Breaking News

ಹುಬ್ಬಳ್ಳಿ

ಚುನಾವಣೆ‌ ಕಾವು : ಪಾಲಿಕೆ ಸುತ್ತಮುತ್ತ ಪೋಲಿಸ್ ಬಿಗಿ ಬಂದೋಬಸ್ತ್

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಮೇಯರ್,‌ ಉಪಮೇಯರ್ ಚುನಾವಣೆಗೆ ಕ್ಷಣ ಗಣನೆ ಆರಂಭವಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಬಾರದೆಂದು ಪಾಲಿಕೆ ಸುತ್ತಮುತ್ತ ಪೋಲಿಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ಚುನಾವಣೆ ನಡೆದು ಆರು ಏಳು ತಿಂಗಳುಗಳು ಕಳೆಯುತ್ತಾ ಬಂದಿದ್ದು, ಈವರೆಗೆ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಅಧಿಕಾರ ಸಿಕ್ಕಿದಿಲ್ಲ. ಇಂದು ಮೇಯರ್ ಉಪಮೇಯರ್ ಚುನಾವಣೆ ನಡೆಯುತ್ತಿದ್ದು, ಯಾರು ಉಪಮೇಯರ್ ಆಗಲಿದ್ದಾರೆ ಎಂಬ ಕುತೂಹಲ ಎಲ್ಲರ ಮನಸ್ಸಿನಲ್ಲಿ ಮೂಡಿಸಿದೆ. ಹೀಗಾಗಿಯೇ …

Read More »

ಚುನಾವಣೆ : ಕೊರೋನಾ ಹಿನ್ನೆಲೆ ಸದಸ್ಯರಿಗೆ ಥರ್ಮಲ್ ಸ್ಕ್ಯಾನ್

ಹುಬ್ಬಳ್ಳಿ : ಮೇಯರ್ ಮತ್ತು ಉಪಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯರಿಗೆ ಕೊರೊನಾ ಮುಂಜಾಗ್ರತಾ ಕ್ರಮವಾಗಿ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಮಾಸ್ಕ್ ಬಳಸುವಂತೆ ಚಿಟಗುಪ್ಪಿ ಆಸ್ಪತ್ರೆ ಸಿಬ್ಬಂದಿಗಳು ಸಲಹೆ ನೀಡುತ್ತಿದ್ದಾರೆ. ಕೊರೊನಾ ನಾಲ್ಕನೇ ಅಲೆ ಭೀತಿ ಹಿನ್ನೆಲೆಯಲ್ಲಿ ಇಂದು ನಡೆಯುತ್ತಿರುವ ಮೇಯರ್ ಮತ್ತು ಉಪಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಸದಸ್ಯರಿಗೆ ಥರ್ಮಲ್ ಸ್ಕ್ಯಾನ್ ಮಾಡುತ್ತಿದ್ದಾರೆ ‌.

Read More »

ಮೇಯರ್, ಉಮೇಯರ್ ಚುನಾವಣೆ : ಪಾಲಿಕೆ ಸದಸ್ಯರು ಆಗಮನ

ಹುಬ್ಬಳ್ಳಿ : ಮೇಯರ್, ಉಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಪಾಲಿಕೆ ಸಭಾಭವನದತ್ತ ಪಾಲಿಕೆ ಸದಸ್ಯರು ಆಗಮಿಸುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ AIMIM ಪಕ್ಷದ ಪಾಲಿಕೆ ಸದಸ್ಯರು ಪಾಲಿಕೆಯತ್ತ ಮುಖ ಮಾಡಿದ್ದಾರೆ. ಶಾಸಕ ಪ್ರಸಾದ ಅಬ್ಬಯ್ಯ ನೇತೃತ್ವದಲ್ಲಿ ತಂಡೋಪ ತಂಡವಾಗಿ ಆಗಮಿಸ್ತಿರೊ ಪಾಲಿಕೆ ಸದಸ್ಯರು ಆಗಮಿಸಿದ್ದಾರೆ.

