Breaking News

Breaking News

ಸಿಎಂ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ : ಸಂತೋಷ ಲಾಡ್

ಧಾರವಾಡ: ಮೂಡಾ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕೇಳಿ ಬಂದಿದೆ ಸಾಬೀತು ಆಗಿಲ್ಲ ಆದ್ದರಿಂದ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ ಎಂದು ಕಲಘಟಗಿ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ನಗರದಲ್ಲಿಂದು ಮಾತಾನಾಡಿದ ಅವರು, ಬಿಜೆಪಿ ನಾಯಕರು ಕೇವಲ ರಾಜೀನಾಮೆ ಕೇಳುತ್ತಿದ್ದಾರೆ ಅವರಿಗೆ ಯಾವುದೇ ನೈತಿಕತೆ ಇಲ್ಲ, ರಾಜಕೀಯ ಬಿಟ್ಟು ಬೇರೆ ನೋಡಿಕೊಳ್ಳುವಂತೆ ಒತ್ತಾಯ ಮಾಡಿದರು.

Read More »

ಸಿದ್ದರಾಮಯ್ಯ ರಾಜೀನಾಮೆ ಕೊಡುವ ಮಾತೇ ಇಲ್ಲಾ : ಡಿಕೆಶಿ

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿಯನ್ನು ರಾಜ್ಯಪಾಲರು ನೀಡಿದ್ದಾರೆ. ಥಾವರಚಂದ ಗೆಹ್ಲೋಟ್ ನಡೆ ರಾಜ್ಯ ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಶನಿವಾರ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17-ಎ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್-2023ರ ಸೆಕ್ಷನ್ 218ರ ಅಡಿಯಲ್ಲಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ. …

Read More »

ಸಿಡಿಲು ಬಡಿದು ಬರೋಬ್ಬರಿ 106 ಕುರಿ ಸಾವು

ಚಿತ್ರದುರ್ಗ: ಸಿಡಿಲು ಬಡಿದು ಬರೋಬ್ಬರಿ 106 ಕುರಿಗಳು ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಮದ ಬಳಿ ನಿನ್ನೆ(ಶುಕ್ರವಾರ) ನಡೆದಿದೆ. ಕುರಿಗಳ‌ ಮಾರಣಹೋಮದಿಂದ ಕುರಿಗಾಹಿಗಳು ಲಕ್ಷಾಂತರ ರೂ. ನಷ್ಟಕ್ಕೆ ಸಿಲುಕಿದ್ದಾರೆ. ಕಳೆದ ರಾತ್ರಿ ಜಾಜೂರು ಭಾಗದಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಈ ವೇಳೆ ಸಿಡಿಲು ಬಡಿದು 106 ಕುರಿಗಳು ಸಾವನ್ನಪ್ಪಿವೆ. ಪರಶುರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ರೆಹಮಾನ್ ಗೆ ನ್ಯಾಷನಲ್ ಫಿಲ್ಮ್ ಅವಾರ್ಡ್

ಭಾರತದ ಸಂಗೀತ ಮಾಂತ್ರಿಕ, ಲೆಜೆಂಡ್ ಎಆರ್ ರೆಹಮಾನ್ ಸಂಗೀತ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅದ್ಭತ ಕಂಠಸಿರಿಯ ಗಾಯಕ, ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಪ್ರಸಿದ್ಧ ಮ್ಯೂಸಿಕ್ ಕಂಪೋಸರ್ ಇವರು. ಆಗಸ್ಟ್ 16ರಂದು 70ನೇ ನ್ಯಾಷನಲ್ ಫಿಲ್ಮ್ ಅವಾರ್ಡ್ ಪಟ್ಟಿ ಘೋಷಣೆಯಾಗಿದ್ದು ಇದರಲ್ಲಿ ರೆಹಮಾನ್ ಹೆಸರು ಕೂಡಾ ಇದೆ. ಹೌದು ಒಂದಲ್ಲ ಎರಡಲ್ಲ ಬರೋಬ್ಬರಿ 7ನೇ ಸಲ ರೆಹಮಾನ್ ನ್ಯಾಷನಲ್ ಅವಾರ್ಡ್ ಗೆದ್ದಿದ್ದಾರೆ.2022ರಲ್ಲಿ ರಿಲೀಸ್ ಆದ ಸಿನಿಮಾಗಳಿಗೆ ಸಂಬಂಧಿಸಿದಂತೆ ನ್ಯಾಷನಲ್ …

