Breaking News

Breaking News

ಚಿಕ್ಕಮಗಳೂರಿನಲ್ಲಿ ಭೀಕರ ಸರಣಿ ಅಪಘಾತ:ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ

ಚಿಕ್ಕಮಗಳೂರು ತಾಲೂಕಿನ ಲಕ್ಯಾ ಕ್ರಾಸ್ ಬಳಿ ಸೋಮವಾರ ನಡೆದ ಭೀಕರ ಸರಣಿ ಅಪಘಾತದಲ್ಲಿ ಪಿಕಪ್ ವಾಹನ ಚಾಲಕ ಪ್ರಸಾದ್ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಕ್ಕುಮ್ಮನಹಳ್ಳಿ ನಿವಾಸಿಯಾಗಿದ್ದ ಪ್ರಸಾದ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ರೀಪ್ ಪೀಸ್‌ಗಳನ್ನು ಸಾಗಿಸುತ್ತಿದ್ದ ಲಾರಿಯ ಬ್ರೇಕ್ ಏಕಾಏಕಿ ಫೇಲ್ ಆದ ಪರಿಣಾಮ ನಿಯಂತ್ರಣ ತಪ್ಪಿ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಪಿಕಪ್ ಓಮಿನಿ ಕಾರಿಗೆ, ಓಮಿನಿ ಗ್ಯಾಸ್ ಲಾರಿ ಹಾಗೂ …

Read More »

ಐಷಾರಾಮಿ ಕಾರುಗಳ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ವಂಚನೆ: ನಾಲ್ವರು ಆರೋಪಿಗಳ ಬಂಧನ!

ಬೆಂಗಳೂರು ಆಡುಗೋಡಿ ಠಾಣೆ ಪೊಲೀಸರು ಐಷಾರಾಮಿ ಕಾರುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ವಂಚನೆ ಮಾಡುತ್ತಿದ್ದ ಜಾಲವನ್ನು ಭೇದಿಸಿ, ಪ್ರಭಾಕರ್, ಪ್ರಶಾಂತ್, ವೇಣುಗೌಡ ಹಾಗೂ ಭಾಗೇಶ್ ಎಂಬ ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ₹1.74 ಕೋಟಿ ಮೌಲ್ಯದ 7 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಕಾರು ಬ್ರೋಕರ್‌ಗಳಾಗಿ ಪರಿಚಯಿಸಿಕೊಂಡು, ಅಡಮಾನವಿಟ್ಟ ಕಾರುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಅಥವಾ ಆರ್‌ಸಿ ಕಾರ್ಡ್‌ನಲ್ಲಿ ಹೆಸರು ಬದಲಾಯಿಸಿ, ಅದೇ ಕಾರುಗಳನ್ನು ಮತ್ತೆ ಬೇರೆಡೆ ಹೆಚ್ಚಿನ …

Read More »

ಬೆಂಗಳೂರು ಲೀಸ್‌ ಮನೆಗಳ ಬ್ರಹ್ಮಾಂಡ ರಹಸ್ಯ ಬಯಲು: 6 ಬಾರಿ ಜೈಲಿಗೆ ಹೋದ ವಂಚಕನ ಕೈಗೆ ಸಿಕ್ಕೀರಿ ಜೋಕೆ!

ಬೆಂಗಳೂರುದಲ್ಲಿ ಲೀಸ್ ಮನೆ ಹುಡುಕುವವರನ್ನೇ ಗುರಿಯಾಗಿಸಿಕೊಂಡ ಸರಣಿ ವಂಚಕನೊಬ್ಬ, 100ಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈಗಾಗಲೇ 6 ಬಾರಿ ಬಂಧನಕ್ಕೊಳಗಾಗಿದ್ದರೂ ಜಾಮೀನಿನ ಮೇಲೆ ಹೊರಬಂದು ಮತ್ತೆ ಇದೇ ಕೃತ್ಯ ಮುಂದುವರಿಸಿದ್ದಾನೆ ಎನ್ನಲಾಗಿದೆ. ಆರೋಪಿ ಮೊದಲು ಬಾಡಿಗೆಗೆ ಮನೆ ಪಡೆದು, ಬಳಿಕ ಅದೇ ಮನೆಯನ್ನು NoBroker, OLX ಸೇರಿದಂತೆ ವಿವಿಧ ಆನ್‌ಲೈನ್ ವೇದಿಕೆಗಳಲ್ಲಿ ಲೀಸ್‌ಗೆ ಲಭ್ಯವಿದೆ ಎಂದು ಜಾಹೀರಾತು ನೀಡುತ್ತಿದ್ದ. ನಂತರ ಅಮಾಯಕರಿಂದ …

Read More »

ವಿದೇಶಿ ಸೀರೆ, ಆಭರಣದ ಆಸೆಗೆ 1.75 ಕೋಟಿ ರೂ. ಕಳೆದುಕೊಂಡ ಮಹಿಳೆ!

