Breaking News

Breaking News

Featured Video Play Icon

ಯಡಿಯೂರಪ್ಪನವರಂತೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಬದ್ದತೆ ಪ್ರದರ್ಶಿಸಲಿ- ಜೋಶಿ

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಪ್ರಾಸಿಕ್ಯೂಷನ್ ಅನುಮತಿ ಕೊಡಲು ರಾಜ್ಯಪಾಲರು ಸಮಯಾವಕಾಶ, ತಜ್ಞರ ಸಲಹೆ ಪಡೆದು ಸಮಗ್ರ ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ರಾಜ್ಯಪಾಲರ ಈ ಕ್ರಮ ಸರಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಈ ಕ್ರಮ ಸಾರ್ವಜನಿಕ ಜೀವನದಲ್ಲಿರುವ ಯಾವುದೇ ವ್ಯಕ್ತಿ ಶುದ್ದತೆ ಕಾಪಾಡಿಕೊಳ್ಳುವುದಕ್ಕೆ ಬಹುದೊಡ್ಡ ಹೆಜ್ಜೆಯಾಗಿದೆ. ಯಾರೇ ಇದ್ದರೂ ಸಹ ಉನ್ನತ ಸ್ಥಾನದಲ್ಲಿದವರ ಮೇಲೆ ಆರೋಪ ಬಂದಾಗ …

Read More »

ಕೆಜಿಎಫ್ ಚಿತ್ರಕ್ಕೆ ದೊರೆತ ರಾಷ್ಟ್ರಪ್ರಶಸ್ತಿ

ಕಾಂತಾರ ಹಾಗೂ ಕೆಜಿಎಫ್ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರಕಿದ್ದು ಎಲ್ಲೆಡೆಯಿಂದ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿವೆ. ನಟ ಯಶ್, ರಾಷ್ಟ್ರ ಪ್ರಶಸ್ತಿ ವಿಜೇತರಾದ ಎಲ್ಲರಿಗೂ ಹೃತ್ತೂರ್ವಕ ಅಭಿನಂದನೆಗಳು. ಕಾಂತಾರಾ ಮತ್ತು ಕೆಜಿಎಫ್ 2 ಚಿತ್ರಕ್ಕೆ ಸಿಕ್ಕ ಮನ್ನಣೆಗಾಗಿ ರಿಷಬ್‌ ಶೆಟ್ಟಿ, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರ್ ಮತ್ತು ಹೊಂಬಾಳೆ ಫಿಲ್ಸ್ ತಂಡಕ್ಕೆ ವಿಶೇಷ ಅಭಿನಂದನೆಗಳು. ಇದು ನಿಜಕ್ಕೂ ಕನ್ನಡ ಚಿತ್ರರಂಗ ರಾಷ್ಟ್ರಮಟ್ಟದಲ್ಲಿ ಮಿಂಚಿದ ಕ್ಷಣ ಎಂದು ಟ್ವಿಟ್ ಮಾಡಿ ಶುಭ ಹಾರೈಸಿದ್ದಾರೆ.

Read More »

ಹುಬ್ಬಳ್ಳಿ ವಾರ್ಡ್ ನಂಬರ 43 ರಲ್ಲಿ ನುಗ್ಗಿದ ಮಳೆ ನೀರು

ಹುಬ್ಬಳ್ಳಿ : ಮಳೆಯಿಂದಾಗಿ ಮಳೆ ನೀರಿನ ಜೊತೆಗೆ ಚರಂಡಿ ನೀರು ಕೂಡ ಮನೆ ಒಳಗೆ ನುಗ್ಗಿ ಜನರ ಜೀವನ ಅಸ್ತವ್ಯಸ್ತ ಗೊಂಡು ಘಟನೆ ಹುಬ್ಬಳ್ಳಿಯ ವಾರ್ಡ್ ನಂಬರ 43 ರಲ್ಲಿ ನಡೆದಿದೆ. ಏಕಾಏಕಿ ಮಳೆಯಿಂದ ವಾರ್ಡ್ ನಂಬರ 43 ರಲ್ಲಿ ಬರುವ, ಶಬರಿ ನಗರದ ಫರ್ಲ್ ಲೇಔಟ್‌ ಸನ್‌ಸಿಟಿ ಗಾರ್ಡನ್ ಚತುರ್ಥಿ ವಿನ್ಯಾಸ ಫೆಸ್ ಟು ಏರಿಯಾದಲ್ಲಿ ಸುಮಾರು ಮನೆಗಳಲ್ಲಿ ಮಳೆ ನೀರಿನ ಜೊತೆಗೆ ಚರಂಡಿ ನೀರು ನುಗ್ಗಿ ಅಲ್ಲಿನ …

