Breaking News

Breaking News

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಬರೆಯುವ ಅವಕಾಶ : ಮಾಜಿ ಸಿಎಂ ಆಕ್ರೋಶ

ಬೆಂಗಳೂರು-ಕೇಂದ್ರ ಸರಕಾರದ ಸಿಬ್ಬಂದಿ ಆಯ್ಕೆ ಆಯೋಗ (ಎಸ್ ಎಸ್ ಸಿ) ಹಿಂದಿ, ಇಂಗ್ಲೀಷ್ ನಲ್ಲಿ ವಿವಿಧ ವಿಭಾಗಗಳಿಗೆ ಪೇದೆಗಳ ಆಯ್ಕೆಗೆ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಪರೀಕ್ಷೆ ಬರೆಯುವ ಅವಕಾಶ ನೀಡಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು; ಕೇಂದ್ರದ ಬಿಜೆಪಿ ಸರಕಾರ ಕನ್ನಡಿಗರ ಕತ್ತು ಹಿಚುಕುತ್ತಿದೆ ಹಾಗೂ ಕನ್ನಡಿಗರ ಅನ್ನ ಕಸಿದುಕೊಳ್ಳುತ್ತಿದೆ ಎಂದು ದೂರಿದರು. …

Read More »

ಬಣ್ಣದರ್ಪಣೆಗೆ ವಿದ್ಯುಕ್ತ ಚಾಲನೆ

ಹುಬ್ಬಳ್ಳಿ : ಬಣ್ಣದರ್ಪನೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಚಾಲನೆ ನೀಡಿದರು. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಕುಂದಗೋಳ ಶಾಲೆಗೆ ಬಣ್ಣ ಹಚ್ಚೋ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕುಂದಗೋಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಗೆ ಬಣ್ಣ ಹಚ್ಚೋ ಮೂಲಕ ಬಣ್ಣದರ್ಪಣೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಬಣ್ಣದರ್ಪನೆ ಅಭಿಯಾನಕ್ಕೆ ನಟ ,ರಾಜ್ಯಸಭಾ ಸದಸ್ಯ ಜಗ್ಗೇಶ್ ಸಾಥ್ ನೀಡಿದರು. ಅಭಿಯಾನದಲ್ಲಿ ಬಸವರಾಜ್ ಹೊರಟ್ಟಿ, ಶಾಸಕ ಅರವಿಂದ ಬೆಲ್ಲದ್ …

Read More »

ಪುನೀತ್ ಪುಣ್ಯ ಸ್ಮರಣೆ ಹಿನ್ನೆಲೆ: ಭಾವಪೂರ್ಣ ಶ್ರದ್ದಾಂಜಲಿಯಲ್ಲಿ ಇಷ್ಟದ ಸಾವಜಿ ಖಾನಾವಳಿ ಊಟ ಅರ್ಪಿಸಿ ಕಣ್ಣೀರು ಹಾಕಿದ ಅಭಿಮಾನಿ

ಹುಬ್ಬಳ್ಳಿ : ನಟ, ದಿವಂಗತ ಪುನೀತ್ ರಾಜ್‌ಕುಮಾರ್‌ ಅವರ ಮೊದಲ ವರ್ಷದ ಪುಣ್ಯತಿಥಿ ಅಂಗವಾಗಿ ಹುಬ್ಬಳ್ಳಿಯ ಪುನೀತ್ ಅಭಿಮಾನಿಗಳು ಇಲ್ಲಿನ ಚೆನ್ನಮ್ಮ ವೃತ್ತದಲ್ಲಿ ಪುನೀತ್ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ, ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು. ನಗರದ ಚೆನ್ನಮ್ಮ ವೃತ್ತದಲ್ಲಿ ಪುನೀತ್ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಬ್ಲಾಕ್ ಡೇ ಎಂದು ಆಚರಿಸಿದ ಅಭಿಮಾನಿ ರಘು ವದ್ದಿ ಹಾಗೂ ಗೆಳೆಯರು ಕಪ್ಪು ಶರ್ಟ್ ಹಾಕಿ ಬ್ಲಾಕ್ ಡೇ ಎಂದು ಬರೆದು …

Read More »

ರಾಜ್ಯ ರಾಜಕಾರಣಕ್ಕೆ ಮುತಾಲಿಕ್ ಎಂಟ್ರಿ ಫಿಕ್ಸ್

ಧಾರವಾಡ: ಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಜ್ಜಾಗಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ರಾಜ್ಯದ ಏಳೆಂಟು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವುದಕ್ಕಾಗಿ ಹಿಂದೂ ಕಾರ್ಯಕರ್ತರು ಮನವಿ ಮಾಡಿದ್ದು, ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂಬುದನ್ನು ಶೀಘ್ರವೇ ಬಹಿರಂಗಪಡಿಸುವುದಾಗಿ ಪ್ರಮೋದ ಮುತಾಲಿಕ್ ಹೇಳಿದರು. ಬೆಳಗಾವಿ ನಗರದ ಎರಡೂ ಕ್ಷೇತ್ರ, ತೇರದಾಳ, ಜಮಖಂಡಿ, ಕಾರ್ಕಳ, ಉಡುಪಿ, ಶೃಂಗೇರಿ, ಪುತ್ತೂರಿನಿಂದ ಸ್ಪರ್ಧೆ ಮಾಡುವುದಕ್ಕಾಗಿ ಕಾರ್ಯಕರ್ತರು ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರು …

Read More »

ಪ್ರಸಿದ್ದ ಗಾಯಕ ಜಿತೇಂದ್ರ ಶೆಟ್ಟಿ ಕಾರ್ಯಾಣ ನಿಧನ

ಬೆಳ್ತಂಗಡಿ: ಪಡಂಗಡಿ ಗ್ರಾಮದ ಕಾರ್ಯಾಣ ನಿವಾಸಿ, ಪ್ರಸ್ತುತ ತೆಂಕಕಾರಂದೂರುವಿನಲ್ಲಿ ನೆಲೆಸಿರುವ ಊರಿನ‌ ಪ್ರಸಿದ್ದ ಗಾಯಕ ಜಿತೇಂದ್ರ ಶೆಟ್ಟಿ ಕಾರ್ಯಾಣ(55) ಅಲ್ಪಕಾಲದ ಅಸೌಖ್ಯದಿಂದ    ಮಂಗಳೂರಿನ‌ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಹಲವಾರು ವರ್ಷಗಳಿಂದ ಭಜನೆ,ಸಂಗೀತ,ಭಕ್ತಿ ರಸಮಂಜರಿ ಮುಖೇನಾ ಹಲವಾರು ವೇದಿಕೆಗಳಲ್ಲಿ ಹಾಡಿ ಜನರನ್ನು ರಂಜಿಸಿ, ಗುರುತಿಸಿಕೊಂಡಿದ್ದರು. ಮೃದು, ಸಾಧು ಸ್ವಭಾವದ ವ್ಯಕ್ತಿತ್ವ ಹೊಂದಿದ್ದ ಇವರು ಊರಿನಲ್ಲಿ‌ಎಲ್ಲರೊಂದಿಗೂ ಆತ್ಮೀಯರಾಗಿದ್ದರು.ಸ್ವಾತಿ ಮ್ಯೂಸಿಕಲ್ ಬೆಳ್ತಂಗಡಿ ಇದರ ಸಂಚಾಲಕರಾಗಿ, ನಮ ಮಾತರ್ಲ ಒಂಜೇ ಕಲಾತಂಡದ ಆಧಾರ ಸ್ತಂಭವಾಗಿ, …

Read More »

ಅಪ್ಪು ಮೊದಲ ವರ್ಷದ ಪುಣ್ಯತಿಥಿ : ಪತ್ನಿಯಿಂದ ಚಾಮುಂಡಿ ದೇವಿಗೆ ಪೂಜೆ ಸಲ್ಲಿಕೆ

ಬೆಂಗಳೂರು: ಇಂದು ನಟ ಪುನೀತ್ ರಾಜಕುಮಾರ್ ಅವರ ಮೊದಲ ವರ್ಷದ ಪುಣ್ಯತಿಥಿ. ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ಆಗಮಿಸಲಿದ್ದಾರೆ. ಪುನೀತ್ ಸ್ಮಾರಕಕ್ಕೆ ನಮಿಸಿ, ಪುಷ್ಪನಮನ ಸಲ್ಲಿಸಲಿದ್ದಾರೆ. ಪುನೀತ್ ರಾಜಕುಮಾರ್ ಕುಟುಂಬದವರು, ಸಂಬಂಧಿಕರು ಬೆಳಗ್ಗೆ ಅಪುಪ ಸ್ಮಾರಕಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಅಭಿಮಾನಿಗಳಿಂದ ರಕ್ತದಾನ, ನೇತ್ರದಾನ ಶಿಬಿರಗಳನ್ನು ಆಯೋಜಿಸಲಾಗಿದೆ. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕ ಫಿಲಂಸ್ ಮ್ಯೂಸಿಕ್ ಅಸೋಸಿಯೇಷನ್ ಮತ್ತು ಚಲನಚಿತ್ರ ನಟ, …

Read More »

