Breaking News

Breaking News

ಅಯೋಧ್ಯೆ ರಾಮಮಂದಿರಕ್ಕೆ ನಟ ಪ್ರಭಾಸ್ 50 ಕೋಟಿ ರೂ. ದೇಣಿಗೆ..?

ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭ ಇದೇ ತಿಂಗಳ 22ಕ್ಕೆ ಸಮೀಪಿಸುತ್ತಿದ್ದಂತೆ ಕೋಟ್ಯಂತರ ಭಾರತೀಯರಲ್ಲಿ ಉತ್ಸಾಹ ಮುಗಿಲು ಮುಟ್ಟಿದೆ. ದೇಶದ ಮೂಲೆ ಮೂಲೆಗಳಿಂದ ಭಕ್ತರು ಈ ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿದ್ದಾರೆ. ರಾಮಮಂದಿರ ತೆರೆಯುವ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಸುಮಾರು 300 ಸ್ಥಳಗಳಿಗೆ ಅನ್ನದಾನ ವ್ಯವಸ್ಥೆ ಮಾಡಲಾಗುತ್ತಿದೆ. ದೇವಾಲಯ ತೆರೆಯುವ ದಿನದಂದು ಪ್ರಭಾಸ್ ದೇಣಿಗೆ ನೀಡಲಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಅಯೋಧ್ಯೆ ಪ್ರತಿಷ್ಠಾ ದಿನದಂದು ಆಹಾರದ ವೆಚ್ಚ ಬರೋಬ್ಬರಿ 50 …

Read More »
Featured Video Play Icon

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ʻTTEʼ! ವಿಡಿಯೋ ವೈರಲ್..

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಟಿಟಿಇ ಕಪಾಳಮೋಕ್ಷ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಬರೌನಿ-ಲಕ್ನೋ ಎಕ್ಸ್ಪ್ರೆಸ್ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಟಿಟಿಇ ಪ್ರಯಾಣಿಕರಿಗೆ ಕಪಾಳಮೋಕ್ಷ ಮಾಡುತ್ತಿರುವುದನ್ನು ಕಾಣಬಹುದು. ಈ ಘಟನೆಯ ವೀಡಿಯೊವನ್ನು ಅದೇ ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಂಡ ರೈಲ್ವೆ ಟಿಟಿಇಯನ್ನು ಅಮಾನತುಗೊಳಿಸಿದೆ. ವರದಿಯ ಪ್ರಕಾರ, ಪ್ರಯಾಣಿಕನ ಹೆಸರು ನೀರಜ್ ಕುಮಾರ್. ನೀರಜ್ ಮುಜಾಫರ್ಪುರದಿಂದ ರೈಲಿನಲ್ಲಿ …

Read More »

ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುವುದು ಹೈಕಮಾಂಡಿಗೆ ಬಿಟ್ಟಿದ್ದು : ಗೃಹ ಸಚಿವ ಪರಮೇಶ್ವರ್..

ಲೋಕಸಭೆ ಚುನಾವಣೆಯಲ್ಲಿ ಕೇವಲ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರವಲ್ಲ, ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸುವುದು ಅಥವಾ ಬಿಡುವುದು ಹೈಕಮಾಂಡ್‌ ನಿರ್ಧಾರ ಮಾಡುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದರೆ ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂಬ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿಗಳ ಕುರಿತು ನಾವು ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ. …

Read More »

ಗ್ರಾಮೀಣ ಭಾಗದ ಶೇ.42ರಷ್ಟು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಬರಲ್ಲ

ಗ್ರಾಮೀಣ ಭಾರತದಲ್ಲಿ 14 ರಿಂದ 18 ವರ್ಷ ವಯಸ್ಸಿನ ಶೇ. 42 ರಷ್ಟು ಮಕ್ಕಳು ಇಂಗ್ಲಿಷ್‍ನಲ್ಲಿ ಸುಲಭವಾದ ವಾಕ್ಯಗಳನ್ನು ಓದಲು ಸಾಧ್ಯವಿಲ್ಲ ಎಂದು ವಾರ್ಷಿಕ ಶಿಕ್ಷಣದ ಸ್ಥಿತಿ ವರದಿಯಲ್ಲಿ ಬಹಿರಂಗಗೊಂಡಿದೆ. ಆದರೆ ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಸರಳ ವಿಭಜನೆಯ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ ಎಂದು ವಾರ್ಷಿಕ ಶಿಕ್ಷಣದ ಸ್ಥಿತಿ ವರದಿ ಉಲ್ಲೇಖಿಸಿದೆ. ಏಸರ್ 2023 ಬಿಯಾಂಡ್ ಬೇಸಿಕ್ಸ್ ಸಮೀಕ್ಷೆಯನ್ನು 26 ರಾಜ್ಯಗಳಾದ್ಯಂತ 28 ಜಿಲ್ಲೆಗಳಲ್ಲಿ ನಡೆಸಲಾಗಿದ್ದು, 14-18 ವರ್ಷ ವಯಸ್ಸಿನ …

Read More »

ರಾಜ್ಯ ಸರ್ಕಾರದಿಂದ ʻಗೃಹಜ್ಯೋತಿʼ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್..

