Breaking News

ಹುಬ್ಬಳ್ಳಿ

ಮಕ್ಕಳು ನೈತಿಕ ಶಿಕ್ಷಣ, ಧರ್ಮದ ಪಾಠ ಕಲಿಯಬೇಕು: ಪ್ರಹ್ಲಾದ ಜೋಶಿ ಅಭಿಪ್ರಾಯ

ಹುಬ್ಬಳ್ಳಿ: ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸುವುದರಲ್ಲಿ ತಪ್ಪೆನಿಲ್ಲ. ಬಹಳ ಸ್ಪಷ್ಟವಾಗಿ ಹೇಳುತ್ತೇನೆ ಕೆಲ ವಿಚಾರಗಳು ಮಕ್ಕಳಿಗೆ ತಿಳಿಯಬೇಕು. ನೈತಿಕ ಶಿಕ್ಷಣ, ಧರ್ಮ ಕಲಿಯಬೇಕು. ಜಾತಿವಾದ ಮಾಡದೇ ಎಲ್ಲರೂ ಸ್ವಾಗತಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು,‌ ನಾನು ಇದನ್ನು ಸ್ವಾಗತ ಮಾಡುತ್ತೇನೆ‌. ಮಾಜಿ ಸಿಎಂ ಸಿದ್ದರಾಮಯ್ಯನವರು ಸ್ವಾಗತ ಮಾಡಿದರೇ ಅವರಿಗೆ ಸದ್ಬುದ್ಧಿ ಬಂದಿದೆ ಎಂದು ಅದನ್ನೂ ಕೂಡಾ ಸ್ವಾಗತ ಮಾಡುತ್ತೇನೆ ಎಂದು ಅವರು …

Read More »

ಹುಬ್ಬಳ್ಳಿಗೆ ತಂಪು ಏರಿಚಿದ ಮಳೆರಾಯ

ಹುಬ್ಬಳ್ಳಿ: ಬಿರು ಬಿಸಿಲಿನ ನಡುವೆಯೇ ಹುಬ್ಬಳ್ಳಿಯಲ್ಲಿ ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿಗೆ, ನಗರದ ವಿವಿಧೆಡೆ ಕೆಲ ಹೊತ್ತು ಮಳೆ ತನ್ನ ಆರ್ಭಟ ತೋರಿಸಿತ್ತು. ಏಕಾಏಕಿ ಸುರಿದ ಮಳೆಯಿಂದಾಗಿ, ಸಾರ್ವಜನಿಕರು ದಿಕ್ಕು ತೋಚದೆ ಪರದಾಡಿದರು.ಮಳೆಗೆ ನೆನೆಯದಂತೆ ಸಮೀಪದ ಅಂಗಡಿ, ಕಟ್ಟಡಗಳ ಬಳಿ ನಿಂತರು. ಕೆಲವರು ವಿಧಿ ಇಲ್ಲದೆ ನೆನೆಯಬೇಕಾಯಿತು. ದ್ವಿಚಕ್ರ ವಾಹನ ಸವಾರರು ಮಳೆಯಲ್ಲೇ ಸವಾರಿ ಮಾಡಿದ ದೃಶ್ಯ ಅಲ್ಲಲ್ಲಿ ಕಂಡುಬಂತು.

Read More »

ಹುಬ್ಬಳ್ಳಿ ಯಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಉಚಿತ ವೀಕ್ಷಣೆ

ಹುಬ್ಬಳ್ಳಿ: ಮಾ.16ರಿಂದ ಮಾ.20ರ ವರೆಗೆ `ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಉಚಿತ ವೀಕ್ಷಣೆಗೆ ಹುಬ್ಬಳ್ಳಿಯ ರೂಪಂ ಮತ್ತು ಧಾರವಾಡದ ಶ್ರೀನಿವಾಸ ಚಿತ್ರಮಂದಿರದಲ್ಲಿ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ ಎಂದುಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯವಸ್ಥೆ ಮಾಡಿದ್ದಾರೆ. ಬುಧವಾರದಿಂದ ಮಧ್ಯಾಹ್ನ 3 ಹಾಗೂ ಸಂಜೆ 6ರ ಪ್ರದರ್ಶನಗಳಲ್ಲಿ ಸಿನಿಮಾ ವೀಕ್ಷಣೆ ಮಾಡಬಹುದಾಗಿದೆ ಮೂರುಸಾವಿರ ಮಠದ ಗುರುಸಿದ್ಧ ರಾಜೇಂದ್ರ ಸ್ವಾಮೀಜಿ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.