ಬೆಂಗಳೂರು ಯಶವಂತಪುರದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯ ಮಾತು ನಂಬಿ, ಲಂಡನ್‌ನಿಂದ ದುಬಾರಿ ಸೀರೆ ಹಾಗೂ ವಜ್ರಾಭರಣಗಳ ಗಿಫ್ಟ್ ಬರುತ್ತದೆ ಎಂಬ ಆಸೆಗೆ ಬಿದ್ದು ₹1.75 ಕೋಟಿ ಸೈಬರ್ ವಂಚನೆಗೆ ಒಳಗಾಗಿದ್ದಾರೆ. ಮೊದಲು ₹40 ಲಕ್ಷ ನಗದನ್ನು ಹೋಟೆಲ್‌ನಲ್ಲಿ ಅಪರಿಚಿತ ವ್ಯಕ್ತಿಗೆ ನೀಡುವಂತೆ ಖದೀಮ ಸೂಚಿಸಿದ್ದ. ಬಳಿಕ ಕಸ್ಟಮ್ಸ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ, ಜಿಎಸ್‌ಟಿ, ಆಮದು ಸುಂಕ ಹಾಗೂ ದಂಡದ ಹೆಸರಿನಲ್ಲಿ ವಿವಿಧ ಖಾತೆಗಳಿಗೆ ಹಂತ ಹಂತವಾಗಿ …

Read More »

ಬಾಗಲಕೋಟೆಯಲ್ಲಿ ಬೆಚ್ಚಿಬೀಳಿಸಿದ ಕೃತ್ಯ: ಪತ್ನಿಯನ್ನು ನೇಣುಹಾಕಿ ವಿಡಿಯೋ ಮಾಡಿದ ಪಾಪಿ ಪತಿ

ಬಾಗಲಕೋಟೆ ಜಿಲ್ಲೆಯ ಗಲಗಲಿ ಗ್ರಾಮದಲ್ಲಿ 23 ವರ್ಷದ ಭಾಗ್ಯಶ್ರೀ ಉರ್ಫ್ ಪ್ರಗತಿ ಜಗಳೂರು ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣದಲ್ಲಿ, ಪತಿ ಪ್ರವೀಣ್ ಜಗಳೂರು ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ದಂಪತಿಯ ನಡುವೆ ಕಳೆದ ಕೆಲವು ದಿನಗಳಿಂದ ಕೌಟುಂಬಿಕ ಕಲಹ ನಡೆಯುತ್ತಿದ್ದು, ಘಟನೆ ನಡೆದ ದಿನವೂ ತೀವ್ರ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಮಹಿಳೆಯ ಸಾವಿನ ಕೆಲ ಕ್ಷಣಗಳನ್ನು ಆರೋಪಿ ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿರುವ …

Read More »

ಕಾಮಗಾರಿ ಹೆಸರಿನಲ್ಲಿ ಭಾರೀ ಲೂಟಿ – ಪ್ರಲ್ಹಾದ್ ಜೋಷಿ ಹಗರಣ ತೆರೆದಿಟ್ಟ ಯುವತಿ ವಿಡಿಯೋ ವೈರಲ್!

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳು ಹಾಗೂ ಕಾರ್ಯಕ್ಷಮತೆಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದ ಯುವತಿಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ಇದು ಜಾಗರೂಕ ಮತ್ತು ವಿದ್ಯಾವಂತ ನಾಗರಿಕರ ಲಕ್ಷಣ” ಎಂದು ಹಲವರು ವಿಡಿಯೋವನ್ನು ಮೆಚ್ಚಿದ್ದಾರೆ. ಜನಪ್ರತಿನಿಧಿಗಳ ಕೆಲಸವನ್ನು ಪ್ರಶ್ನಿಸುವುದು ಹಾಗೂ ಮಾಹಿತಿ ಪರಿಶೀಲಿಸುವುದು ಪ್ರಜೆಗಳ ಹಕ್ಕು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ರಸ್ತೆ ಮತ್ತು ಸ್ಥಳೀಯ ಕಾಮಗಾರಿಗಳು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಶಾಸಕರ …

Read More »

ನಿನ್ನ ರೇಟ್‌ ಎಷ್ಟು? ಕ್ಯಾಬ್‌ಗೆ ಕಾಯುತ್ತಿದ್ದ ಯುವತಿ ಬಳಿ ವ್ಯಕ್ತಿಯ ಅಸಭ್ಯ ವರ್ತನೆ!

