Breaking News

Breaking News

ಫೆಬ್ರವರಿ ೧೧ ರಂದು ಹುಬ್ಬಳ್ಳಿಯಲ್ಲಿ ಶ್ರೀ ಕೃಷ್ಣ-ಬಲರಾಮರ ರಥಯಾತ್ರೆ..

ಹು-ಧಾ ಅವಳಿನಗರದಲ್ಲಿ ಇಸ್ಕಾನ್ ವತಿಯಿಂದ ಶ್ರೀ ಕೃಷ್ಣ ಬಲರಾಮ ರಥಯಾತ್ರೆಯನ್ನು ಫೆಬ್ರವರಿ ೧೧ ರಂದು ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಇಸ್ಕಾನ್ ಅಧ್ಯಕ್ಷ ರಾಜೀವ ಲೋಚಸ ದಾಸ್ ಹೇಳಿದರು.ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಾಯಂಕಾಲ ೪.೩೦ ರಿಂದ ೮.೩೦ ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದ ಅವರು,ಅಂದಿನ ರಥಯಾತ್ರೆಯು ನಗರದ ನೆಹರೂ ಮೈದಾನದಿಂದ ಆರಂಭವಾಗಿ ಲ್ಯಾಮಿಂಗ್ಟನ್ ರಸ್ತೆ, ಅಂಬೇಡ್ಕರ್ ಸರ್ಕಲ್, ಸ್ಟೇಷನ್ ರಸ್ತೆ, ಗಣೇಶ್ ಪೇಟ ಚೌಕ್, ಮರಾಠಾ …

Read More »

ಮಾರ್ಚ್4 ಹಾಗೂ 5 ರಂದು ಟೈಕಾನ್ ಸಮಾವೇಶ…

ಹುಬ್ಬಳ್ಳಿ: ಟೈ ವತಿಯಿಂದ ವಾರ್ಷಿಕ ವ್ಯವಹಾರ ಸಮ್ಮೇಳನವಾದ ಟೈಕಾನ್ ಹುಬ್ಬಳ್ಳಿ ಕಾರ್ಯಕ್ರಮವನ್ನು ಮಾರ್ಚ್ ೪ ಹಾಗೂ ೫ ರಂದು ಬೆ. ೧೦ ಗಂಟೆಯಿಂದ ಸಂಜೆ ೫.೩೦ ರವರೆಗೆ ನಗರದ ಡೆನಿಸನ್ಸ್ ಹೊಟೇಲ್ ನಲ್ಲಿ ಆಯೋಜನೆ ಮಾಡಲಾಗಿದೆ ಎಂದು ಟೈ ಹುಬ್ಬಳ್ಳಿ ಅಧ್ಯಕ್ಷ ಶ್ರಾವಣಿ ಪವಾರ್ ಹೇಳಿದರು.ನಗರದಲ್ಲಿ ಗುರುವಾರದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. ೪ ರಂದು ಮಹಿಳಾ ನವೋದ್ಯಮಿಗಳ ಸಮಾವೇಶ ಕಾರ್ಯಕ್ರಮ ಹಾಗೂ ಮಾ. ೫ ರಂದು ಟೈಕಾನ್ ಸಮಾವೇಶ …

Read More »

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರರ ಹೆಸರಿಸಡಲು ಒತ್ತಾಯಹುಬ್ಬಳ್ಳಿ:..

ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಶ್ರೀ ಜಗಜ್ಯೋತಿ ಬಸವೇಶ್ವರ ವಿಮಾನ ನಿಲ್ದಾಣವೆಂದು ನಾಮಕರಣ ಮಾಡಬೇಕು ಎಂದು ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಡಾ. ಶರಣಪ್ಪ ಕೊಟಗಿ ಒತ್ತಾಯಿಸಿದರು.ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ಗುಲಾಬಿ ವನದಲ್ಲಿದ್ದ ಶ್ರೀ ಜಗಜ್ಯೋತಿ ಬಸವಣ್ಣನವರ ಪುತ್ಥಳಿಯನ್ನು ತೆರವುಗೊಳಿಸಿದ್ದು, ಗುಲಾಬಿ ವನದಲ್ಲಿದ್ದ ಪುತ್ಥಳಿಯನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದ ಗೇಟ್ ಬಳಿ ಸ್ಥಾಪಿಸಬೇಕು, ಅಲ್ಲದೇ ಗುಲಾಬಿ ವನದಲ್ಲಿ ಅತೀ ವಿಸ್ತಾರವಾದ ಬಸವಣ್ಣನವರ …

Read More »

ಫೆಬ್ರವರಿ ೨೪ ರಂದು ಪ್ಯಾನ್ ಇಂಡಿಯಾ ಸಿನಿಮಾ ರಾಜ್ಯಾದ್ಯಂತ ತೆರೆಗೆ..