Read More »

ಹಿಜಾಬ್ ಕುರಿತು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇವೆ : ಅಶ್ಪಾಕ್ ಕುಮಟಾಕರ

ಹುಬ್ಬಳ್ಳಿ : ಹಿಜಾಬ್ ಕುರಿತಂತೆ ಹೈಕೋರ್ಟ್ ತೀರ್ಪಿಗೆ ನಮ್ಮ ವಿರೋಧವಿದೆ ನಾವು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಅಶ್ಪಾಕ್ ಕುಮಟಾಕರ ಹೇಳಿದರು ಮಾದ್ಯಮ ವರದಿಗಾರರೊಂದಿಗೆ ಮಾತನಾಡಿದ ಅವರುಹೈಕೋರ್ಟ್ ತೀರ್ಪು ಅದನ್ನು ನಾವು ಒಪ್ಪೋದಿಲ್ಲ ಹೈಕೋರ್ಟ್ ತೀರ್ಪಿನ ವಿರುದ್ಧವಾಗಿ ನಾವು ಸುಪ್ರೀಂಕೋರ್ಟ್ ಗೆ ಹೋಗಿ ಅರ್ಜಿಯನ್ನು ತಿಳಿಸುತ್ತೇವೆ ಸುಪ್ರೀಂಕೋರ್ಟ್ ಆದೇಶ ಬರುವವರೆಗೂ ನಾವು ಕಾದು ನೋಡುತ್ತೇವೆ ನಾವು ಕಾಲೇಜಿಗೆ ಶಾಲೆಗೆ ಹೋಗುವುದಿಲ್ಲ ಹಿಜಾಬ್ ಧರಿಸಿ ಕಾಲೇಜು ಶಾಲೆಗೆ ಹೋಗುತ್ತೇವೆ ಎಂದರು.

Read More »

ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆ : ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ : ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಆಗಬಹುದೆಂದು ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ ನೀಡಿದ್ದಾರೆ.ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ಮುಗಿದ ನಂತರ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ಮುಗಿದ ನಂತರ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲಾಗುವುದು. ಅಧಿವೇಶನವು ಏಪ್ರಿಲ್ 8 …

Read More »

ಬಿಜೆಪಿ ಜಗತ್ತಿನ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ : ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ :ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅದ್ದೂರಿ ಗೆಲುವು ಸಾಧಿಸಿದೆ. ಜಗತ್ತಿನ ಅತೀದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ದೇಶದ ಜನರು ಪ್ರಧಾನಿ ಮೋದಿ ಮೇಲೆ ಇಟ್ಟ ವಿಶ್ವಾಸ ಕಂಡು ನಾನು ಬೆರಗಾಗಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ‌ಮಾತನಾಡಿದ ಅವರು, ನಾನು ಉತ್ತರಖಾಂಡ್ ಬಗ್ಗೆ ಹೇಳೋದು ಇಷ್ಟೇ. ನಾಲ್ಕು ದಿನ ಪ್ರಧಾನಮಂತ್ರಿಗಳು ಉತ್ತರಾಖಂಡ್ ಭೇಟಿ ಗೆಲುವಿಗೆ ಕಾರಣವಾಯಿತು. ಉತ್ತರಾಖಂಡ ಗೆಲುವಿಗೆ ನಾನೊಬ್ಬನೇ ಕಾರಣ ಅಂತ …

Read More »

ರೈಲಿಗೆ ತೆಲೆಕೊಟ್ಟು ಸಾವಿನಲ್ಲಿ ಒಂದಾಂದ ದಂಪತಿಗಳು

ಹುಬ್ಬಳ್ಳಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಚಲಿಸುವ ರೈಲಿಗೆ ತಲೆ ಕೊಟ್ಟು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿಯ ಹೊರವಲಯದಲ್ಲಿ ನಡೆದಿದೆ. ರೇಲ್ವೆ ನಿಲ್ದಾಣದ ಕೂಗಳತೆ ದೂರದಲ್ಲಿಯೇ ದಂಪತಿ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಕೆಲವೇ ಸಮಯದ ಹಿಂದೆ ಬೆಳಕಿಗೆ ಬಂದಿದೆ. ಸುಮಾರು 35 ರಿಂದ 40 ವಯಸ್ಸಿನ ಮಹಿಳೆ ಹಾಗೂ 45ರಿಂದ 50 ವಯಸ್ಸಿನ ಪುರುಷ ಸಾವಿಗೀಡಾಗಿದ್ದು, ದಂಪತಿಗಳು ನೊಂದು …