Read More »

ಮೇಯರ್, ಉಪಮೇಯರ್ ಅದೃಷ್ಟದ ಆಟ: ಯಾರಿಗುಂಟು ಯಾರಿಗಿಲ್ಲ ಗೌನ್ ಭಾಗ್ಯ

ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಉಪಮೇಯರ್ ಆಯ್ಕೆ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾದ ಬೆನ್ನಲ್ಲೇ ನಾಲ್ವರಲ್ಲಿ ಯಾರು ಮೇಯರ್…? ಎಂಬುವಂತ ಕುತೂಹಲ ಕೆರಳಿಸಿದೆ. ಗೌನ್‌ ಹಾಕಿಕೊಳ್ಳಲು ಬಿಜೆಪಿಯಲ್ಲಿ ಬಾರಿ ಪೈಪೋಟಿ ನಡೆದಿದ್ದು, ನಿನ್ನೆ ಖಾಸಗಿ ಹೊಟೆಲ್ ನಲ್ಲಿ ನಡೆದ ಸಭೆಯಲ್ಲಿ ನಾಲ್ವರ ಹೆಸರು ಅಂತಿಮಗೊಂಡಿದ್ದು, ಅರವಿಂದ ಬೆಲ್ಲದ ಕ್ಷೇತ್ರದಿಂದ ವಿಜಯಾನಂದ ಶೆಟ್ಟಿ, ಅಮೃತ ದೇಸಾಯಿ ಕ್ಷೇತ್ರದಿಂದ ವಿರೇಶ …

Read More »

ಮೂರನೇ, ನಾಲ್ಕನೇ ರಂಗ ಬಂದರು ಬಿಜೆಪಿಗೆ ಸರಿಸಾಟಿಯಾಗುವುದಿಲ್ಲ- ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷಕ್ಕೆ ಮೂರನೇ, ನಾಲ್ಕನೇ ರಂಗ ಬಂದರು ಸರಿಸಾಟಿಯಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಲೇವಡಿ ಮಾಡಿದರು. ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಪ್ರಬಲವಾಗಿ ಬೆಳೆಯುತ್ತಿದೆ. ಅವರ ರಾಷ್ಟ್ರೀಯ ನಾಯಕತ್ವ, ಜಗತ್ತಿನ ನಾಯಕತ್ವದಲ್ಲಿ ಕೆಲಸ ಮಾಡುತ್ತಿದ್ದೇವೆ. ಹಾಗಾಗಿ ಮೂರನೇ ರಂಗ ಆದರೂ ಮಾಡಿಕೊಳ್ಳಲಿ, ನಾಲ್ಕನೇ ರಂಗ ಆದರೂ ಮಾಡಿಕೊಳ್ಳಲಿ, ಐದನೇ ರಂಗ ಆದರೂ ಮಾಡಿಕೊಳ್ಳಲಿ ಅದು …

Read More »

ಹಾಡುಹಗಲೆ ಕಳ್ಳತನ ಮಾಡುತ್ತೀದ ಕುಖ್ಯಾತ ಕಳ್ಳರು ಬಂಧನ

ಹುಬ್ಬಳ್ಳಿ : ನಗರದಲ್ಲಿ ಬೆಳ್ಳಗಿನ ಜಾವ ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ . ಆರೋಪಿತರಿಂದ 5,64,000 ರೂ . ಮೌಲ್ಯದ 104 ಗ್ರಾಂ ಚಿನ್ನಾಭರಣ , 180 ಗ್ರಾಂ ಬೆಳ್ಳಿ ಹಾಗೂ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ . ಮೇ .9 ರಂದು ಸಂತೋಷ ನಗರದಲ್ಲಿ ಮನೆಯೊಂದರಲ್ಲಿ ಕಳ್ಳತನ ನಡೆದಿತ್ತು . ಈ ಕುರಿತು ತನಿಖೆ ಆರಂಭಿಸಿದ ಹಳೇ ಹುಬ್ಬಳ್ಳಿ ಠಾಣೆ …

Read More »

