bigtvnews22
August 17, 2024
Breaking News, ಜಿಲ್ಲೆ, ಮೈಸೂರು
ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆ ಈ ಬಾರಿ ಸರಕಾರ ದಾಖಲೆಯ 40 ಕೋಟಿ ರೂ. ಅನುದಾನ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಚ್.ಸಿ. ಮಹದೇವಪ್ಪ ಪ್ರಕಟಿಸಿದ್ದಾರೆ. ಈ ಪ್ರಮಾಣದ ಅನುದಾನವನ್ನು ದಸರೆಗೆ ಸರಕಾರ ನೀಡುತ್ತಿರುವುದು ಇದೇ ಮೊದಲ ಬಾರಿ. ರಾಜ್ಯ ಸರಕಾರ ನಾಡಹಬ್ಬ ದಸರಾ ಉತ್ಸವ ಹೆಸರಿನಲ್ಲಿ ನವರಾತ್ರಿಯನ್ನು ಮೈಸೂರಿನಲ್ಲಿ ಸಾಂಪ್ರದಾಯಿಕವಾಗಿ ಆಚರಣೆ ಮಾಡುತ್ತಿದೆ. ದಸರಾ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರೂ ಆದ ಮುಖ್ಯಮಂತ್ರಿಗಳು ಆಯಾ …
Read More »
BigTv News
August 17, 2024
Breaking News, ಗದಗ, ಜಿಲ್ಲೆ
ಗದಗ: ಗದಗನಿಂದ ಮುಂಡರಗಿ ಹೊರಟಿದ್ದ ಬಸ್ ಹಾಗೂ ಕೊಪ್ಪಳದಿಂದ ಗದುಗಿಗೆ ಬರುತ್ತಿದ್ದ ಎರಡು ಬಸ್ಗಳ ಈ ಅಪಘಾತ ಸಂಭವಿಸಿದೆ. 20 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನೆಯಲ್ಲಿ 5 ಜನರಿಗೆ ಗಂಭೀರವಾಗಿ ಗಾಯಗಳಾಗಿವೆ. ಗದಗನಿಂದ ಮುಂಡರಗಿಗೆ ತೆರಳುತ್ತಿದ್ದ ಬಸ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನುವ ಮಾಹಿತಿ ಸ್ಥಳದಲ್ಲಿದ್ದ ಹಲವರಿಂದ ಕೇಳಿ ಬಂದಿದ್ದು, ಕೊಪ್ಪಳದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಬಸ್ ಗಮನಿಸದೇ ರಸ್ತೆ ಕ್ರಾಸ್ ಮಾಡುವ ವೇಳೆಯಲ್ಲಿ ಅಪಘಾತ …
Read More »
BigTv News
August 17, 2024
Breaking News, ತುಮಕೂರು
ಮಂಡ್ಯ: ಕೌಟುಂಬಿಕ ಕಲಹ ಹಿನ್ನೆಲೆ ಶಿಕ್ಷಕ ಪತಿಯಿಂದ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದ ಶಾಂತಿನಗರದಲ್ಲಿ ನಡೆದಿದೆ. ರಾಗಿಮುದ್ದನಹಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕನಾಗಿರುವ ನಟರಾಜು, ಪತ್ನಿ ಅನಿತಾ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ. ಮನೆಯಲ್ಲಿ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಸುತ್ತಿಗೆಯಿಂದ ಪತ್ನಿ ಅನಿತಾ ತಲೆಗೆ ಹೊಡೆದು ನಟರಾಜು ಪರಾರಿಯಾಗಿದ್ದಾರೆ. ತೀವ್ರ ಗಾಯಗೊಂಡ ಅನಿತಾಗೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈ …
Read More »
BigTv News
August 17, 2024
Breaking News, ತುಮಕೂರು