Read More »

ಹುಬ್ಬಳ್ಳಿಯಲ್ಲಿ ಮಾ. 26ಕ್ಕೆ ಟೈಕಾನ್ ಉದ್ಯಮಶೀಲತಾ ಶೃಂಗಸಭೆ : ವಿಜಯ ಸೈಗಲ್

ಹುಬ್ಬಳ್ಳಿ: ಟೈಕಾನ್ ಹುಬ್ಬಳ್ಳಿಯ ವತಿಯಿಂದ ಮಹಿಳಾ ಕಾನ್ಕ್ಲೇವ್, ಸ್ಟಾರ್ಟ್ ಅಫ್ ಶೃಂಗಸಭೆ ಮತ್ತು ಟೈಕಾನ್ -2022 ವಾರ್ಷಿಕೋತ್ಸವವನ್ನು ಇದೇ 26ರಂದು ಉಣಕಲ್ ಹತ್ತಿರ ನವೀನ್ ಹೊಟೇಲ್ ನಲ್ಲಿ ಆಯೋಜಿಸಲಾಗಿದೆ ಎಂದು ಟೈಕಾನ್ ಅಧ್ಯಕ್ಷ ವಿಜಯ ಸೈಗಲ್ ಹೇಳಿದರು. ನಗರದಲ್ಲಿಂದು ಟೈಕಾನ್ ಶೃಂಗಸಭೆಯ ಕೈಪಿಡಿಯನ್ನು ಬಿಡುಗಡೆಗೊಳಿಸಿ ಬಳಿಕ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ದಿ ಇಂಡಸ್ ಎಂಟರ್ ಪ್ರೆನಿಯರ್ಸ್ ಟೈ ಹುಬ್ಬಳ್ಳಿಯು ದೊಡ್ಡಮಟ್ಟದ ಉದ್ಯಮಶೀಲತಾ ಶೃಂಗ ಸಭೆಯನ್ನು ಆಯೋಜಿಸಿದೆ. ಎಜುಕೇಷನ್, ನೆಟ್ವರ್ಕಿಂಗ್, …

Read More »

ಚೊಂಟಾ ಬಾಂಬೆಯಲ್ಲಿ ಕೊಲೆಯಾದ ರೀತಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ರೌಡಿಶೀಟರ್ ಅಕ್ಬರ್ ಮುಲ್ಲಾ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕಡೆಯಲ್ಲಿ ನೆತ್ತರು ಹರೆದಿದ್ದು, ಬೆಳ್ಳಂಬೆಳಿಗ್ಗೆ ಹುಬ್ಬಳ್ಳಿಯ ಜನರು ಬೆಚ್ಚಿ ಬಿದ್ದಿದ್ದಾರೆ. ನಗರದ ಕೃಷ್ಣ ಭವನದ ಎದುರಿನಲ್ಲಿ ಅಪರಿಚಿತ ಮಹಿಳೆಯೊಬ್ಬಳು ಕೊಲೆಯಾದ ರೀತಿಯಲ್ಲಿ ಶವ ಪತ್ತೆಯಾಗಿದ್ದು, ಬೆಳಿಗ್ಗೆ ರಕ್ತ ನೋಡಿದ ಜನರು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಲೆಯಾದ ಮಹಿಳೆಯ ಹೆಸರು ಸುಮಾ ಎಂದು ಅಂದಾಜಿಸಲಾಗಿದ್ದು, ಪ್ರಕರಣದ ಹೆಚ್ಚಿನ ಮಾಹಿತಿ ತನಿಖೆಯ ನಂತರವೇ ಗೊತ್ತಾಗಲಿದೆ ಎನ್ನುತ್ತಾರೆ …

Read More »

ಶೀಘ್ರ ಕಾಮಗಾರಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ

ಹುಬ್ಬಳ್ಳಿ :ಸ್ಮಾರ್ಟ್ ಸಿಟಿ ಹಾಗೂ ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದು, ಈ ನಿಟ್ಟಿನಲ್ಲಿ ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇಂದು ಬೆಳ್ಳಂಬೆಳಿಗ್ಗೆ ಹೊಸೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಸ್ಮಾರ್ಟ್ ಸಿಟಿ ಹಾಗೂ ಸಿಆರ್ ಎಫ್ ಅನುದಾದ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವ ರಸ್ತೆ ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ವೇಳೆ ಕಾಮಗಾರಿ ಪ್ರಗತಿಯ …

Read More »