Breaking News

Breaking News

ಐಪಿಎಸ್ ಅಧಿಕಾರಿ ಆರ್. ದಿಲೀಪ್ ನಿಧನ

ಬೆಂಗಳೂರು: ಐಪಿಎಸ್ ಅಧಿಕಾರಿ ಆರ್. ದಿಲೀಪ್ ಇಂದು ಅನಾರೋಗ್ಯದ ಹಿನ್ನೆಲೆಯಲ್ಲಿ ಕೊನೆ ಉಸಿರು ಎಳೆದಿದ್ದಾರೆ. ಸಿಐಡಿ ಆರ್ಥಿಕ ಅಪರಾಧ ವಿಭಾಗದಲ್ಲಿ ದಿಲೀಪ್ ಅವರು ಡಿಐಜಿಯಾಗಿದ್ದರು. ಹುಬ್ಬಳ್ಳಿ ಧಾರವಾಡದಲ್ಲಿ ಕಮಿಷನರ್ ಆಗಿ ಉತ್ತಮ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದು, ಯಕೃತ್ತು ಕಸಿ ಮಾಡಿಸಲಾಗಿತ್ತು. ಚಿಕಿತ್ಸೆ ಬಳಿಕ ದಿಲೀಪ್ ಅವರು ಮತ್ತೆ ಕರ್ತವ್ಯಕ್ಕೆ ಮರಳಿದ್ದರು. ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿ ಅಪೋಲೊ ಅಸ್ಪತ್ರೆಗೆ ಮತ್ತೆ ದಾಖಲಾಗಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ …

Read More »

ಮಹದಾಯಿ ವಿಚಾರದಲ್ಲಿ ಬಿಜೆಪಿ ಉ. ಕ. ಜನರಿಗೆ ದ್ರೋಹ, ಮೋಸ ಮಾಡುತ್ತಿದೆ : ಡಿಕೆಶಿ ಆರೋಪ

ಹುಬ್ಬಳ್ಳಿ:  ಮಹದಾಯಿ ವಿಚಾರದಲ್ಲಿ ಬಿಜೆಪಿಯವ್ರು ಉತ್ತರ ಕರ್ನಾಟಕದ ಜನರಿಗೆ ದ್ರೋಹ, ಮೋಸ ಮಾಡುತ್ತಿದ್ದಾರೆಂದು ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ‌. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,  ತ್ರಿಬಲ್ ಇಂಜಿನ್ ಸರ್ಕಾರ ಜನರಿಗೆ ನ್ಯಾಯ ಒದಗಿಸಬೇಕು. ಜನ ನಮ್ಮ ಬೆಂಬಲ ನೀಡುತ್ತಾರೆ ಅಂತಾ ತರಾತುರಿಯಲ್ಲಿ ಡೇಟ್ ಇಲ್ಲದೆ ಇರುವ ಕಾಗದ ತೋರಿಸಿದ್ದಾರೆ. ರಾಜಕೀಯ ಲಾಭಕೊಸ್ಕರ ಸುಳ್ಳು ಹೇಳುತ್ತಿದ್ದಾರೆ.‌ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ, …

Read More »

ಕಳಸಾ ಬಂಡೂರಿ ವಿಸ್ತೃತ ಯೋಜನಾ ವರದಿಗೆ ಅನುಮತಿ
ನೀಡಿರುವುದು ಸ್ವಾಹತಾರ್ಹ : ಶಾಸಕ ಅಮೃತ ದೇಸಾಯಿ.

ಧಾರವಾಡ : ನೆನೆಗುದಿಗೆ ಬಿದ್ದಿರುವ ಯೋಜನೆಗೆ ಅನುಮೋದನೆ ನೀಡಿರುವುದು ಕೇಂದ್ರ ಸರಕಾರಕ್ಕೆ ಉತ್ತರ ಕರ್ನಾಟಕದ ಜನರ ಬಗೆಗಿನ ಕಾಳಜಿ ಬಿಂಬಿಸುತ್ತದೆ. ಪ್ರಧಾನಿ ಸನ್ಮಾನ್ಯ ನರೇಂದ್ರ ಮೋದಿ, ಕೇಂದ್ರ ಜಲ ಶಕ್ತಿ ಸಚಿವರಾದ ಗಜೇಂದ್ರಸಿಂಗ ಶೇಖಾವತ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಶಾಸಕ ಅಮೃತ ದೇಸಾಯಿತಿಳಿಸಿದ್ದರು. ಕಳಸಾ ಬಂಡೂರಿ ಯೋಜನೆಯ ಅನುಮೋದನೆಯ ವಿಸ್ತೃತ ಯೋಜನಾ ವರದಿಯನ್ನು ನಿರೂಪಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ರಾಜ್ಯದ ನೀರಾವರಿ …

Read More »