Read More »

ಟಿಪ್ಪರ್ ಚಾಲಕನ ನಿರ್ಲಕ್ಷ್ಯದಿಂದ ಇಬ್ಬರು ೆ

ಬೆಂಗಳೂರು: ಟಿಪ್ಪರ್ ಚಾಲಕನ ನಿರ್ಲಕ್ಷ್ಯದಿಂದ ಇಬ್ಬರು ಬಲಿಯಾಗಿರುವ ಘಟನೆ ಮೈಸೂರು ರಸ್ತೆ ಗುಡ್ಡದಹಳ್ಳಿ ಬಳಿ ನಡೆದಿದೆ. ಅಪಘಾತದ ಪರಿಣಾಮ ಮಗುವಿನ ದೇಹ ಛಿದ್ರವಾಗಿದೆ. ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಟಿಪ್ಪರ್‌ ಹರಿದಿದ್ದು, ರಹೀಮ್ 14 ವರ್ಷದವನಾಗಿದ್ದು, ಶಾಹೀ ಬ್ರಾಜಾ 21 ವರ್ಷದ ಯುವಕ ಎಂದು ಗುರುತಿಸಲಾಗಿದೆ. ಇವರಿಬ್ಬರು ಸಹೋದರರಾಗಿದ್ದು, ಇವರು ಉತ್ತರ ಪ್ರದೇಶದ ಬನಾರಸ್‌ ಮೂಲದವರಾಗಿದ್ದಾರೆ. ಚಾಲಕನ ನಿರ್ಲಕ್ಷತನವೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಈ ಅಪಘಾತದ ವೇಳೆ …

Read More »

ವೈದ್ಯಕೀಯ ಸಿಬ್ಬಂದಿ ಮೇಲೆ ಅತ್ಯಾಚಾರ ಎಸಗಿ ಕೊಲೆ:ನಗರಷ ಆಸ್ಪತ್ರೆಯ ಓಪಿಡಿ ಬಂದ್

ಧಾರವಾಡ: ರಾಜ್ಯಾದ್ಯಂತ ಪಶ್ಚಿಮ ಬಂಗಾಳದಲ್ಲಿ ನಡೆದ ವೈದ್ಯಕೀಯ ಸಿಬ್ಬಂದಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಪ್ರಕರಣ ಖಂಡಿಸಿ ಧಾರವಾಡ ನಗರದಲ್ಲಿನ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯ ಓಪಿಡಿ (ಹೊರ ರೋಗಿಗಳ ಚಿಕಿತ್ಸೆ) ಬಂದ್‌ ಮಾಡಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ಧಾರವಾಡ ನಗರದ ಎಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ (ಓಪಿಡಿ) ಹೊರ ರೋಗಿಗಳ ಚಿಕಿತ್ಸೆ ಬಂದ್ ಮಾಡಲಾಗಿದ್ದು, ವೈದ್ಯಕೀಯ ಸಿಬ್ಬಂದಿ ಪ್ರಕರಣದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ.

Read More »

ಕಟ್ಟಡಗಳನ್ನು ಲೋಕಾರ್ಪಣೆ ಮಾಡಿದ ಅಬ್ಬಯ್ಯ

ಹುಬ್ಬಳ್ಳಿ: 2022-23ನೇ ಸಾಲಿನ ವಿವೇಕ ಯೋಜನೆಯಡಿ ಇಲ್ಲಿನ ಹೊಸ ಗಬ್ಲೂರಿನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ 4 ಹೊಸ ಕಟ್ಟಡಗಳನ್ನು ಶಾಸಕ ಪ್ರಸಾದ್ ಅಬ್ಬಯ್ಯ ಅವರು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯರಾದ ಮೋಹನ್ ಅಸುಂಡಿ, ವಿಜನಗೌಡರ ಪಾಟೀಲ್, ನಿಂಗಪ್ಪ ಬಡಿಗೇರ, ಮುಖಂಡರಾದ ಭೀಮಣ್ಣ ಬಡಿಗೇರ, ಹಜರತ್‌ಅಲಿ ಮುನ್ಸಿ, ಮಂಜುನಾಥ ಉಪ್ಪಾರ ಸೇರಿದಂತೆ ಮೊದಲಾದ ಗಣ್ಯರು ಇದ್ದರು.

