Breaking News

ಧಾರವಾಡ

ನಾವೂ ಟಿಕೆಟ್ ಆಕಾಂಕ್ಷಿಗಳು ಎಂದು ಅರ್ಜಿ ಸಲ್ಲಿಕೆ

ಧಾರವಾಡ : ಕಾಂಗ್ರೆಸ್ ಪಕ್ಷದಲ್ಲಿ ದೀಪಕ ಚಿಂಚೋರೆ ಹಾಗೂ ಇಸ್ಮಾಯಿಲ್ ತಮಟಗಾರ ಅವರನ್ನು ಜೋಡೆತ್ತುಗಳು ಎಂದೇ ಕರೆಯಲಾಗುತ್ತಿದೆ. ಈ ಇಬ್ಬರೂ ನಾಯಕರು ತಾವೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಎಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜೋಡಿಯಾಗಿಯೇ ಅರ್ಜಿ ಸಲ್ಲಿಸಿ ಬಂದಿದ್ದಾರೆ. 2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಇಸ್ಮಾಯಿಲ್ ತಮಟಗಾರು ಉತ್ಸುಕರಾಗಿದ್ದು, ಈಗಾಗಲೇ ಅವರು ಕ್ಷೇತ್ರದಲ್ಲಿ ತಳಮಟ್ಟದಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಕ್ಷೇತ್ರದಿಂದಲೇ ಗೆದ್ದು, …

Read More »

ಕುರಿ ಕಾಯುತ್ತಿದ್ದವನ ಮೇಲೆ ಕೊಡಲಿಯಿಂದ ಹಲ್ಲೆ ಖಂಡಿಸಿ ಪ್ರತಿಭಟನೆ

ಧಾರವಾಡ : ನವಲೂರು ಬಡಾವಣೆಯಲ್ಲಿ ಕುರಿ ಕಾಯುತ್ತಿದ್ದವನ ಮೇಲೆ ಕೊಡಲಿಯಿಂದ ಹಲ್ಲೆ ಖಂಡಿಸಿ ಹಾಗೂ ಕುರುಬರಿಗೆ ಎಸ್ಸಿ ಎಸ್ಟಿ ಮೀಸಲಾತಿ ಒದಗಿಸಬೇಕು ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕುರಿಗಾರರು ಕುರಿಗಳ ಜೋತೆಗೆ ಬಂದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು ಈ ಸಂದರ್ಭದಲ್ಲಿ ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ಒದಗಿಸಬೇಕು ಕುರುಬರಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದ್ದರು. ಪ್ರತಿಭಟನೆಯಲ್ಲಿ ಬಸವರಾಜ ದೇವರು …

Read More »

ಅರವಿಂದ್ ಬೆಲ್ಲದ್ ಯುವತಿಗೆ ಅವಮಾನ : ಶಕುಂತಲಾ ಆತ್ಮಹತ್ಯೆ ಗೆ ಯತ್ನ

ಧಾರವಾಡ : ಶಾಸಕ ಅರವಿಂದ್ ಬೆಲ್ಲದ್ ಮಾಡಿದ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ಶಕುಂತಲಾ ಮನಸೂರ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಚಿಕಿತ್ಸೆಗೆಗಾಗಿ ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ. ಕಳೆದ 20 ವರ್ಷಗಳಿಂದ ಶಕುಂತಲಾ ಕರ್ನಾಟಕ ಮಹರ್ಷಿ ವಾಲ್ಮಿಕಿ ಪಂಗಡದಲ್ಲಿ ಕಿರಿಯ ಸಹಾಯಕಿಯಾಗಿ ಕೆಲಸ ಮಾಡುತಿದ್ದಳು. ಅಧಿಕಾರಿ ರವಿ ಬೆಂತೂರ ನಿರ್ದೇಶಕರಾಗಿ ಬಂದ ಮೇಲೆ ಈಕೆಯ ಮೇಲೆ ಲಂಚ ಪಡೆದ …

Read More »

ಮಹಿಳೆಯನ್ನು ಹತ್ಯೆಗೈದಿದ್ದ ಆರೋಪಿ ಜೈಲಿನಲ್ಲೇ ನೇಣಿಗೆ ಶರಣು

ಧಾರವಾಡ: ಜಿಲ್ಲಾ ಆಸ್ಪತ್ರೆ ಬಳಿ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ವಿಚಾರಣಾಧೀನ ಕೈದಿ ಆನಂದ ದುಧನಿ ಧಾರವಾಡದ ಕೇಂದ್ರ ಕಾರಾಗೃಹದಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸವಿತಾ ಕಿತ್ತೂರ ಎಂಬಾಕೆಯನ್ನು ಧಾರವಾಡದ ಸಿವಿಲ್ ಆಸ್ಪತ್ರೆ ಬಳಿ ಮೊನ್ನೆಯಷ್ಟೇ ಆನಂದ ಬರ್ಬರವಾಗಿ ಹತ್ಯೆ ಮಾಡಿದ್ದ. ಇದಾದ ಮೇಲೆ ಆರೋಪಿ ಆನಂದನನ್ನು ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಆನಂದ ಜೈಲಿನಲ್ಲೇ ಬೆಡ್‌ಶೀಟ್ ಹರಿದು ಅದರಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾರಾಗೃಹಕ್ಕೆ …