Read More »

ವರ್ಗಾವಣೆಗೊಂಡ ಶಿಕ್ಷಕಿಗೆ ಕಣೀರಿನ ವಿಧಾಯ

ಧಾರವಾಡ: ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೀತಾ ಬೆಟಗೇರಿ ಎಂಬ ಶಿಕ್ಷಕಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸ ಇದೀಗ ವರ್ಗಾವಣೆ ಆಗಿದ್ದಾರೆ. ಸುಮಾರು 30 ವರ್ಷ ಕಾಲ ಒಂದೇ ಶಾಲೆಯಲ್ಲಿ ಪಾಠ ಮಾಡಿ ಬೇರೆ ಕಡೆ ವರ್ಗಾವಣೆಯಾಗಿದ್ದಕ್ಕೆ ತಮ್ಮ ನೆಚ್ಚಿನ ಶಿಕ್ಷಕಿಯನ್ನು ಇಡೀ ಗ್ರಾಮದಲ್ಲಿ ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು. ಇದೀಗ ಅವರು ಧಾರವಾಡದ ಗಾಂಧಿನಗರ ಬಡಾವಣೆಯ ಶಾಲೆಗೆ ವರ್ಗಾವಣೆಯಾಗಿದ್ದಾರೆ. ವಿದ್ಯಾರ್ಥಿನಿಯರು ಶಿಕ್ಷಕಿ ತಬ್ಬಿ …

Read More »

ಇಸ್ಮಾಯಿಲ್ ತಮಟಗಾರ ಹತ್ಯೆಗೆ ಸಂಚು ಖಂಡಿಸಿ ಕಮೀಷನರ್ ಗೆ ಮನವಿ ಸಲ್ಲಿಕೆ

ಧಾರವಾಡ : ನಗರದ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಹತ್ಯೆಗೆ ಸಂಚು ಖಂಡಿಸಿ ನಗರದ ಅಂಜುಮನ್‌ ಸಂಸ್ಥೆ ಆವರಣದಲ್ಲಿ ಪ್ರತಿಭಟನೆ ನಡೆಸಿ, ಪೊಲೀಸ್‌ ಆಯುಕ್ತ ಎನ್ ಶಶಿಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ರೆವರೆಂಡ್ ಕೆ. ಕಾಂತರಾವ್, ಮೌಲಾನಾ ಮೊಹಮ್ಮದ್ ಯೂಸುಫ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪೊಲೀಸರ ಸೂಚನೆಯಂತೆ ಬೃಹತ್ ಮೆರವಣಿಗೆ ಮೊಟಕುಗೊಳಿಸಿ, ಹತ್ಯೆಗೆ ಸಂಚು ರೂಪಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

Read More »

ಹೆಸರು ಖರೀದಿ ಕೇಂದ್ರ ತೆರೆಯುವಂತೆ ಎಂ.ಆರ್.ಪಾಟೀಲ್ ಮನವಿ

ಕುಂದಗೋಳ : ಕರ್ನಾಟಕ ಸರ್ಕಾರದ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರಿಗೆ ಹೆಸರು ಖರೀದಿ ಕೇಂದ್ರ ತೆರೆಯುವಂತೆ ಶಾಸಕ ಎಂ.ಆರ್.ಪಾಟೀಲ್ ಮನವಿ ಮಾಡಿದ್ದಾರೆ. ಪ್ರಸ್ತುತ ವರ್ಷ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕುಂದಗೋಳ ಮತಕ್ಷೇತ್ರದಲ್ಲಿ ರೈತರು ಹೆಸರು ಬೆಳೆ ಬೆಳೆದಿದ್ದಾರೆ.ಆ ಬೆಳೆಗೆ ಖಾಸಗಿ ವರ್ತಕರಿಂದ ಬೆಂಬಲ ಬೆಲೆ ದೂರವಾಗಿದೆ, ಸರ್ಕಾರ ಈಗಾಗಲೇ ಬೆಂಬಲ ಬೆಲೆ ರೂ. 8662 ಘೋಷಣೆ ನಿಗದಿ ಮಾಡಿದೆ, …

Read More »

