Breaking News

ಧಾರವಾಡ

ಅಪಘಾತದಲ್ಲಿ ಸಾವಿನಪ್ಪಿದ ಕುಟುಂಬಗಳಿಗೆ ಚೆಕ್ ನೀಡಿದ ವಿನಯ್ ಕುಲಕರ್ಣಿ

ಧಾರವಾಡ: ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಎರಡು ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಂದ ತಲಾ 2 ಲಕ್ಷ ರೂಪಾಯಿ ಪರಿಹಾರದ ಚೆಕ್‌ನ್ನು ಶಾಸಕ ವಿನಯ್ ಕುಲಕರ್ಣಿ ಅವರು ಮೃತರ ಕುಟುಂಬಕ್ಕೆ ಹಸ್ತಾಂತರಿಸಿದರು. 2022ರ ಜೂನ್ 26 ರಂದು ಧಾರವಾಡ ತಾಲೂಕಿನ ವೆಂಕಟಾಪುರ ಕ್ರಾಸ್ ಬಳಿ ಬೈಕ್ ಹಾಗೂ ಕಾರಿನ ಮಧ್ಯೆ ಅಪಘಾತ ಸಂಭವಿಸಿ ಬೈಕ್‌ನಲ್ಲಿದ್ದ ಧಾರವಾಡ ತಾಲೂಕಿನ ಬೋಗೂರು ಗ್ರಾಮದ ಸುಶೀಲಾ ಹರಿಜನ ಹಾಗೂ ಚೆನ್ನಮ್ಮನ ಕಿತ್ತೂರು ತಾಲೂಕಿನ ತಿಗಡೊಳ್ಳಿಯ …

Read More »

ಬಿಸಿಎಮ್ ಇಲಾಖೆ ಜಿಲ್ಲಾ ಅಧಿಕಾರಿಯಾಗಿ ಹೆಚ್ಚುವರಿ ಪ್ರಭಾರ ವಹಿಸಿಕೊಂಡ ಜಯಶ್ರೀ ಹೆಂಡೆಗಾರ

ಧಾರವಾಡ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಧಾರವಾಡ ತಾಲ್ಲೂಕಾ ಕಲ್ಯಾಣಾಧಿಕಾರಿ ಜಯಶ್ರೀ ಹೆಂಡೆಗಾರ ಅವರು ತಮ್ಮ ಹುದ್ದೆಯ ಕರ್ತವ್ಯದೊಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಹೆಚ್ಚುವರಿ ಪ್ರಭಾರವನ್ನು ವಹಿಸಿಕೊಂಡಿದ್ದಾರೆ.

Read More »

ಧಾರವಾಡ ಕೇಂದ್ರ ಕಾರಾಗೃಹ ಭದ್ರತೆಗಾಗಿ ನಾಲ್ಕು ವೀಕ್ಷಣಾ ಗೋಪುರ ನಿರ್ಮಾಣ

ಧಾರವಾಡ: ನಗರದ ಕೇಂದ್ರ ಕಾರಾಗೃಹದಲ್ಲಿ ಭದ್ರತೆ, ನಿಗಾ ನಿಟ್ಟಿನಲ್ಲಿ ಸುತ್ತ ನಾಲ್ಕು ವೀಕ್ಷಣಾ ಗೋಪುರ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ಶೇ 75ರಷ್ಟು ಮುಗಿದಿದೆ. ಜೈಲು ಭಾಗದಲ್ಲಿ ಕಣ್ಗಾವಲಿಗೆ ಒಳಭಾಗದಲ್ಲಿ 55 ಹಾಗೂ ಸುತ್ತ(ಹೊರ ವಲಯ) 10 ಒಟ್ಟು 65 ಸಿ.ಸಿ ಟಿವಿ ಕ್ಯಾಮೆರಾಗಳಿವೆ. ಒಂದು ಕೋಟಿ ವೆಚ್ಚದಲ್ಲಿ ಗೋಪುರಗಳು ನಿರ್ಮಾಣವಾಗಲಿವೆ. ಗೋಪುರದ ಎತ್ತರ 30 ಅಡಿ ಕಾಂಪೌಂಡ್‌ ಸುತ್ತಲಿನ ಚಲನವಲನಗಳ ಮೇಲೆ ನಿಗಾ ಇಡಲು, ಹೊರಗಿನಿಂದ ಜೈಲು ಭಾಗದೊಳಕ್ಕೆ ಯಾರಾದರೂ …

Read More »