Read More »

ಧಾರವಾಡದಿಂದ ಪವರ್ ‌ಸ್ಟಾರ್ ಸಮಾಧಿಯವರೆಗೂ ಧ್ರಾಕ್ಷಾಯಣಿ ಪಾಟೀಲ್ ಪಾದಯಾತ್ರೆ

ಧಾರವಾಡ : ಅ.29ರಂದು ನಿಧನರಾದ ಚಂದನವನದ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನೆನಪು ಅಭಿಮಾನಿಗಳಲ್ಲಿ ಸದಾ ಹಸಿರು. ಪುನೀತ್ ಸಾವಿನ ನೋವಿನಿಂದ ಇಡೀ ಕರ್ನಾಟಕದ ಜನತೆ ಇನ್ನೂ ಹೊರಬಂದಿಲ್ಲ. ಅವರ ಹೆಸರಿನಲ್ಲಿ ಹಲವು ಸಮಾಜ ಸೇವಾ ಕಾರ್ಯಗಳು ಮುಂದುವರೆದಿವೆ. ಇದರ ನಡುವೆ ಅಪ್ಪು ಅಭಿಮಾನಿ ಕುಟುಂಬದ ಧಾರವಾಡದ ಮನಗುಂಡಿಯ ದ್ರಾಕ್ಷಾಯಣಿ ಪಾಟೀಲ್ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಭೇಟಿ ನೀಡಲು ಮತ್ತೆ ಪಾದಯಾತ್ರೆ ಆರಂಭಿಸಲಿದ್ದಾರೆ. …

Read More »

ಪತ್ರಕರ್ತರ ಸ್ವಾತಂತ್ರ್ಯ ಕಡಿಮೆಯಾಗುತ್ತಿದೆ : ಈರೇಶ ಅಂಚಟಗೇರಿ

ಧಾರವಾಡ :ಶೇ. 99ರಷ್ಟುಮಾಧ್ಯಮಗಳನ್ನು ಕಾರ್ಪೋರೇಟ್‌ ಸಂಸ್ಥೆಗಳು ನಡೆಸುತ್ತಿದ್ದರಿಂದ ಪತ್ರಕರ್ತರ ಸ್ವಾತಂತ್ರ್ಯ ಕಡಿಮೆಯಾಗುತ್ತಿದೆ. ಇದರ ಫಲವಾಗಿ ನೈಜತೆ, ವಾಸ್ತವಿಕ ವರದಿಗಳ ಕೊರತೆ ಮಾಧ್ಯಮಗಳಲ್ಲಿ ಕಾಣುತ್ತಿದೆ ಎಂದು ಪಾಲಿಕೆ ಮೇಯರ್‌ ಈರೇಶ ಅಂಚಟಗೇರಿ ವಿಚಾಧಿಸಿದರು. ವಿದ್ಯಾಗಿರಿ ಜೆಎಸ್‌ಎಸ್‌ ಕಾಲೇಜಿನ ರತ್ನವರ್ಮ ಸಭಾಭವನದಲ್ಲಿ ಕೇಂದ್ರ ಸರ್ಕಾರದ ವಾರ್ತಾ ಇಲಾಖೆಯ ಬೆಂಗಳೂರು ಪಿಐಬಿ ಶಾಖೆಯಿಂದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಮಾಧ್ಯಮ ಪ್ರತಿನಿ​ಧಿಗಳಿಗೆ ಆಯೋಜಿಸಿದ್ದ ‘ವಾರ್ತಾಲಾಪ’ ಕಾರ್ಯಕ್ರಮ ಉದ್ಘಾಟಿಸಿದ ಅವರು, ಇತ್ತೀಚೆಗೆ …

Read More »

ಕೆರೆ ಪಕ್ಕದಲ್ಲಿ ನವಜಾತ ಶಿಶುವನ್ನು ಬಿಟ್ಟು‌ ಹೋದ ಪಾಪಿಗಳು

ಧಾರವಾಡ : ಅಣ್ಣಿಗೇರಿ ಶಲವಡಿ ಗ್ರಾಮದಲ್ಲಿ ನವಜಾತ ಶಿಶುವನ್ನು ಕೆರೆ ಪಕ್ಕದಲ್ಲಿ ಬಿಸಾಡಿ ಹೋದ ಕ್ರೂರಿಗಳು ಪರಾರಿಯಾಗಿದ್ದಾರೆ. ಶಲವಡಿ ಗ್ರಾಮದ ಹೊರವಲಯದಲ್ಲಿರುವ ಕೆರೆ ಪಕ್ಕದಲ್ಲಿ ದುರುಳರು ಹೆಣ್ಣು ಶಿಶುವನ್ನು ಬಿಟ್ಟು ಹೋಗಿದ್ದಾರೆ . ಮಗು ಅಳುವ ಧ್ವನಿ ಕೇಳಿ ಕೆಲ ಸ್ಥಳೀಯ ಮಗುವನ್ನು ರಕ್ಷಣೆ ಮಾಡಿದ್ದಾರೆ . ಸದ್ಯ ಶಿಶುವಿಗೆ ಶಲವಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದುಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ .

Read More »

ಜಿಲ್ಲಾಸ್ಪತ್ರೆ ಬಳಿ ನಡೆದಿದ್ದ ಕೊಲೆ: ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು

ಧಾರವಾಡ: ನಗರದಲ್ಲಿ ನಡೆದಿದ್ದ ಮಹಿಳೆಯ ಬರ್ಬರ ಹತ್ಯೆಯನ್ನು ಖಾಕಿ ಪಡೆ ಭೇದಿಸಿದೆ. ಇದೇ ತಿಂಗಳ 14ರ ಸಂಜೆ ಜಿಲ್ಲಾಸ್ಪತ್ರೆ ಎದುರು ಮಹಿಳೆಯ ಬರ್ಬರ ಹತ್ಯೆ ನಡೆದಿತ್ತು. ಹತ್ಯೆಯ ಆರೋಪಿ ಆನಂದ ದುಧನಿ ಎಂಬತನನ್ನು ಪೊಲೀಸರು ಬಂಧಿಸಿದ್ದಾರೆ. ಗಂಡನನ್ನು ಕಳೆದುಕೊಂಡಿದ್ದ ನೆಹರೂನಗರದ ಸವಿತಾ ಕಿತ್ತೂರು, ಆನಂದನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಹೀಗಾಗಿ ಆನಂದ ಸವಿತಾಗೆ ಹಣ ಕೂಡ ನೀಡಿದ್ದ. ಸವಿತಾ ಆನಂದನನ್ನು ಬಿಟ್ಟು ಮತ್ತೆ ಇನ್ನೊಬ್ಬರ ಜೊತೆ ಸಂಪರ್ಕ …

Read More »

ರಾಜ್ಯ ಮಟ್ಟದ ಕಾಯಕ ಸಮಾಜದ ಒಕ್ಕೂಟಗಳ ಚಿಂತನ ಮಂಥನ ಸಭೆಗೆ ಪಂಚನಸಾಲಿ ಸಮಾಜ ವಿರೋಧ

ಧಾರವಾಡ: ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ವಿರೋಧಿಸಿನಗರದ ಅಕ್ಕನ ಬಳಗದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕಾಯಕ ಸಮಾಜದ ಒಕ್ಕೂಟಗಳ ಚಿಂತನ ಮಂಥನ ಸಭೆಗೆ ಪಂಚಾಮಸಾಲಿ ಸಮಾಜದ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಸಭೆಯ ಹೊರಗಡೆ ಪಂಚಮಸಾಲಿ ಸಮಾಜದ ಮುಖಂಡರು, ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಒಕ್ಕೂಟದ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ವಿರುದ್ಧ ಘೋಷಣೆ ಕೂಗಿ ಪುಟ್ಟಸಿದ್ದಶೆಟ್ಟಿಯ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ ಆಕ್ರೋಶ …

Read More »

ಧಾರವಾಡದಲ್ಲಿ ಕುಸಿದುಬಿದ್ದ ಮನೆ: ತಪ್ಪಿದ ದುರಂತ

ಧಾರವಾಡ: ಕಳೆದ ಎರಡು ದಿನಗಳಿಂದ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಧಾರವಾಡ ಜನ್ನತಗರದಲ್ಲಿ ನಿನ್ನೆ ಮನೆಯೊಂದು ಕುಸಿದು ಬಿದ್ದಿದ್ದು, ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.ಜನ್ನತನಗರ 8ನೇ ಕ್ರಾಸ್‌ನಲ್ಲಿರುವ ಕಲಾಲ ಎಂಬುವವರಿಗೆ ಸೇರಿದ ಮನೆಯೇ ರಾತ್ರಿ ಕುಸಿದು ಬಿದ್ದಿದೆ. ನಾಲ್ಕು ಜನ ಮನೆಯ ಸದಸ್ಯರು ಮಲಗಿದ್ದ ವೇಳೆಯೇ ಮನೆ ಕುಸಿದು ಬಿದ್ದಿದೆ. ಮೊದಲಿಗೆ ಮನೆಯ ಗೋಡೆಯಿಂದ ಮಣ್ಣು ಕುಸಿದ ಸಪ್ಪಳ ಕೇಳಿದ ಮನೆಯ ಸದಸ್ಯರು ಕೂಡಲೇ ಎದ್ದು ಹೊರಗಡೆ ಓಡಿ ಬಂದು ತಮ್ಮ ಪ್ರಾಣ …

Read More »