Shaikh BigTv
August 17, 2024
Breaking News, ಧಾರವಾಡ
ಧಾರವಾಡ: ರಾಜ್ಯಾದ್ಯಂತ ಪಶ್ಚಿಮ ಬಂಗಾಳದಲ್ಲಿ ನಡೆದ ವೈದ್ಯಕೀಯ ಸಿಬ್ಬಂದಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಪ್ರಕರಣ ಖಂಡಿಸಿ ಧಾರವಾಡ ನಗರದಲ್ಲಿನ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯ ಓಪಿಡಿ (ಹೊರ ರೋಗಿಗಳ ಚಿಕಿತ್ಸೆ) ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ಧಾರವಾಡ ನಗರದ ಎಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ (ಓಪಿಡಿ) ಹೊರ ರೋಗಿಗಳ ಚಿಕಿತ್ಸೆ ಬಂದ್ ಮಾಡಲಾಗಿದ್ದು, ವೈದ್ಯಕೀಯ ಸಿಬ್ಬಂದಿ ಪ್ರಕರಣದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ.
Read More »
Shaikh BigTv
August 17, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: 2022-23ನೇ ಸಾಲಿನ ವಿವೇಕ ಯೋಜನೆಯಡಿ ಇಲ್ಲಿನ ಹೊಸ ಗಬ್ಲೂರಿನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ 4 ಹೊಸ ಕಟ್ಟಡಗಳನ್ನು ಶಾಸಕ ಪ್ರಸಾದ್ ಅಬ್ಬಯ್ಯ ಅವರು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯರಾದ ಮೋಹನ್ ಅಸುಂಡಿ, ವಿಜನಗೌಡರ ಪಾಟೀಲ್, ನಿಂಗಪ್ಪ ಬಡಿಗೇರ, ಮುಖಂಡರಾದ ಭೀಮಣ್ಣ ಬಡಿಗೇರ, ಹಜರತ್‌ಅಲಿ ಮುನ್ಸಿ, ಮಂಜುನಾಥ ಉಪ್ಪಾರ ಸೇರಿದಂತೆ ಮೊದಲಾದ ಗಣ್ಯರು ಇದ್ದರು.
Read More »
BigTv News
August 17, 2024
Breaking News
ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್ ಇದ್ದ ಸ್ಥಳದಲ್ಲಿ ತಾತ್ಕಾಲಿಕ ಗೇಟ್ (ಸ್ಟಾಪ್‌ಲಾಗ್ ಗೇಟ್) ಅಳವಡಿಕೆ ಯಶಸ್ವಿಯಾಗಿರುವುದು ಶನಿವಾರ ಬೆಳಿಗ್ಗೆ ಖಚಿತವಾಗಿದ್ದು, ಇದೀಗ ಗೇಟ್‌ನ ಮೇಲ್ಭಾಗದಲ್ಲಿ ಒಂದು ಅಡಿಯಷ್ಟು ಎತ್ತರಕ್ಕೆ ನೀರು ನದಿಗೆ ಹರಿಯುತ್ತಿದೆ. ಮೊದಲ ಗೇಟ್ ಎಲಿಮೆಂಟ್ ಅನ್ನು ಯಶಸ್ವಿಯಾಗಿ ಅಳವಡಿಸಲಾಗಿತ್ತು. ಜಿಂದಾಲ್ ಕಂಪನಿಯಲ್ಲಿ ತಯಾರಾದ ಗೇಟ್ ಎಲಿಮೆಂಟ್ ಅನ್ನು ಮೊದಲಾಗಿ ಅಳವಡಿಸಲಾಗಿದೆ. ಅದೇ ಕಂಪನಿಯಿಂದ ಇನ್ನೂ ಎರಡು ಗೇಟ್‌ಗಳು ಈಗಾಗಲೇ ಅಣೆಕಟ್ಟೆ ತಲುಪಿದ್ದು, ಅದನ್ನು ಅಳವಡಿಸಿದ …
Read More »
BigTv News
August 17, 2024
Breaking News
