Shaikh BigTv
September 27, 2024
Breaking News, ಧಾರವಾಡ
ಅಣ್ಣಿಗೇರಿ: ವಿವಿಧ ಬೇಡಿಕೆ ಆಗ್ರಹಿಸಿ ಗ್ರಾಮ ಆಡಳಿ ಅಧಿಕಾರಿಗಳು ಅನಿರ್ದಿಷ್ಟಾವಧಿ ಮುಷ್ಕರವನ್ನು ಪಟ್ಟಣದ ತಹಶೀಲ್ದಾರ ಆಫೀಸ್ ಬಳಿ ಧರಣಿ ನಡೆಸಿ, ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಕೈಗೆ ಕಪ್ಪು ಬಟ್ಟಿ ಧರಿಸಿ ಸರ್ಕಾರದ ವಿರುದ್ಧ ಗ್ರಾಮ ಅಧಿಕಾರಿಗಳು ಹೋರಾಟ ನಡೆಸಿದರು ಮೂಲಭೂತ ಸೌಕರ್ಯಗಳಿಲ್ಲ ಸರಿಯಾದ ಆಫೀಸ್ ಇಲ್ಲ ಹಾಗೂ ಕುರ್ಚಿ,ಟೇಬಲ್ ಮೊಬೈಲ್ ವ್ಯವಸ್ಥೆ ಇಲ್ಲ ಪ್ರಿಂಟರ ಮತ್ತು ಸ್ಕ್ಯಾನರ ವ್ಯವಸ್ಥೆ ಇಲ್ಲ ಹಲವಾರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
Read More »
Shaikh BigTv
September 27, 2024
Breaking News, ಧಾರವಾಡ
ಹುಬ್ಬಳ್ಳಿ: ನಿವೃತ್ತ ಐಜಿಪಿ ಹಾಗೂ ಹುಬ್ಬಳ್ಳಿ – ಧಾರವಾಡ ಮಾಜಿ ಪೊಲೀಸ್ ಆಯುಕ್ತ ಬಿ.ಜಿ. ಕೊಕಟನೂರ (79) ಸೆಪ್ಟೆಂಬರ್ 26ರಂದು ಸಾಯಂಕಾಲ ಧಾರವಾಡದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸ್ವಗ್ರಾಮ ಹಿಡಕಲ್ ನಲ್ಲಿ ಅಂತ್ಯ ಸಂಸ್ಕಾರ ನಾಳೆ ಸೆಪ್ಟೆಂಬರ್ 27ರಂದು ಮಧ್ಯಾಹ್ನ ನಡೆಯಲಿದೆ. 1998-99ರ ಸಾಲಿನಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾಗಿ ದಕ್ಷ …
Read More »
Shaikh BigTv
September 27, 2024
Breaking News, ಧಾರವಾಡ
ಧಾರವಾಡ : ರಾಜ್ಯ ಸರಕಾರದ ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಅತ್ಯುತ್ತಮ ರೀತಿಯಲ್ಲಿ ತಲುಪಿಸಿರುವ ಮತ್ತು ಚಿತ್ರದುರ್ಗ ಹಾಗೂ ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಾಗಿ ಉತ್ತಮವಾದ ಜನಸ್ನೇಹಿ, ನಾಗರಿಕಸ್ನೇಹಿ ಆಡಳಿತ ನೀಡಿರುವ ದಿವ್ಯ ಪ್ರಭು ಜಿ.ಆರ್.ಜೆ ಅವರಿಗೆ ರಾಜ್ಯ ಸರಕಾರದ ಕಂದಾಯ ಇಲಾಖೆಯಿಂದ 2023-24 ನೇ ಸಾಲಿಗೆ ಉತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ ಪ್ರಕಟವಾಗಿದೆ. ರಾಕೇಶ ತಂಗಡಗಿ ಅತ್ಯುತ್ತಮ ಗ್ರಾಮ ಆಡಳಿತ ಅಧಿಕಾರಿ: ಧಾರವಾಡ ತಹಶಿಲ್ದಾರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ …
Read More »
Shaikh BigTv
September 26, 2024
Breaking News, ಧಾರವಾಡ