ಕಾರಿನಲ್ಲೇ ಉಸಿರುಗಟ್ಟಿ ಕಾರು ಚಾಲಕ ಸಾವು

ಉಡುಪಿ: ಕಾರಿನಲ್ಲೇ ಉಸಿರುಗಟ್ಟಿ ಕಾರು ಚಾಲಕನೋರ್ವ ಮೃತಪಟ್ಟ ಘಟನೆ ಮಣಿಪಾಲದಲ್ಲಿ ನಡೆದಿದೆ. ಮೃತ ಚಾಲಕನನ್ನು ಚಿಕ್ಕಮಗಳೂರು ಮೂಲದ ಆನಂದ (37) ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರಿನ ಗುರುರಾಜ್ ಎಂಬವರು ಆ.14ರಂದು ರಾತ್ರಿ ಆನಂದ ಅವರ ಕಾರಿನಲ್ಲಿ ತನ್ನ ತಂದೆಯನ್ನು ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆತಂದಿದ್ದರು. ಗುರುರಾಜ್ ಅವರ ತಂದೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆ ಬಳಿಕ ಚಾಲಕ ಆನಂದ ಅವರು ಕೆಎಂಸಿ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿ ಕಾರಿನಲ್ಲೇ ಮಲಗಿದ್ದರು. …

Read More »

ಮಮತಾ ಬ್ಯಾನರ್ಜಿ ರಾಜೀನಾಮೆಗೆ ಭಾರತೀಯ ಜನತಾ ಪಕ್ಷ ಒತ್ತಾಯ

ಕೊಲ್ಕತ್ತಾ: ಕೊಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಭಾರತೀಯ ಜನತಾ ಪಕ್ಷ ಇಂದು ಒತ್ತಾಯಿಸಿದೆ. ಆಗಸ್ಟ್ 9ರಂದು ತರಬೇತಿ ನಿರತ ಸರ್ಕಾರಿ ಆಸ್ಪತ್ರೆಯ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ದುಷ್ಕರ್ಮಿಗಳನ್ನು ರಕ್ಷಿಸಿದ್ದಾರೆ ಎಂದು ಆರೋಪಿಸಿ ಸಿಎಂ ಮಮತಾ ಬ್ಯಾನರ್ಜಿ ರಾಜೀನಾಮೆ …

Read More »

ಹಳೇ ಬಸ್‌ ನಿಲ್ದಾಣದ ಕಟ್ಟಡ ಕಾಮಗಾರಿ ವೀಕ್ಷಿಸದ ಶಾಸಕ

ಹುಬ್ಬಳ್ಳಿ: ಇಲ್ಲಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಹಳೇ ಬಸ್‌ ನಿಲ್ದಾಣದ ಕಟ್ಟಡ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ಶಾಸಕ ಪರಿಶೀಲನೆ ನಡೆಸಿ, ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಎಂಡಿ ರುದ್ರೇಶ ಗಾಳಿ, ಪಾಲಿಕೆ ಸದಸ್ಯರಾದ ಶ್ರೀಮತಿ ಮೀನಾಕ್ಷಿ ವಂಟಮೂರಿ, ಪ್ರಮುಖರಾದ ಶ್ರೀ ರವಿ ನಾಯಕ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Read More »

ಫೈನಾನ್ಸ್‌ದವರ ಕಿರುಕುಳಕ್ಕೆ ವ್ಯಕ್ತಿ ಸಾವು

ಶಿಗ್ಗಾಂವಿ:- ಫೈನಾನ್ಸ್‌ದವರ ಕಿರುಕುಳಕ್ಕೆ ವ್ಯಕ್ತಿ ಬಲಿಯಾದ ಘಟನೆ ಶಿಗ್ಗಾಂವ ತಾಲೂಕ ತಡಸ ಗ್ರಾಮದಲ್ಲಿ ನಡೆದಿದೆ. 35 ವರ್ಷದ ಶಾಹೀದ್ ಮೀಠಾಯಿಗರ್ ಫೈನಾನ್ಸ್ ದವರ ಕಿರುಕುಳಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ರೆ. ಇತ್ತ ಆತನ ತಂದೆ ತಾಯಿ, ಹೆಂಡತಿ ಚಿಕ್ಕ ಮಕ್ಕಳು ಗೋಳಾಡುತ್ತಿರುವುದು ಒಂದು ದುರ್ವಿಧಿ. ಶಾಹೀದ್ ತಾನು ಕಷ್ಟ ಅಂತ ಹೇಳಿಕೊಂಡು ಫೈನಾನ್ಸ್ ದಲ್ಲಿ ಸ್ವಲ್ಪ ಹಣವನ್ನು ಪಡೆದಿರುತ್ತಾನೆ. ಅದು ಬಡ್ಡಿಗೆ ಬಡ್ಡಿ ಸೇರಿ ಲಕ್ಷಾಂತರ ರೂಪಾಯಿ ಆಗುತ್ತದೆ. ಆದ್ರೆ ಫೈನಾನ್ಸ್ …

Read More »