Breaking News

ಧಾರವಾಡ

ಲಾರಿ ಹಾಗೂ ಟಾಟಾ ಏಸ್ ನಡುವೆ ಡಿಕ್ಕಿ : ಓರ್ವ ಮಹಿಳೆ ಸಾವು

ಕಲಘಟಗಿ: ಪಟ್ಟಣದ ಹೊರವಲಯದ ತಡಸ ಕ್ರಾಸ್ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಲಾರಿ ಹಾಗೂ ಟಾಟಾ ಏಸ್ ನಡುವೆ ಡಿಕ್ಕಿಯಾಗಿದ್ದು ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮಹಿಳಾ ಕೂಲಿ ಕಾರ್ಮಿಕರನ್ನು ಹೊತ್ತ ಟಾಟಾ ಏಸ್ ಮಡಕಿಹೊನ್ನಳ್ಳಿಯಿಂದ ಹುಬ್ಬಳ್ಳಿ ರಸ್ತೆಯ ಕಡೆ ಹೊರಟಿತ್ತು. ಆದರೆ ತಡಸ ಕ್ರಾಸ್ ಬಳಿ ಲಾರಿ ಹಾಗೂ ಟಾಟಾ ಎಸ್ ಮಧ್ಯೆ ಅಪಘಾತ ಸಂಭವಿಸಿದೆ. ಸ್ಥಳದಲ್ಲಿ ಮಹಿಳೆ ಮೃತಪಟ್ಟಿದ್ದು, ಇನ್ನು ಐವರು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. …

Read More »

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯಕಾರಿಣಿಯಾಗಿ ನಾಗರಾಜ ಗೌರಿ ಆಯ್ಕೆ

ಧಾರವಾಡ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯಕಾರಿಣಿ ಮಂಡಳಿಗೆ ನಡೆದ ಚುನಾವಣೆಯಲ್ಲಿ ಧಾರವಾಡದ ನಾಗರಾಜ ಗೌರಿ ಚುನಾಯಿತರಾಗಿದ್ದಾರೆ. ಈ ಚುನಾವಣೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ನಡೆದಿತ್ತು. ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಅಭ್ಯರ್ಥಿಗಳು ಚುನಾಯಿತರಾಗಿದ್ದು, ಧಾರವಾಡದಿಂದ ನಾಗರಾಜ ಗೌರಿ ಚುನಾಯಿತರಾಗಿದ್ದಾರೆ. ಮೊನ್ನೆಯಷ್ಟೇ ಈ ಚುನಾವಣೆ ಲಿಂಗಾಯತ ಮಹಾಸಭಾದ ಸಭಾಭವನದಲ್ಲಿ ನಡೆದಿತ್ತು. ಜಿಲ್ಲೆಯಲ್ಲಿ ಒಟ್ಟು 31145 ಮತದಾರರಿದ್ದು, ಅದರಲ್ಲಿ 18016 ಮತದಾರರು ಮತದಾನ ಮಾಡಿದ್ದರು. ಇದರಲ್ಲಿ ನಾಗರಾಜ ಗೌರಿ ಅವರು …

Read More »

ಮನೆಗಳ ಖುಲಾಸೆ ಸಂಬಂಧಿಸಿದಂತೆ ಕೋನರಡ್ಡಿ ಚರ್ಚೆ

ನವಲಗುಂದ: ನಗರದ ಪುರಸಭೆ ಕಛೇರಿಯಲ್ಲಿ ಇಂದು ನವಲಗುಂದ ನಗರ ಆಶ್ರಯ ಸಮಿತಿಯ ಆಶ್ರಯ ಮನೆಗಳ ಖುಲಾಸೆ ಸಂಬಂಧಿಸಿದಂತೆ ಧಾರವಾಡ ಎ.ಸಿ ಶಹಲಮ್ ಹುಸೇನ್ ಅವರೊಂದಿಗೆ ಶಾಸಕ ಎನ್.ಹೆಚ್.ಕೋನರಡ್ಡಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಸುಧೀರ ಸವಕಾರ, ಪುರಸಭೆ ಮುಖ್ಯಾಧಿಕಾರಿ ಎಸ್.ಬಿ.ಪೂಜಾರ ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು.