ಹುಬ್ಬಳ್ಳಿ/ಬೆಂಗಳೂರು: ಕರ್ನಾಟಕ ರಾಜ್ಯದ ಮಾಧ್ಯಮ ಅಕಾಡೆಮಿಯ ಸದಸ್ಯರಾಗಿ ಹುಬ್ಬಳ್ಳಿಯ ಹಿರಿಯ ಪತ್ರಕರ್ತರಾದ ಜೆ.ಅಬ್ಬಾಸ್ ಮುಲ್ಲಾ ಅವರು ಆಯ್ಕೆಯಾಗಿದ್ದಾರೆ. ಸುಮಾರು 25 ವರ್ಷಗಳ ಕಾಲ ಪತ್ರಿಕಾ ರಂಗದಲ್ಲಿ ಅವಿಸ್ಮರಣೀಯ ಸೇವೆಯನ್ನು ಸಲ್ಲಿಸಿರುವ ಹಿರಿಯ ಪತ್ರಕರ್ತರಾದ ಜೆ.ಅಬ್ಬಾಸ್ ಮುಲ್ಲಾ ಅವರು ಈ ಹಿಂದೆ ಧಾರವಾಡ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕೂಡ ಸೇವೆ ಸಲ್ಲಿಸಿದ್ದು, ಈಗ ಮಾಧ್ಯಮ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾಗಿರುವುದು ಧಾರವಾಡ ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ. ಇನ್ನೂ ಹಿರಿಯ ಪತ್ರಕರ್ತರಾದ …
Read More »
Shaikh BigTv
September 25, 2024
Breaking News, ಧಾರವಾಡ
ಧಾರವಾಡ: ಸರ್ಕಾರಿ ಶಾಲಾ ಮಕ್ಕಳಿಗೆ ವಾರದ ಆರೂ ದಿನ ಮೊಟ್ಟೆ ವಿತರಣೆ ಮಾಡುವ ಕಾರ್ಯಕ್ಕೆ ಇಂದು ರಾಜ್ಯದಾದ್ಯಂತ ಚಾಲನೆ ನೀಡಲಾಗಿದೆ. ವಾರದ ಎರಡು ದಿನ ಮಾತ್ರ ರಾಜ್ಯ ಸರ್ಕಾರ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡುತ್ತದೆ. ಆದರೆ, ಶಾಲಾ ಮಕ್ಕಳು ಅಪೌಷ್ಠಿಕತೆಯಿಂದ ಬಳಲಬಾರದು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಬಾಕಿ ನಾಲ್ಕೂ ದಿನ ಮಕ್ಕಳಿಗೆ ಮೊಟ್ಟೆ ನೀಡಬೇಕು ಎಂದು ಅಜೀಂ ಪ್ರೇಮ್ ಜೀ ಫೌಂಡೇಶನ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ವಾರದ ಆರೂ ದಿನ ಇಂದಿನಿಂದ …
Read More »
Shaikh BigTv
September 25, 2024
Breaking News, ಧಾರವಾಡ
ಕುಂದಗೋಳ : ವ್ಯಕ್ತಿ 2600 ರೂಪಾಯಿ ಫೋನ್ ಪೇ ಮಾಡಿ ‘ಡ’ ಉತಾರ ಪಡೆದಿದ್ದು ಇದೀಗ ವಿಷಯ ಬಹಿರಂಗವಾದ ಘಟನೆ ಕುಂದಗೋಳ ತಹಶೀಲ್ದಾರ್ ಸರ್ಕಾರಿ ಕಚೇರಿಯಲ್ಲಿ ನಡೆದಿದೆ. ತುರ್ತು ಅವಶ್ಯಕತೆಗೆ ‘ಡ’ ಉತಾರ ಮತ್ತು ಎಂ.ಆರ್ ಪೂರೈಸುತ್ತೇನೆ ಎಂದು ತಹಶೀಲ್ದಾರ್ ಕಚೇರಿಯಲ್ಲಿ ಓಡಾಡುವ ವ್ಯಕ್ತಿಯೋರ್ವ ಹಂತ ಹಂತವಾಗಿ 2600 ರೂಪಾಯಿ ತನ್ನ ಕುಟುಂಬದ ಸದಸ್ಯರ ಮೊಬೈಲಿಗೆ ಫೋನ್ ಪೇ ಮಾಡಿಸಿಕೊಂಡು ರೈತರಿಗೆ ಉತಾರ ನೀಡಿದ್ದಾನೆ. ಜಾಸ್ತಿ ಹಣ ಕೊಟ್ಟರೇ ತಮ್ಮ …
Read More »
Shaikh BigTv
September 25, 2024
Breaking News, ಧಾರವಾಡ
ಧಾರವಾಡ: ರೆಗ್ಯುಲರ್ ಪಿಎಚ್‌ಡಿಯನ್ನೇ ಫ್ರೆಂಚ್ ವಿಷಯದಲ್ಲಿ ಮಾಡಿದ ರೋಸೆಟ್ ರಾಬರ್ಟ್ ದದ್ದಾಪುರಿ ಚಿನ್ನದ ಪದಕ ಲಭಿಸಿವೆ. 74ನೇ ಘಟಿಕೋತ್ಸವ ಸಮಾರಂಭದಲ್ಲಿ ರೋಸೆಟ್‌ಗೆ ಚಿನ್ನದ ಪದಕ ಪ್ರದಾನ ಮಾಡಲಾಗಿದೆ. ರೋಸೆಟ್ ದದ್ದಾಪುರಿ ಪ್ರಸ್ತುತ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ರಾಬರ್ಟ್ ದದ್ದಾಪುರಿ ಅವರ ಪುತ್ರಿಯಾಗಿದ್ದಾಳೆ.