ತುಮಕೂರು: ಗುಬ್ಬಿ ಪಟ್ಟಣದ ವಿನಾಯಕನಗರದಲ್ಲಿ ಶಾಲಾ ಬಸ್ ಹರಿದು 9ನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ನಡೆದಿದೆ. ತೇಜಸ್(14) ಮೃತ ಬಾಲಕ. ಚಲಿಸುತ್ತಿದ್ದ ಬೈಕ್ನಿಂದ ಆಯತಪ್ಪಿ ಕೆಳಗೆ ಬಿದ್ದ ಬಾಲಕನ ತಲೆ ಮೇಲೆಯೇ ಬಸ್ ಹರಿದು ಈ ದುರ್ಘಟನೆ ಸಂಭವಿಸಿದೆ. ಇತ್ತ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಕುರಿತು ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Read More »
BigTv News
August 17, 2024
Breaking News, ಬೆಂಗಳೂರು
ಉಡುಪಿ: ಕಾರಿನ ಗ್ಲಾಸ್ ಮುಚ್ಚಿ ಮಲಗಿದ್ದ ಚಾಲಕ ಉಸಿರು ಗಟ್ಟಿ ಸಾವನ್ನಪ್ಪಿದ ಘಟನೆ ಉಡುಪಿಯಲ್ಲಿ ನಡೆದಿದೆ. ಚಿಕ್ಕಮಗಳೂರು ಮೂಲದ ಆನಂದ (37) ಮೃತಪಟ್ಟವರು. ರೋಗಿಯೊಬ್ಬರನ್ನು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆ ಕಾರಿನಲ್ಲಿ ಕರೆದುಕೊಂಡು ಬಂದಿದ್ದರು. ಬಳಿಕ ರೋಗಿಯನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಲಾಗಿತ್ತು. ನಂತರ ಮಣಿಪಾಲದಲ್ಲಿ ಉಳಿದುಕೊಳ್ಳಲು ಯಾವುದೇ ರೂಂ ಸಿಗದ ಕಾರಣ, ಮಣಿಪಾಲ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿ ಮಲಗಿದ್ದರು. ಕಾರಿನ ಗ್ಲಾಸನ್ನು ಮುಚ್ಚಿಕೊಂಡು ಮಲಗಿದ್ದ ಹಿನ್ನಲೆ ಉಸಿರುಗಟ್ಟಿ …
Read More »
BigTv News
August 17, 2024
Breaking News, ಯಾದಗಿರಿ
ಯಾದಗಿರಿ: ಪಿಎಸ್‌ಐ ಪರಶುರಾಮ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯಿಂದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಸದ್ಯ ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದ ತಂಡ ಯಾದಗಿರಿಗೆ ಭೇಟಿ ನೀಡಿದ್ದು, ಪರಶುರಾಮ ಸಾವಿನ ಬಗ್ಗೆ ಇಂಚಿಂಚು ಮಾಹಿತಿ ಪಡೆಯುತ್ತಿದ್ದಾರೆ. ನಗರದ ಎಸ್ಪಿ ಕಚೇರಿ ಹಿಂಭಾಗದ ಪೊಲೀಸ್ ವಸತಿ ಗೃಹದಲ್ಲಿರುವ ಪರಶುರಾಮ ಮನೆಯನ್ನು ಪರಿಶೀಲನೆ ಮಾಡಿದ್ದಾರೆ. ಪರಶುರಾಮ ಮನೆಯ ಯಾವ ಕೊಣೆಯಲ್ಲಿ ಮೃತಪಟ್ಟಿದ್ದ ಸೇರಿ ಅಗತ್ಯ ಮಾಹಿತಿಯನ್ನು ಮಾವ ವೆಂಕಟಸ್ವಾಮಿಯಿಂದ ಪಡೆದುಕೊಂಡಿದ್ದಾರೆ. ಮನೆಯ ಎಲ್ಲಾ …
Read More »
Shaikh BigTv
August 17, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಕೋಲ್ಕತ್ತಾದಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಕೊಲೆ ಪ್ರಕರಣವನ್ನು ಖಂಡಿಸಿ, ಭಾರತೀಯ ವೈದ್ಯಕೀಯ ಸಂಘ (ಐಎಂಎ) ನೀಡಿದ ಕರೆಯ ಮೇರೆಗೆ, ಹುಬ್ಬಳ್ಳಿಯಲ್ಲೂ ಇಂದು ಖಾಸಗಿ ಆಸ್ಪತ್ರೆಗಳ ಒಪಿಡಿ ಸ್ಥಗಿತಗೊಳಿಸಿ, ನಗರದ ಚನ್ನಮ್ಮ ಸರ್ಕಲ್ ಬಳಿ ಕಿರಿಯ ವೈದ್ಯರು ಟೀ ಮಾರಾಟ ಮಾಡುವ ಮೂಲಕ, ವಿನೂತನವಾಗಿ ಪ್ರತಿಭಟನೆ ಮಾಡಿದರು. ಕಿಮ್ಸ್ ಆಸ್ಪತ್ರೆ ಹೊರತು ಪಡಿಸಿ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಪ್ರಕರಣಗಳನ್ನು ಹೊರತುಪಡಿಸಿ, ಇನ್ನುಳಿದ ಯಾವುದೇ ವೈದ್ಯಕೀಯ ಸೇವೆಗಳು ಲಭ್ಯ ನೀಡುತ್ತಿಲ್ಲಾ. ಇದರಿಂದಾಗಿ …
