BigTv News
August 30, 2024
Breaking News
ಕಾಂಬೋಡಿಯಾ : UNESCO ವಿಶ್ವ ಪರಂಪರೆಯ ತಾಣವಾಗಿರುವ ಕಾಂಬೋಡಿಯಾದ ಪುರಾತನ ಅಂಕೋರ್ ವಾಟ್ ದೇವಾಲಯದಲ್ಲಿ ಪ್ರವಾಸಿಗರು ಟೆಂಪಲ್ ರನ್ ಆಟವನ್ನು ಆಡುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪ್ರವಾಸಿಗರ ಹುಚ್ಚಾಟಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ. 2011 ರಲ್ಲಿ ಟೆಂಪಲ್ ರನ್ ನನ್ನು ವಿಶ್ವಕ್ಕೆ ಪರಿಚಯಿಸಲಾಯಿತು, ಅಂತೆಯೇ ಕೆಲವೇ ಕೆಲವು ತಿಂಗಳಲ್ಲಿ ಆ ಗೇಮ್ ಅನ್ನು ಎಲ್ಲರೂ ಆಡಲು ಶುರು ಮಾಡಿದರು, ಆದರೆ ಇದೀಗ ಪ್ರಯಾಣಿಕರು ರೀಲ್ಸ್ ಹುಚ್ಚಿಗಾಗಿ ದೇವಸ್ಥಾನದ …
Read More »
BigTv News
August 30, 2024
Breaking News, ಬೆಂಗಳೂರು
ಬೆಂಗಳೂರು: ಸರ್ ನನ್ನ ಟೈಂ, ನನ್ನ ಗ್ರಹಚಾರ ಸರಿಯಿಲ್ಲ ಅಷ್ಟೇಎಂದು ನಟ ದರ್ಶನ್ ಪಶ್ಚಾತ್ತಾಪದ ಮಾತುಗಳನ್ನು ಆಡಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ವ್ಯಾನ್‌ನಲ್ಲಿ ಬಳ್ಳಾರಿಗೆ ತೆರಳುವ ಐದು ಗಂಟೆಗಳ ಪ್ರಯಾಣದಲ್ಲಿ ತನ್ನ ಸಿನಿಮಾ ಜರ್ನಿ ಬಗ್ಗೆ ಪೊಲೀಸರ ಜೊತೆ ದರ್ಶನ್ ಮಾತನಾಡಿದ್ದಾರೆ. ಈ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣ ನಂತರದ ಬೆಳವಣಿಗೆಯ ಬಗ್ಗೆ ಮಾತನಾಡುವ ವೇಳೆ ದರ್ಶನ್ ಭಾವುಕರಾಗಿದ್ದರು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ರೇಣುಕಾಸ್ವಾಮಿ ಕೊಲೆ …
Read More »
BigTv News
August 30, 2024
Breaking News, ದಾವಣಗೆರೆ
ದಾವಣಗೆರೆ: ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ಚನ್ನಗಿರಿ ತಾಲೂಕಿನ ಜೋಳದಾಳ ಗ್ರಾಮದಲ್ಲಿ ನಡೆದಿದೆ. 25ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. 14 ಜನರನ್ನು ಚನ್ನಗಿರಿ ಸರ್ಕಾರಿ ಆಸ್ಪತ್ರೆಗೆ ಮತ್ತು 6 ಜನರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರಾವತಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ಐವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರ ರಾತ್ರಿಯಿಂದಲೇ ಕೆಲವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಮೊದಲು ನಾಲ್ಕು ಜನರರಲ್ಲಿ ವಾಂತಿ-ಬೇಧಿ ಕಂಡಿತು. ಬಳಿಕ ಗ್ರಾಮದ …
Read More »
BigTv News
August 30, 2024
Breaking News