ಕೆಎಸ್​ಆರ್​ಟಿಸಿ ಬಸ್ಸಿನ ಚಕ್ರ ಹರಿದು ಬಾಲಕ ಸಾವು

ಮೈಸೂರು: ಕೆಎಸ್​ಆರ್​ಟಿಸಿ ಬಸ್ಸಿನ ಚಕ್ರ ಹರಿದು ಬಾಲಕ ಸಾವನ್ನಪ್ಪಿರುವ ಘಟನೆ ನಂಜನಗೂಡು ಪಟ್ಟಣದ ಹಳೆ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. 14 ವರ್ಷದ ಪ್ರಜ್ವಲ್ ಮೃತ ಬಾಲಕ. ನಂಜನಗೂಡು-ಹುಲ್ಲಹಳ್ಳಿ-ಹಂಪಾಪುರಕ್ಕೆ ಸಂಚರಿಸುವ ಸಾರಿಗೆ ಬಸ್ ಇದಾಗಿತ್ತು. ನಂಜೀಪುರ ಗ್ರಾಮದ ಪ್ರಕಾಶ್ ಮತ್ತು ಪುತ್ರ ಪ್ರಜ್ವಲ್ ಇಬ್ಬರೂ ಗ್ರಾಮಕ್ಕೆ ತೆರಳುವಾಗ ದುರ್ಘಟನೆ ಸಂಭವಿಸಿದೆ. ಬಸ್ ಸಂಚರಿಸುವ ಸಮಯದಲ್ಲಿ ಮುಂದಿನ ಬಾಗಿಲಿನಿಂದ ಇಳಿಯುತ್ತಿದ್ದಾಗ ಪ್ರಜ್ವಲ್ ಕೆಳಗೆ ಬಿದ್ದಿದ್ದಾನೆ. ಹಿಂಬದಿಯ ಚಕ್ರ ಆತನ ಹೊಟ್ಟೆಯ ಮೇಲೆ …

Read More »

ಗ್ಯಾಸ್ ಸಿಲಿಂಡರ್ ಸ್ಫೋಟ : 30 ಕ್ಕೂ ಹೆಚ್ಚು ಜನರಿಗೆ ಗಾಯ

ಬಿಹಾರ : ಔರಂಗಾಬಾದ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ಎರಡು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡು 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಕಟ್ಟಡವು ನಗರದ ಅತ್ಯಂತ ಕಿರಿದಾದ ಬೀದಿಗಳಲ್ಲಿ ಒಂದಾದ ಒಡಿಯಾ ಗಾಲಿ ಬಳಿ ಇದೆ ಎನ್ನಲಾಗಿದ್ದು ಸ್ಫೋಟದ ನಂತರ ಭಾರೀ ಪ್ರಮಾಣದ ಬೆಂಕಿ ಆವರಿಸಿಕೊಂಡಿದೆ. ಗಾಯಾಳುಗಳನ್ನು ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಬೆಂಕಿಯನ್ನು ನಂದಿಸುವಾಗ ಏಳು ಪೊಲೀಸ್ ಅಧಿಕಾರಿಗಳು ತೀವ್ರವಾಗಿ ಗಾಯಗೊಂಡಿದ್ದು ಮತ್ತು ಅವರನ್ನು ಸದರ್ …

Read More »

ಕಾಂತಾರ ಸಿನಿಮಾಕ್ಕೆ ಬಿಗ್ ಶಾಕ್

ಬೆಂಗಳೂರು : ಕಾಂತಾರ ಸಿನಿಮಾ ಎಲ್ಲೆಡೆ ತನ್ನ ಹವಾ ಎಬ್ಬಿಸಿ ಬಿಟ್ಟಿದೆ. ಈ ಸಿನಿಮಾ ಹವಾ ಹೆಚ್ಚಿಸೋ ಲಕ್ಷಣ ಹೆಚ್ಚಾಗ್ತಾ ಇದೆ. ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಬಾಕ್ಸ್‌ ಆಫೀಸ್‌ನಲ್ಲಿ ಕಾಂತಾರ ಹೆಚ್ಚಿದೆ.ಈ ನಡುವೆ ಕಾಂತಾರ ಸಿನಿಮಾದ ಜನಪ್ರಿಯ ವರಾಹ ರೂಪಂ ಹಾಡು ವಿವಾದ ಆಗಿತ್ತು. ಈ ಹಾಡನ್ನು ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್  ಅವರು ಮಲಯಾಳಂ ಭಾಷೆಯ ‘ನವರಸಂ..’ ಹಾಡಿನಿಂದ  ಇದನ್ನು …

Read More »

ಕೆ. ಆರ್. ಪುರಂ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಾವು : ಎಚ್ ಡಿಕೆ ಆಗ್ರಹ

ಬೆಂಗಳೂರು: ಕೆ. ಆರ್. ಪುರಂ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ನಂದೀಶ್ ಮಾನಸಿಕವಾಗಿ ನೊಂದು ಹೃದಯಾಘಾತದಿಂದ ಮೃತಪಟ್ಟ ಘಟನೆ ಹಾಗೂ ಅವರ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಇದು ಉತ್ತರ ಭಾರತದ ಅಧಿಕಾರಿಗಳ ದರ್ಪದಿಂದ ಹಾಗೂ ಸರ್ಕಾರದಿಂದಲೇ ಆಗಿರುವ ಕಗ್ಗೊಲೆಯೇ ಹೊರತು …

Read More »