Read More »
BigTv News
August 17, 2024
Breaking News
ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಯುಐ’ ಸಿನಿಮಾ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಈ ಮೂಲಕ ಅಭಿಮಾನಿಗಳ ಕಾತರಕ್ಕೆ ನಟ ಉತ್ತರ ಕೊಟ್ಟಿದ್ದಾರೆ. ಉಪೇಂದ್ರ ನಟಿಸಿ, ನಿರ್ದೇಶನ ಮಾಡುತ್ತಿರುವ ಯುಐ ಸಿನಿಮಾ ಇದೇ ಅಕ್ಟೋಬರ್‌ನಲ್ಲಿ ರಿಲೀಸ್ ಮಾಡೋದಾಗಿ ಉಪೇಂದ್ರ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ. ಈ ವೇಳೆ, ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಕೂಡ ರಿಲೀಸ್ ಆಗ್ತಿದೆ. ಮಾರ್ಟಿನ್ ಮುಂದೆ ಅಬ್ಬರಿಸೋಕೆ ಯುಐ ಸಿನಿಮಾ ಸಜ್ಜಾಗಿದೆ. ಇನ್ನೂ ಟೈಟಲ್‌ನಲ್ಲೇ …
Read More »
BigTv News
August 17, 2024
Breaking News
ತೆಲಂಗಾಣ: ಜಗತ್ಯಾಲ್ ಜಿಲ್ಲೆಯಲ್ಲಿ ಹಾವೊಂದು ಬಿಯರ್ ಕ್ಯಾನ್‌ನಲ್ಲಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಜಗಿತ್ಯಾಲ್ ನ ನಲ್ಲಗೊಂಡ ಪ್ರದೇಶದಲ್ಲಿರುವ ರೈತರೊಬ್ಬರ ಜಮೀನಿನಲ್ಲಿ ಈ ಘಟನೆ ನಡೆದಿದೆ. ಬಿಯರ್ ಕ್ಯಾನ್ ಒಳಗೆ ತಲೆ ಸಿಕ್ಕಿಸಿಕೊಂಡ ಹಾವು, ಸುಮಾರು ಮೂರು ಗಂಟೆಗಳ ಹೋರಾಟದ ನಂತರ, ಮುಳ್ಳಿನ ಪೊದೆಯ ಒಳಗೆ ಹೋಗಿ ಬಿಯರ್ ಕ್ಯಾನ್‌ನಿಂದ ತನ್ನನ್ನು ಬಿಡಿಸಿಕೊಂಡು ನಿಟ್ಟುಸಿರು ಬಿಟ್ಟಿದೆ. ಈ ಹಿಂದೆ ಇದೇ ರೀತಿಯ ಘಟನೆಯಲ್ಲಿ ಒಡಿಶಾದ ಪುರಿ ಜಿಲ್ಲೆಯಲ್ಲಿ ಮತ್ತೊಂದು ಹಾವು ಖಾಲಿ …
Read More »
Shaikh BigTv
August 17, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಅಡಿಯಲ್ಲಿ ಹಳೆ ಬಸ್ ನಿಲ್ದಾಣವನ್ನು ನವಿಕರಣದ ಮಾಡುತ್ತಿದ್ದು, ಆಟೋ ನಿಲ್ದಾಣಕ್ಕೂ ವ್ಯವಸ್ಥೆ ಮಾಡಿಕೊಡಿ ಎಂದು ಶಾಸಕ ಮಹೇಶ ಟೆಂಗಿನಕಾಯಿ, ಸ್ಮಾರ್ಟ್ ಸಿಟಿ ಎಂಡಿ ರುದ್ರೇಶ ಗೌಳಿ ಅವರಿಗೆ ಮನವಿ ಮಾಡಿಕೊಂಡರು. ಹಳೇ ಬಸ್ ನಿಲ್ದಾಣ ಆರಂಭವಾದಾಗಿಂದ ಅಲ್ಲಿ ಆಟೋ ಸ್ಟ್ಯಾಂಡ್ ಇತ್ತು. ಈಗ ನವಿಕರಣ ಆಗುತ್ತಿದ್ದು ಆಟೋ ನಿಲ್ದಾಣಕ್ಕೂ ಸೂಕ್ತವಾದ ಸ್ಥಳ ನಿರ್ಮಿಸಿ ಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ದೆ ಹುಬ್ಬಳ್ಳಿಗೆ ಬೇರೆ ಜಿಲ್ಲೆಗಳಿಂದ, …
Read More »