ಕೊಡಗು: ಮಲೆನಾಡಿನ ಕೊಡಗಿನಲ್ಲಿ ಆನೆ- ಮಾನವ ಸಂಘರ್ಷ ಮುಂದುವರಿದಿದೆ. ಬೆಳ್ಳಂಬೆಳ್ಳಗೆ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ಕೊಡಗಿನ ಸಿದ್ದಾಪುರ ಸಮೀಪದ ಚನ್ನಯ್ಯನಕೋಟೆ ಗ್ರಾಮದಲ್ಲಿ ನಡೆದಿದೆ. ಮನೆಯ ಸಮೀಪವೇ ಮಹಿಳೆ ಮೇಲೆ ದಾಳಿ ನಡೆಸಿ ಕಾಡಾನೆ ಕೊಂದು ಹಾಕಿದೆ. ಚನ್ನಯ್ಯನಕೋಟೆ ನಿವಾಸಿ ಕಾತಯಿ (72) ಮೃತ ದುರ್ದೈವಿ. ಮಗನ ಮನೆಯಿಂದ ಹೊರ ಬರುತ್ತಿದ್ದ ವೇಳೆ ರೊಚ್ಚಿಗೆದ್ದ ಕಾಡಾನೆಯೂ ದಾಳಿ ಮಾಡಿದೆ. ವೃದ್ದೆಯಾಗಿರುವುದರಿಂದ ಆನೆಯಿಂದ ತಪ್ಪಿಸಿಕೊಳ್ಳಲು ಆಗದೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅರಣ್ಯ …
Read More »
Shaikh BigTv
August 30, 2024
Breaking News, ಧಾರವಾಡ
ಕುಂದಗೋಳ : ತಾಲೂಕಿನಲ್ಲಿ ಮಳೆಯಿಂದ ಹಾಳಾಗಿರುವ ರಸ್ತೆ ಸುಧಾರಣೆ ಜೊತೆಗೆ ಎಲ್. ಅಂಡ್ ಟಿ ಕಂಪನಿಯವರು ಜಲಜೀವನ ಯೋಜನೆಯಡಿ ಹಾಕಬೇಕಿರುವ ನೀರಿನ ಪೈಪುಗಳನ್ನು ಯದ್ವಾತದ್ವಾ ಅಗೆದು ರಸ್ತೆ ಹದಗೆಡಿಸಿದ್ದಾರೆ. ಈ ಕೂಡಲೇ ಈ ಅವ್ಯ ಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಕುಂದಗೋಳ ತಹಶೀಲ್ದಾರ ಕಚೇರಿ ಎದುರು ಕರವೇ ತಾಲೂಕ ಘಟಕ ಬೃಹತ್ ಪ್ರತಿಭಟನೆ ನಡೆಸಿತು. ಕರವೇ ಅಧ್ಯಕ್ಷ ಕಲ್ಲಪ್ಪ ಹರಕುಣಿ, ಪ್ರವೀಣ ಬರದೇಲಿ, ಮಂಜುನಾಥ ಪೂಜಾರ ಸಹಿತ ಹಲವಾರು ಮುಖಂಡರು ಪ್ರತಿಭಟನೆಯಲ್ಲಿ …
Read More »
BigTv News
August 30, 2024
Breaking News
ಗೋರೆಗಾಂವ್: ಹಾಲಿನ ವ್ಯಾಪಾರಿ ಇದ್ದ ಬೈಕ್‌ಗೆ ಅಪ್ರಾಪ್ತ ಬಾಲಕ ಕಾರನ್ನು ಡಿಕ್ಕಿ ಹೊಡೆಸಿರುವ ಘಟನೆ ಗೋರೆಗಾಂವ್‌ನಲ್ಲಿ ನಡೆದಿದೆ. ವ್ಯಾಪಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಎಸ್‌ಯುವಿ ವೇಗವಾಗಿ ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ದ್ವಿಚಕ್ರ ವಾಹನಕ್ಕೆ ರಾಂಗ್ ಸೈಡ್ ನಲ್ಲಿ ಬಂದ ಕಾರು ಡಿಕ್ಕಿ ಹೊಡೆದಿದ್ದು ನವೀನ್ ವೈಷ್ಣವ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿ ಚಾಲಕನಿಗೆ 17 ವರ್ಷ ವಯಸ್ಸಾಗಿರುವುದರಿಂದ, ಎಸ್‌ಯುವಿ ಮಾಲೀಕ ಇಟ್ಬಾಲ್ …
Read More »
BigTv News
August 30, 2024
Breaking News
ತಿರುವನಂತಪುರ: ನಿರ್ಮಾಪಕ, ನಿರ್ದೇಶಕ ರಂಜಿತ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಯುವ ನಟರೊಬ್ಬರು ಡಿಜಿಪಿಗೆ ದೂರು ನೀಡಿದ್ದಾರೆ. 2012ರಲ್ಲಿ ಸಿನಿಮಾವೊಂದರ ಆಡಿಷನ್ ವಿಚಾರವಾಗಿ 9 ಬೆಂಗಳೂರಿನ ಹೋಟೆಲ್‌ಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದರು. ಇದು ಆಡಿಷನ್ ಪ್ರಕ್ರಿಯೆ ಭಾಗವೆಂದು ಭಾವಿಸಿದ್ದೆ. ಇದರ ಬದಲಾಗಿ ಪಾತ್ರ ನೀಡೋದಾಗಿ ಭರವಸೆ ನೀಡಿ ರಂಜಿತ್ ತನಗೆ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ್ದಾರೆ ನಟ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಘಟನೆಯ ಬಳಿಕ ಮರುದಿನ ಬೆಳಗ್ಗೆ …
