Breaking News

ಧಾರವಾಡ

ನವೆಂಬರ್ 1 ರಂದು ಅದ್ದೂರಿಯಾಗಿ ನಾಡ ಹಬ್ಬ ರಾಜ್ಯೋತ್ಸವನ್ನು ಆಚರಣೆ: ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ : ಪ್ರತಿ ವರ್ಷದಂತೆ ನವೆಂಬರ್ 1 ರಂದು ರಾಜ್ಯೋತ್ಸವನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಜಿಲ್ಲೆಯ ಎಲ್ಲ ಸರ್ಕಾರಿ ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು. ಅವರು ಇಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ರಾಜ್ಯೋತ್ಸವ ದಿನದಂದು ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ …

Read More »

ಜೀವ ವಿಮೆ ಒದಗಿಸುವ ಹಾಗೂ ಖಾಯಂಗೊಳಿಸುವ ಕುರಿತು ಮನವಿ ಸಲ್ಲಿಕೆ

ನವಲಗುಂದ: ಬೆಳೆ ಸಮೀಕ್ಷೆ (ಖಾಸಗಿ ನಿವಾಸಿ) ಗಾರರಿಗೆ ಭದ್ರತೆ, ಜೀವ ವಿಮೆ ಒದಗಿಸುವ ಹಾಗೂ ಖಾಯಂಗೊಳಿಸುವ ಕುರಿತು ನವಲಗುಂದ ತಹಶೀಲ್ದಾರ ಸುಧೀರ ಸಾವಕಾರ ಅವರಿಗೆ ಖಾಸಗಿ ಬೆಳೆ ಸಮೀಕ್ಷೆಗಾರರು ಮನವಿ ಸಲ್ಲಿಸಿದರು. ನಾವು ಸುಮಾರು 7-8 ವರ್ಷಗಳಿಂದ ಬೆಳೆ ಸಮೀಕ್ಷೆಗಾರರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು, ಸೇವೆ ಸಲ್ಲಿಸುತ್ತಿರುವಾಗ ಹಾವು ಚೇಳು ಕಚ್ಚಿರುತ್ತವೆ, ತೋಳಗಳು, ಹೆಚ್ಚೇನುಗಳು ದಾಳಿ ಮಾಡಿರುತ್ತವೆ. ನಾವು ಜೀವದ ಆಸೆ ಬಿಟ್ಟು ಶ್ರದ್ದೆಯಿಂದ ರೈತರ ಸೇವೆ ಮಾಡುತ್ತಿದ್ದೇವೆ ಸಮೀಕ್ಷೆ …

Read More »

ಉತಾರ ಬದಲಿಸುವಂತೆ ಮನವಿ ಸಲ್ಲಿಕೆ

ಕುಂದಗೋಳ : ಕಡಪಟ್ಟಿ ಗ್ರಾಮದ ಅಂಗನವಾಡಿ-1 ರ ಕಟ್ಟಡದ ಇ ಸ್ವತ್ತು ಉತಾರದ ಜಾಗವನ್ನು ಕೊಂಡವಾಡ ಎಂಬುದರ ಬದಲಾಗಿ ಅಂಗನವಾಡಿ-1 ಎಂದು ನಮೂದಿಸಿ ಉತಾರ ಪೂರೈಸಲು ಕಡಪಟ್ಟಿ ಗ್ರಾಮ ಪಂಚಾಯಿತಿ ಸದಸ್ಯರಾದ ಬಸಪ್ಪ ಕುರಿ ಗ್ರಾಮಸ್ಥರಾದ ಸಂತೋಷ ನೆಲ್ಲೂರು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಮನವಿ ಮಾಡಿದ್ದಾರೆ. ಶಾಸಕ ಎಂ.ಆ‌ರ್.ಪಾಟೀಲ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು ಅಂಗನವಾಡಿ ಕಟ್ಟಡ ಕಳೆದ 20 ವರ್ಷಗಳಿಂದ ಕೊಂಗವಾಡ ಜಾಗದಲ್ಲಿದೆ. ಇಲ್ಲಿಯವರೆಗೆ ಇ …

Read More »

ಮಾಧ್ಯಮ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾದ ಪತ್ರಕರ್ತರಾದ ಜೆ.ಅಬ್ಬಾಸ್ ಮುಲ್ಲಾಗೆ ಸನ್ಮಾನ

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕರ್ನಾಟಕ ಸರ್ಕಾರದ ಅಧೀನದ ಮಾಧ್ಯಮ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾದ ಹಿರಿಯ ಪತ್ರಕರ್ತರಾದ ಜೆ.ಅಬ್ಬಾಸ್ ಮುಲ್ಲಾ ಅವರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿಂದು ವಡ್ಡರ್ಸೆ ರಘುರಾಮ ಶೆಟ್ಟಿಯವರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ ಹಾಗೂ ಮಾಧ್ಯಮ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾದ ಜೆ.ಅಬ್ಬಾಸ್ ಮುಲ್ಲಾ ಅವರಿಗೆ ಹಿರಿಯ ಪತ್ರಕರ್ತರ ಹಾಗೂ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರ …

Read More »

ಮಳೆಯ ಪರಿಣಾಮ ಬೆಳೆ ಹಾನಿಯಾದ ಸ್ಥಳಗಳಿಗೆ ಅಧಿಕಾರಿ ಭೇಟಿ

ಕುಂದಗೋಳ : ತಾಲೂಕಿನ ವಿವಿಧ ಭಾಗಗಳಲ್ಲಿ ಸುರಿದು ಧಾರಾಕಾರ ಮಳೆಯ ಪರಿಣಾಮ ಬೆಳೆ ಹಾನಿಯಾದ ಸ್ಥಳಗಳಿಗೆ ಇಂದು ಸಹಾಯಕ ಕೃಷಿ ಅಧಿಕಾರಿ ಅಂಬಿಕಾ ಮಹೇಂದ್ರಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಡೇನಕಟ್ಟಿ ಸುತ್ತ ಮುತ್ತಲಿನ ಭಾಗಗಳಿಗೆ ಭೇಟಿ ನೀಡಿದ ಅಂಬಿಕಾ ಮಹೇಂದ್ರಕರ್ ರೈತ ಹೊಲಗಳಲ್ಲಿ ಅತಿವೃಷ್ಟಿ ಪರಿಣಾಮ ಹಾಳಾದ ಬೆಳೆಗಳನ್ನು ಪರಿಶೀಲನೆ ನಡೆಸಿ ಪರಿಹಾರಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಗಳಿಗೆ ತಿಳಿಸ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ವೇಳೆ ಹಾಳಾದ ಬೆಳೆಯನ್ನು …

Read More »

ಮೈಸೂರು ದಸರಾ: ಧಾರವಾಡ ಜಿಲ್ಲೆಯ ಸ್ತಬ್ಧಚಿತ್ರಕ್ಕೆ ದ್ವಿತೀಯ ಪ್ರಶಸ್ತಿಗೆ ಆಯ್ಕೆ

ಧಾರವಾಡ: ಪ್ರಸಕ್ತ ಸಾಲಿನ ಮೈಸೂರು ದಸರಾ ಮಹೋತ್ಸದಲ್ಲಿ ಭಾಗವಹಿಸಿದ್ದ ಧಾರವಾಡ ಜಿಲ್ಲಾ ಪಂಚಾಯತ ಸ್ತಬ್ಧಚಿತ್ರಕ್ಕೆ ರಾಜ್ಯಮಟ್ಟದ ದ್ವಿತೀಯ ಪ್ರಶಸ್ತಿ ಲಭಿಸಿದ್ದು, ಈ ದಸರಾ ಮಹೋತ್ಸವದ ಸ್ತಬ್ದಚಿತ್ರ ಉಪ ಸಮಿತಿ ಇಂದು ಫಲಿತಾಂಶ ಪ್ರಕಟಿಸಿದೆ. ಇಸ್ರೋ ಗಗನಯಾನದಲ್ಲಿ ಹಣ್ಣಿನ ನೋಣಗಳ ಕುರಿತು ಧಾರವಾಡ ಜಿಲ್ಲಾ ಪಂಚಾಯತಿಯಿಂದ ಸ್ತಬ್ದ ಚಿತ್ರ ರೂಪಿಸಲಾಗಿತ್ತು. ಅತ್ಯತ್ತಮ ಸ್ತಬ್ದಚಿತ್ರ ಆಯ್ಕೆಗಾಗಿನ ತಜ್ಞರ ಸಮಿತಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲ ಜಿಲ್ಲೆಗಳ ಸ್ತಬ್ಧಚಿತ್ರಗಳನ್ನು ಪರಿಶೀಲಿಸಿ, ವಿನೂತನವಾದ ಮತ್ತು ಹೊಸ …

Read More »

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆ;ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ

ಧಾರವಾಡ: ರಾಷ್ಟ್ರೀಯ ಅಂಗವಿಕಲರ ಗ್ರಾಮೀಣ ಪುನರ್ವಸತಿ ಯೋಜನೆ ಅಡಿಯಲ್ಲಿ ಧಾರವಾಡ ತಾಲೂಕಿನ ನರೇಂದ್ರ ಗ್ರಾಮ ಪಂಚಾಯತ ಹಾಗೂ ಅಳ್ನಾವರ ತಾಲೂಕಿನ ಅರವಟಗಿ ಗ್ರಾಮ ಪಂಚಾಯತಗಳಲ್ಲಿ ಖಾಲಿ ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳಿಗೆ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆಯಲ್ಲಿ ವೈಯಕ್ತಿಕ ವಿವರಗಳನ್ನು ಬರೆದು ಆಯಾ ತಾಲೂಕಿನ ತಾಲೂಕಾ ಪಂಚಾಯತಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತರು (ಎಂಆರ್‍ಡಬ್ಲ್ಯೂ) ಇವರಿಗೆ ಅಕ್ಟೋಬರ್ 25, 2024 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ …

Read More »

180 ಮನೆಗಳು ಮತ್ತು 3 ಜಾನುವಾರು ಹಾನಿ: ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶ

ಧಾರವಾಡ : ವಾಯುಭಾರ ಕುಸಿತದಿಂದ ಧಾರವಾಡ ಬೆಲೆಯಲ್ಲಿ ಹಾಗೂ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳದ ಅಚ್ಚು-ಕಟ್ಟು ಪ್ರದೇಶದಲ್ಲಿ ಅಕ್ಟೋಬರ್ 09 ರಿಂದ 16 ರವರೆಗೆ ಮಳೆಯಾಗುತ್ತದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ತಾಲೂಕು ಆಡಳಿತಗಳು ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಎಲ್ಲರೂ ಅವರವರ ಕೇಂದ್ರ ಸ್ಥಾನದಲ್ಲಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ …

Read More »

ಅನುದಾನಕ್ಕಾಗಿ ಸಿಎಂಗೆ ಮನವಿ ಸಲ್ಲಿಸಿದ ಮೇಯ‌ರ್

ಧಾರವಾಡ:ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಕ್ಕೆ ಇಂದು ಆಗಮಿಸಿದದ್ದ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮೇಯ‌ರ್ ರಾಮಣ್ಣ ಬಡಗೇರ ಅವರು ಸ್ವಾಗತಿಸಿದರು. ಇದೆ ವೇಳೆಯಲ್ಲಿ ಸರಕಾರದಿಂದ ಹುಬ್ಬಳ್ಳಿ ಧಾರವಾಡ ಪಾಲಿಕೆಗೆ ಬರಬೇಕಾದ ಬಾಕಿ ಅನುದಾನ, ಅಭಿವೃದ್ಧಿ ಪರ ಕಡತಗಳು ಸರಕಾರ ಮಟ್ಟದಲ್ಲಿ ಅನುಮೋದನೆಗಾಗಿ ಇದ್ದು, ಅವುಗಳನ್ನು ಪರಿಶೀಲಿಸಿ ಅನುಮೋದನೆ ಮಾಡಿಕೊಡಲು ಮುಖ್ಯಮಂತ್ರಿಗಳಿಗೆ ಮನವಿ ನೀಡಿದರು.

Read More »

ಹರೀಶ್ ಮೆಡಿ ಲ್ಯಾಬ್ ಗೆ ನುಗ್ಗಿದ ಕಳ್ಳರು : ಸಿಸಿಟಿವಿಯಲ್ಲಿ ಸೆರೆ

ಧಾರವಾಡ: ಹರೀಶ್ ಮೆಡಿ ಲ್ಯಾಬ್ ಇದು ರಕ್ತ ತಪಾಸಣಾ ಕೇಂದ್ರವಾಗಿದ್ದು, ನಿನ್ನೆ ರಾತ್ರಿ ಸಿಬ್ಬಂದಿ ಲ್ಯಾಬ್‌ಗೆ ಕೀಲಿ ಹಾಕಿಕೊಂಡು ಹೋದ ತಕ್ಷಣ ರಾತ್ರೋರಾತ್ರಿ ಕಳ್ಳರು ಆ ಲ್ಯಾಬ್‌ನ ಬಾಗಿಲು ಮುರಿದು ಒಳನುಗ್ಗಿದ್ದಾರೆ. ಲ್ಯಾಬ್‌ನಲ್ಲಿ ಹಣಕ್ಕಾಗಿ ಖದೀಮರು ಹುಡುಕಾಡಿದ್ದಾರೆ. ಆದರೆ, ಅವರಿಗೆ ಹಣ ಸಿಕ್ಕಿಲ್ಲ. ಆಯುಧ ಪೂಜೆಗೆಂದು ದೇವರ ಮುಂದೆ ಇಟ್ಟಿದ್ದ ಚಿಲ್ಲರೆ ಹಣವನ್ನು ಖದೀಮರು ಎಗರಿಸಿ ಲ್ಯಾಬ್‌ನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಕಳ್ಳರ ಈ ಚಲನವಲನ ಸಿಸಿ ಟಿವಿ ಕ್ಯಾಮೆರಾದಲ್ಲಿ …

Read More »