Breaking News
Featured Video Play Icon

ಕೆಟ್ಟ ಮೇಲೆ ಬುದ್ದಿಬಂತಾ ಅಧ್ಯಕ್ಷರಿಗೆ..!! ಅವರಿಗಿಲ್ಲದ ತತ್ವ ಸಿದ್ದಾಂತಗಳು ನಿಮಗು ಇಲ್ವಾ..?? ನಮ್ಮ ಶೆಟ್ಟರ ಸಾಹೇಬ್ರು ಹಂಗ ಹಿಂಗ ಅಂದ ನೀವು ಇವತ್ತು ತೆಗಳುವದು ಯಾಕೆ..??

ಹುಬ್ಬಳ್ಳಿ: ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಬದಲು ಬೇರೆ ಯಾರೇ ಪಕ್ಷದ ಕಾರ್ಯಕರ್ತರು ಸ್ಪರ್ಧೆ ಮಾಡಿದರೂ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುತ್ತಿತ್ತು, ಈ ಮೂಲಕ ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು ಹೇಳಿದ್ದಾರೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಬಿಜೆಪಿಯಲ್ಲಿ ಹಿರಿಯ ನಾಯಕರು, ಅಲ್ಲಿ ಟಿಕೆಟ್ ತಪ್ಪಿದಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದರು. ಅವರಿಗೆ ಕಾಂಗ್ರೆಸ್ ಪಕ್ಷದ ಯಾವೊಬ್ಬ ನಾಯಕರು ಅವರನ್ನು ಕರೆದಿಲ್ಲ, ಅವರೇ ಮನಃಪೂರ್ವಕವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು. ಅವರ ಸಂಬಂಧಿಕರು ನಮ್ಮ ಪಕ್ಷದಲ್ಲಿ ಇದ್ದಾರೆ. ಅವರ ಮೂಲಕ ಶೆಟ್ಟರ್ ಪಕ್ಷಕ್ಕೆ ಸೇರ್ಪಡೆಯಾದರು. ಬಳಿಕ ನಮ್ಮ ಕಾರ್ಯಕರ್ತರಿಗೆ ಅನ್ಯಾಯ ಮಾಡಿ ಶೆಟ್ಟರ್ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ ಎಂದರು.ವಿಧಾನಸಭಾ ಚುನಾವಣೆಯಲ್ಲಿ ಹು-ಧಾ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರಕ್ಕೆ ಟಿಕೆಟ್ ಕೊಟ್ಟಿದ್ದೇವು, ಅವರು ಹಿರಿಯ ನಾಯಕರು ಅವರ ಮೇಲೆ ಗೆಲುವು ಸಾಧಿಸುವ ಬಹಳ ನಿರೀಕ್ಷೆ ಇತ್ತು, ಆದರೆ ಆ ನಿರೀಕ್ಷೆ ಹುಸಿ ಆಯಿತು.ಆದರೂ ನಮ್ಮ ಪಕ್ಷದಿಂದ ಅವರಿಗೆ ವಿಪ ಸದಸ್ಯರಾಗಿ, ಇನ್ನು ಅನೇಕ ಸ್ಥಾನಮಾನ ಕೊಟ್ಟು ಅತ್ಯಂತ ಗೌರಯುತವಾಗಿ ನಡೆಸಿಕೊಳ್ಳಲಾಗಿತ್ತು, ಆದರೆ ಅವರು ಪಕ್ಷ ಬಿಟ್ಟು ಹೋಗುವ ನಿರ್ಧಾರ ಮಾಡತ್ತಾರೆ ಎಂಬುದನ್ನು ನಿರೀಕ್ಷೆ ಮಾಡಿರಲಿಲ್ಲ, ಅವರು ಪಕ್ಷಕ್ಕೆ ಕಾರ್ಯಕರ್ತರಿಗೆ ದ್ರೋಹ ಮಾಡಿದ್ದಾರೆ ಎಂದು ಹರಿಹಾಯ್ದರು.ಬಿಜೆಪಿ ನಾಯಕರು ಫೋನ್ ಮಾಡಿ ಕರೆದಿದ್ದಾರೆ ಎಂದು ಶೆಟ್ಟರ್ ಹೇಳತ್ತಾರೆ. ಅಷ್ಟಾಗ್ಯೂ ಜಿಲ್ಲೆಯ ಯಾವೊಬ್ಬ ಬಿಜೆಪಿ ನಾಯಕರ ಈ ಕುರಿತು ಮಾತನಾಡಿಲ್ಲ, ಬಿಜೆಪಿ ಪಕ್ಷವನ್ನು ಬಿಡೋವಾಗ ಅವರಿಗೆ ನೆನಪಾಗದ ಸಿದ್ದಾಂತಗಳು ಇದೀಗ ಕಾಂಗ್ರೆಸ್ ತೊರೆಯುವಾಗ ಅವರಿಗೆ ನೆನಪಾಗುತ್ತಿವೆ ಎಂದು ಲೇವಡಿ ಮಾಡಿದರು.ನರೇಂದ್ರ ಮೋದಿ ಮೇಲೆ ಶೆಟ್ಟರ್ ಅವರಿಗೆ ಅಭಿಮಾನ ಇದ್ದರೆ ಬಿಜೆಪಿಯಲ್ಲಿಯೇ ಉಳಿದು ಪಕ್ಷದ ಸೇವೆ ಮಾಡಬೇಕಿತ್ತು, ಈ ರೀತಿ ಮಾಡಿದ್ರೆ ಜನರು ಜಾಣರಿದ್ದಾರೆ ಅವರಿಗೆ ತಕ್ಕಪಾಠ ಕಲಿಸತ್ತಾರೆ ಎಂದು ಹರಿಹಾಯ್ದರು.

Share News

About Shaikh BigTv

Check Also

ಹಂಪಿ ಎಕ್ಸ್‌ಪ್ರೆಸ್ ರೈಲಿಗೆ ಆಕಸ್ಮಿಕ ಬೆಂಕಿ

ಬಳ್ಳಾರಿ : ಹಂಪಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಟು ಆತಂಕ ಸೃಷ್ಟಿಯಾದರೂ, ಅನಾಹುತ ಸಂಭವಿಸದೇ ಪ್ರಯಾಣಿಕರು ಪಾರಾದ …

Leave a Reply

Your email address will not be published. Required fields are marked *