admin
December 9, 2021
Breaking News, ಕರ್ನಾಟಕ, ಶಿಕ್ಷಣ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಪ್ರಸಕ್ತ ವರ್ಷದ ತರಗತಿ ಆರಂಭಿಸಬೇಕು ಹಾಗೂ ಆನ್ ಲೈನ್ ಪರೀಕ್ಷೆ ನಡೆಸಬೇಕು ಎಂಬ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ನವನಗರದಲ್ಲಿ ಕಾನೂನಿನ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಹಲವು ದಿನಗಳಿಂದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಕೆಲ ದಿನಗಳಿಂದಷ್ಟೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಿಗೂ ಬೇಡಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ನವನಗರದ ಆರ್.ಟಿ.ಓ ಕಚೇರಿಯಿಂದ ಕಾನೂನು ವಿವಿವರೆಗೂ ವಿವಿಧ …
Read More »
admin
December 9, 2021
Breaking News, ಅಪರಾಧ, ಕರ್ನಾಟಕ, ತುಮಕೂರು
ಕೊರಟಗೆರೆ ಪಟ್ಟಣದ ಖಾಸಗಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ ಗೆಳತಿಯ ಮನೆಗೆ ಪುಸ್ತಕ ತೆಗೆದುಕೊಂಡು ಹೋಗಲು ಬಂದಿದ್ದಳು. ಈ ವೇಳೆ ಆರೋಪಿಯು ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ತುಮಕೂರು: ಕುಡಿಯುವ ನೀರಿನಲ್ಲಿ ಪ್ರಜ್ಞೆ ತಪ್ಪುವ ಔಷಧಿ ಬೆರೆಸಿಕೊಟ್ಟು ನಂತರ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿರುವ ಪ್ರಕರಣ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊರಟಗೆರೆ ಪಟ್ಟಣದ ಖಾಸಗಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ …
Read More »
admin
December 9, 2021
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ : ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಅಕ್ರಮ ಮದ್ಯ ಸಾಗಾಟ ಜೋರಾಗಿ ಸಾಗಿದ್ದು, ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಂತೆ ಇಂದು ನಗರದ ಮಂಟೂರ ರಸ್ತೆಯಲ್ಲಿ ಭಾರಿ ಪ್ರಮಾಣದ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಅಧಿಕಾರಿಗಳು ಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಮೆರೆಗೆ ವಾಹನ ಸಂಖ್ಯೆ ಕೆಎ.63k.1560(ಹೊಂಡಾ ಡಿಯೋ ದ್ವಿಚಕ್ರ)ದಲ್ಲಿ ಅಕ್ರಮವಾಗಿ 30.24 ಲೀಟರ್ ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ದಾಳಿ ಮಾಡಿದ ವೇಳೆ ಆರೋಪಿತ ಪರಾರಿಯಾಗಿದ್ದಾನೆ. …
Read More »
admin
December 9, 2021
Breaking News, ಕರ್ನಾಟಕ, ದಾವಣಗೆರೆ
ದಾವಣಗೆರೆ: ದೇಶ-ವಿದೇಶಗಳಿಂದ ಜಿಲ್ಲಾಗೆ ಬಂದಿರುವ 66 ಮಂದಿ ಪೈಕಿ ಕೊರೊನಾ ವೈರಸ್ ಹೆಚ್ಚಾಗಿ ಕಾಣಿಸಿಕೊಂಡ ದೇಶಗಳಿಂದ 21 ಜನ ಬಂದಿದ್ದಾರೆ. ಅವರರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ.ಜನ ಭಯಪಡುವ ಅಗತ್ಯ ಇಲ್ಲವೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಬೆಣ್ಣೆ ನಗರಿ ಮಂದಿಗೆ ಹೇಳಿದ್ದಾರೆ. ನಗರದಲ್ಲಿ ಮನೆ ಮನೆಗೆ ಲಸಿಕೆ ಅಭಿಯಾನ ಆರಂಭಿಸಿ ಮಾತನಾಡಿದ ಅವರು, 66 ಜನರು ಕೂಡ ಕೊರೊನಾ ನೆಗೆಟಿವ್ ವರದಿ ತಂದಿದ್ದಾರೆ. ಅವರೆಲ್ಲರ ಮೇಲೆ ನಿಗಾ ಇರಿಸಿದ್ದೇವೆ. 7 ದಿನಗಳ ಹೋಂ …
