BigTv News
September 18, 2023
ಕರ್ನಾಟಕ, ಸುದ್ದಿ, ಹಾವೇರಿ
ಹಾವೇರಿ: ಗಣೇಶೋತ್ಸವಕ್ಕೆ ಇಲ್ಲಿಯ ಉಸ್ಮಾನಸಾಬ್ ಎಂಬವರು ವಿವಿಧ ಬಗೆಯ ಏಲಕ್ಕಿ ಮಾಲೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಒಂದೆಳೆಯ ಮಾಲೆಗಳಿಂದ ಹಿಡಿದು 25 ಎಳೆಗಳಿರುವ ಮಾಲೆಗಳನ್ನು ಇವರು ತಯಾರಿಸುತ್ತಾರೆ. ಕಳೆದ ಹಲವು ವರ್ಷಗಳಿಂದ ಈ ಕೆಲಸದಲ್ಲಿ ತೊಡಗಿದ್ದಾರೆ. ತಾಯಿಯಿಂದ ಬಂದ ಕಲೆಯನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿದ್ದಾರೆ. ವಿಶಿಷ್ಠ ಏಲಕ್ಕಿ ಮಾಲೆ ತಯಾರಿಕೆಗಾಗಿ ಇವರ ತಾಯಿಗೆ ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿ ಲಭಿಸಿತ್ತು. ಉಸ್ಮಾನಸಾಬ್ ಮಾತನಾಡಿ, “ಸಾರ್ವಜನಿಕ ಗಣೇಶೋತ್ಸವಗಳಿಗಾಗಿ ಮುಂಚಿತವಾಗಿ ಆರ್ಡರ್‌ಗಳು ಬಂದಿವೆ. ಈಗಾಗಲೇ …
Read More »
BigTv News
September 18, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿಶ್ವಕರ್ಮ ಸಮುದಾಯಕ್ಕೆ ಬಲ ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪಿಎಂ ವಿಶ್ವಕರ್ಮ ಯೋಜನೆ ಜಾರಿಗೊಳಿಸಿದ್ದು, ಕುಲಕಸುಬು ಮಾಡಿಕೊಂಡು ಬರುತ್ತಿರುವ ವಿಶ್ವಕರ್ಮ ಸಮುದಾಯದ ಜನರು ಯೋಜನೆಯ ಲಾಭ ಪಡೆದು ಆರ್ಥಿಕವಾಗಿ ಸದೃಢರಾಗುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಲಹೆ ನೀಡಿದರು. ನಗರದ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್ ನಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಭಾನುವಾರ ಆಯೋಜನೆ ಮಾಡಲಾಗಿದ್ದ ಪಿಎಂ ವಿಶ್ವಕರ್ಮ ಯೋಜನೆಯ ಉದ್ಘಾಟನೆ ಸಮಾರಂಭದಲ್ಲಿ …
Read More »
BigTv News
September 18, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಭಗವದ್ಗೀತೆಯನ್ನು ಮೊದಲು ಬರೆದಿದ್ದು ಹಾಗೂ ಮಹಾಭಾರತವನ್ನು ಮಟ್ಟ ಮೊದಲಬಾರಿಗೆ ಲಿಪಿಬದ್ಧಗೊಳಿಸಿದ್ದು ಗಣಪತಿ ಎಂದು ಪುತ್ತಿಗೆಮಠದ ಸುಗುಣೇಂದ್ರ ತೀರ್ಥರು ತಿಳಿಸಿದರು. ಜೋಶಿ ಸಂಗೀತ ನೃತ್ಯ ನಾಟಕ ಶಾಲೆಯ ವತಿಯಿಂದ ಆಯೋಜಿಸಲಾಗಿದ್ದ ಮಣ್ಣಿನ ಗಣಪ ಮಾಡುವ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ನಾವೆಲ್ಲರೂ ಮಣ್ಣಿನ ಗಣಪತಿಯನ್ನು ನಿರ್ಮಾಣ ಮಾಡುತ್ತಿದ್ದೇವೆ. ಅದರ ಜೊತೆಗೆ ಕೋಟಿ ಗೀತಲೇಖನ ಯಜ್ಞವನ್ನು ಮಾಡಬೇಕು. ಯಾಕೆಂದರೆ ಕೋಟಿ ಗೀತಾಲೇಖನ ಯಜ್ಞವನ್ನು ಮೊದಲು ಮಾಡಿದ್ದು ಗಣಪತಿ. ಆದ್ದರಿಂದ ಗಣಪತಿಗೂ …
Read More »
BigTv News
September 18, 2023
ಕರ್ನಾಟಕ, ಬೆಂಗಳೂರು, ಸುದ್ದಿ