ಶಿಕ್ಷಕರ ಸಮಸ್ಯೆಗೆ ಸ್ಪಂದಿಸದ ಹೊರಟ್ಟಿ ಬಿಜೆಪಿಗೆ ಆಗಮನ : ಮೋಹನ ಲಿಂಬಿಕಾಯಿ

ಹುಬ್ಬಳ್ಳಿ: ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಳೆದ ಏಳು ಬಾರಿ ಗೆದ್ದರೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಹೀಗಾಗಿಯೇ ಅವರು ಬಿಜೆಪಿಗೆ ಬಂದಿದ್ದಾರೆ. ಇದನ್ನು ಈ ಹಿಂದೆ ನೂರು ಬಾರಿ ಹೇಳಿದ್ದೇನೆ. ಈಗಲೂ ಹೇಳುತ್ತೇನೆ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿರುತ್ತೇನೆ ಎಂದು ವಿಧಾನಪರಿಷತ್ತು ಮಾಜಿ ಸದಸ್ಯ ಹಾಗೂ ಬಿಜೆಪಿ ಟಿಕೆಟ್ ವಂಚಿತರಾಗಿರುವ ಮೋಹನ ಲಿಂಬಿಕಾಯಿ ಅವರು ಮಾಧ್ಯಮಗಳ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಬಸವರಾಜ ಹೊರಟ್ಟಿ ಅವರನ್ನು …

Read More »

ಏಕಾಏಕಿ ವಾಹನಗಳ ಮೇಲೆ ಕಲ್ಲು ತೂರಾಟ : ಆರೋಪಿ ಬಂಧನ

ಹುಬ್ಬಳ್ಳಿ: ಇಲ್ಲಿಯ ಮಹಾನಗರ ಪಾಲಿಕೆಯಲ್ಲಿ ನಿಲ್ಲಿಸಿದ್ದ ಎರಡು ಕಾರು ಹಾಗೂ ಕಸ ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ಗಣೇಶ ಪೇಟ್ ನಲ್ಲಿನ ಮೊಹ್ಮದ್ ಆಸೀಫ್ ಎಂಬಾತನಿಂದ ವಾಹನಗಳ ಮೇಲೆ ಪಾಲಿಕೆ ಆಯುಕ್ತರಿಗೆ ಅವಾಚ್ಯವಾಗಿ ನಿಂದನೆ ಮಾಡುತ್ತಾ ಏಕಾಏಕಿ ಕಲ್ಲಿನಿಂದ ದಾಳಿ ನಡೆಸಿದ್ದಾರೆ. ಇಂದು ಮುಂಜಾನೆ 8.30ಕ್ಕೇ ಪಾಲಿಕೆ ಕಚೇರಿಗೆ ಬೈಕ್ ನಲ್ಲಿ ಬಂದಿದ್ದ ಆರೋಪಿ ಮೊಹ್ಮದ್ ಏಕಾಎಕಿ ದಾಳಿ ನಡೆಸಿದ್ದಾರೆ. ಮೂರು ವಾಹನದ ಗ್ಲಾಸ್ ಸಂಪೂರ್ಣ ಜಖಂವಾಗಿದೆ. ಸೆಕ್ಯೂರಿಟಿ ಸಿಬ್ಬಂದಿಗಳಿಂದ …

Read More »

ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಶೆಟ್ಟರ್ ಭೇಟಿ

ಹುಬ್ಬಳ್ಳಿ: ನಗರದ ವಾರ್ಡ್ ನಂ 39 ರಾಜನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಕಾಲೇಜಿಗೆ ಶಾಸಕ ಜಗದೀಶ್ ಶೆಟ್ಟರ್ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು . ಈ ಸಂದರ್ಭದಲ್ಲಿಸಿದ್ದು ಮೊಗಲಿಶೆಟ್ಟರ , ವಿಶ್ವನಾಥ ಪಾಟೀಲ , ರಘು ಅಕಮಂಚಿ ಮೊಹನ ಶೆಟ್ಟರ್ ಹಾಗೂ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು .

Read More »

ಬಿಜೆಪಿ ನೂತನ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ

ಹುಬ್ಬಳ್ಳಿ : ಇಂದು ಹುಬ್ಬಳ್ಳಿಯಲ್ಲಿ ವಾರ್ಡ ನಂ 48 ರಲ್ಲಿ ಜ್ಯೋತಿರ್ವಿಜ್ಞಾನ ಸಮುದಾಯ ಭವನದಲ್ಲಿ ವಾರ್ಡ ನಂ 48 ರ ಪ್ರಮುಖರ ಜೊತೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಭೆ ನಡೆಸಿ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕ ಮಾಡಿದರು . ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸಾವಕಾರ , ಸಂತೋಷ ಚವ್ಹಾಣ , ನಾಗೇಶ ಕಲಬುರ್ಗಿ , ಮಹೇಶ ಬರ್ಲಿ , ರವಿರಾಜ ಕೊಡ್ಲಿ , ವಿಜಯಾ ಗುಡಗೇರಿ , …

Read More »