Read More »
admin
December 9, 2021
Breaking News, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಪ್ರಯಾಣಿಕರೊಬ್ಬರು ಆಟೋದಲ್ಲಿ ಮರೆತು ಹೋಗಿದ್ದ ಬ್ಯಾಗನ್ನು ಆಟೋ ಡ್ರೈವರೊಬ್ಬರು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಲ್ಲದೇ ಇತರರಿಗೆ ಮಾದರಿಯಾಗಿದ್ದಾರೆ. ಹೌದು ಹುಬ್ಬಳ್ಳಿಯ ಆಟೋ ಡ್ರೈವರ್ ಆಗಿರುವ ಮಹಮ್ಮದ್ ಯುಸೂಪ್ ಘಾಟಿವಾಲೇ ಎಂಬುವವರೇ ಬ್ಯಾಗ ಹಿಂತಿರುಗಿಸಿದ ಆಟೋ ಚಾಲಕನಾಗಿದ್ದು, ಗೀತಾ ಬಿಳೆಅಂಗಡಿ ಎಂಬುವರು ನಿನ್ನೆ ಆಟೋದಲ್ಲಿ ಪ್ರಯಾಣಿಸಿದ್ದು ಆಟೋ ಬಿಟ್ಟು ಇಳಿಯುವಾಗ ತಮ್ಮ ಬ್ಯಾಗನ್ನು ಮರೆತು ಹೋಗಿದ್ದು,ಅದನ್ನು ಗಮನಿಸಿದ ಮಹಮ್ಮದ ಯುಸೂಪ್ ತಕ್ಷಣ ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆಗೆ ಹಿಂತಿರುಗಿಸಿದ್ದಾನೆ. ಠಾಣೆಯ ಪಿಎಸ್ …
Read More »
admin
December 9, 2021
Breaking News, ಕರ್ನಾಟಕ, ಬೆಂಗಳೂರು, ಸಿನಿಮಾ
ಬೆಂಗಳೂರು: ಪೊಗರು’ ಸಿನಿಮಾ ಬಳಿಕ ನಟ ಧ್ರುವ ಸರ್ಜಾ ಅಭಿನಯಿಸುತ್ತಿರೋ ಸಿನಿಮಾ ‘ಮಾರ್ಟಿನ್’. ನಿರ್ದೇಶಕ ಎ.ಪಿ ಅರ್ಜುನ್ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಚಿತ್ರಕ್ಕೆ ನಾಯಕಿ ಯಾರಾಗ್ತಾರೆ ಅನ್ನೋದು ಗಾಂಧಿನಗರದಲ್ಲಿ ಚರ್ಚೆ ಆಗಿತ್ತು. ಮತ್ತೊಂದೆಡೆ, ಚಿತ್ರತಂಡ ಹೊಸ ಹೀರೋಯಿನ್ ಹುಡುಕಾಟದಲ್ಲಿದೆ ಎನ್ನಲಾಗಿತ್ತು. ವೈಭವಿ ಶಾಂಡಿಲ್ಯ ಮೂಲತಃ ಪುಣೆಯವರು. ಈಗಾಗಲೇ ಮರಾಠಿ, ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿದ್ದು, ಶರಣ್ ಅಭಿನಯದ ‘ರಾಜ್ ವಿಷ್ಣು’ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದರು. ಬಳಿಕ ಯೋಗರಾಜ್ …
Read More »
admin
December 8, 2021
Breaking News, ಅಸೆಂಬ್ಲಿ ಚುನಾವಣೆಗಳು, ಕರ್ನಾಟಕ, ಧಾರವಾಡ, ರಾಜಕೀಯ ಸುದ್ದಿ
ಧಾರವಾಡ: ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಹಾಗೂ ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಮತದಾನ ನೆಡೆಯುತ್ತಿರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಡಿ.8 ರಂದು ಸಂಜೆಯಿಂದ ಡಿ.10 ರವರೆಗೆ ಜಿಲ್ಲೆಯಲ್ಲಿ ಮದ್ಯದ ಅಂಗಡಿ ಹಾಗೂ ಬಾರ್ ಗಳನ್ನು ಬಂದ್ ಮಾಡಬೇಕೆಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ಧಾರೆ. ಜೊತೆಗೆ ಎಲ್ಲ ರೀತಿ ಮದ್ಯ ಸಂಗ್ರಹಣಾ ,ತಯಾರಿಕಾ ಘಟಕ, ಮದ್ಯಸಾಗಾಣಿಕೆ ನಿಷೇಧಿಸಲಾಗಿದೆ.ಹಾಗೂ ಮಾರಾಟ ಮಳಿಗೆಗಳನ್ನು ಮುಚ್ಚಲು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಆದೇಶ ಹೊರಡಿಸಿದ್ದಾರೆ.
Read More »
admin
December 8, 2021
Breaking News, World, ಕರ್ನಾಟಕ, ದೇಶ-ವಿದೇಶ
ಚೆನ್ನೈ(ತಮಿಳುನಾಡು): ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಕುಟುಂಬದ ಸದಸ್ಯರು ಸೇರಿದಂತೆ ಅನೇಕರು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಕನೂರಿನಲ್ಲಿ ಪತನಗೊಂಡಿದೆ. ಇದರಲ್ಲಿ ಒಟ್ಟು 14 ಜನರು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಈಗಾಗಲೇ ಲಭ್ಯವಾಗಿರುವ ಮಾಹಿತಿ ಪ್ರಕಾರ ಘಟನಾ ಸ್ಥಳದಲ್ಲಿ ಐವರ ಮೃತದೇಹ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಕೆಲವರನ್ನ ನೀಲಗಿರಿ ಜಿಲ್ಲೆಯ ವೆಲ್ಲಿಂಗ್ಟನ್ ಕಂಟೋನ್ಮೆಂಟ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರಲ್ಲಿ ಸೇನಾ ಮುಖ್ಯಸ್ಥ ಬಿಪಿನ್ …
Read More »
admin
December 7, 2021
Breaking News, ಕರ್ನಾಟಕ, ರಾಜಕೀಯ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಕುಂದಗೊಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಧಾರವಾಡ, ಗದಗ,ಹಾವೇರಿ ಜಿಲ್ಲೆ ಒಳಗೊಂಡ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಾನ್ಯ ಶ್ರೀ ಸಲೀಂ ಅಹ್ಮದ್ ಅವರ ಪರವಾಗಿ ಕುಂದಗೋಳ ಮತಕ್ಷೇತ್ರದ ಶಾಸಕರಾದ ಶ್ರೀಮತಿ ಕುಸುಮಾವತಿ ಸಿ ಶಿವಳ್ಳಿಯವರು ಗುಡೇನಕಟ್ಟಿಗ್ರಾಮದಲ್ಲಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಸದಸ್ಯ ಶ್ರೀ ಅರವಿಂದ ಕಟಗಿ,ಮಾಜಿ ಜಿಪಂ ಸದಸ್ಯರಾದ ಶ್ರೀ ಉಮೇಶ ಹೇಬಸೂರ, ಕೆಪಿಸಿಸಿ ಕೋ …
Read More »
admin
December 7, 2021
Breaking News, ಕರ್ನಾಟಕ, ರಾಜಕೀಯ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಬೆಳಗಾವಿ ಜಿಲ್ಲೆ ಪ್ರವಾಸ ಇದೆ, ಅಲ್ಲಿ ಪ್ರಮುಖರನ್ನ ಭೇಟಿಯಾಗುತ್ತಿದ್ದೇನೆ. ವಿಧಾನ ಪರಿಷತ್ ಚುನಾವಣೆ ಗೆಲ್ಲುವುದಕ್ಕಾಗಿ ಏನು ಮಾಡಬೇಕು ಅದರ ಬಗ್ಗೆ ಸೂಚನೆ ನೀಡುತ್ತೇನೆ. ಮಹಾಂತೇಶ್ ಗೆಲುವು ನಿಶ್ಚಿತ, ಅಲ್ಲಿಯೂ ಇನ್ನಷ್ಟು ಉತ್ತಮ ಕೆಲಸ ಆಗಬೇಕು. ಮತ್ತು ರಾಜ್ಯದಲ್ಲಿ ಓಮಿಕ್ರಾನ್ ಜಿನೊನ್ ಸಿಕ್ವೆನ್ಸ್ ಗೆ ಪರಿಣಿತ ವ್ಯವಸ್ಥೆ ಬೇಕು ಎಲ್ಲೆಲ್ಲಿ ಸಂಶಯ ಇದೆ ಅಲ್ಲಿ ಟೆಸ್ಟ್ ಆರಂಭಿಸಿದ್ದೇವೆ. ಅತಿ ಶೀಘ್ರದಲ್ಲಿ ಟೆಸ್ಟ್ ಬರುವ ಹಾಗೆ ಮಾಡ್ತೀವಿ. ಜಿನೇನ್ ಸಿಕ್ವೆನ್ಸ್ ಲ್ಯಾಬ್ …
Read More »