Breaking News

Breaking News

ಯಡಿಯೂರಪ್ಪ ಕುಟುಂಬಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟಾಂಗ್

ಹುಬ್ಬಳ್ಳಿ: ಶಿಗ್ಗಾವಿ ಟಿಕೆಟ್ ಬಿಜೆಪಿಯಿಂದ ಬೊಮ್ಮಾಯಿ ಮಗನಿಗೆ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಬಸವರಾಜ ಬೊಮ್ಮಾಯಿ ಅವರನ್ನು ಯಾಕೆ ಟಿಕೆಟ್ ವಿಚಾರದಲ್ಲಿ ಎಳೆಯುತ್ತೀರಿ? ಅವರದೇನು ತಪ್ಪಿಲ್ಲ. ಕುಟುಂಬ ರಾಜಕಾರಣ ಕರ್ನಾಟಕದಲ್ಲಿ ನಂಬರ್ 1 ಇದ್ದವರಿಂದ ಪಾಲನೆ ಆಗಬೇಕು ಅಂತ ಪರೋಕ್ಷವಾಗಿ ಯಡಿಯೂರಪ್ಪ ಕುಟುಂಬಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟಾಂಗ್ ಕೊಟ್ಟರು. ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು,ರಾಜ್ಯದಲ್ಲಿ ಕುಟುಂಬ ರಾಜಕಾರಣ ಮುಂದುವರೆದುಕೊಂಡು ಹೋಗುತ್ತಿದೆ. ಈ ವಿಚಾರದಲ್ಲಿ ಬೊಮ್ಮಾಯಿ ಅವರನ್ನು ಬಲಿಪಶು …

Read More »

ಮನೆ ಕುಸಿತ : ಪೊಲೀಸ್ ಕಮಿಷನ‌ರ್ ಎನ್. ಶಶಿಕುಮಾರ್ ಭೇಟಿ‌

ಹುಬ್ಬಳ್ಳಿ: ಅವಳಿ ನಗರದಲ್ಲಿ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದ ಗವಿ ಓಣಿಯಲ್ಲಿ ಮನೆ ಕುಸಿದು ಬಿದ್ದ ಪರಿಣಾಮ ಮನೆಯ ಮಾಲೀಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ಸಾಯಂಕಾಲ ನಡೆದಿದ್ದು, ಮನೆ ಬಿದ್ದ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಅವಳಿ ನಗರದ ಪೊಲೀಸ್ ಕಮಿಷನ‌ರ್ ಎನ್. ಶಶಿಕುಮಾರ್ ಹಾಗೂ ಡಿಸಿಪಿ ನಂದಗಾವಿ ಆಗಮಿಸಿ ಮಳೆಯಿಂದ ಬಿದ್ದ ಮನೆಯನ್ನು ವೀಕ್ಷಣೆ ಮಾಡಿ, ಸ್ಥಳೀಯರ ಜೊತೆ ಸಮಾಲೋಚನೆ ಕೂಡಾ ನಡೆಸಿದರು. ಉತ್ತರ …

Read More »

ಗಾಜಾದ ಐತಿಹಾಸಿಕ ನಿರಾಶ್ರಿತರ ಶಿಬಿರಗಳ ಮೇಲೆ ಇಸ್ರೇಲ್ ದಾಳಿ: 33 ಸಾವು, 85 ಮಂದಿಗೆ ಗಾಯ

ಗಾಜಾ: ಗಾಜಾದ ಎಂಟು ಐತಿಹಾಸಿಕ ನಿರಾಶ್ರಿತರ ಶಿಬಿರಗಳಲ್ಲಿ ಅತಿದೊಡ್ಡದಾದ ಜಬಾಲಿಯಾದಲ್ಲಿ ಹಲವಾರು ಮನೆಗಳ ಮೇಲೆ ಇಸ್ರೇಲ್ ದಾಳಿ ನಡೆಸಿದ ಪರಿಣಾಮ ಕನಿಷ್ಠ 33 ಜನರು ಸಾವನ್ನಪ್ಪಿದ್ದಾರೆ ಮತ್ತು 85 ಜನರು ಗಾಯಗೊಂಡಿದ್ದಾರೆ. ಹಮಾಸ್ ಆಡಳಿತದ ಗಾಝಾ ಸರ್ಕಾರಿ ಮಾಧ್ಯಮ ಕಚೇರಿಯ ಪ್ರಕಾರ, ಕೆಲವು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗಿದ್ದು, ದಾಳಿಯಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಬಹುದು. ಸಾವಿನ ಸಂಖ್ಯೆಯಲ್ಲಿ ಮಕ್ಕಳೂ ಸೇರಿದ್ದಾರೆ ದಾಳಿಯ ಬಗ್ಗೆ ಇಸ್ರೇಲ್ ಸೇನೆ ಇನ್ನೂ …

Read More »

ಜಾತಿ ಜನಗಣತಿ ಕುರಿತು ಸ್ಪಷ್ಟನೆ ನೀಡಿದ ಬೆಲ್ಲದ

ಧಾರವಾಡ: ಜಾತಿ ಜನಗಣತಿ ಹೇಳುತ್ತಿರುವುದು ಅದು ಜಾತಿ ಜನಗಣತಿ ಅಲ್ಲ. ಅದು ಕಾಂತರಾಜು ಸಮೀಕ್ಷೆ. ಚುನಾವಣೆ ಪೂರ್ವದಲ್ಲಿ ಸಾಕಷ್ಟು ಮಾಧ್ಯಮಗಳು ಸಮೀಕ್ಷೆ ಮಾಡಿರುತ್ತವೆ. ಅದಾದ ಬಳಿಕ ಯಾವ ರೀತಿ ಫಲಿತಾಂಶ ಬರುತ್ತದೆ ಎಂಬುದು ಎಲ್ಲರಿಗೂ ಗೊತ್ತೆ ಇದೆ. ಅದೇ ರೀತಿ ಕಾಂತರಾಜ ಅವರು ಸಮೀಕ್ಷೆ ಮಾಡಿದ್ದಾರೆ. ಅದೊಂದು ವರದಿ ಅಲ್ಲ. ಸಮೀಕ್ಷೆ ಅಷ್ಟೇ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದ್ದಾರೆ. ಧಾರವಾಡದಲ್ಲಿ ಮಾತನಾಡಿ ಅವರು, ಇವತ್ತು …

Read More »

ಉಪ ಚುನಾವಣೆ ಎಲ್ಲಾ ಕ್ಷೇತ್ರಗಳಿಗೂ ಆದಷ್ಟು ಬೇಗ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು: ವಿಜಯೇಂದ್ರ

ಹುಬ್ಬಳ್ಳಿ: ಉಪ ಚುನಾವಣೆ ಎಲ್ಲಾ ಕ್ಷೇತ್ರಗಳಿಗೂ ಆದಷ್ಟು ಬೇಗ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು. ನಾಡಿದ್ದು, ನಾನು ಕೂಡ ದೆಹಲಿಗೆ ತೆರಳಿಲಿದ್ದೇನೆ, ವರಿಷ್ಠರೊಂದಿಗೆ ಚರ್ಚಿಸಿ ಎರಡೂರು ದಿನಗಳಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಯಾರಿಗೆ ಟಿಕೆಟ್ ನೀಡಬೇಕೆನ್ನುವುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಶಿಗ್ಗಾವಿಯಲ್ಲಿ ಎಷ್ಟೇ ಆಕಾಂಕ್ಷಿಗಳಿದ್ದರೂ ಬಸವರಾಜ ಬೊಮ್ಮಾಯಿ ಮನಸ್ಸಿನಲ್ಲಿ ಏನಿದೆ ಮುಖ್ಯ. ಅಲ್ಲಿ ಯಾರಿಗೆ ಟಿಕೆಟ್ …

Read More »

ಚೆನ್ನಪಟ್ಟಣ ಉಪ ಚುನಾವಣೆ: ಟಿಕೆಟ್ ಕುರಿತು ಕೊಡಬೇಕು ಎಂಬುದನ್ನು ಇನ್ನೆರಡು ದಿನಗಳಲ್ಲಿ ತೀರ್ಮಾನ :ವಿಜಯೇಂದ್ರ

ಹುಬ್ಬಳ್ಳಿ: ಚೆನ್ನಪಟ್ಟಣ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಟಿಕೆಟ್ ಕೊಡುವ ವಿಚಾರ ಈಗಾಗಲೇ ಕುಮಾರಸ್ವಾಮಿ ಅವರು ಕೂಡಾ ಕೇಂದ್ರದ ವರಿಷ್ಠರ ವಿಚಾರಕ್ಕೇ ಬಿಟ್ಟ ವಿಚಾರ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ನಾನು ಕೂಡಾ ನಮ್ಮ ರಾಷ್ಟ್ರೀಯ ಅಧ್ಯಕ್ಷರ ಜೊತೆ ಚರ್ಚೆಯನ್ನು ಮಾಡುತ್ತೇನೆ. ಪಕ್ಷದ ವರಿಷ್ಠರು ಎಲ್ಲರೂ ಸೇರಿ ಚರ್ಚೆಯನ್ನು ಮಾಡಿ ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ಇನ್ನೆರಡು ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.

Read More »

ಗ್ರಾಮ ಪಂಚಾಯತ್ ನೌಕರರ ಸಭೆ

ಧಾರವಾಡ: ಧಾರವಾಡ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯತ್‌ ನೌಕರರ ಸಮಾಲೋಚನೆ ಸಭೆ ರಾಜ್ಯಾಧ್ಯಕ್ಷ ಡಾ. ದೇವಿಪ್ರಸಾದ್ ಬೊಲ್ಮರ ಅಧ್ಯಕ್ಷತೆಯಲ್ಲಿ ಅಕ್ಟೋಬ‌ರ್ 20 ರಂದು ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಸಭೆಗೆ ಜಿಲ್ಲೆ ಎಲ್ಲಾ ಗ್ರಾಮ ಪಂಚಾಯತ್ ನೌಕರರು ಭಾಗವಹಿಸುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More »

ಮಳೆಯಿಂದ ಮನೆ ಕುಸಿತ: ಅತ್ತೆ, ಸೊಸೆ ತೀವ್ರವಾಗಿ ಗಾಯ

ನವಲಗುಂದ: ಮಳೆಯಿಂದ ಮನೆಯೊಂದು ಕುಸಿದು ಅತ್ತೆ, ಸೊಸೆ ತೀವ್ರವಾಗಿ ಗಾಯಗೊಂಡ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹನಸಿ ಗ್ರಾಮದಲ್ಲಿ ನಡೆದಿದೆ. ಹನಸಿ ಗ್ರಾಮದ ಬಾಪುಗೌಡ ಬಸನಗೌಡ ಪಾಟೀಲ ಎಂಬುವರ ಮನೆ ಇದಾಗಿದ್ದು, ಮನೆ ಬೀಳುತ್ತಿದ್ದಂತೆಯೇ ಮನೆಯ ಅಡಿಯಲ್ಲಿ ಸಿಲುಕಿದ ಅತ್ತೆ ಮಂಗಳಾ ಪಾಟೀಲ (55) ಹಾಗೂ ಸೊಸೆ ಸುವರ್ಣ ಪಾಟೀಲ (37) ಅವರನ್ನು ಗ್ರಾಮಸ್ಥರೇ ರಕ್ಷಣೆ ಮಾಡಿ, ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಇನ್ನು ಮಂಗಳಾ ಅವರ ಎಡಗಾಲಿಗೆ ತೀವ್ರ …

Read More »

ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ರಚನೆ ಮಾಡುವಾಗ ವಿಷಯವಾರು ಶಿಕ್ಷಕರ ಅಭಿಪ್ರಾಯಗಳಿಗೆ ಸಂಪೂರ್ಣ ಅವಕಾಶ ನೀಡಬೇಕು : ಬಸವರಾಜ ಗುರಿಕಾರ

ಧಾರವಾಡ: ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ರಚನೆ ಮಾಡುವಾಗ ವಿಷಯವಾರು ಶಿಕ್ಷಕರ ಅಭಿಪ್ರಾಯಗಳಿಗೆ ಸಂಪೂರ್ಣ ಅವಕಾಶ ನೀಡಬೇಕೆಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪರವರಿಗೆ ಅಖಿಲ ಭಾರತ ಶಿಕ್ಷಕರ ಪೆಡರೇಷನ್‌ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಮನವಿ ಮಾಡಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಏಕರೂಪವಾಗಿರುವುದಿಲ್ಲ, ಪ್ರತಿ ವಿದ್ಯಾರ್ಥಿಗೂ ಭಿನ್ನವಾಗಿರುತ್ತದೆ. ಕಲಿಕಾ ಸಾಮರ್ಥ್ಯ ಹೆಚ್ಚು ಇರುವ ವಿದ್ಯಾರ್ಥಿಗಳು, ಸಾಧಾರಣ ಕಲಿಕಾ ಸಾಮರ್ಥ್ಯ ಇರುವ ವಿದ್ಯಾರ್ಥಿಗಳು …

Read More »

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ ಗುಪ್ತಾ ನೇಮಕಗೊಳಿಸಿ ಸರ್ಕಾರ ಆದೇಶ

ಕೊಪ್ಪಳ: ಸಾಕಷ್ಟು ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದ್ದ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಉದ್ಯಮಿ ಭಾಗ್ಯನಗರದ ಶ್ರೀನಿವಾಸ ಗುಪ್ತಾ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕೂದಲೋದ್ಯಮಿಯಾಗಿ ಹೆಸರು ಮಾಡಿರುವ ಗುಪ್ತಾ ಅವರ ಹೆಸರು ಈ ಸ್ಥಾನಕ್ಕೆ ಹಿಂದೆಯೇ ಕೇಳಿಬಂದಿದ್ದರೂ ಈಗ ಅಧಿಕೃತವಾಗಿ ಘೋಷಣೆಯಾಗಿದೆ. ಪರಿಶಿಷ್ಟ ಪಂಗಡದ ಮಾರ್ಕಂಡೇಶ್ವರ ಕಲ್ಲನವರ, ಲಿಂಗಾಯತ ಸಮುದಾಯದ ಚನ್ನಬಸಯ್ಯ ಚನ್ನವಡಿಯರ ಮಠ, ಮುಸ್ಲಿಂ ಸಮಾಜದ ಅಬ್ದುಲ್‌ ಲತೀಫ್‌ ಖತೀಬ್‌ ಮತ್ತು ಪರಿಶಿಷ್ಟ …

Read More »