BigTv News
December 26, 2022
Breaking News, ಬೆಂಗಳೂರು
ಬೆಂಗಳೂರು: ಚೀನಾದಲ್ಲಿ ಮತ್ತೆ ಭಯ ಹುಟ್ಟಿಸಿರುವ ರೂಪಾಂತರಿ ಕೊರೊನಾ ಬಗ್ಗೆ ರಾಜ್ಯದಲ್ಲೂ ಆತಂಕ ಶುರುವಾಗಿದೆ. ರಾಜ್ಯ ಸರ್ಕಾರದ ಒಂದಷ್ಟು ತಯಾರಿಗಳ ಮಧ್ಯೆಯೂ ಕೊರೊನಾ ಬಿಎಫ್7 ಈಗಾಗಲೇ ಬಂದುಬಿಟ್ಟಿದ್ಯಾ ಎಂಬ ಭಯ ಶುರುವಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ 24 ದಿನಗಳಲ್ಲಿ ಒಟ್ಟು ಏಳು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಹಾಗೆಯೇ ನವೆಂಬರ್ರಲ್ಲಿ 8 ಪಾಸಿಟಿವ್ ಪ್ರಕರಣ ಪತ್ತೆ ಆಗಿವೆ. ಇದು ಕೊರೊನಾದ BF.7 ತಳಿಯೇ ಎಂಬ ಭಯ ಶುರುವಾಗಿದೆ. ಯಾಕಂದ್ರೆ …
Read More »
BigTv News
December 26, 2022
Breaking News, ಕಲಬುರಗಿ
ಕಲಬುರಗಿ: ಧರಂಸಿಂಗ್ ಅವರ 86 ನೆಯ ಜನ್ಮದಿನದ ಸಂದರ್ಭದಲ್ಲಿ ಅವರ ಹೆಸರಿನಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಿ 108 ಜೋಡಿಗಳ ಸಾಮೂಹಿಕ ವಿವಾಹ ನೆರವೇರಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಇದೊಂದು ಬಡವರ ಪರವಾದ ಕಾರ್ಯವಾಗಿದ್ದು, ಶ್ಲಾಘನೀಯ ಎಂದರು. ನಂತರ ಮಾತನಾಡಿದ ಅವರು “2004 ರಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ಜೆಡಿಎಸ್ ಹಾಗೂ ಕಾಂಗ್ರೆಸ್ ಅಧಿಕಾರದಲ್ಲಿತ್ತು. ನಾನಾಗ ಜೆಡಿಎಸ್ ಅಧ್ಯಕ್ಷನಾಗಿದ್ದೆ. ಅಂದು ನಡೆದ ಮಾತುಕತೆಯಂತೆ ಧರಂಸಿಂಗ್ ಸಿಎಂ ಆದರು ನಾನು ಉಪಮುಖ್ಯಮಂತ್ರಿಯಾಗಿ …
Read More »
BigTv News
December 26, 2022
Breaking News, ಬೆಳಗಾವಿ
ಬೆಳಗಾವಿ : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ನವದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಸಚಿವ ಸಂಪುಟ ವಿಸ್ತರಣೆ, ಮೀಸಲಾತಿ ಮರು ಹಂಚಿಕೆಗೆ ಕೇಂದ್ರದ ಅನುಮತಿ ಪಡೆಯಲು. ಅಲ್ಲದೆ, ನೆನಗುದಿಗೆ ಬಿದ್ದಿರುವ ವಿವಿಧ ಯೋಜನಗಳಿಗೆ ಅನುಮೋದನೆ ಮತ್ತು ಅನುದಾನ ಬಿಡುಗಡೆಗೆ ಮನವಿ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 2023-24ನೇ ಸಾಲಿನ ಬಜೆಟ್ ಬಗ್ಗೆ ಕೇಂದ್ರದಿಂದ ಹೆಚ್ಚಿನ ಅನುದಾನ, ಯೋಜನೆಗಳ ಜೊತೆಗೆ ಮಹತ್ವದ ಯೋಜನೆಗಳ ಘೋಷಣೆಗೆ ಅನುಮತಿ ಪಡೆಯಲು ಕಸರತ್ತು ನಡೆಸಲಿದ್ದಾರೆ. ಅಂತೆಯೇ ಪ್ರಧಾನಿ …
Read More »
BigTv News
December 26, 2022
Breaking News, ಬೆಂಗಳೂರು
ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದೆ ಮಾಂಡೌಸ್ ಚಂಡಮಾರುತದಿಂದ ಕರ್ನಾಟಕದಾದ್ಯಂತ ಮಳೆಯ ಅಬ್ಬರ ಉಂಟಾಗಿತ್ತು.ನಾಲ್ಕೈದು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಇದೀಗ ಮತ್ತೆ ಅಬ್ಬರಿಸತೊಡಗಿದ್ದಾನೆ. ಇಂದಿನಿಂದ 3 ದಿನಗಳ ಕಾಲ ಕರ್ನಾಟಕದ ಹಲವೆಡೆ ಸಾಧಾರಣ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ 9 ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆಯಿದೆ.ಬೆಂಗಳೂರಿನಲ್ಲಿ ಭಾನುವಾರ ಕೂಡ ಇಡೀ ದಿನ ಮೋಡ ಕವಿದ ವಾತಾವರಣವಿತ್ತು. ಕೆಲವೆಡೆ …
Read More »
BigTv News
December 25, 2022
Breaking News
ಬಾಗ್‌ಡೋಗರಾ/ ಗ್ಯಾಂಗ್ಟಕ್ (ಪಿಟಿಐ): ಸಿಕ್ಕಿಂನ ಝೆಮಾ ಪ್ರದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ 16 ಮಂದಿ ಸೈನಿಕರ ಮೃತದೇಹಗಳಿಗೆ ಪಶ್ಚಿಮ ಬಂಗಾಳದ ಬಾಗ್‌ಡೊಗರ ವಿಮಾನ ನಿಲ್ದಾಣದಲ್ಲಿ ಶನಿವಾರ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು. ‘ವಾಯುಪಡೆಯ ವಿಶೇಷ ವಿಮಾನಗಳಲ್ಲಿ 15 ಸೈನಿಕರ ಮೃತದೇಹಗಳನ್ನು ಅವರವರ ಊರುಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು. ಬಿಹಾರದ ಒಬ್ಬ ಸೈನಿಕನ ಮೃತದೇಹವನ್ನು ರಸ್ತೆ ಮಾರ್ಗದ ಮೂಲಕವಾಗಿ ಕಳುಹಿಸಿಕೊಡಲಾಯಿತು’ ಎಂದು ಸೇನೆ ತಿಳಿಸಿದೆ. 16 ಮಂದಿ ಸೈನಿಕರ …
Read More »
BigTv News
December 25, 2022
Breaking News
ಹೊಸ ಕರೋನವೈರಸ್ ರೂಪಾಂತರವಾದ B.F7 ನಿಂದ ಕೋವಿಡ್ ಪ್ರಕರಣಗಳಲ್ಲಿ ಜಾಗತಿಕವಾಗಿ ಉಲ್ಬಣಗೊಳ್ಳುತ್ತವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಕೆ ಸುಧಾಕರ್ ʼಬೂಸ್ಟರ್ ಡೋಸ್ ತೆಗೆದುಕೊಳ್ಳುವಂತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ. “ಕರ್ನಾಟಕದ ಜನರಿಗೆ ಆದಷ್ಟು ಬೇಗ ಬೂಸ್ಟರ್ ಡೋಸ್ ತೆಗೆದುಕೊಳ್ಳುವಂತೆ ನಾನು ಮನವಿ ಮಾಡುತ್ತೇನೆ. ಜನರು ಮಾಸ್ಕ್ ಧರಿಸಿ ಓಡಾಡಬೇಕು. ವಿಶೇಷವಾಗಿ ಒಳಾಂಗಣ ಸ್ಥಳಗಳಲ್ಲಿ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು” ಎಂದು ಕೆ ಸುಧಾಕರ್ …
Read More »
BigTv News
December 25, 2022
Breaking News, ಬೆಂಗಳೂರು
ಬೆಂಗಳೂರು: ಜನವರಿಯಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಶೀಘ್ರವೇ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ. ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ(ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆಯ ತಿದ್ದುಪಡಿಯನ್ನು ಅಧಿಕೃತ ಗೆಜೆಟ್ ನಲ್ಲಿ ಪ್ರಕಟಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್ ಸಮ್ಮತಿಸಿದ್ದಾರೆ. ಮುಂದಿನ ತಿಂಗಳು ಜನವರಿ ಅಂತ್ಯದೊಳಗೆ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಲಾಗಿದೆ. ಶಿಕ್ಷಕರ ಸ್ನೇಹಿ ವರ್ಗಾವಣೆ ನಿಯಮ ರೂಪಿಸಿ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ(ಶಿಕ್ಷಕರ ವರ್ಗಾವಣೆ …
