Breaking News

ಮೇಯರ್, ಉಪಮೇಯರ್ ಅದೃಷ್ಟದ ಆಟ: ಯಾರಿಗುಂಟು ಯಾರಿಗಿಲ್ಲ ಗೌನ್ ಭಾಗ್ಯ

ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಉಪಮೇಯರ್ ಆಯ್ಕೆ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾದ ಬೆನ್ನಲ್ಲೇ ನಾಲ್ವರಲ್ಲಿ ಯಾರು ಮೇಯರ್…? ಎಂಬುವಂತ ಕುತೂಹಲ ಕೆರಳಿಸಿದೆ.

ಗೌನ್‌ ಹಾಕಿಕೊಳ್ಳಲು ಬಿಜೆಪಿಯಲ್ಲಿ ಬಾರಿ ಪೈಪೋಟಿ ನಡೆದಿದ್ದು, ನಿನ್ನೆ ಖಾಸಗಿ ಹೊಟೆಲ್ ನಲ್ಲಿ ನಡೆದ ಸಭೆಯಲ್ಲಿ ನಾಲ್ವರ ಹೆಸರು ಅಂತಿಮಗೊಂಡಿದ್ದು, ಅರವಿಂದ ಬೆಲ್ಲದ ಕ್ಷೇತ್ರದಿಂದ ವಿಜಯಾನಂದ ಶೆಟ್ಟಿ, ಅಮೃತ ದೇಸಾಯಿ ಕ್ಷೇತ್ರದಿಂದ ವಿರೇಶ ಆಂಚಟಗೇರಿ, ಜಗದೀಶ ಶೆಟ್ಟರ ಕ್ಷೇತ್ರದಿಂದ ವೀರಣ್ಣ ಸವಡಿ, ಪೂರ್ವ ವಿಧಾನ ಸಭಾ ಕ್ಷೇತ್ರದಿಂದ ಶಿವು ಮೆಣಸಿನಕಾಯಿ ಹೆಸರು ಅಂತಿಮಗೊಂಡಿದ್ದು, ಯಾವ ಹೂವು ಯಾರ ಮುಡಿಗೆ ಎಂಬುವಂತ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಇನ್ನೂ ಇಂದು ಬೆಳಿಗ್ಗೆ ನಡೆಯುವ ಮತ್ತೊಂದು ಸುತ್ತಿನ ಸಭೆಯಲ್ಲಿ ಮೇಯರ್ ಅಭ್ಯರ್ಥಿ ಆಯ್ಕೆ ಇತ್ಯರ್ಥವಾಗಲಿದ್ದು, ಮೇಯರ್ ಹುಬ್ಬಳ್ಳಿಗೆ ಕೊಟ್ಟರೆ, ಧಾರವಾಡಕ್ಕೆ ಉಪಮೇಯರ್. ಧಾರವಾಡಕ್ಕೆ ಮೇಯರ್ ಕೊಟ್ಟರೆ, ಹುಬ್ಬಳ್ಳಿಗೆ ಉಪಮೇಯರ್ ಫಿಕ್ಸ್ ಆಗಲಿದೆ.

ತಮ್ಮ ಬೆಂಬಲಿಗರನ್ನ ಮೇಯರ್ ಮಾಡಲು ನಾಯಕರ ಕೊನೆ ಘಳಿಗೆಯ ಕಸರತ್ತು ನಡೆಸಿದ್ದು, ಮೇಯರ್ ಪಟ್ಟಕ್ಕಾಗಿ ಆಕಾಂಕ್ಷಿಗಳಿಂದ ಲಾಭಿ ಮುಂದುವರೆದಿದ್ದು, ಯಾರಾಗ್ತಾರೇ ಗೌನ್ ಧರಿಸುವ ಅದೃಷ್ಟವಂತ ಎಂಬುವುದನ್ನು ಕಾದು ನೋಡಬೇಕಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *