Breaking News

Breaking News

ಸ್ಕೂಟಿ ವೀಲಿಂಗ್ : ಯುವಕ ಅರೇಸ್ಟ್

ಹುಬ್ಬಳ್ಳಿ: ಯುವಕನೊಬ್ಬ ಸ್ಕೂಟಿ ವೀಲಿಂಗ್ ಮಾಡ್ತಿದ್ದನ್ನು ಗಮನಿಸಿದ ಗ್ರಾಮಿಣ ಪೊಲೀಸ್ ಠಾಣೆ ಪೊಲೀಸರು, ಆತನನ್ನು ಅರೆಸ್ಟ್ ಮಾಡಿ ಸ್ಕೂಟ‌ನ್ನು ಸೀಜ್ ಮಾಡಿದ್ದಾರೆ. ಆಯಾನ್ ಎಂಬ ಯುವಕ ತನ್ನ ಸ್ಕೂಟರ್ ತೆಗೆದುಕೊಂಡು ಕಾರವಾರ ರೋಡ್ ನೀಯರ್ ಅಂಚಟಗೇರಿ ಗ್ರಾಮದ ಬಳಿ ವೀಲಿಂಗ್ ಮಾಡುತ್ತಿದ್ದ. ಇದರಿಂದ ಸಾರ್ವಜನಿಕರಿಗೂ ಕೂಡ ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿದ ಗ್ರಾಮೀಣ ಠಾಣೆ ಇನ್ಸೆಕ್ಟರ್ ಮುರಗೇಶ ಚನ್ನಣ್ಣವರ ನೇತೃತ್ವದಲ್ಲಿ ಪೊಲೀಸರು ಆತನನ್ನು ಅರೆಸ್ಟ್ ಮಾಡಿ ಸ್ಕೂಟರ್ ಸೀಜ್ ಮಾಡಿದ್ದಾರೆ.

Read More »

ಮಾಜಿ ಸಿಎಂ ಅಶ್ಲೀಲ ಸಿಡಿ : ಇದು ಬ್ಲ್ಯಾಕ್ ಮೇಲ್ : ಜೋಶಿ

ಹುಬ್ಬಳ್ಳಿ : ಮಾಜಿ ಸಿಎಂ ಅಶ್ಲೀಲ ಸಿಡಿ ಬರತ್ತೆ ಅನ್ನೋ ವಿಚಾರವೂ ಇದು ಬ್ಲ್ಯಾಕ್ ಮೇಲ್ ತಂತ್ರ. ಇದಕ್ಕೆಲ್ಲ ರಿಯಾಕ್ಷನ್ ಕೊಡೋ ಅಗತ್ಯ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಇದು ಅರ್ಥವಿಲ್ಲದ ಮಾತು. ವಿಡಿಯೋ ಇದ್ರೆ ಕಂಪ್ಲೆಂಟ್ ಕೊಡಬೇಕು ಇಲ್ಲವಾದ್ರೆ ರಿಲೀಸ್ ಆದ್ರು ಮಾಡಬೇಕು. ಬಿಜೆಪಿದವರು ಹೋರಾಟ ಮಾಡ್ತಿರೋದಕ್ಕೆ ಈ ರೀತಿ ಬ್ಲ್ಯಾಕ್ ಮೇಲ್ ತಂತ್ರ ಮಾಡ್ತಿದ್ದಾರೆ. ಯಾವ ಮುಖ್ಯಮಂತ್ರಿ, …

Read More »

ಪತ್ನಿ ಕುರಿತು ಭಾವುಕ ಪೋಸ್ಟ್ ಮಾಡಿದ ಚಿನ್ನಾರಿ ಮುತ್ತ

ಕನ್ನಡ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಇಹಲೋಕ ತ್ಯಜಿಸಿ ವರ್ಷ ಕಳೆದಿವೆ. ಇಂದು ವಿಜಯ್ ಹಾಗೂ ಸ್ಪಂದನಾ ಮ್ಯಾರೇಜ್ ಆ್ಯನಿವರ್ಸರಿ ಈ ವೇಳೆ ನಟ ವಿಜಯ್ ಪತ್ನಿಯನ್ನು ನೆನೆದು ಭಾವುಕ ಪೋಸ್ಟ್ ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪತ್ನಿ ಸ್ಪಂದನಾ ಜೊತೆಗಿನ ಹಳೆಯ ಫೋಟೋವೊಂದನ್ನು ಶೇರ್ ಮಾಡಿ ಹ್ಯಾಪಿ ಆ್ಯನಿವರ್ಸರಿ ಚಿನ್ನ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ವಿಜಯ್ ಅಭಿಮಾನಿಗಳು ಕಾಮೆಂಟ್ ಮಾಡಿ ನಟ ವಿಜಯ್ ಗೆ …

Read More »

ಲಡಾಖ್‌ನಲ್ಲಿ ಐದು ಹೊಸ ಜಿಲ್ಲೆಗಳನ್ನು ರಚಿಸಲು ಮೋದಿ ಸರ್ಕಾರ ಅಸ್ತು

ನವದೆಹಲಿ: ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಐದು ಹೊಸ ಜಿಲ್ಲೆಗಳನ್ನು ರಚಿಸಲು ಮೋದಿ ಸರ್ಕಾರ ನಿರ್ಧರಿಸಿದ್ದು ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹತ್ವದ ಮಾಹಿತಿ ನೀಡಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಸಚಿವ ಶಾ, ಲಡಾಖ್ ಅಭಿವೃದ್ಧಿಗೆ ಮೋದಿ ಸರ್ಕಾರ ಬದ್ಧವಾಗಿದ್ದು, ಹೊಸ ಜಿಲ್ಲೆಗಳ ರಚನೆಯಿಂದ ಲಡಾಖ್ ಜನರಿಗೆ ಅನುಕೂಲವಾಗಲಿದೆ. ಲಡಾಖ್ ಅನ್ನು ಅಭಿವೃದ್ಧಿ ಮತ್ತು ಸಮೃದ್ಧಗೊಳಿಸುವ ಪ್ರಧಾನಿ ಮೋದಿಯವರ ದೂರದೃಷ್ಟಿಯ ಅಡಿಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. …

Read More »

ನಟ ದರ್ಶನ್‌ ಐಷಾರಾಮಿ ಜೀವನ : ಕಣ್ಣೀರಿಟ್ಟ ರೇಣುಕಾಸ್ವಾಮಿ ತಂದೆ

ಚಿತ್ರದುರ್ಗ: ನಟ ದರ್ಶನ್‌ಗೆ ಜೈಲಿನಲ್ಲಿ ಕಾಫಿ, ಸಿಗರೇಟ್ ವ್ಯವಸ್ಥೆ ವಿಚಾರಕ್ಕೆ ಸಂಬಂಧಿಸಿದಂತೆ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ್ರು ಬೇಸರ ವ್ಯಕ್ತಪಡಿಸಿದ್ದು, ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ನೋಡಿ ಕಣ್ಣೀರಿಟ್ಟಿದ್ದಾರೆ. ದರ್ಶನ್ ಜೈಲಿನಲ್ಲಿದ್ದಾರೋ ಇಲ್ಲೊ ಎಂಬ ಭಾವನೆ ಬರ್ತಿದೆ. ನಟ ದರ್ಶನ್ ಸಹ ಸಾಮಾನ್ಯ ಕೈದಿಯಂತೆಯೇ ಇರಬೇಕು. ಆದರೆ, ರೆಸಾರ್ಟ್‌ನಲ್ಲಿರುವಂತೆ ಕಂಡು ಶಾಕ್ ಆಯ್ತು. ನಮಗೆ ನೋವು, ಸಂಕಟ ಆಗುತ್ತಿದೆ ಎಂದು ಕಣ್ಣೀರು ಹಾಕಿದರು. ಹೀಗಾದರೆ ಪ್ರಕರಣ ಸಿಬಿಐಗೆ ವಹಿಸಿಬೇಕೆಂದು ಅನಿಸುತ್ತಿದೆ. …

Read More »

ಫುಟ್‌ಪಾತ್ ಮೇಲೆ ಮಲಗಿದ್ದ ಐವರ ಟ್ರಕ್ ಹರಿದು ಸಾವು

ನವದೆಹಲಿ: ಫುಟ್‌ಪಾತ್ ಮೇಲೆ ಮಲಗಿದ್ದ ಐವರ ಮೇಲೆ ಟ್ರಕ್‌ವೊಂದು ಹರಿದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ದೆಹಲಿಯ ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ಇಂದು ನಡೆದಿದೆ. ಮುಂಜಾನೆ 5:30ರ ವೇಳೆಗೆ ಘಟನೆ ಸಂಭವಿಸಿದೆ. ಮನೆ, ಆಶ್ರಯವಿಲ್ಲದ ಐವರು ಫುಟ್‌ಪಾತ್ ಮೇಲೆ ಮಲಗಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಟ್ರಕ್ ಹರಿದಿದೆ. ತಕ್ಷಣವೇ ಎಲ್ಲರನ್ನೂ ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಪೈಕಿ ಮೂವರು ಮೃತಪಟ್ಟಿದ್ದಾರೆ ಎಂದು …

Read More »

ಇಸ್ಕಾನ್ ದೇವಾಲಯಕ್ಕೆ ಶೋಭಾ ಕರಂದ್ಲಾಜೆ ಭೇಟಿ

ಬೆಂಗಳೂರು: ನಾಡಿನೆಲ್ಲೆಡೆ ಇಂದು ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮನೆ ಮಾಡಿದ್ದು, ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲೂ ಜನ್ಮಾಷ್ಟಮಿ ವಿಜೃಂಭಣೆಯಿಂದ ನಡೆಯುತ್ತಿದೆ. ಈ ಸಂಧರ್ಭ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಪಾಲ್ಗೊಂಡರು. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಭಕ್ತರು ಶ್ರೀ ಕೃಷ್ಣನ ಸರಣೆ ಮಾಡುತ್ತಿದ್ದಾರೆ. ಇಸ್ಕಾನ್‌ನಲ್ಲಿ ಮುಂಜಾನೆ 4:3ರಿಂದ ರಾಧಾ- ಕೃಷ್ಣರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಮುಂಜಾನೆ 4:30ಕ್ಕೆ ಕೃಷ್ಣನಿಗೆ ಮಂಗಳಾರತಿಮತ್ತು ತುಳಸಿ ಆರತಿ …

Read More »