Read More »
BigTv News
December 25, 2022
Breaking News
ಟಾಲಿವುಡ್‌ನಲ್ಲಿ ಒಂದರ ಹಿಂದೊಂದರಂತೆ ದುರಂತ ನಡೆಯುತ್ತಿದೆ. ಇತ್ತೀಚೆಗೆ ಸೂಪರ್ ಸ್ಟಾರ್ ಕೃಷ್ಣ ನಿಧನರಾಗಿದ್ದರು. ಆ ನೋವಿನಿಂದ ಹೊರಬರುತ್ತಿದ್ದಂತೆ ಮೊನ್ನೆಯಷ್ಟೇ ಕೈಕಲಾ ಸತ್ಯನಾರಾಯಣ್ ಅವರ ಸಾವು ತೆಲುಗು ಮಂದಿಗೆ ಆಘಾತ ನೀಡಿತ್ತು. ನಿನ್ನೆಯಷ್ಟೇ ಸತ್ಯನಾರಾಯಣ್ ಅವರ ಅಂತ್ಯಸಂಸ್ಕಾರ ನೆರವೇರಿತ್ತು. ಇಂದು ಟಾಲಿವುಡ್‌ನ ಮತ್ತೊಬ್ಬ ಹಿರಿಯ ನಟ ಚಲಪತಿ ರಾವ್ ನಿಧನರಾಗಿದ್ದಾರೆ. ತೆಲುಗಿನ ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟ ಚಲಪತಿ ರಾವ್ ಇಂದು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 78 …
Read More »
BigTv News
December 25, 2022
Breaking News
ಮುಂಬೈ: ನಟಿಯೊಬ್ಬಳು ತನ್ನ ಶೂಟಿಂಗ್ ಸೆಟ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವಾಲಿವ್ ಎಂಬಲ್ಲಿನ ಶೂಟಿಂಗ್ ಸೆಟ್ನಲ್ಲಿ ಈ ಪ್ರಕರಣ ನಡೆದಿದೆ. ಕಿರುತೆರೆ ನಟಿ ತುನಿಷಾ ಶರ್ಮಾ (20) ಆತ್ಮಹತ್ಯೆ ಮಾಡಿಕೊಂಡಾಕೆ. ಈಕೆ ತಾನು ನಟಿಸುತ್ತಿದ್ದ ಕಿರುತೆರೆಯ ಶೂಟಿಂಗ್ ಸೆಟ್ನಲ್ಲೇ ನೇಣು ಹಾಕಿಕೊಂಡಿದ್ದಳು. ಸ್ಥಳದಲ್ಲಿದ್ದವರು ಕೂಡಲೇ ಈಕೆಯನ್ನು ಆಸ್ಪತ್ರೆಗೆ ಕರೆದೊಯ್ದರು, ಅದಾಗಲೇ ಆಕೆ ಮೃತಪಟ್ಟಿದ್ದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಘಟನೆಯಿಂದ ಸೆಟ್ನಲ್ಲಿದ್ದವರು ತೀವ್ರ ಆಘಾತಕ್ಕೆ ಒಳಗಾಗಿದ್ದು, ನಟಿಯ ಶವವನ್ನು …
Read More »
BigTv News
December 25, 2022
Breaking News, ತುಮಕೂರು
ತುಮಕೂರು: ಕೊರೊನಾ ರೂಪಾಂತರಿ ವೈರಸ್ BF.7 ಬಹಳ ವೇಗವಾಗಿ ಹರಡುತ್ತಿದ್ದು, ಶೀಘ್ರದಲ್ಲಿಯೇ ರಾಜ್ಯಕ್ಕೂ ಎಂಟ್ರಿ ಕೊಡಬಹುದು ಎಂಬ ಆತಂಕಕಾರಿ ಮಾಹಿತಿಯನ್ನು ಆರೋಗ್ಯ ಸಚಿವ ಡಾ.ಸುಧಾಕರ್ ನೀಡಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಆರೋಗ್ಯ ಸಚಿವರು, ಕೋವಿಡ್ ಹೊಸ ತಳಿ BF.7 ಪತ್ತೆಯಾಗಿದ್ದು, ಬಹಳ ವ್ಯಾಪಕವಾಗಿ ಹರಡುತ್ತಿದೆ.ಚೀನಾ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಆತಂಕ ಸೃಷ್ಟಿ ಮಾಡಿದೆ. ಇನ್ನು 2-3 ತಿಂಗಳಲ್ಲಿ ಇಲ್ಲಿಗೂ ಎಂಟ್ರಿ ಕೊಡಬಹುದು. ಆ ನಿಟ್ಟಿನಲ್ಲಿ ಎಲ್ಲರೂ ಮುಂಜಾಗೃತಾ ಕ್ರಮಗಳನ್ನು ವಹಿಸಿ …
Read More »