ಕೋಲ್ಕತ್ತಾ: ಕೋಲ್ಕತಾದ ಆರ್ಜಿ ಕಾರ್ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಅವರನ್ನು ಸಿಬಿಐ ಶವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದೆ. ಆಗಸ್ಟ್ 9 ರಂದು ನಡೆದ ಸ್ನಾತಕೋತ್ತರ ವೈದ್ಯರ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಘೋಷ್ ಅವರನ್ನು ಸಾಲ್ಟ್ ಲೇಕ್ನ ಸಿಜಿಒ ಕಾಂಪ್ಲೆಕ್ಸ್ಗೆ ಕರೆದೊಯ್ಯಲಾಯಿತು. ಸರ್ಕಾರಿ ಸ್ವಾಮ್ಯದ ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ನಂತರ ಹಿನ್ನಡೆಯನ್ನು ಎದುರಿಸುತ್ತಿರುವ ಘೋಷ್, ಸಿಬ್ಬಂದಿಗೆ …
Read More »
Shaikh BigTv
August 17, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಇದು ಕಾನೂನು ಬದ್ದವಾದ ಅನುಮತಿಯಾಗಿದೆ. ಹೀಗಾಗಿ ಸಿದ್ದರಾಮಯ್ಯ ನೈತಿಕತೆ ಹೊತ್ತು ರಾಜೀನಾಮೆ ನೀಡಬೇಕೆಂದು ಮಾಜಿ ಸಿಎಂ ಹಾಗೂ ಸಂಸದ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಲೇ ಬರುತ್ತಿದೆ. ಸಿಎಂ ರಾಜೀನಾಮೆ ಕೊಡಬೇಕು. ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು …
Read More »
Shaikh BigTv
August 17, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಪ್ರಾಸಿಕ್ಯೂಷನ್ ಅನುಮತಿ ಕೊಡಲು ರಾಜ್ಯಪಾಲರು ಸಮಯಾವಕಾಶ, ತಜ್ಞರ ಸಲಹೆ ಪಡೆದು ಸಮಗ್ರ ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ರಾಜ್ಯಪಾಲರ ಈ ಕ್ರಮ ಸರಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಈ ಕ್ರಮ ಸಾರ್ವಜನಿಕ ಜೀವನದಲ್ಲಿರುವ ಯಾವುದೇ ವ್ಯಕ್ತಿ ಶುದ್ದತೆ ಕಾಪಾಡಿಕೊಳ್ಳುವುದಕ್ಕೆ ಬಹುದೊಡ್ಡ ಹೆಜ್ಜೆಯಾಗಿದೆ. ಯಾರೇ ಇದ್ದರೂ ಸಹ ಉನ್ನತ ಸ್ಥಾನದಲ್ಲಿದವರ ಮೇಲೆ ಆರೋಪ ಬಂದಾಗ …
Read More »
BigTv News
August 17, 2024
Breaking News, Crime
ಕಾಂತಾರ ಹಾಗೂ ಕೆಜಿಎಫ್ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರಕಿದ್ದು ಎಲ್ಲೆಡೆಯಿಂದ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿವೆ. ನಟ ಯಶ್, ರಾಷ್ಟ್ರ ಪ್ರಶಸ್ತಿ ವಿಜೇತರಾದ ಎಲ್ಲರಿಗೂ ಹೃತ್ತೂರ್ವಕ ಅಭಿನಂದನೆಗಳು. ಕಾಂತಾರಾ ಮತ್ತು ಕೆಜಿಎಫ್ 2 ಚಿತ್ರಕ್ಕೆ ಸಿಕ್ಕ ಮನ್ನಣೆಗಾಗಿ ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರ್ ಮತ್ತು ಹೊಂಬಾಳೆ ಫಿಲ್ಸ್ ತಂಡಕ್ಕೆ ವಿಶೇಷ ಅಭಿನಂದನೆಗಳು. ಇದು ನಿಜಕ್ಕೂ ಕನ್ನಡ ಚಿತ್ರರಂಗ ರಾಷ್ಟ್ರಮಟ್ಟದಲ್ಲಿ ಮಿಂಚಿದ ಕ್ಷಣ ಎಂದು ಟ್ವಿಟ್ ಮಾಡಿ ಶುಭ ಹಾರೈಸಿದ್ದಾರೆ.