ಜೈನ ಧರ್ಮ ಅತ್ಯಂತ ಪವಿತ್ರವಾದ ಧರ್ಮ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಳಗಾವಿ : ಜೈನ ಧರ್ಮ ಅತ್ಯಂತ ಪವಿತ್ರ ಧರ್ಮವಾಗಿದ್ದು, ಭಗವಾನ್ ಮಹಾವೀರರು ನಮಗೆ ಸ್ಪೂರ್ತಿ ಮತ್ತು ಪ್ರೇರಣೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಹೊಸೂರು ಜೈನ್ ಬಸದಿ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ನೆರವೇರಿಸಿದರು ಹಾಗೂ ಶ್ರೀ ಪಟ್ಟಾಚಾರ್ಯ ಲಕ್ಷ್ಮಿ ಸೇನ ಮಹಾರಾಜರು ಕೊಲ್ಲಾಪುರ ಮತ್ತು ಶ್ರೀ ಸ್ವಸ್ತಿಕ ಜೀವಸೇನ ಭಟ್ಟಾರಕ ಸ್ವಾಮೀಜಿ, ನಾಂದಿನಿ , ಇವರ ಬೆಳಗಾವಿ ಮಂಗಲಪುರ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ …

Read More »

ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ

ನವದೆಹಲಿ : ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಜನ ಸಾಮಾನ್ಯರಿಗೆ ನೆಮ್ಮದಿ ತರುವ ನಿರ್ಧಾರ ಕೈಗೊಳ್ಳಲಾಗಿದೆ. ಬೇಳೆಕಾಳುಗಳು, ಖಾದ್ಯ ತೈಲ, ಸಿರಿಧಾನ್ಯಗಳು ಇತ್ಯಾದಿಗಳ ಬಗ್ಗೆ ಪ್ರಮುಖ ಘೋಷಣೆ ಮಾಡಿದೆ. ಅದ್ರಂತೆ, ಕೇಂದ್ರ ಸರ್ಕಾರ ಕಾಂಡಿ ಬೇಳೆಕಾಳು ಮತ್ತು ಕಡಲೆಗಳ ಉಚಿತ ಆಮದನ್ನ ವಿಸ್ತರಿಸುತ್ತಿದೆ ಎಂದು ತಿಳಿದುಬಂದಿದೆ. ಉಚಿತ ಆಮದು ಇನ್ನೂ ಒಂದು ವರ್ಷ ಅಂದರೆ 31 ಮಾರ್ಚ್ 2024 ರವರೆಗೆ ಮುಂದುವರಿಯುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 2022-23ರ …

Read More »

ತೆಲುಗಿನ ಹಿರಿಯ ನಟ ವಲ್ಲಭನೇನಿ ಜನಾರ್ಧನ್ ನಿಧನ

ಹೈದರಬಾದ್:‌ ತೆಲುಗಿನ ಹಿರಿಯ ನಟ ಮತ್ತು ನಿರ್ದೇಶಕ ವಲ್ಲಭನೇನಿ ಜನಾರ್ಧನ್ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ. 1959ರಲ್ಲಿ ಏಲೂರು ಸಮೀಪದ ಪೋತುನೂರಿನಲ್ಲಿ ಜನಿಸಿದ ಜನಾರ್ದನ್ ಬಹಳ ಆಸೆಯಿಂದ ಚಿತ್ರರಂಗ ಪ್ರವೇಶಿಸಿದ್ದರು. ತಮ್ಮ 21ನೇ ವಯಸ್ಸಿನಲ್ಲಿ ‘ಅಮಾಯಕ ಚಕ್ರವರ್ತಿ’ ಸಿನಿಮಾ ನಿರ್ದೇಶಿಸಿದ್ದರು. ಚಿರಂಜೀವಿಯ ‘ಗ್ಯಾಂಗ್ ಲೀಡರ್’ ಸಿನಿಮಾದಲ್ಲಿ ಸುಮಲತಾ ತಂದೆಯ ಪಾತ್ರದಲ್ಲಿ ನಟಿಸಿದ್ದರು. ಹಲವು ಸಿನಿಮಾಗಳನ್ನೂ ನಿರ್ಮಿಸಿದ್ದಾರೆ.

Read More »

ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆವಿಲ್ಲ : ಸಚಿವ ಮಧುಸ್ವಾಮಿ

ಬೆಳಗಾವಿ: ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಪ್ರಸ್ತಾವನೆ ನಮ್ಮ ಸರ್ಕಾರದ ಮುಂದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಹೇಳಿಕೆಯನ್ನು ವಿರೋಧಿಸಿ ಆಡಳಿತ ಪಕ್ಷಗಳ ಸದಸ್ಯರು ಸೇರಿದಂತೆ ಹಲವರು ಸಭಾತ್ಯಾಗ ನಡೆಸಿದ ಪ್ರಸಂಗ ವಿಧಾನ ಪರಿಷತ್‍ನಲ್ಲಿ ನಡೆಯಿತು. ಪ್ರಶ್ನೋತ್ತರದ ಅವಧಿಯಲ್ಲಿ ತಳವಾರ್ ಸಾಬಣ್ಣ, 2006ರ ನಂತರ ನೇಮಕವಾದ ರಾಜ್ಯ ಸರ್ಕಾರಿ ನೌಕರರಿಗೆ ಜಾರಿಯಲ್ಲಿರುವ ಹೊಸ ಪಿಂಚಣಿ ಯೋಜನೆ (ಎನ್ ಪಿಎಸ್) ಅನ್ನು ಹಳೆ ಪಿಂಚಣಿ (ಓಪಿಎಸ್) …