Read More »

ಶ್ರೀ ದುರ್ಗಾದೇವಿ ದೇವಸ್ಥಾನಕ್ಕೆ ಕೋನರಡ್ಡಿ ಭೇಟಿ

ನವಲಗುಂದ: ನವಲಗುಂದ ಶಹರದ ಗೊಲ್ಲರ ಓಣಿಯಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಎನ್.ಹೆಚ್.ಕೋನರಡ್ಡಿ ಭಾಗವಹಿಸಿ ಆ ದೇವರ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಜೀವನ ಪವಾರ, ಜ್ಯೋತಿ ಗೊಲ್ಲರ, ಪರಶು ಗೊಲ್ಲರ, ಗೋವಿಂದಪ್ಪ ಸಾಲಿ, ವೆಂಕಟೇಶ ಗೊಲ್ಲರ, ದೊಡ್ಡಗೋವಿಂದ ಗೊಲ್ಲರ, ರಮೇಶ ಗೊಲ್ಲರ, ಸಾಯಿಬಾ ಗೊಲ್ಲರ, ರಾಮ ಗೊಲ್ಲರ ಸೇರಿದಂತೆ ಇನ್ನು ಮುಂತಾದ ಗ್ರಾಮಸ್ಥರು ಉಪಸ್ಥಿತರಿದ್ದರು.

Read More »

ಅಣ್ಣಿಗೇರಿಯಲ್ಲಿ ಪೊಲೀಸರಿಂದ ಗಣೇಶ್ ಚತುರ್ಥಿ ಹಿನ್ನೆಲೆ ಪತಸಂಚಲನ

ಅಣ್ಣಿಗೇರಿ: ಪಟ್ಟಣದಲ್ಲಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 97 ಬೆಟಾಲಿಯನ್ ಆರ್ ಎ ಎಫ್ (ರಾಪಿಡ್ ಆಕ್ಷನ್ ಫೋರ್ಸ್) ಸಿಬ್ಬಂದಿಯೊಂದಿಗೆ ರೂಟ್ ಮಾರ್ಚ್‌ ನಡೆಸಿದರು. ಈ ವೇಳೆ ಪಿಎಸ್‌ಐ ಸಿದ್ದಾರೂಢ ಆಲದಕಟ್ಟಿ, ಯು.ಸಿ. ಪಾಟೀಲ ಇತರರು ಭಾಗವಹಿಸಿದ್ದರು

Read More »

ಆಗಸ್ಟ್ 26 ರಂದು ತಹಶೀಲ್ದಾ‌ರ್ ಕಚೇರಿಯಲ್ಲಿ ಕೃಷ್ಣ ಜಯಂತಿ

ಕುಂದಗೋಳ: ತಾಲೂಕು ಆಡಳಿತದ ವತಿಯಿಂದ ಇದೇ ಆಗಸ್ಟ್ 26 ರಂದು ಸೋಮವಾರ ತಾಲೂಕು ದಂಡಾಧಿಕಾರಿಗಳ ಸಭಾ ಭವನದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪೂಜೆ, ಸ್ವಾಗತ ಹಾಗೂ ಪ್ರಾಸ್ತಾವಿಕ, ಉದ್ಘಾಟನೆ, ಉದ್ಘಾಟನಾ ಭಾಷಣ, ಸಾಧಕರಿಗೆ ಸನ್ಮಾನ, ಶಾಲಾ ಮಕ್ಕಳಿಂದ ಕೃಷ್ಣನ ವೇಷ ಭೂಷಣ ಸ್ಪರ್ಧೆ, ಉಪನ್ಯಾಸ, ಮುಖ್ಯ ಅತಿಥಿಗಳ ಭಾಷಣ, ಅಧ್ಯಕ್ಷೀಯ ಭಾಷಣ ಮತ್ತು ವಂದನಾರ್ಪಣೆ ನಡೆಯಲಿದೆ. ಈ ಕಾರ್ಯಕ್ರಮವು ತಹಶೀಲ್ದಾರ್ ರಾಜು ಮಾವರಕರ ನೇತೃತ್ವದಲ್ಲಿ ನೆರವೇರಲಿದ್ದು, …

Read More »

ತೆರೆದ ರಸ್ತೆ ಗುಂಡಿ: ವಾಹನ ಸಂಚಾರಕ್ಕೆ ಅಸ್ತವ್ಯಸ್ತ

ಕುಂದಗೋಳ : ರಸ್ತೆಯ ನಡುವೆ ಗುಂಡಿಯೊಂದು ತೆರೆದಿದ್ದು ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗುವ ಸಾಧ್ಯತೆ ಹಿರೆನೇರ್ತಿ ಚಿಕ್ಕನೇರ್ತಿ ರಸ್ತೆ ಮದ್ಯೆ ಸೃಷ್ಟಿಯಾಗಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಡುವ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಹಿರೆನೇರ್ತಿ ಚಿಕ್ಕನೇರ್ತಿ ಇಕ್ಕಟ್ಟಾದ ರಸ್ತೆ ಮದ್ಯೆ ಗುಂಡಿಯೊಂದು ತೆರೆದಿದೆ. ಸದ್ಯ ಸಾರಿಗೆ ಬಸ್ ಸೇರಿದಂತೆ ಹಲವು ವಾಹನ ಸಂಚಾರ ಮಾಡುವ ಈ ರಸ್ತೆ ಗುಂಡಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.ಈ ಬಗ್ಗೆ ಸ್ಥಳೀಯ ಜನರು ಲೋಕೋಪಯೋಗಿ …