Read More »

ತುಂಗಭದ್ರಾ ಆಣೆಕಟ್ಟೆಗೆ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಾಸ್ವಿ

ಹೊಸಪೇಟೆ (ವಿಜಯನಗರ): ‌ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್ ಇದ್ದ ಸ್ಥಳದಲ್ಲಿ ತಾತ್ಕಾಲಿಕ ಗೇಟ್ (ಸ್ಟಾಪ್‌ಲಾಗ್ ಗೇಟ್) ಅಳವಡಿಕೆ ಯಶಸ್ವಿಯಾಗಿರುವುದು ಶನಿವಾರ ಬೆಳಿಗ್ಗೆ ಖಚಿತವಾಗಿದ್ದು, ಇದೀಗ ಗೇಟ್‌ನ ಮೇಲ್ಭಾಗದಲ್ಲಿ ಒಂದು ಅಡಿಯಷ್ಟು ಎತ್ತರಕ್ಕೆ ನೀರು ನದಿಗೆ ಹರಿಯುತ್ತಿದೆ. ಮೊದಲ ಗೇಟ್ ಎಲಿಮೆಂಟ್ ಅನ್ನು ಯಶಸ್ವಿಯಾಗಿ ಅಳವಡಿಸಲಾಗಿತ್ತು. ಜಿಂದಾಲ್‌ ಕಂಪನಿಯಲ್ಲಿ ತಯಾರಾದ ಗೇಟ್ ಎಲಿಮೆಂಟ್‌ ಅನ್ನು ಮೊದಲಾಗಿ ಅಳವಡಿಸಲಾಗಿದೆ. ಅದೇ ಕಂಪನಿಯಿಂದ ಇನ್ನೂ ಎರಡು ಗೇಟ್‌ಗಳು ಈಗಾಗಲೇ ಅಣೆಕಟ್ಟೆ ತಲುಪಿದ್ದು, ಅದನ್ನು ಅಳವಡಿಸಿದ …

Read More »

ಆರ್ಜಿ ಕಾರ್ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಿಬಿಐ ವಶಕ್ಕೆ

ಕೋಲ್ಕತ್ತಾ: ಕೋಲ್ಕತಾದ ಆರ್ಜಿ ಕಾರ್ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಅವರನ್ನು ಸಿಬಿಐ ಶವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದೆ. ಆಗಸ್ಟ್ 9 ರಂದು ನಡೆದ ಸ್ನಾತಕೋತ್ತರ ವೈದ್ಯರ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಘೋಷ್ ಅವರನ್ನು ಸಾಲ್ಟ್ ಲೇಕ್ನ ಸಿಜಿಒ ಕಾಂಪ್ಲೆಕ್ಸ್ಗೆ ಕರೆದೊಯ್ಯಲಾಯಿತು. ಸರ್ಕಾರಿ ಸ್ವಾಮ್ಯದ ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ನಂತರ ಹಿನ್ನಡೆಯನ್ನು ಎದುರಿಸುತ್ತಿರುವ ಘೋಷ್, ಸಿಬ್ಬಂದಿಗೆ …

Read More »

ಸಿದ್ದರಾಮಯ್ಯ ನೈತಿಕತೆ ಹೊತ್ತು ರಾಜೀನಾಮೆ ನೀಡಬೇಕು : ಶೆಟ್ಟರ್

ಹುಬ್ಬಳ್ಳಿ : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಇದು ಕಾನೂನು ಬದ್ದವಾದ ಅನುಮತಿಯಾಗಿದೆ. ಹೀಗಾಗಿ ಸಿದ್ದರಾಮಯ್ಯ ನೈತಿಕತೆ ಹೊತ್ತು ರಾಜೀನಾಮೆ ನೀಡಬೇಕೆಂದು ಮಾಜಿ ಸಿಎಂ ಹಾಗೂ ಸಂಸದ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಲೇ ಬರುತ್ತಿದೆ. ಸಿಎಂ ರಾಜೀನಾಮೆ ಕೊಡಬೇಕು. ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು …

Read More »