ವೋಲ್ಲಾ ಸೈ ವಸತಿ ಸಂಕೀರ್ಣಕ್ಕೆ ಉಕ್ರೇನಿಯನ್ ಡೋನ್ ಡಿಕ್ಕಿ

ಟೋಕಿಯೋ: ರಷ್ಯಾದ ಸರಟೋವ್‌ನಲ್ಲಿರುವ 38 ಅಂತಸ್ತಿನ ವೋಲ್ಲಾ ಸೈ ವಸತಿ ಸಂಕೀರ್ಣಕ್ಕೆ ಉಕ್ರೇನಿಯನ್ ಡೋನ್ ಅಪ್ಪಳಿಸಿತು, ಇದು ನಗರದ ಅತ್ಯಂತ ಎತ್ತರದ ಕಟ್ಟಡವಾಗಿದೆ. ಇದು ಸಂಚಲನ ಮೂಡಿಸಿದೆ. ಇದಲ್ಲದೆ, ಈ ವಿಷಯದ ಬಗ್ಗೆ ತಿಳಿದಿರುವ ಉಕ್ರೇನಿಯನ್ ಅಧಿಕಾರಿಯ ಪ್ರಕಾರ, ಶುಕ್ರವಾರ ಬೆಳಿಗ್ಗೆ ಸುಮಾರು 350 ಕಿಲೋಮೀಟರ್ ದೂರದಲ್ಲಿರುವ ಮೊರೊವೊಸ್ಟ್ ಏ‌ರ್ ಬೇಸ್ ಮೇಲೆ ದಾಳಿ ಮಾಡುವ ಮೂಲಕ ಆರು ರಷ್ಯಾದ ಯುದ್ಧ- ಬಾಂಬರ್‌ಗಳನ್ನು ನಾಶಪಡಿಸಿದೆ ಎಂದು ಉಕ್ರೇನ್ ಹೇಳಿಕೊಂಡಿದೆ. ರಷ್ಯಾದ …

Read More »

ವೈದ್ಯರಿಗೆ ಪೋಲಿಸ್ ಎಂದು ಸುಳ್ಳು ಹೇಳಿ ವಂಚನೆ

ಚಿತ್ರದುರ್ಗ: ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟಿಆರ್‌ಎಐ) ಮತ್ತು ಮುಂಬೈ ಪೊಲೀಸರೆಂದು ಹೇಳಿ ಕರೆ ಮಾಡಿ ಸೈಬರ್ ವಂಚಕರು ಹಿರಿಯ ವೈದ್ಯರೊಬ್ಬರಿಗೆ ವಂಚಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಶ್ರೀನಿವಾಸ್ ಶೆಟ್ಟಿ ವಂಚನೆಗೊಳಗಾದ ವೈದ್ಯ. ವಂಚಕರು ವಾಟ್ಸಪ್ ಕಾಲ್ ಮತ್ತು ನಾರ್ಮಲ್ ಕಾಲ್ ಮಾಡಿ, ನಿಮ್ಮ ಬ್ಯಾಂಕ್ ಖಾತೆ ಬಳಸಿ ಮನಿ ಲ್ಯಾಂಡರಿಂಗ್ ವಂಚನೆ ಆಗಿದೆ. ನಿಮ್ಮ ಖಾತೆಯ ಹಣದ ಆಡಿಟ್ ಮಾಡಬೇಕಿದೆ ಎಂದು ನಂಬಿಸಿ ವೈದ್ಯರ ಖಾತೆಯಿಂದ 1.27 …

Read More »

‘ದಿ ವಿಲನ್’ ಚಿತ್ರದ ನಟಿಯ ಎರಡನೇ ಮದುವೆ ಫೋಟೊ ವೃರೆಲ್

ಬ್ರಿಟೀಷ್ ಬ್ಯೂಟಿ ಆಮಿ ಜಾಕ್ಸನ್ ಕನ್ನಡ ಸಿನಿರಸಿರಕರಿಗೂ ಚಿರಪರಿಚಿತ. ಜೋಗಿ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರದಲ್ಲಿ ಸುದೀಪ್ ಜೋಡಿಯಾಗಿ ಆಕೆ ನಟಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಚೆಲುವೆ ಆಗಾಗ್ಗೆ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಸದ್ಯ ಆಮಿ ಜಾಕ್ಸನ್ ತಮ್ಮ ಎರಡನೇ ಮದುವೆ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ತನ್ನ ಗೆಳೆಯ ಎಡ್ ವೆಸ್ಟ್‌ವಿಕ್‌ನನ್ನು ಆಕೆ ಮದುವೆ ಆಗಿದ್ದಾರೆ. ಇವರಿಬ್ಬರ ವಿವಾಹ ಸಮಾರಂಭ ಇಟಲಿಯ ಅಮಾ ತೀರದಲ್ಲಿ ನಡೆದಿದೆ. ಈ …

Read More »