Read More »

ಕಲಘಟಗಿಯಲ್ಲಿ ಡೆಂಗ್ಯೂ ನಿರ್ಮೂಲನ ಕಾರ್ಯಕ್ರಮ

ಕಲಘಟಗಿ : ಡೆಂಗ್ಯೂ ನಿರ್ಮೂಲನ ಕಾರ್ಯಕ್ರಮ ಅಂಗವಾಗಿ ಕಲಘಟಗಿ ಹಾಗೂ ಅಳ್ಳಾವಾರ ತಾಲ್ಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತರು ಜಾಗೃತಿ ಹಾಗೂ ನಿರ್ಮೂಲನಾ ಸಮೀಕ್ಷೆ ನಡೆಸಿದರು. ನಂತರ ಸ್ವಚ್ಛತೆ ಬಗ್ಗೆ ತಿಳುವಳಿಕೆ ಮೂಡಿಸುವ ಕೆಲಸ ಮಾಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ ಬಸವರಾಜ ಬೆಣ್ಣಿಶಿರೂರ, ತಾಲೂಕಾ ಪಂಚಾಯತ್‌ ಕಯ್ಯನಾಹಕ ಅಧಿಕಾರಿಗಳು, ಗ್ರಾಮ ಪಂಚಾಯತ್‌ ಸದಸ್ಯರು, ಪ್ರಾ. ಆ. ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿಗಳು ಮಧುಸೂದನ ಕೆರೂರ, ಆಶಾ ಕರರೆಯರು, ಗ್ರಾಮಸ್ತರು ಹಾಜರಿದ್ದರು ಇದ್ದರು.

Read More »

ವಿಶೇಷ ವಿಕಲಚೇತನರಿಗೆ ಸಲಕರಣೆ ವಿತರಣೆ ಕಾರ್ಯಕ್ರಮ

ಕುಂದಗೋಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ ಮತ್ತು ಜವಮಂಗಳ ಕಾರ್ಯಕ್ರಮದ ಮೂಲಕ ವಿಶೇಷ ವಿಕಲಚೇತನರಿಗೆ ಸಲಕರಣೆ ವಿತರಣೆ ಕಾರ್ಯಕ್ರಮ ಕಲ್ಯಾಣಪುರ ಬಸವಣ್ಣಜ್ಜನವರ ಮಠದಲ್ಲಿ ನಡೆಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರ ವಹಿಸಿದ್ದರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಾನಂದ ಬೆಂತೂರ ನೇತೃತ್ವದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವೇತನ …

Read More »

ನಿರಾಶ್ರಿತ ವೃದ್ಧನ ರಕ್ಷಣೆಗೆ ಶೀಘ್ರ ಸ್ಪಂದಿಸಿದ ಧಾರವಾಡ ಜಿಲ್ಲಾಡಳಿತ

ಧಾರವಾಡ : ನಗರದ ಜನ ನಿಬಿಡ ಹಾಗೂ ವಾಹನ ನಿಬಿಡ ಸ್ಥಳ, ಆಲೂರು ವೆಂಕಟರಾವ ವೃತ್ತ (ಜ್ಯುಬಿಲಿ ಸರ್ಕಲ್) ಬಳಿಯ, ಪಿಜ್ಜಾ ಅಡ್ಡದ ಬುಡದ ಬೃಹತ್ ಗಟಾರು ಬಳಿ ಕಳೆದ 15 ದಿನಗಳಿಂದ ಓರ್ವ ನಿರಾಶ್ರಿತ ವೃದ್ಧ ಹಾಗೆ ಒರಗಿಕೊಂಡಿದ್ದರು. ಮೂರಕಟ್ಟಿ ಗ್ರಾಮದ ಕೃಷಿಕ ಶಿವಪ್ಪ ಅಂತ ಅವರು ಹೇಳಿಕೊಳ್ಳುತ್ತಿದ್ದರು. ಮನನೊಂದು ಊರು ಬಿಟ್ಟು, ಭಿಕ್ಷಾಟನೆಯಲ್ಲಿ ತೊಡಗಿದ್ದರು. ಶಕ್ತಿ ಕುಂದಿ ಮಳೆಯಲ್ಲಿ ನೆನೆಯುತ್ತ ಸಾವು ಬದುಕಿನ ಹೋರಾಟ ನಡೆಸುತ್ತಿದ್ದರು. ಅಭ್ಯುದಯ …

Read More »