ಶಾಲೆಗೆ ಸಹಕಾರ ನೀಡಿದ ಗ್ರಾಮದ ಜನರಿಗೆ ಅಭಿನಂದನೆ ಕಾರ್ಯಕ್ರಮ

ಕುಂದಗೋಳ : ಸರ್ಕಾರಿ ಶಾಲೆಯ ಶೈಕ್ಷಣಿಕ ಅಭಿವೃದ್ಧಿ ಜೊತೆಜೊತೆಗೆ ಆರ್ಥಿಕವಾಗಿ ಶಾಲೆಗೆ ಸಹಕಾರ ನೀಡಿದ ಗ್ರಾಮದ ಜನರಿಗೆ ಅಭಿನಂದನೆ ಮತ್ತು ಎಸ್ಟಿಎಂಸಿ ಮಂಡಳಿ ಆಯ್ಕೆ ಕಾರ್ಯಕ್ರಮ ಗುಡೇನಕಟ್ಟಿಯಲ್ಲಿ ಜರುಗಿತು. ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಶಾಲೆ ಏಳಿಗೆಗೆ ಕೊಡುಗೆ ನೀಡಿದ ಮತ್ತು ಅಭಿವೃದ್ಧಿಗೆ ಸಹಕಾರ ನೀಡಿದ ಸ್ಥಳೀಯರಿಗೆ ಸನ್ಮಾನ ಮಾಡಲಾಯಿತು. ಬಳಿಕ ಎಸ್ಟಿಎಂಸಿ ಅಧ್ಯಕ್ಷರಾಗಿ ಗೋಪಾಲ್ ದೊಡ್ಡಮನಿ, ಉಪಾಧ್ಯಕ್ಷರಾಗಿ ಲಕ್ಷ್ಮೀ ಮಲ್ಲಿಗವಾಡ ಆಯ್ಕೆಯಾದರು. ನೂತನ ಎಸ್ಟಿಎಂಸಿ ಸದಸ್ಯರಿಗೆ ಹಾಗೂ …

Read More »

ಜನರಿಗೆ ಕಾಟ ಕೊಡುತ್ತಿದ್ದ ಗೂಳಿ ಸೆರೆ

ಧಾರವಾಡ: ನರೇಂದ್ರ ಗ್ರಾಮದಲ್ಲಿ ಜನ, ಜಾನುವಾರುಗಳಿಗೆ ವಿಪರೀತ ಕಾಟ ಕೊಡುತ್ತಿದ್ದ ಗೂಳಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ. ಕಳೆದ 20 ದಿನಗಳಿಂದ ಗ್ರಾಮದ ಜಾನುವಾರುಗಳು ಮತ್ತು ಜನರನ್ನು ಕಾಡುತ್ತಿದ್ದ ಈ ಗೂಳಿಯ ಆಟಾಟೋಪಕ್ಕೆ ತಡೆಯೇ ಇಲ್ಲದಂತಾಗಿತ್ತು. ಗ್ರಾಮದ ಗುಡ್ಡದ ಬಸವಣ್ಣನ ಹರಕೆಯಾಗಿರುವ ಈ ಗೂಳಿ ಜನರಿಗೆ ಕಾಟ ನೀಡುತ್ತಿತ್ತು. ಈ ಗೂಳಿಯನ್ನು ಬಂಧಿಸಲು ಪಕ್ಕದ ಚೆನ್ನಮ್ಮನ ಕಿತ್ತೂರನಿಂದ ಪರಿಣಿತರು ಬಂದು ಗೂಳಿಯನ್ನು ಸೆರೆ ಹಿಡಿದು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

Read More »

ಟ್ರ್ಯಾಕ್ಟರ್ ಚಲಾವಣೆ ಮಾಡಿದ ಶಾಸಕ

ಕುಂದಗೋಳ: ಗಣೇಶೋತ್ಸವದ 11ನೇ ದಿನದ ಗಣಪತಿ ಮೂರ್ತಿಗಳ ಮೆರವಣಿಗೆಯಲ್ಲಿ ಶಾಸಕ ಎಮ್ ಆರ್ ಪಾಟೀಲ್‌ ಭಾಗವಹಿಸಿ, ಟ್ರ್ಯಾಕ್ಟರ್ ಚಲಾವಣೆ ಮಾಡಿ ಗಮನ ಸೆಳೆದರು. ಕುಂದಗೋಳ ಪಟ್ಟಣದಲ್ಲಿನ ವಿವಿಧ ಕಡೆಗಳಲ್ಲಿ ಸ್ಥಾಪನೆ ಮಾಡಿದ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಭಾಗವಹಿಸಿ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕುಂದಗೋಳ ಪಟ್ಟಣದ ವಿವಿಧ ಗಣೇಶೋತ್ಸವ ಮಂಡಳಿಗಳ ಮುಖಂಡರು ಇದ್ದರು.