ಹುಬ್ಬಳ್ಳಿ: ರಿಯಾನ್ಸಿ ಫಿಲ್ಮ್ ಬ್ಯಾನರ್ ನಡಿ ನಿರ್ಮಾಣದ ಸೌಂತ್ ಇಂಡಿಯನ್ ಸಿನಿಮಾ ರಾಜ್ಯಾದ್ಯಂತ ಫೆಬ್ರವರಿ ೨೪ ರಂದು ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ನರೇಶ ಹೇಳಿದರು. ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಸ್ಟ್ ರ್ಯಾಂಕ್ ರಾಜು ಅಂತಹ ಹಿಟ್ ಸಿನಿಮಾಗಳ ನಂತರ ಇದೀಗ ಸೌಂತ್ ಇಂಡಿಯನ್ ಸಿನಿಮಾ ನಿರ್ದೇಶನ ಮಾಡಿದ್ದು, ಚಿತ್ರದ ಕಥೆ ಅದ್ಭುತವಾಗಿ ಮೂಡಿ ಬಂದಿದೆ ಎಂದ ಅವರು ಚಿತ್ರದಲ್ಲಿ ನಾಯಕ ನಟನಾಗಿ ಸಾರ್ಥಕ ಹಾಗೂ …

Read More »

ಹೃದಯಾಘಾತದಿಂದ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ನಿಧನ

ಧಾರವಾಡ : ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ಇಂದು ನಸುಕಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. 64 ವರ್ಷದ ಶಿವಾನಂದ ಅಂಬಡಗಟ್ಟಿ ಅವರಿಗೆ ಇಬ್ಬರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳು ಸೇರಿದಂತೆ ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವಿದೆ. 1989 ರಿಂದ ರಾಜಕಾರಣದಲ್ಲಿ ಇದ್ದ ಇವರು, ಲೊಹೀತ್ ನಾಯ್ಕರ್ ವಿರುದ್ಧ ಪಕ್ಷೇತರರಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ, ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಶಾಸಕರಾಗಿದ್ದರು. ನಂತರ ಕಾಂಗ್ರೆಸ್ …

Read More »

ಐಇಎಂಎಸ್ ಹುಬ್ಬಳ್ಳಿಯಲ್ಲಿ ಐದು ದಿನಗಳ ಎಮ್ ಬಿ ಎ ಮತ್ತು ಪಿ ಜಿ ಡಿ ಬಿ ಎಮ್ ಕೋರ್ಸ್ ಗಳ ಓರಿಯಂಟೇಶನ್ ಕಾರ್ಯಕ್ರಮ “ನಿರ್ಮಾಣ-2023”ರ ಉದ್ಘಾಟನಾ ಸಮಾರಂಭ

ನಗರದ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಇನ್ ಮ್ಯಾನೇಜ್ಮೆಂಟ್ ಸೈನ್ಸ್, ಹುಬ್ಬಳ್ಳಿಯಲ್ಲಿ ಐದು ದಿನಗಳ ಓರಿಯಂಟೇಶನ್ ಕಾರ್ಯಕ್ರಮದ ಉದ್ಘಾಟನೆಯನ್ನು 08ನೇ ಫೆಬ್ರವರಿ 2023 ರಂದು ಆಯೋಜಿಸಲಾಗಿತ್ತು.ಕಾರ್ಯಕ್ರಮದ ಮುಖ್ಯ ಅತಿಥಿ ಎ.ಆರ್.ವಿನಯ್ ಜವಳಿ, ಅಧ್ಯಕ್ಷರು , ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಹುಬ್ಬಳ್ಳಿ ಮಾತನಾಡುತ್ತ ಕಲಿಕೆಯು ನಿರಂತರ ಪ್ರಕ್ರಿಯೆಯಾಗಿದ್ದು , ಮ್ಯಾನೇಜ್ಮೆಂಟ್ ಪದವೀಧರರಿಗೆ ಉದ್ಯಮದಲ್ಲಿ ಸಾಕಷ್ಟು ಅವಕಾಶಗಳಿವೆ, ಮೊಲ ಜ್ಞಾನದೊಂದಿಗೆ ಸೂಕ್ತ ಕೌಶಲ್ಯವನ್ನು ಹೊಂದಿರುವುದು ತೀರಾ ಅಗತ್ಯವಾಗಿದೆ. ವಿಶೇಷ ಕ್ಷೇತ್ರದಲ್ಲಿನ ನೈಪುಣ್ಯತೆ …