Read More »
Shaikh BigTv
September 25, 2024
Breaking News, ಧಾರವಾಡ
ಧಾರವಾಡ : ಜಿಲ್ಲಾಡಳಿತದಿಂದ ಅಕ್ಟೋಬರ್ 2 ರಂದು ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‍ಬಹಾದ್ದೂರ ಶಾಸ್ತ್ರಿಜಿಯವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವ ಬಗ್ಗೆ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರ ಅಧ್ಯಕ್ಷತೆಯಲ್ಲಿ ಇಂದು ರಂದು ಜರುಗಿದ ಸಭೆಯಲ್ಲಿ ನಿರ್ಧರಿಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗಾಂಧಿ ಶಾಂತಿ ಪ್ರತಿಷ್ಠಾನ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಕ್ಟೋಬರ್ 2 ರಂದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ …
Read More »
Shaikh BigTv
September 24, 2024
Breaking News, ಧಾರವಾಡ
ಧಾರವಾಡ : ರಾಜ್ಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರಕಾರ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ವಿವಿಧ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಅವರು ಹೇಳಿದರು. ಅವರು ಇಂದು ಬೆಳಿಗ್ಗೆ ವಿಶ್ವವಿದ್ಯಾಲಯದ ಆವರಣದಲ್ಲಿರುವ ಗಾಂಧಿಭವನದಲ್ಲಿ ಆಯೋಜಿಸಲಾದ 74ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ವಿವಿಧ ಕೈಗಾರಿಕೆಗಳ ನಿರೀಕ್ಷೆಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ಕೌಶಲ್ಯಗಳನ್ನು ಕಲಿಸುವ ನಿಟ್ಟಿನಲ್ಲಿ …
Read More »
Shaikh BigTv
September 24, 2024
Breaking News, ಧಾರವಾಡ
ಧಾರವಾಡ: ಹೆಚ್ಚಿಗೆ ಸಮಯ ಓದುವುದಕ್ಕಿಂತ ಇಷ್ಟುಪಟ್ಟು ಒಂದು ತಾಸು ಓದಬೇಕು ಎಂದು ಪತ್ರಿಕೋದ್ಯಮ ವಿಭಾಗದಲ್ಲಿ 9 ಚಿನ್ನದ ಪದಕ ಪಡೆದ ಜಯಶ್ರೀ ತಳವಾರ ಎಂಬ ವಿದ್ಯಾರ್ಥಿನಿ ತನ್ನ ಮನದಾಳದ ಮಾತು ಹಂಚಿಕೊಂಡಿದ್ದಾಳೆ. ಮಂಗಳವಾರ ನಡೆದ ಧಾರವಾಡದ ಕವಿವಿ ಘಟಿಕೋತ್ಸವದಲ್ಲಿ ಜಯಶ್ರೀ ತಳವಾರ ಅವರಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಇವತ್ತಿನ ನನ್ನ ಈ ಸಾಧನೆಗೆ ನನ್ನ ತಂದೆ, ತಾಯಿ, ವಿದ್ಯೆ ಕಲಿಸಿದ ಗುರುಗಳು, ಸ್ನೇಹಿತೆಯರ ಸಹಕಾರ ಬಹಳಷ್ಟಿತ್ತು ಎಂದಿದ್ದಾಳೆ.
Read More »