Breaking News

Breaking News

ಹೆಣ್ಣುಮಕ್ಕಳ ಮದುವೆ ವಯಸ್ಸು ಹೆಚ್ಚಳ

ಹಿಮಾಚಲ ಪ್ರದೇಶ: ಹೆಣ್ಣುಮಕ್ಕಳ ಮದುವೆ ವಯಸ್ಸು 18ರಿಂದ 21ಕ್ಕೆ ವರ್ಷಕ್ಕೆ ಹೆಚ್ಚಿಸುವ ಮಸೂದೆಯನ್ನು ಹಿಮಾಚಲ ಪ್ರದೇಶದ ವಿಧಾನಸಭೆ ಅಂಗೀಕರಿಸಿದೆ. ಹಿಮಾಚಲ ಪ್ರದೇಶ ಬಾಲ್ಯ ವಿವಾಹ ನಿಷೇಧ ಮಸೂದೆ-2024 ಅನ್ನು ಮಂಗಳವಾರ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. ತಿದ್ದುಪಡಿಯು ಹೆಣ್ಣುಮಕ್ಕಳ ಕಾನೂನುಬದ್ಧ ವಿವಾಹ ವಯಸ್ಸನ್ನು ಮೂರು ವರ್ಷಗಳವರೆಗೆ ಹೆಚ್ಚಿಸುತ್ತದೆ. ಇದೀಗ ಅಂತಿಮ ಅನುಮೋದನೆಗಾಗಿ ಮಸೂದೆಯನ್ನು ರಾಜ್ಯಪಾಲರಿಗೆ ರವಾನಿಸಲಾಗಿದೆ. ಲಿಂಗ ಸಮಾನತೆಯನ್ನು ಒದಗಿಸಲು ಹೆಣ್ಣುಮಕ್ಕಳ ಕನಿಷ್ಠ ವಿವಾಹದ ವಯಸ್ಸನ್ನು ಹೆಚ್ಚಿಸುವುದು ಅಗತ್ಯವಾಗಿದೆ …

Read More »

ಬ್ರಾಹ್ಮಣ ಸಮುದಾಯದ ಕುರಿತು ಹೇಳಿಕೆ ನೀಡಿದ ಹಂಸಲೇಖ ವಿಡಿಯೋ ವೈರಲ್

ಬೆಂಗಳೂರು: ನಾದಬ್ರಹ್ಮ ಹಂಸಲೇಖ ಅವರು ಕಾರ್ಯಕ್ರಮವೊಂದರಲ್ಲಿ ಆಡಿರುವ ಒಂದು ಮಾತು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅವರ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ಬ್ರಾಹ್ಮಣ ಸಮುದಾಯದ ಕುರಿತು ಹಂಸಲೇಖ ಅವರ ಆ ಒಂದು ಮಾತಿಗೆ ಹಲವು ಆಕ್ಷೇಪ ವ್ಯಕ್ತಪಡಿಸಿ ತಮ್ಮ ಬೇಸರವನ್ನು ಹೊರ ಹಾಕುತ್ತಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಹಂಸಲೇಖ ಅವರ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಅವರು ಕನ್ನಡದ ಪ್ರಾದೇಶಿಕ ಪಕ್ಷ ಕಟ್ಟುವುದು ಅಷ್ಟು ಸುಲಭದ ಕೆಲಸವಲ್ಲ. …

Read More »

ಮಿಂಟ್ ಸಸ್ಪೆನಬಿಲಿಟಿ ಸಮಿಟ್ ನ 3ನೇ ಆವೃತ್ತಿಯ ಅಧ್ಯಕ್ಷತೆ ವಹಿಸಿದ ಜೋಶಿ

ನವದೆಹಲಿ : ಭಾರತವು ದೇಶದಲ್ಲಿ ಸಮತೋಲಿತ ಇಂಧನ ಬಳಕೆಯತ್ತ ಹೇಗೆ ಮುನ್ನಡೆಯುತ್ತಿದೆ . ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು ನವೀಕರಿಸಬಹುದಾದ ಇಂಧನ ಮೂಲಗಳನ್ನು ಉತ್ತೇಜಿಸುವ ಮೂಲಕ ನಮ್ಮ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ವಿವಿಧ ಉಪಕ್ರಮಗಳನ್ನು ಜಾರಿಗೊಳಿಸುತ್ತಿದೆ . ಭಾರತವು ತೀವ್ರ ಹವಾಮಾನ ಸವಾಲುಗಳನ್ನು ಎದುರಿಸುತ್ತಿದೆ ಎಂದು ಕೇಂದ್ರ ಸಚಿವ ಶ್ರೀ ಪ್ರಲಾದ ಜೋಶಿ ಹೇಳಿದರು. ಮಿಂಟ್ ಸಸ್ಪೆನಬಿಲಿಟಿ ಸಮಿಟ್ ನ 3ನೇ ಆವೃತ್ತಿಯ ಅಧ್ಯಕ್ಷತೆ ವಹಿಸಿ …