Read More »

ವಿಶೇಷ ಅಂಚೆ ಚೀಟಿ ಬಿಡುಗಡೆ ಸಮಾರಂಭ

ಧಾರವಾಡ : ಡಿವಿಜನ್ ಪೋಸ್ಟಲ್ ಎಂಪ್ಲಾಯಿಸ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯು ಒಂದು ನೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಸವಿನೆನಪಿಗಾಗಿ ವಿಶೇಷ ಅಂಚೆ ಚೀಟಿ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪೋಸ್ಟ್ ಮಾಸ್ಟರ್ ಜನರಲ್ ಡಾ. ರಾಜೇಂದ್ರ ಕುಮಾರ್ ವಿಶೇಷ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಪೋಸ್ಟ್ ಮಾಸ್ಟರ್ ಕುಂಟೋಜಿ, ಶರಣು ಹಂಡಿ ಸೇರಿದಂತೆ ಹಲವರು ಇದ್ದರು.

Read More »

ಆಶ್ರಯ ಬಡಾವಣೆಗೆ ಶಾಸಕ ಭೇಟಿ

ನವಲಗುಂದ: ನಗರದ ಅಣ್ಣಿಗೇರಿ ರಸ್ತೆಯಲ್ಲಿರುವ ಆಶ್ರಯ ಬಡಾವಣೆಗೆ ಶಾಸಕ ಎನ್.ಎಚ್.ಕೋನರಡ್ಡಿ ಭೇಟಿ ನೀಡಿ ಫಲಾನುಭವಿಗಳೊಂದಿಗೆ ಚರ್ಚಿಸಿ ಮನೆ ನಿರ್ಮಾಣ ಕಾಮಗಾರಿಯನ್ನು ತ್ವರಿತಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಸ್‌.ಪಿ.ಪೂಜಾರ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಸದಸ್ಯರಾದ ಜೀವನ ಪವಾರ, ಅಪ್ಪಣ್ಣ ಹಳ್ಳದ, ಸುರೇಶ ಮೇಟಿ, ಉಸ್ಮಾನ ಬಬರ್ಚಿ, ಮದರಸಾಬ ಉಗುರಗೋಳ ಸೇರಿದಂತೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Read More »

ಬಸ್ಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವಕನಿಗೆ ಹೃದಯಾಘಾತ

ಧಾರವಾಡ: ಸಾರಿಗೆ ಸಂಸ್ಥೆಯ ಬಸ್‌ನಲ್ಲೇ ಪ್ರಯಾಣಿಕನೊಬ್ಬನಿಗೆ ಹೃದಯಾಘಾತವಾಗಿದ್ದು, ಚಾಲಕ ಮತ್ತು ನಿರ್ವಾಹಕ ನೇರವಾಗಿ ಆ ಬಸ್‌ನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ತಂದ ಘಟನೆ ಧಾರವಾಡದಲ್ಲಿ ನಡೆದಿದೆ. ದಾಂಡೇಲಿಯಿಂದ ಧಾರವಾಡಕ್ಕೆ ಬರುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾನಿಕನೊಬ್ಬನಿಗೆ ಹೃದಯಾಘಾತವಾಗಿದೆ. ಈತ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಈ ಬಸ್ ಹತ್ತಿದ್ದ. ಮಾರ್ಗ ಮಧ್ಯೆ ಆತನಿಗೆ ಹೃದಯಾಘಾತವಾಗಿದೆ. ಇದನ್ನು ನೋಡಿದ ಚಾಲಕ ಮತ್ತು ನಿರ್ವಾಹಕ ತಮ್ಮ ಬಸ್‌ನ್ನು ನೇರವಾಗಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ತೆಗೆದುಕೊಂಡು ಬಂದು …

Read More »

ಹಿರಿಯ ನಾಗರಿಕರ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಿಗೆ ಚಾಲನೆ

ಧಾರವಾಡ : ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಸೆ, 09 ರಂದು ಆರ್. ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಿರಿಯ ನಾಗರಿಕರ ಕ್ರೀಡಾ, ಸಾಂಸ್ಕøತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾನೂನು ಸೇವೆಗಳ ಪ್ರಾಧಿಕಾರ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡಮನಿ ಅವರು ಕಾರ್ಯಕ್ರಮ ಉದ್ಘಾಟಿಸಿ, ಗಿಡಕ್ಕೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಶ್ವಧರ್ಮ ಮಹಿಳಾ ಮತ್ತು ಮಕ್ಕಳ ಸೇವಾಶ್ರಮ ಸಮಿತಿ ಐ.ಕೆ.ಲಕ್ಕುಂಡಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. …

Read More »