಾರೆ. ಮೇ 28 ರಂದು ಆರೋಪಿಗಳು ಬೂದನಗುಡ್ಡದ ಬಸವೇಶ್ವರ ಮೂರ್ತಿಯನ್ನು ಭಗ್ನಗೊಳಿಸಿ ಪರಾರಿಯಾಗಿದ್ದರು. ಆರೋಪಿತರನ್ನು ಬಂಧಿಸಿ ವಿಚಾರಣೆ ನಡೆಸಿದಾಗಿ, ಬಸವವೇಶ್ವರ ಮೂರ್ತಿಯ ಹಣೆಯಲ್ಲೊ ಅಪಾರ ಪ್ರಮಾಣದ ಬೆಲೆಬಾಳುವ …

Read More »

ಗಂಡನಿಂದಲ್ಲೇ ಹೆಂಡತಿ ಮರ್ಡರ್

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಈಶ್ವರಗೆರೆ ಗ್ರಾಮದಲ್ಲಿ ನಡೆದಿದೆ. ದುರುಗಮ್ಮ (27) ಕೊಲೆಯಾದ ಮಹಿಳೆಯಾಗಿದ್ದು,ಪಾಪಿ ಪತಿ ರಂಗನಾಥ್ ನಿಂದ ಕೃತ್ಯ ನಡೆದಿದೆ. ಕಳೆದ 6 ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿ ನಿರಂತರವಾಗಿ ಜಗಳ ವಾಡುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಕೊಲೆಗೆ ನಿಕರ ಕಾರಣ ತಿಳಿದಿಲ್ಲ.ಈ ಕುರಿತು ಸ್ಥಳಕ್ಕೆ ಅಬ್ಬಿನಹೊಳೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದರು.

Read More »

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ಬಿದ್ದ ಘಟನೆ ಕೋಲಾರದ ಬಂಗಾರಪೇಟೆ ಪಟ್ಟಣದ ಬಜಾರ್ ರಸ್ತೆಯಲ್ಲಿ ನಡೆದಿದೆ. ಮನೆಯಲ್ಲಿದ್ದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಟಿ.ಎಸ್.ನಾಗಪ್ರಕಾಶ್ (೫೮) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ಶೋಭ, ಸ್ವರೂಪ್ ಹಾಗೂ ಸತ್ಯನಾರಾಯಣ ಎಂಬುವರು ಪ್ರಾಣಾಪಾಯದಿಂದ ಪಾರಾಗಿದ್ದು, ಶೋಭ ಎಂಬುವವರಿಗೆ ಉಸಿರಾಟದ ತೊಂದರೆಯಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಮುಂಜಾನೆ ೫ ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿ …

Read More »

18 ವಯಸ್ಸಿನ ಅಪರಿಚಿತ ಯುವತಿಯ ಕೊಲೆ

18 ವಯಸ್ಸಿನ ಅಪರಿಚಿತ ಯುವತಿಯ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಗವಾಣಿ ಗ್ರಾಮದ ಬಳಿ ನಡೆದಿದೆ. ದುಷ್ಕರ್ಮಿಗಳು ಯುವತಿಯನ್ನು ಕೊಲೆ ಮಾಡಿ ದೇಹವನ್ನು ಸುಟ್ಟುಹಾಕಿದ್ದಾರೆ. ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನಿಪ್ಪಾಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಭೂಗತ ರೌಡಿ ಅಷ್ಗರ್ ಅಲಿ ಅರೆಸ್ಟ್

ಭೂಗತ ರೌಡಿ ಅಷ್ಗರ್ ನನ್ನು ಮಹತ್ವದ ಕಾರ್ಯಾಚರಣೆ ಮೂಲಕ ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಈತನ ಮೇಲೆ 2 ಕೊಲೆ ಕೇಸು ಸೇರಿದಂತೆ 9 ಪ್ರಕರಣಗಳು ದಾಖಲಾಗಿದ್ದವು. 2007 ರಲ್ಲಿ ನಕಲಿ ಪಾಸ್ಪೋರ್ಟ್ ಮೂಲಕ ದುಬೈ ಗೆ ಪರಾರಿ ಆಗಿದ್ದ . ವಾರದ ಹಿಂದೆ ಕಾಸರಗೋಡು ಬಳಿಯ ಉಪ್ಪಳಕ್ಕೆ ಬಂದಿರುವ ಖಚಿತ ಮಾಹಿತಿಯೊಂದಿಗೆ ಪೋಲಿಸರು ಸೆರೆಹಿಡಿದಿದ್ದಾರೆ.

Read More »

ಕೋಟೆನಾಡಿನಲ್ಲಿ ಕಳ್ಳರ ಕೈ ಚಳಕ.

ಚಿತ್ರದುರ್ಗ ,(ಜೂ.15) : ನಗರದಲ್ಲಿ ಶನಿವಾರ ಹಾಡುಹಗಲೇ ಜಯಲಕ್ಷ್ಮೀ ಬಡಾವಣೆ, ಹನುಮಂತನಗರ ಮತ್ತು ವಿದ್ಯಾನಗರದಲ್ಲಿ ಸರಣಿ ಕಳ್ಳತನ ನಡೆದಿದೆ.ಜಯಲಕ್ಷ್ಮೀ ಬಡಾವಣೆಯ ರಾಮಚಂದ್ರರಾವ್,ಹನುಮಂತನಗರದ ಲಿಂಗರಾಜು ಮತ್ತು ವಿದ್ಯಾ ನಗರದ ಚಂದ್ರಶೇಖರ್ ಎನ್ನುವವರ ಮನೆ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಮೂರು ಮನೆಗಳಲ್ಲಿ ಟಿವಿ, ನಗದು ಕದ್ದು ಕಳ್ಳರು ಪರಾರಿಯಾಗಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸಂಬಂಧ ಕೋಟೆಠಾಣೆ ಮತ್ತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ಕಳೆದ ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗೀ ಪತ್ತೆಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ದುಗ್ಗಾವತಿ ಬಳಿ ನಡೆದಿದೆ. ಚೆನ್ನಬಸಪ್ಪ (38) ಕೊಲೆಯಾದ ವ್ಯಕ್ತಿ. ಕೈಕಾಲು ಕಟ್ಟಿ ಕೊಲೆ ಮಾಡಿ ಹಳ್ಳದಲ್ಲಿ ಕಿಡಿಗೇಡಿಗಳು ಎಸೆದಿದ್ದಾರೆ. ಕುಟುಂಬಸ್ಥರಿಂದ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More »