ರಾಜ್ಯ ಸರ್ಕಾರವು ಗೃಹಜ್ಯೋತಿ ಫಲಾನುಭವಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಹೆಚ್ಚವರಿ ಶೇ. 10% ಬದಲಾಗಿ, 10 ಯೂನಿಟ್‌ ಉಚಿತ ವಿದ್ಯುತ್‌ ನೀಡಲು ನಿರ್ಧರಿಸಲಾಗಿದೆ. ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಹೆಚ್ಚುವರಿ 10 ಯೂನಿಟ್‌ ವಿದ್ಯುತ್‌ ನೀಡುವ ಕುರಿತು ಘೋಷಣೆಯಾಗುವ ಸಾಧ್ಯತೆ ಇದೆ…ಸದ್ಯ ಗೃಹಜ್ಯೋತಿ ಫಲಾನುಭವಿಗಳು 200 ಯೂನಿಟ್‌ ಉಚಿತ ವಿದ್ಯುತ್‌ ಪಡೆಯುತ್ತಿದ್ದಾರೆ. ಮಿತಿ ದಾಟಿದ ಬಳಕೆದಾರರು ಕಡ್ಡಾಯವಾಗಿ ಬಿಲ್‌ ಪಾವತಿ ಮಾಡುವಂತೆ ಸರ್ಕಾರ ಆದೇಶ …

Read More »

ಅಯೋಧ್ಯೆ ಶ್ರೀ ರಾಮಚಂದ್ರನಿಗೆ ವಿಶೇಷ ಅಭಿಮಾನ ತೋರಿದ ಹುಬ್ಬಳ್ಳಿ ಯುವಕ..

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೇ ಆರಂಭ ಆಗುತ್ತಿದ್ದಂತೆ, ದೇಶದಲ್ಲಿ ಎಲ್ಲಿಲ್ಲದ ಸಡಗರ ಸಂಭ್ರಮ ಮನೆಮಾಡಿದೆ. ಅದರಂತೆ ಹುಬ್ಬಳ್ಳಿಯಲ್ಲಿ ಯುವಕನೊಬ್ಬ ತನ್ನ ಕಾರಿಗೆ ಸಂಪೂರ್ಣವಾಗಿ ರಾಮ, ಹನುಮಂತನ ಸ್ಟೀಕರ್ ಮಾಡಿಸಿ, ತನ್ನ ಭಕ್ತಿಯನ್ನು ವ್ಯಕ್ತಪಡಿಸಿದ್ದಾನೆ. ಹೌದು, ನಗರದ ಹೊಸೂರಿನ ನಿವಾಸಿಯಾಗಿರುವ ಸಚಿನ್ ಮಿಸ್ಕಿನ್ ರಾಮಭಕ್ತನಾಗಿದ್ದು, ಈ ಹಿಂದಿನಿಂದಲೂ ಹಿಂದೂ ಧಾರ್ಮಿಕ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದ. ಈತ ಇದೀಗ ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ತನ್ನ …

Read More »

ರಾಮ ಪ್ರಾಣ ಪತಿಷ್ಠಾನಕ್ಕೆ ವಿರಾಟ್ ಆಗಮಿಸುವ ಮುನ್ಸೂಚನೆ ನೀಡಿದ್ದಾರೆ…

ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪಾಲ್ಗೊಳ್ಳಲು ವಿರಾಟ್ ಕೊಹ್ಲಿ ಒಂದು ದಿನದ ರಜೆ ತೆಗೆದುಕೊಂಡಿದ್ದಾರೆ. ಇದಕ್ಕಾಗಿ ಭಾರತದ ಅಗ್ರ ಬ್ಯಾಟ್ಸ್‌ಮನ್ ಈಗಾಗಲೇ ಬಿಸಿಸಿಐ ಅನುಮತಿಯನ್ನು ಸಹ ಕೋರಿದ್ದಾರೆ.ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧದ ಕೊನೆಯ ಟಿ20 ಪಂದ್ಯಕ್ಕೆ ತಯಾರಿ ನಡೆಸಿದೆ. ಜನವರಿ 17 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಈ ಪಂದ್ಯದ ನಂತರ, ರೋಹಿತ್ ಶರ್ಮಾ ಮತ್ತು ತಂಡವು ಜನವರಿ 20 ರಂದು ಹೈದರಾಬಾದ್‌ಗೆ ತೆರಳಲಿದೆ. ಅಲ್ಲಿ ಜನವರಿ 25 …

Read More »

