Breaking News

Breaking News

ಬೀದರ್ ದರೋಡೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಹೈದರಾಬಾದ್‌ ಗೆ ಪೊಲೀಸರ ತಂಡ ರವಾನೆ

ಬೀದರ್: ದರೋಡೆ ಪ್ರಕರಣದ ಆರೋಪಿಗಳ ಗುರುತು ಪತ್ತೆಯಾಗಿದ್ದು, ಇಬ್ಬರನ್ನು ಬಂಧಿಸಲು ಬೀದರ್ ಜಿಲ್ಲಾ ಪೊಲೀಸರ ತಂಡವನ್ನು ಹೈದರಾಬಾದ್‌ಗೆ ಕಳಿಸಲಾಗಿದೆ ಎಂದು ರಾಜ್ಯ ಅಪರಾಧ ವಿಭಾಗದ ಎಡಿಜಿಪಿ ಪಿ. ಹರಿಶೇಖರನ್ ತಿಳಿಸಿದರು. ನಗರದ ಛತ್ರಪತಿ ಶಿವಾಜಿ ವೃತ್ತದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ಕಚೇರಿ ಎದುರು ಗುರುವಾರ (ಜ.16) ನಡೆದ ದರೋಡೆಯ ಘಟನಾ ಸ್ಥಳವನ್ನು ಇಂದು ಪರಿಶೀಲಿಸಿದ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ನಮ್ಮ ಅಪರಾಧ …

Read More »

ದೆಹಲಿ ಜನತೆಗೆ ಬಿಜೆಪಿಯಿಂದ ಭರವಸೆ: ಮಹಿಳೆಯರಿಗೆ ಮಾಸಿಕ 2,500 ರೂ, ಗರ್ಭಿಣಿಯರಿಗೆ 21,000 ರೂ, 500 ರೂ. ಎಲ್ ಪಿ ಜಿ ಸಬ್ಸಿಡಿ

ನವದೆಹಲಿ : ದೆಹಲಿಯಲ್ಲಿ ಆಡಳಿತಾರೂಢ ಎಎಪಿಯ ಚುನಾವಣಾ ಪೂರ್ವ ಭರವಸೆಗಳಿಗೆ ಸರಿಹೊಂದುವ ಪ್ರಯತ್ನದಲ್ಲಿ, ಬಿಜೆಪಿ ಗರ್ಭಿಣಿಯರಿಗೆ 21,000 ರೂ., ಮಹಿಳಾ ಮತದಾರರಿಗೆ ತಿಂಗಳಿಗೆ 2,500 ರೂ., ಎಲ್ಪಿಜಿ ಸಿಲಿಂಡರ್ಗಳಿಗೆ 500 ರೂಪಾಯಿ ನೀಡುವುದಾಗಿ ಘೋಷಿಸಿದೆ. ಫೆಬ್ರವರಿ 5ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷದ ‘ಸಂಕಲ್ಪ ಪತ್ರ’ವನ್ನು ಬಿಡುಗಡೆ ಮಾಡಿದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಆಯುಷ್ಮಾನ್ ಭಾರತ್ ಅಡಿಯಲ್ಲಿ 5 ಲಕ್ಷ ರೂ.ಗಳ ಹೆಚ್ಚುವರಿ ರಕ್ಷಣೆಯನ್ನ ಘೋಷಿಸಿದರು. ಬಿಜೆಪಿ …

Read More »

ಬಿಪಿಎಲ್ ಕುಟುಂಬಗಳಿಗೆ ಸರ್ಕಾರ ಕೊಡುಗೆ: ಸಿಟಿ ಸ್ಕ್ಯಾನ್, ಎಂ ಆರ್ ಐ ಸ್ಕ್ಯಾನ್ ಉಚಿತ

ಬೆಂಗಳೂರು: ಬಿಪಿಎಲ್ ಕುಟುಂಬಗಳು ಇನ್ಮುಂದೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಮತ್ತು ಎಂಆರ್​ಐ ಸ್ಕ್ಯಾನಿಂಗ್​ ಸೇವೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಬಡವರು ಈ ಸೇವೆಗೆ ದುಬಾರಿ ವೆಚ್ಚ ಭರಿಸಬೇಕಿತ್ತು. ಹೀಗಾಗಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಒದಗಿಸಲಾಗುತ್ತಿರುವ ಸಿಟಿ ಮತ್ತು ಎಂಆರ್​ಐ ಸ್ಕ್ಯಾನ್​ಗಳನ್ನು ಉಚಿತವಾಗಿಸಲು ನಿರ್ಣಯಿಸಲಾಗಿದೆ. ರೋಗಿಗಳು ಅನಗತ್ಯವಾಗಿ ಸ್ಕ್ಯಾನ್​ಗೆ ಒಳಪಡುವುದನ್ನು ತಪ್ಪಿಸಲು, ಯೋಜನೆ ನಿಜವಾದ …

Read More »

ದೋಷಯುಕ್ತ ರಸ್ತೆ ನಿರ್ಮಾಣವನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸಬೇಕು: ಕೇಂದ್ರ ಸಚಿವ ನಿತಿನ್ ಗಡ್ಕರಿ

ನವದೆಹಲಿ: ರಸ್ತೆ ನಿರ್ಮಾಣವನ್ನು ದೋಷಯುಕ್ತವಾಗಿ ಮಾಡಿದರೆ ಅದನ್ನು ಜಾಮೀನುರಹಿತ ಅಪರಾಧ ಎಂದು ಪರಿಗಣಿಸಬೇಕು. ಅಲ್ಲದೆ ಆ ರಸ್ತೆಯಲ್ಲಾಗುವ ಅಪರಾಧಗಳಿಗೆ ರಸ್ತೆ ನಿರ್ಮಿಸಿದ ಗುತ್ತಿಗೆದಾರರು ಹಾಗೂ ಎಂಜಿನಿಯರ್‌ಗಳೇ ಜವಾಬ್ದಾರಿ ಎಂದು ಪರಿಗಣಿಸಿ ಅವರಿಗೆ ಶಿಕ್ಷೆ ನೀಡಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ರಸ್ತೆ ಅಪಘಾತಗಳಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆ. 2030ರ ವೇಳೆಗೆ ಈ ಸಾವು-ನೋವುಗಳನ್ನು ಅರ್ಧದಷ್ಟು ಕಡಿಮೆಗೊಳಿಸುವ ಗುರಿಯನ್ನು …

Read More »

ಚೀನಾ: ಸತತ ಮೂರನೇ ವರ್ಷವೂ ಜನಸಂಖ್ಯೆ ಕುಸಿತ; ಆರ್ಥಿಕತೆಗೆ ಸವಾಲು

ಹಾಂಗ್‌ಕಾಂಗ್: ಚೀನಾದಲ್ಲಿ ಸತತ ಮೂರನೇ ವರ್ಷವೂ ಜನಸಂಖ್ಯೆ ಕುಸಿತ ಮುಂದುವರಿದಿದೆ. ಮರಣ ಪ್ರಮಾಣವು ಜನನ ಪ್ರಮಾಣಕ್ಕಿಂತ ತುಸು ಏರಿಕೆಯಾಗಿದ್ದು, ಈ ಅಂತರವು ಮುಂಬರುವ ವರ್ಷಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ರಾಷ್ಟ್ರೀಯ ಅಂಕಿ-ಅಂಶಗಳ ಮಂಡಳಿಯ (ಎನ್‌ಬಿಎಸ್‌) ಮಾಹಿತಿ ಪ್ರಕಾರ, 2023ರಲ್ಲಿ 140.9 ಕೋಟಿಯಷ್ಟಿದ್ದ ಜನಸಂಖ್ಯೆಯಲ್ಲಿ 13 ಲಕ್ಷದಷ್ಟು ಇಳಿಕೆಯಾಗಿದೆ. 2024ರ ವೇಳೆಗೆ ಚೀನಾ ಜನಸಂಖ್ಯೆ 140.8 ಕೋಟಿ ಆಸುಪಾಸಿನಲ್ಲಿದೆ. ಜನಸಂಖ್ಯೆಯು 2021 ಹಾಗೂ 2022ರ ಅವಧಿಯಲ್ಲಿ 20.80 …

Read More »

ಬೀದರ್ ಶೂಟೌಟ್ ಪ್ರಕರಣ: ಗಾಯಾಳುವಿನ ಆರೋಗ್ಯ ವಿಚಾರಿಸಿದ ಸಚಿವ ಈಶ್ವರ್ ಖಂಡ್ರೆ

ಬೀದರ್ : ಬೀದರ್ ಹಾಡು ಹಗಲೇ ಶೂಟೌಟ್ ಮಾಡಿ 83 ಲಕ್ಷ ದರೋಡೆ ಕೇಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಘಟನೆಯಲ್ಲಿ ಇಬ್ಬರೂ ಸಿಬ್ಬಂದಿಗಳು ಗಾಯಗೊಂಡಿದ್ದು ಇದರಲ್ಲಿ ನಿನ್ನೆ ಗಿರಿ ವೆಂಕಟೇಶ್ ಎನ್ನುವ ಸಿಬ್ಬಂದಿ ನಿನ್ನೆ ಸಾವನಪ್ಪಿದ್ದಾನೆ. ಇನ್ನೋರ್ವ ಗಾಯಗೊಂಡಂತಹ ಸಿಬ್ಬಂದಿ ಶಿವಕುಮಾರ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ನಿನ್ನೆ ರಾತ್ರಿ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ಶಿವಕುಮಾರ್ ಆರೋಗ್ಯ ವಿಚಾರಿಸಿದರು. ಬೀದರ್ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಹೈದ್ರಾಬಾದ್ …

Read More »

