ಹುಬ್ಬಳ್ಳಿ : ನಗರದಲ್ಲಿ ಬೆಳ್ಳಗಿನ ಜಾವ ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ . ಆರೋಪಿತರಿಂದ 5,64,000 ರೂ . ಮೌಲ್ಯದ 104 ಗ್ರಾಂ ಚಿನ್ನಾಭರಣ , 180 ಗ್ರಾಂ ಬೆಳ್ಳಿ ಹಾಗೂ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ . ಮೇ .9 ರಂದು ಸಂತೋಷ ನಗರದಲ್ಲಿ ಮನೆಯೊಂದರಲ್ಲಿ ಕಳ್ಳತನ ನಡೆದಿತ್ತು .
ಈ ಕುರಿತು ತನಿಖೆ ಆರಂಭಿಸಿದ ಹಳೇ ಹುಬ್ಬಳ್ಳಿ ಠಾಣೆ ಇನ್ ಸ್ಪೆಕ್ಟರ್ ಅಶೋಕ ಚವ್ಹಾಣ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ , ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ . ಈ ತಂಡದಲ್ಲಿ ಪಿಎಸ್‌ಐ ಎಫ್.ಎಸ್ . ಭಜಂತ್ರಿ , ಸಿಬ್ಬಂದಿ ನಾಗರಾಜ ಕೆಂಚಣ್ಣವರ , ಐ.ಎಸ್ . ಸಂಶಿ , ಎಸ್.ಎ.ವಲ್ಯಾಪೂರ , ಎನ್ . ಎಂ.ಪಾಟೀಲ , ಎಂ.ಬಿ. ಭಜಂತ್ರಿ , ಬಿ.ಎಂ. ಹೆದ್ದೇರಿ , ವಿ.ಕೆ.ಸುನಗದ , ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