ರಾಮ ಮಂದಿರಕ್ಕೆ ಹೋಗಿ ರಾಮ ದರ್ಶನ ಮಾಡಿಯೇ ಮಾಡುತ್ತೇನೆ : ಲಕ್ಷ್ಮಿ ಹೆಬ್ಬಾಳ್ಕರ್…

ಉಡುಪಿ: ರಾಮ ಮಂದಿರಕ್ಕೆ ಒಂದಲ್ಲ ಒಂದು ದಿನ ಹೋಗಿಯೇ ಹೋಗುತ್ತೇನೆ. ರಾಮ ಮಂದಿರ ಅವರದ್ದೂ ಅಲ್ಲ ನಮ್ಮದೂ ಅಲ್ಲ. ಅಯೋಧ್ಯಾ ರಾಮ ಮಂದಿರ 140 ಕೋಟಿ ಜನರದ್ದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.ರಾಮಮಂದಿರ ನಿರ್ಮಾಣಕ್ಕೆ ನಾನು ದೇಣಿಗೆ ನೀಡಿದ್ದೇನೆ. ರಾಮ- ಕೃಷ್ಣ, ಪರಮೇಶ್ವರನ ಮೇಲೆ ನನಗೆ ಬಹಳ ಭಕ್ತಿ ಇದೆ. ಮುಂದಿನ ದಿನಗಳಲ್ಲಿ ಅಯೋಧ್ಯೆಗೆ ಭೇಟಿ ನೀಡುವೆ ಎಂದು ಹೇಳಿದ್ದಾರೆ.ನನಗೆ ದೇವರ ಬಗ್ಗೆ ಅಪಾರ ನಂಬಿಕೆ ಇದೆ. ದೇವರು …

Read More »
Featured Video Play Icon

ನೈತಿಕ ಪೋಲಿಸ್ ಗಿರಿ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಏನಂದ್ರು ನೋಡಿ..!!

ಹುಬ್ಬಳ್ಳಿ: ರಾಜ್ಯದಲ್ಲಿ ಪದೇ ಪದೇ ನೈತಿಕ ಪೋಲಿಸ್ ಗಿರಿ ನಡೆಯುತ್ತಿರುವುದು ಖೇಧಕರ ಸಂಗತಿಯಾಗಿದೆ. ಹಾನಗಲ್’ ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪೋಲಿಸ್ ಇಲಾಖೆ ಕ್ರಮ ಕೈಗೊಂಡಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.ನಗರದ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾರು ಕೂಡಾ ನೈತಿಕ ಪೋಲಿಸ್ ಗಿರಿ ಮಾಡಬಾರದು. ಈಗಾಗಲೇ ಘಟನಾ ಸ್ಥಳಕ್ಕೆ ಹಾವೇರಿ ಎಸ್ಪಿ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ. ಸರ್ಕಾರ ಇದರ ಬಗ್ಗೆ ಕಠಿಣ …

Read More »
Featured Video Play Icon

ನಕಲಿ ವೈದ್ಯನ ಪರ ವಕಾಲತ್ತು ವಹಿಸಿದ ಕೈ ನಾಯಕನ ಚಳಿ ಬಿಡಿಸಿ ಸಚಿವ ಸ್ಥಾನದ ಘನತೆ ಹೆಚ್ಚಿಸಿದ ಸಂತೋಷ್ ಲಾಡ್…

ಧಾರವಾಡ ಪ್ರವಾಸಿ ಮಂದಿರದಲ್ಲಿ ಅಹವಾಲು ಸ್ವೀಕರಿಸುವ ವೇಳೆ ಕೈ ನಾಯಕ ಕಕ್ಕಾಬಿಕ್ಕಿ ಯಾದ ಘಟನೆ ನಡೆದಿದೆ.ಧಾರವಾಡದ ನಕಲಿ ವೈದ್ಯ ತರುಣಕುಮಾರ ರಾಯ್ ಸೀಜ್ ಆಗಿರುವ ಕ್ಲಿನಿಕ್ ಓಪನ್ ಮಾಡಿಸಿಕೊಂಡುವಂತೆಮನವಿ ಸಲ್ಲಿಸಲು ಹಾಗು ಲಾಭಿ ಮಾಡಲು ಕೈ ನಾಯಕನ ಜೊತೆ ಬಂದು ದವಾಖಾನೆಯನ್ನ ಓಪನ್ ಮಾಡಿಸಿಕೊಡುವಂತೆ ಸಚಿವರ ಬಳಿ ತರುಣಕುಮಾರರನ್ನನ್ನು ಕರೆದುಕೊಂಡು ಬಂದಿದ್ದ ಮುತ್ತುರಾಜ್ ಮಾಖಡವಾಲೆ ಮೇಲೂ ಸಂತೋಷ್ ಲಾಡ್ ಗರಂ ಆಗಿದ್ದಾರೆ.ಕಳೆದ ಕೆಲ ದಿನಗಳ ಹಿಂದೆ ತರುಣಕುಮಾರ್ ರಾಯ್ ಕ್ಲಿನಿಕ್ …

Read More »