Read More »
BigTv News
August 30, 2024
Breaking News
ಮುಂಬೈ: ದೇಶದ ಹಿರಿಯ ಖ್ಯಾತ ವಕೀಲ, ಸಂವಿಧಾನ ತಜ್ಞ ಅಬ್ದುಲ್ ಗಫೂರ್ ಮಜೀದ್ ನೂರಾನಿ ಗುರುವಾರ ಮುಂಬೈನಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಮುಂಬೈನಲ್ಲಿ 16, 1930 ರಂದು ಜನಿಸಿದ ನೂರಾನಿ ಅವರು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ, ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಲ್ಲಿ ವಕೀಲರಾಗಿದ್ದರು. 1960ರ ದಶಕದ ಆರಂಭದಲ್ಲಿ ದೇಶ-ವಿದೇಶಗಳ ಪತ್ರಿಕೆಗಳಿಗೆ ಬರೆಯಲು …
Read More »
BigTv News
August 30, 2024
Breaking News, ದೆಹಲಿ
ನವದೆಹಲಿ: ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ದೂರುಗಳನ್ನು ದಾಖಲಿಸಲು ಕೇಂದ್ರ ಸರ್ಕಾರ ಪೋರ್ಟಲ್ ವೊಂದನ್ನು ಬಿಡುಗಡೆ ಮಾಡಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಅವರು ನೂತನ She-Box ಪೋರ್ಟಲ್ ಬಿಡುಗಡೆ ಮಾಡಿದರು. ಈ ಫೋರ್ಟಲ್ ಎಲ್ಲಾ ಮಧ್ಯಸ್ಥಗಾರರಿಗೆ ದೂರುಗಳಿಗೆ ಪರಿಹಾರದ ಖಾತ್ರಿ ಮತ್ತು ಸುವ್ಯವಸ್ಥಿತ ಪ್ರಕ್ರಿಯೆಯನ್ನು ಒದಗಿಸುತ್ತದೆ. ಅಲ್ಲದೇ ನೋಡಲ್ ಅಧಿಕಾರಿಯ ಮೂಲಕ ದೂರುಗಳ ನೈಜ-ಸಮಯದ ಮೇಲ್ವಿಚಾರಣೆ ಮಾಡಲಾಗುವುದು. ಇದು ಭಾರತದಾದ್ಯಂತ ಮಹಿಳೆಯರಿಗೆ …
Read More »
BigTv News
August 30, 2024
Breaking News, ಹಾವೇರಿ
ಹಾವೇರಿ : ಸಿಎಂ ಸಿದ್ದರಾಮಯ್ಯ ಇಂದು ಹಾವೇರಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಂಗಳೂರಿನ ಹೆಚ್ ಎ ಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ನಂತರ ಹುಬ್ಬಳ್ಳಿ ಯಿಂದ ರಸ್ತೆ ಮಾರ್ಗವಾಗಿ ರಾಣೇಬೆನ್ನೂರ ತಾಲೂಕಿನ ದೇವರಗುಡ್ಡಕ್ಕೆ ಆಗಮಿಸಿ ಮಾಲತೇಶ ದೇವರ ದರ್ಶನ ಪಡೆಯಲಿದ್ದಾರೆ. ನಂತರ ದೇಶ ಪ್ರೇಮಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಂಚಿನ ಪುತ್ಥಳಿ ಅನಾವರಣ & ಶ್ರೀ ಕನಕ ಭವನ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಹಾವೇರಿಯ …
Read More »