Read More »

ನಿಮಿಷಕ್ಕೆ 4.50 ಕೋಟಿ ರೂಪಾಯಿ ಸಂಭಾವನೆ ಪಡೆದು ಅಜಯ್ ದೇವಗನ್

ಸಿನಿರಂಗದಲ್ಲಿ ಕೋಟಿ ಕೋಟಿ ಸಂಭಾವನೆ ಪಡೆಯುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ರಾಜಮೌಳಿ ನಿರ್ದೇಶನದ RRR ನಲ್ಲಿ ನಟಿಸಿದ್ದ ಅಜಯ್ ದೇವಗನ್, ಚಿತ್ರದಲ್ಲಿ ಕೇವಲ 8 ನಿಮಿಷ ಕಾಣಿಸಿಕೊಂಡಿದ್ದಾರೆ. ಆದರೆ ಈ ಚಿತ್ರಕ್ಕೆ 35 ಕೋಟಿ ಸಂಭಾವನೆ ಪಡೆದಿದ್ದಾರೆ. ಈ ಮೂಲಕ ನಿಮಿಷಕ್ಕೆ 4.50 ಕೋಟಿ ರೂಪಾಯಿ ಸಂಭಾವನೆ ಪಡೆದು ರೆಕಾರ್ಡ್ ಕ್ರಿಯೇಟ್ ಮಾಡಿದ್ದಾರೆ. ಅಮೀರ್ ಖಾನ್, ಶಾರುಖ್ ಖಾನ್, ಪ್ರಭಾಸ್, ರಜನಿಕಾಂತ್, ಸಲ್ಮಾನ್ ಖಾನ್ ಮತ್ತು ದಳಪತಿ ವಿಜಯ್ ಪ್ರತಿ …

Read More »

ಆಂಬ್ಯುಲೆನ್ಸ್ ಒಳಗೆ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ತಾಯಿ

ಕುಂದಗೋಳ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಆಂಬ್ಯುಲೆನ್ಸ್ ಒಳಗೆ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಕುಂದಗೋಳ ತಾಲೂಕಿನ ದೇವನೂರು ಗ್ರಾಮದ ಅಕ್ಕಮಹಾದೇವಿ ಗೋಡಿ ಎಂಬುವವರಿಗೆ ಇಂದು ಬೆಳಿಗ್ಗೆ 3 ಗಂಟೆ 50 ನಿಮಿಷಕ್ಕೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಕುಟುಂಬಸ್ಥರು ಕುಂದಗೋಳ ತಾಲೂಕು ಆಸ್ಪತ್ರೆಯ ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ದೇವನೂರು ಗ್ರಾಮಕ್ಕೆ ಆಗಮಿಸಿದ ಆಂಬ್ಯಲೆನ್ಸ್‌ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆ ತರುವಾಗ ಹೆರಿಗೆ ನೋವು …

Read More »

ಹುಬ್ಬಳ್ಳಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಹುಬ್ಬಳ್ಳಿ: ನಗರದ ವ್ಯಕ್ತಿಯೊಬ್ಬನ ಮೃತ ದೇಹ ಪತ್ತೆಯಾಗಿರುವ ಘಟನೆ ವಿದ್ಯಾನಗರ ಠಾಣಾ ವ್ಯಾಪ್ತಿಯ ಪ್ರೆಸಿಡೆಂಟ್‌ ಹೊಟೇಲ್ ಎದುರಿಗೆ ಶ್ರೀನಗರಕ್ಕೆ ಹೋಗುವ ದಾರಿಯಲ್ಲಿ ನಡೆದಿದೆ. ಅನುರಾಜ್ ಕಿರಾಣಿ ಸ್ಟೋರ್ ಪಕ್ಕದಲ್ಲಿ ಶವ ಪತ್ತೆಯಾಗಿದ್ದು, ಮೃತ ವ್ಯಕ್ತಿ ಯಾರೆಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ವಿದ್ಯಾನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

Read More »

ಕಣಿವೆಗೆ ಬಿದ್ದ ಟ್ರಕ್: ಮೂವರು ಯೋಧರು ಬಲಿ

ಅರುಣಾಚಲ : ಪ್ರದೇಶದ ಸುಬನ್ನಿರಿ ಜಿಲ್ಲೆಯಲ್ಲಿ ಟ್ರಕ್ ಕಣಿವೆಗೆ ಬಿದ್ದ ಪರಿಣಾಮ ಮೂವರು ಯೋಧರು ಮೃತಪಟ್ಟಿದ್ದಾರೆ. ಇನ್ನೂ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ಹವಾಲ್ದಾರ್ ನಖತ್ ಸಿಂಗ್, ನಾಯಕ್‌ ಮುಖೇಶ್ ಕುಮಾರ್ ಮತ್ತು ಗ್ರೆನೇಡಿಯರ್ ಆಶಿಶ್ ಎಂದು ಗುರುತಿಸಲಾಗಿದೆ. ಭಾರತೀಯ ಸೇನೆಯು ಮೃತರ ಕುಟುಂಬಗಳಿಗೆ ಬೆಂಬಲವಾಗಿ ನಿಂತಿದೆ ಎಂದು ಈಸ್ಟರ್ನ್ ಕಮಾಂಡ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.