Read More »

ಬೈಕ್ ಮೇಲಿಂದ ಸ್ಕಿಡ್ ಆಗಿ ಬಿದ್ದ ಯುವಕ ಸಾವು

ಹುಬ್ಬಳ್ಳಿ: ಯುವಕನೊಬ್ಬ ಬೈಕ್ ಮೇಲಿಂದ ಸ್ಕಿಡ್ ಆಗಿ ಬಿದ್ದ ಪರಿಣಾಮ ತಲೆಗೆ ಗಂಭೀರ ಏಟಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಹುಬ್ಬಳ್ಳಿಯಲ್ಲಿ ಮಂಗಳವಾರ ರಾತ್ರಿ 2-30 ರ ಸುಮಾರಿಗೆ ನಡೆದಿದೆ. ಆನಂದ ನಗರದ ನಿವಾಸಿಯಾದ ಸಲಿಂ ಎಂಬ ಯುವಕ ನಿನ್ನೆ ತಡರಾತ್ರಿ ಮನೆಗೆ ಹೋಗುತ್ತಿದ್ದಾಗ ಇಂದಿರಾ ನಗರದ ಬಳಿ ಇರುವ ರಿಲಾಯನ್ಸ್ ಪೆಟ್ರೋಲ್ ಪಂಪ್ ಬಳಿಯಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸಲೀಮ್ ತಲೆಗೆ ಗಂಭೀರ ಏಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. …

Read More »

ಸರ್ಕಾರವು ಸಾಕಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ-ಚಾಮರಸ ಮಾಲಿಪಾಟೀಲ

ಧಾರವಾಡ: ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಸಾಕಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷವು 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ಅಧ್ಯಕ್ಷ ಚಾಮರಸ ಮಾಲಿಪಾಟೀಲ ತಿಳಿಸಿದರು.ರಾಜಕೀಯದಿಂದ ಭ್ರಷ್ಟಾಚಾರವನ್ನು ದೂರ ಮಾಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಈ ಬಾರಿ ಯುವ ಸಮುದಾಯಕ್ಕೆ ಹೆಚ್ಚಿನ ಸ್ಥಾನಗಳನ್ನು ನೀಡಲಾಗುತ್ತಿದೆ, ರಾಜಕೀಯ ಎಂಬುದು ಹಣ ಗಳಿಕೆಯ ಉದ್ಯೋಗವಲ್ಲ ಅದು ಸೇವಾ ಕ್ಷೇತ್ರ ಎಂಬುದನ್ನು ಯುವಜನತೆಗೆ ತಿಳಿಸುವ …

Read More »

ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

ಹುಬ್ಬಳ್ಳಿ : ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಸಂಘಟಿತ ಕಾರ್ಮಿಕರ ಒಕ್ಕೂಟ ಇದರ ಸಹಯೋಗದಲ್ಲಿ ಬಸವಶ್ರೀ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಫೆಬ್ರವರಿ ೧೨ ರಂದು ಕಾರ್ಮಿಕರ ಸಚಿವರ ಮನೆ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ದುರ್ಗಪ್ಪ ಚಿಕ್ಕತುಂಬಳ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕ ಇಲಾಖೆಯು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ೧೪ ಸೌಲಭ್ಯಗಳನ್ನು ನೀಡುವುದಾಗಿ …

Read More »

ಹುಬ್ಬಳ್ಳಿ: ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಚಿವರ ಮನೆಗೆ ಮುತ್ತಿಗೆ.

ಹುಬ್ಬಳ್ಳಿ : ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಸಂಘಟಿತ ಕಾರ್ಮಿಕರ ಒಕ್ಕೂಟ ಇದರ ಸಹಯೋಗದಲ್ಲಿ ಬಸವಶ್ರೀ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಫೆಬ್ರವರಿ ೧೨ ರಂದು ಕಾರ್ಮಿಕರ ಸಚಿವರ ಮನೆ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ದುರ್ಗಪ್ಪ ಚಿಕ್ಕತುಂಬಳ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕ ಇಲಾಖೆಯು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ೧೪ ಸೌಲಭ್ಯಗಳನ್ನು ನೀಡುವುದಾಗಿ …

Read More »