ಬೆಂಗಳೂರು ನಗರದ ರಾಮಮೂರ್ತಿ ನಗರದಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಮಹಿಳೆಗೆ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆಯ ದೂರಿನ ಪ್ರಕಾರ, ಆರೋಪಿ “ನಿನ್ನ ರೇಟ್‌ ಎಷ್ಟು?” ಎಂದು ಅಸಭ್ಯವಾಗಿ ಪ್ರಶ್ನಿಸಿದ್ದಾನೆ. ಘಟನೆಯನ್ನು ಮಹಿಳೆ ತನ್ನ ಮೊಬೈಲ್‌ನಲ್ಲಿ ವಿಡಿಯೋವಾಗಿ ದಾಖಲಿಸಿಕೊಂಡಿದ್ದಾರೆ. ಪೊಲೀಸರಿಗೆ ದೂರು ನೀಡುವುದಾಗಿ ಹೇಳುತ್ತಿದ್ದಂತೆ ಆರೋಪಿ ನಿಂದಿಸಿ, ಬಳಿಕ ಸ್ಥಳದಿಂದ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಮಹಿಳೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, …

Read More »

ಗ್ಯಾರೇಜ್‍ನಲ್ಲಿ ಬೆಂಕಿ ಅವಘಡ: 25ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಭಸ್ಮ

ಬೆಂಗಳೂರು: ನಗರದ ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ಕಾರು ಗ್ಯಾರೇಜ್‌ನಲ್ಲಿ ಸೋಮವಾರ ಮುಂಜಾನೆ ಭೀಕರ ಅಗ್ನಿ ಅವಘಡ ಸಂಭವಿಸಿ, ರೇಂಜ್ ರೋವರ್, ಆಡಿ, ಜಾಗ್ವಾರ್ ಸೇರಿದಂತೆ 25ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಬೆಂಕಿಗೆ ಆಹುತಿಯಾಗಿವೆ. ಮುಂಜಾನೆ 4.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಗ್ಯಾರೇಜ್ ಪಕ್ಕದ ಶೆಡ್‌ನಲ್ಲಿದ್ದ ಎಂಟು ಆಟೋಗಳು ಹಾಗೂ ಸಮೀಪದ ಯುಪಿವಿಸಿ ಕಿಟಕಿ ಫ್ಯಾಕ್ಟರಿಗೂ ಹಾನಿಯಾಗಿದೆ. ಫ್ಯಾಕ್ಟರಿಯ ಯಂತ್ರ ಮತ್ತು ಗ್ರಾಹಕರ ವಸ್ತುಗಳಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಆರು ಅಗ್ನಿಶಾಮಕ …

Read More »

ಅಪ್ರಾಪ್ತ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ಬಂಧನ

ಬಾಗೇಪಲ್ಲಿ: ತಾಲೂಕಿನಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂದಿಸಿ ಆರೋಪಿಯನ್ನು ಬಾಗೇಪಲ್ಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ನಂದೀಶ್​(27) ಎಂಬಾತ ಬಂಧಿತ. ಪಟ್ಟಣದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳು ಬಾಗೇಪಲ್ಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿರುವ ಟನೆ ಶನಿವಾರ ಬೆಳಕಿಗೆ ಬಂದಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ. 17 ವರ್ಷದ ವಿದ್ಯಾರ್ಥಿನಿ ಮೇಲೆ ನಂದೀಶ್​ ನಿರಂತರವಾಗಿ …

Read More »

ಬೆಂಗಳೂರು: ಥಣಿಸಂದ್ರದಲ್ಲಿ ಭೀಕರ ಅಗ್ನಿ ದುರಂತ, ಕೋಟಿ ಕೋಟಿ ಮೌಲ್ಯದ 25ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಸುಟ್ಟು ಭಸ್ಮ!

ಬೆಂಗಳೂರು ಥಣಿಸಂದ್ರದ ಕಾರು ಗ್ಯಾರೇಜ್‌ನಲ್ಲಿ ಸೋಮವಾರ ಮುಂಜಾನೆ ಭೀಕರ ಅಗ್ನಿ ಅವಘಡ ಸಂಭವಿಸಿ, ಜಾಗ್ವಾರ್, ಆಡಿ, ರೇಂಜ್ ರೋವರ್ ಸೇರಿದಂತೆ 25ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಸುಟ್ಟು ಕರಕಲಾಗಿವೆ. ಗ್ಯಾರೇಜ್‌ನಲ್ಲಿದ್ದ ತೈಲ ಹಾಗೂ ದಹನಕಾರಿ ವಸ್ತುಗಳಿಂದ ಬೆಂಕಿ ವೇಗವಾಗಿ ವ್ಯಾಪಿಸಿದ್ದು, ಪಕ್ಕದ ಶೆಡ್‌ನಲ್ಲಿದ್ದ 8 ಆಟೋರಿಕ್ಷಾಗಳು ಹಾಗೂ ಸಮೀಪದ ಫ್ಯಾಕ್ಟರಿಗೂ ಹಾನಿಯಾಗಿದೆ. ಘಟನೆಯಲ್ಲಿ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ. ಐದು ಅಗ್ನಿಶಾಮಕ ವಾಹನಗಳೊಂದಿಗೆ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು, ಯಾವುದೇ ಪ್ರಾಣಹಾನಿ …

Read More »