Read More »

ಬಸ್‌ ನಿಲ್ದಾಣದಲ್ಲಿ ಪಾರ್ಕ್ ಮಾಡಿದ ವಾಹನ ಎಸ್ಕೆಪ್

ಕುಂದಗೋಳ: ಬಸ್‌ ನಿಲ್ದಾಣ ಸಮೀಪದ ಅಂಗಡಿಯೊಂದರ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಪರಾರಿಯಾದ ಘಟನೆ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ನಡೆದಿದೆ. ಆಗಷ್ಟ 20ರಂದು ಸಂಶಿ ಗ್ರಾಮದ ಬಸ್ ನಿಲ್ದಾಣ ಬಳಿಯ ಬಂಡಿವಾಡ ಜನರಲ್ ಸ್ಟೋರ್ ಬಳಿ ನಿಲ್ಲಿಸಿದ್ದ ಹಿರೋ ಎಚ್.ಎಫ್ ಕಂಪನಿ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮದ ಅರುಣಕುಮಾರ ಬಾಬುಗೌಡ ಯರಡ್ಡಿ ಎಂಬುವವರೇ ದ್ವಿಚಕ್ರ ವಾಹನ ಕಳೆದುಕೊಂಡವರು. ಈ …

Read More »

ರೇಣುಕಸ್ವಾಮಿ ಹತ್ಯೆ ಪ್ರಕರಣ: A9 ಆರೋಪಿ ಧನರಾಜ್ ಧಾರವಾಡಕ್ಕೆ ಶಿಫ್ಟ್

ಧಾರವಾಡ: ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದ ಪಾಲಾಗಿದ್ದ ನಟ ದರ್ಶನ್ ಆ್ಯಂಡ್ ಟೀಮ್‌ಅನ್ನು ಬೇರೆ ಬೇರೆ ಕಾರಾಗೃಹಗಳಿಗೆ ಶಿಫ್ಟ್ ಮಾಡಲು ನ್ಯಾಯಾಲಯ ಅನುಮತಿ ಕೊಟ್ಟಿದೆ. A9 ಆರೋಪಿಯಾಗಿರುವ ಧನರಾಜ್ ಎಂಬಾತನನ್ನು ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗುತ್ತಿದೆ.ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಲಾಗುತ್ತಿದ್ದ ಫೋಟೋ ಹಾಗೂ ವೀಡಿಯೋಗಳು ವೈರಲ್ ಆಗುತ್ತಿದ್ದಂತೆ ಸರ್ಕಾರ ಎಲ್ಲಾ ಆರೋಪಿಗಳನ್ನು ಬೇರೆ ಬೇರೆ ಕಾರಾಗೃಹಗಳಿಗೆ ಶಿಫ್ಟ್ ಮಾಡಲು ಸೂಚನೆ ಕೊಟ್ಟಿತ್ತು. ಇದಕ್ಕೆ ಇಂದು …

Read More »

ಕಳಘಟಗಿ ಬಳಿ ಭೀಕರ ಅಪಘಾತ : ಸಂತೋಷ ಲಾಡ್ ಭೇಟಿ

ಕಲಘಟಗಿ: ಹೊರವಲಯದ ತಡಸ ಕ್ರಾಸ್ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಲಾರಿ ಹಾಗೂ ಟಾಟಾ ಏಸ್ ನಡುವೆ ಡಿಕ್ಕಿಯಾಗಿದ್ದು ಓರ್ವ ಮಹಿಳೆ ಸ್ಥಳದಲ್ಲೇವ ಸಾವುನಪ್ಪಿದ್ದು, ಓರ್ವ ಗಾಯಗಳನ್ನು ಕಿಮ್ಸ್ ಆಸ್ಪತ್ರೆ ಗೆ ದಾಖಲೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಅಪಘಾತದಲ್ಲಿ 18 ಮಂದಿ ಪೈಕಿ ಓರ್ವ ಮಹಿಳೆ ಸಾವು ಸಂಭವಿಸಿದೆ. ಉಳಿದ 17 ಜನರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆಮ ಇನ್ನುಳಿದ 15 ಜನರಿಗೆ …

Read More »