ಉಡುಪಿ: ರಾಮ ಮಂದಿರಕ್ಕೆ ಒಂದಲ್ಲ ಒಂದು ದಿನ ಹೋಗಿಯೇ ಹೋಗುತ್ತೇನೆ. ರಾಮ ಮಂದಿರ ಅವರದ್ದೂ ಅಲ್ಲ ನಮ್ಮದೂ ಅಲ್ಲ. ಅಯೋಧ್ಯಾ ರಾಮ ಮಂದಿರ 140 ಕೋಟಿ ಜನರದ್ದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.ರಾಮಮಂದಿರ ನಿರ್ಮಾಣಕ್ಕೆ ನಾನು ದೇಣಿಗೆ ನೀಡಿದ್ದೇನೆ. ರಾಮ- ಕೃಷ್ಣ, ಪರಮೇಶ್ವರನ ಮೇಲೆ ನನಗೆ ಬಹಳ ಭಕ್ತಿ ಇದೆ. ಮುಂದಿನ ದಿನಗಳಲ್ಲಿ ಅಯೋಧ್ಯೆಗೆ ಭೇಟಿ ನೀಡುವೆ ಎಂದು ಹೇಳಿದ್ದಾರೆ.ನನಗೆ ದೇವರ ಬಗ್ಗೆ ಅಪಾರ ನಂಬಿಕೆ ಇದೆ. ದೇವರು ಯಾರ ಸ್ವತ್ತು ಅಲ್ಲ, ಹಾಗಾಗಿ ನಾನು ರಾಮ ದರ್ಶನ ಮಾಡುತ್ತೇನೆ. ಅಯೋದ್ಯೆಗೆ ಹೋಗಿಯೇ ಹೋಗುತ್ತೇನೆ ಎಂದೂ ಲಕ್ಷ್ಮಿ ಹೆಬ್ಬಾಳ್ ಕರ್ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