Read More »
Shaikh BigTv
August 17, 2024
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಮಳೆಯಿಂದಾಗಿ ಮಳೆ ನೀರಿನ ಜೊತೆಗೆ ಚರಂಡಿ ನೀರು ಕೂಡ ಮನೆ ಒಳಗೆ ನುಗ್ಗಿ ಜನರ ಜೀವನ ಅಸ್ತವ್ಯಸ್ತ ಗೊಂಡು ಘಟನೆ ಹುಬ್ಬಳ್ಳಿಯ ವಾರ್ಡ್ ನಂಬರ 43 ರಲ್ಲಿ ನಡೆದಿದೆ. ಏಕಾಏಕಿ ಮಳೆಯಿಂದ ವಾರ್ಡ್ ನಂಬರ 43 ರಲ್ಲಿ ಬರುವ, ಶಬರಿ ನಗರದ ಫರ್ಲ್ ಲೇಔಟ್ ಸನ್‌ಸಿಟಿ ಗಾರ್ಡನ್ ಚತುರ್ಥಿ ವಿನ್ಯಾಸ ಫೆಸ್ ಟು ಏರಿಯಾದಲ್ಲಿ ಸುಮಾರು ಮನೆಗಳಲ್ಲಿ ಮಳೆ ನೀರಿನ ಜೊತೆಗೆ ಚರಂಡಿ ನೀರು ನುಗ್ಗಿ ಅಲ್ಲಿನ …
Read More »
Shaikh BigTv
August 17, 2024
Breaking News
ಧಾರವಾಡ: ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೀತಾ ಬೆಟಗೇರಿ ಎಂಬ ಶಿಕ್ಷಕಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸ ಇದೀಗ ವರ್ಗಾವಣೆ ಆಗಿದ್ದಾರೆ. ಸುಮಾರು 30 ವರ್ಷ ಕಾಲ ಒಂದೇ ಶಾಲೆಯಲ್ಲಿ ಪಾಠ ಮಾಡಿ ಬೇರೆ ಕಡೆ ವರ್ಗಾವಣೆಯಾಗಿದ್ದಕ್ಕೆ ತಮ್ಮ ನೆಚ್ಚಿನ ಶಿಕ್ಷಕಿಯನ್ನು ಇಡೀ ಗ್ರಾಮದಲ್ಲಿ ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು. ಇದೀಗ ಅವರು ಧಾರವಾಡದ ಗಾಂಧಿನಗರ ಬಡಾವಣೆಯ ಶಾಲೆಗೆ ವರ್ಗಾವಣೆಯಾಗಿದ್ದಾರೆ. ವಿದ್ಯಾರ್ಥಿನಿಯರು ಶಿಕ್ಷಕಿ ತಬ್ಬಿ …
Read More »
Shaikh BigTv
August 17, 2024
Breaking News
ಧಾರವಾಡ : ನಗರದ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಹತ್ಯೆಗೆ ಸಂಚು ಖಂಡಿಸಿ ನಗರದ ಅಂಜುಮನ್ ಸಂಸ್ಥೆ ಆವರಣದಲ್ಲಿ ಪ್ರತಿಭಟನೆ ನಡೆಸಿ, ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ರೆವರೆಂಡ್ ಕೆ. ಕಾಂತರಾವ್, ಮೌಲಾನಾ ಮೊಹಮ್ಮದ್ ಯೂಸುಫ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪೊಲೀಸರ ಸೂಚನೆಯಂತೆ ಬೃಹತ್ ಮೆರವಣಿಗೆ ಮೊಟಕುಗೊಳಿಸಿ, ಹತ್ಯೆಗೆ ಸಂಚು ರೂಪಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
Read More »