ಬೆಂಗಳೂರಿನಲ್ಲಿ ಫೆ.19ಕ್ಕೆ ಒಳ ಮೀಸಲಾತಿ ಪ್ರತಿಭಟನಾ ಸಮಾವೇಶ

ಬೆಂಗಳೂರು: ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿರುವ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ, ಫೆ.19ಕ್ಕೆ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ, ‘ವೈಜ್ಞಾನಿಕ ದತ್ತಾಂಶ ಹೊಂದಿರುವ ಆಯೋಗದ ವರದಿಯನ್ನು ಸರ್ಕಾರವು ಅಪ್ರಸ್ತುತಗೊಳಿಸದೆ, ಸಚಿವ ಸಂಪುಟ ಅಥವಾ ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಬೇಕು. ಯಾವುದೇ …

Read More »

ಪಿಎಂ ಆವಾಸ್ ಯೋಜನೆಯಡಿ ಸ್ಥಗಿತಗೊಳಿಸಲಾಗಿದ್ದ 61,894 ಮನೆಗಳನ್ನು ಪುನರ್ ಪ್ರಾರಂಭಿಸಲು ಸಂಪುಟ ನಿರ್ಧಾರ: ಸಚಿವ ಎಚ್.ಕೆ.ಪಾಟೀಲ್

ಬೆಂಗಳೂರು : ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ)ಯಡಿ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಅನುಷ್ಠಾನಗೊಳಿಸಲು ಅನುಮೋದನೆಯಾಗಿರುವ 1,08,253 ಮನೆಗಳ ಪೈಕಿ ಪ್ರಾರಂಭಿಸದೆ ಸ್ಥಗಿತಗೊಳಿಸಲಾಗಿದ್ದ 61,894 ಮನೆಗಳನ್ನು ಪುನರ್ ಪ್ರಾರಂಭಿಸಲು ಮತ್ತು ಇದಕ್ಕೆ ಅಗತ್ಯವಿರುವ 2,643.67 ಕೋಟಿ ರೂ.ಗಳನ್ನು ಭರಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ …

Read More »

ರಾಯಚೂರು ವಿಮಾನ ನಿಲ್ದಾಣದ ಭೂ ಸ್ವಾಧೀನ ಪ್ರಕ್ರಿಯೆ 15 ದಿನಗಳಲ್ಲಿ ಪ್ರಾರಂಭಿಸಿ: ಸಚಿವ ಭೋಸರಾಜು

ರಾಯಚೂರು: ರಾಯಚೂರು ವಿಮಾನ ನಿಲ್ದಾಣಕ್ಕೆ ಕಾಯ್ದಿರಿಸಿದ 25 ಎಕರೆ ಭೂಮಿ ಸ್ವಾಧೀನ ಪಡೆಸಿಕೊಳ್ಳಲು 20 ಕೋಟಿ ಹಣ ಮಂಜೂರು ಮಾಡಲಾಗಿದೆ. ಭೂ ಸ್ವಾಧೀನ ಪ್ರಕ್ರಿಯೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು. ಇನ್ನು 15 ದಿನಗಳೊಳಗಾಗಿ ಸಂಪೂರ್ಣ ಭೂ-ಸ್ವಾಧೀನಮಾಡಿಕೊಂದು ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪ್ರಾರಂಭಿಸಬೇಕೆಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ ಪಾಟೀಲ್ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ …

Read More »

ಗವಿಸಿದ್ದೇಶ್ವರ ಮಠದ ಜಾತ್ರೆಯ ಮಹಾರಥೋತ್ಸವ: ಎರಡನೇ ದಿನವೂ ಭರಪೂರ ಜನ

ಕೊಪ್ಪಳ: ಇಲ್ಲಿನ ಗವಿಸಿದ್ಧೇಶ್ವರ ಮಠದ ಜಾತ್ರೆಯ ಮಹಾರಥೋತ್ಸವ ನಡೆದು ಒಂದು ದಿನವಾದರೂ ಗುರುವಾರ ದಿನಪೂರ್ತಿ ಎಲ್ಲಿ ನೋಡಿದರೂ ಜನವೋ ಜನ. ಬೆಳಗಿನ ಜಾವದಿಂದಲೇ ಜನ ಪಾದಯಾತ್ರೆ ಹಾಗೂ ವಾಹನಗಳ ಮೂಲಕ ಬಂದು ಗವಿಮಠದ ದರ್ಶನ ಪಡೆದರು. ಸಂಜೆ ಹೊತ್ತು ಏರುತ್ತಿದ್ದಂತೆ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತಲೇ ಇತ್ತು. ದಿನಪೂರ್ತಿ ನಡೆದ ಕ್ರೀಡಾಕೂಟಗಳು, ವಿವಿಧ ವಸ್ತುಪ್ರದರ್ಶನಗಳು ಹಾಗೂ ಆಟಿಕೆಗಳು ಜನರ ಗಮನ ಸೆಳೆದವು. ಅನ್ವೇಷಣೆ: ಮಠದ ಶಾಂತವನದಲ್ಲಿ ನಡೆದ ಅನ್ವೇಷಣೆ ಹಾಗೂ ಆಧ್ಯಾತ್ಮಿಕ …

Read More »