ದೇವನಹಳ್ಳಿ: ವಿದೇಶದಿಂದ ಅಕ್ರಮವಾಗಿ ಇ-ಸಿಗರೇಟ್ ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರು ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್) ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ 15.9 ಲಕ್ಷ ರೂಪಾಯಿ ಮೌಲ್ಯದ ಇ-ಸಿಗರೇಟ್ ವಶಕ್ಕೆ ಪಡೆಯಲಾಗಿದೆ. ಸೋಮವಾರ ಮಲೇಷ್ಯಾದ ಕೌಲಾಲಂಪುರ್ನಿಂದ ಮಲೇಷ್ಯಾ ಏರ್‌ಲೈನ್ಸ್ ಎಮ್ ಹೆಚ್ 192 ವಿಮಾನದ ಮೂಲಕ ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರ ಲಗೇಜ್ಗಳನ್ನು ಪರಿಶೀಲನೆ ಮಾಡುವಾಗ ಅಕ್ರಮ ಪತ್ತೆಯಾಗಿದೆ. 1,590 ಇ-ಸಿಗರೇಟ್ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ …
Read More »
BigTv News
September 18, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಹೊಸಕೋಟೆ (ಬೆಂಗಳೂರು): 7 ತಿಂಗಳ ಗರ್ಭಿಣಿ ಸತತ 26 ಗಂಟೆ ಸ್ಯಾಕ್ಸೋಫೋನ್ ನುಡಿಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿ ವಿಶೇಷ ಮನ್ನಣೆ ತನ್ನದಾಗಿಸಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಮೀಪದ ಆವಲಹಳ್ಳಿ ನಿವಾಸಿ ಸುಬ್ಬಲಕ್ಷ್ಮೀ ಈ ಸಾಧಕಿ. ಕಳೆದ ಪೆಬ್ರವರಿಯಲ್ಲಿ ಇವರು ಆವಲಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 26 ಗಂಟೆ 23 ನಿಮಿಷ ಸ್ಯಾಕ್ಸೊಫೋನ್ ನುಡಿಸಿದ್ದಾರೆ. ಇಷ್ಟು ಸಮಯ ನಿರಂತರವಾಗಿ ಸ್ಯಾಕ್ಸೊಪೋನ್ ನುಡಿಸಿದ ಮೊದಲ ಮಹಿಳೆ ಅನ್ನೋ ಹೆಗ್ಗಳಿಕೆಯೂ ಇವರದ್ದಾಗಿದೆ. ಇದೀಗ …
Read More »
BigTv News
September 18, 2023
ಕರ್ನಾಟಕ, ಮಂಡ್ಯ, ಸುದ್ದಿ
ಮಂಡ್ಯ: ಮೂರು ಡಿಸಿಎಂ ಹುದ್ದೆಯ ಬೇಡಿಕೆ ತಪ್ಪಲ್ಲ ಎಂದು ಮಂಡ್ಯದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದರು. ನಗರದಲ್ಲಿ ಮಾತನಾಡಿದ ಅವರು, ಇದೆಲ್ಲ ನಮ್ಮ ವರಿಷ್ಠರು ತೀರ್ಮಾನ ಮಾಡುವಂಥದ್ದು. ವೈಯಕ್ತಿಕ ಅಭಿಪ್ರಾಯಗಳನ್ನು ನಮ್ಮವರು ಆಗಾಗ್ಗೆ ಹೇಳುತ್ತಿರುತ್ತಾರೆ ಎಂದರು. ಈ ವಿಚಾರವನ್ನು ಹೈಕಮಾಂಡ್ಗೆ ಬಿಟ್ಟು ಬಿಡೋಣ. ಅದನ್ನು ಅವರೇ ಕೇಳಬೇಕು. ನಾನು ಹೈಕಮಾಂಡ್ ಗಮನಕ್ಕೆ ಈ ವಿಷಯವನ್ನು ತರುವುದಕ್ಕೆ ಆಗಲ್ಲ. ಅವರ ಅಭಿಪ್ರಾಯ ಹೇಳಿದ್ದಾರೆ ತಪ್ಪಲ್ಲ ಎಂದು ಹೇಳಿದರು. ಕಾವೇರಿ ನಿರ್ವಾಹಣಾ ಪ್ರಾಧಿಕಾರದ …
Read More »
BigTv News
September 18, 2023
ಕರ್ನಾಟಕ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ಮನೆಯಲ್ಲಿ ಗಣೇಶ ಕೂರಿಸಿದ ಮಾಜಿ ಸಿಎಮ್ ಜಗದೀಶ್ ಶೆಟ್ಟರ್..ಹುಬ್ಬಳ್ಳಿಯ ಮಧುರಾ ಕಾಲೊನಿಯಲ್ಲಿರೋ ಶೆಟ್ಟರ್ ನಿವಾಸದಲ್ಲಿ ಗಣೇಶ ಪ್ರತಿಷ್ಠಾಪನೆ..ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಮನೆಯಲ್ಲಿ ಹಬ್ಬದ ಸಂಭ್ರಮ..ಕುಟುಂಬದೊಂದಿಗೆ ಗಣೇಶ ಪ್ರತಿಷ್ಠಾಪನೆಯಲ್ಲಿ ಭಾಗಿಯಾದ ಮಾಜಿ ಸಿಎಮ್ ಜಗದೀಶ್ ಶೆಟ್ಟರ್.
Read More »
Shaikh BigTv
September 17, 2023
Breaking News, News, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ದೇವಪ್ರಿಯ ನಗರದಲ್ಲಿ,ದೇವಪ್ರಿಯ ನಗರ ಹಿತಾಭಿವೃದ್ಧಿ ಸಂಘದಿಂದ ವಾರ್ಷಿಕ ಮಹಾಸಭೆ ಜರುಗಿತು.ಸಂಘದ ಆಡಳಿತ ಸ್ಥಳೀಯ ಜನತೆ ಸೇರಿ ಕಾರ್ಯಕ್ರಮ ನಡೆಸಿದರು. ವರದಿ ವಾಚನ, ಹಿಂದಿನ ಮಹಾಸಭೆಯ ಠರಾವು ಓದುವುದು ಮತ್ತು ದೃಡಿಕರಿಸುವುದು, ಅಡಿಟ್ ವರದಿ ವಾಚನ, ಅಂದಾಜು ಪತ್ರಿಕೆ ಓದುವುದು, ಸಂಘದ ಸದಸ್ಯರ ಅನಿಸಿಕೆ, ಮಂಡಳಿ ರಚನೆ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಬರ್ಬೇಕಾಗಿತ್ತು ಆದರೆ ಕಾರನಾಂತರಗಳಿಂದ ಬಂದಿಲ್ಲ.ಕಾರ್ಯಕ್ರಮ ದ ಅಧ್ಯಕ್ಷತೆಯನ್ನು M A ಆನಿ ಅವರು ವಹಿಸಿದ್ದರು. …
Read More »
BigTv News
September 16, 2023
News, ಕರ್ನಾಟಕ, ಜಿಲ್ಲೆ, ಬೆಂಗಳೂರು
ಬೆಂಗಳೂರು: ಸಚಿವ ಮಧು ಬಂಗಾರಪ್ಪ ಬೆಂಬಲಿಗರು ಫೋನ್ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರಣವಾನಂದ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ನನಗೆ ಜೀವ ಬೆದರಿಕೆ ಇದೆ. ಇವತ್ತು ಪೊಲೀಸ್ ಕಮಿಷನರ್ ಭೇಟಿ ಮಾಡುತ್ತಿದ್ದೇನೆ. ಮಧು ಬಂಗಾರಪ್ಪ ವಿರುದ್ಧ ದೂರು ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ ಬಿ.ಕೆ.ಹರಿಪ್ರಸಾದ್ ಅವರು ಹಿಂದುಳಿದ ವರ್ಗದವರು. ಅವರಿಗೆ ಸ್ಥಾನಮಾನ ಕೇಳುವುದರಲ್ಲಿ ಏನು ತಪ್ಪಿದೆ? ಬೇರೆ ಸಮುದಾಯದವರು ಹೋರಾಟ …
Read More »
BigTv News
September 16, 2023
News, ಕರ್ನಾಟಕ, ಜಿಲ್ಲೆ, ಬೆಂಗಳೂರು
ಬೆಂಗಳೂರು: ಕರ್ನಾಟಕ IPS ಅಸೋಸಿಯೇಷನ್ ಅಧ್ಯಕ್ಷರಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿರುವ ಬಿ.ದಯಾನಂದ ನೇಮಕವಾಗಿದ್ದಾರೆ. ಅಸೋಸಿಯೇಷನ್ ಅಧ್ಯಕ್ಷರಾಗಿ ಸರ್ವಾನುಮತದಿಂದ ಬಿ.ದಯಾನಂದ ಅವರು ಆಯ್ಕೆಗೊಂಡಿದ್ದಾರೆ. ಹಾಗೆ ಬೆಂಗಳೂರಿನಲ್ಲಿ ಇಂದು ಕೋಟ್ಯಂತರ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಮೂವರು ವಿದೇಶಿಯರು ಸೇರಿ 14 ಆರೋಪಿಗಳ ಬಂಧನವಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ತಿಳಿಸಿದರು. ಬಂಧಿತರಿಂದ 7.83 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ
Read More »