Read More »

ಕಾಡುಕೋಣ ತಿವಿದು ವ್ಯಕ್ತಿಯೋರ್ವ ಸಾವುಚಿಕ

ಕಳಸ,(ಚಿಕ್ಕಮಗಳೂರು): ತಾಲೂಕಿನ ತೋಟದೂರು ಸಮೀಪ ಕಾಡುಕೋಣ ತಿವಿದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಸೋಮಶೇಖರ್ (45) ಮೃತ ವ್ಯಕ್ತಿಯಾಗಿದ್ದು, ಇವರು ಕೊಪ್ಪ ತಾಲೂಕಿನ ಜಯಪುರ ನಿವಾಸಿ ಎಂದು ತಿಳಿದು ಬಂದಿದೆ. ಇವರು ತೋಟದೂರು ಗ್ರಾಪಂ ವ್ಯಾಪ್ತಿಯ ಕುಳಿಹಿತ್ತಲು ಎಂಬ ಗ್ರಾಮದಲ್ಲಿ ಅರ್ಧ ಎಕರೆಯಷ್ಟು ಜಮೀನು ಹೊಂದಿದ್ದು, ಗುರುವಾರ ಬೆಳಗ್ಗೆ ತಮ್ಮ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ತೋಟಕ್ಕೆ ನುಗ್ಗಿ ಬಂದ ಕಾಡುಕೋಣ ಸೋಮಶೇಖರ್ ಅವರ ಮೇಲೆ ದಿಢೀರ್ ದಾಳಿ …

Read More »

ಅದ್ದೂರಿಯಾಗಿ ನೆರವೇರಿದ
ರಾಧಿಕಾ ಮರ್ಚೆಂಟ್​ ಅನಂತ್ ಅಂಬಾನಿ ನಿಶ್ಚಿತಾರ್ಥ

ಮುಂಬೈ: ಉದ್ಯಮಿ ಮುಕೇಶ್​ ಅಂಬಾನಿ ಮತ್ತು ನಿತಾ ಅಂಬಾನಿ ಮಗ ಅನಂತ್​ ಅಂಬಾನಿ ನಿಶ್ಚಿತಾರ್ಥ ಕಾರ್ಯ ಇಂದು ರಾಜಸ್ಥಾನದಲ್ಲಿ ನಡೆದಿದೆ. ಉದ್ಯಮಿ ವಿರೇನ್​ ಮರ್ಚೆಂಟ್​ ಮತ್ತು ಶೈಲಾ ಮರ್ಚೆಂಟ್​​ ಅವರ ಮಗಳಾದ ರಾಧಿಕಾ ಮರ್ಚೆಂಟ್​ ಅವರ ಕೈಗೆ ಅನಂತ್​​ ಉಂಗುರ ತೊಡಿಸಿದ್ದು, ಈ ಸಮಾರಂಭದಲ್ಲಿ ಎರಡು ಕುಟುಂಬಗಳು ಸಾಕ್ಷಿಯಾದವು. ರಾಜಸ್ಥಾನದ ಪ್ರಖ್ಯಾತ ಶ್ರೀನಾಥ್​​ಜೀ ದೇಗುಲದಲ್ಲಿ ಇಂದು ರೋಕಾ (ನಿಶ್ಚಿತಾರ್ಥ) ನೇರವೇರಿತು. ಅನಂತ್​ ಮತ್ತು ರಾಧಿಕ ಇಬ್ಬರು ಹಲವು ದಿನಗಳಿಂದ ಪರಿಚಿತರಾಗಿದ್ದರು. …

Read More »

ಪ್ರಧಾನಿ ನರೇಂದ್ರ ಮೋದಿ ತಾಯಿ ನಿಧನ

ಅಹಮದಾಬಾದ್: ಕಳೆದ ಎರಡು ದಿನಗಳಿಂದ ಅಹ್ಮದಾಬಾದ್ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಂತ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾ ಬೇನ್ ಮೋದಿ ಅವರು, ಇಂದು ಚಿಕಿತ್ಸೆ ಫಲಿಸದೇ ನಿಧನರಾಗಿರೋದಾಗಿ ತಿಳಿದು ಬಂದಿದೆ. ಈ ಬಗ್ಗೆ ಟ್ವಿಟ್ ಮಾಡಿರುವಂತ ಪ್ರಧಾನಿ ಮೋದಿಯವರು, ತಮ್ಮ ತಾಯಿ ಹೀರಾಬೇನ್ ಮೋದಿಯವರು 100ನೇ ವಯಸ್ಸಿನಲ್ಲಿ ನಿಧನರಾಗಿರೋದಾಗಿ ತಿಳಿಸಿದ್ದಾರೆ.

Read More »