Breaking News

Breaking News

ಹುಬ್ಬಳ್ಳಿ ಪೊಲೀಸರ ಭರ್ಜರಿ ಬೇಟೆ : ಖೋಟಾ ನೋಟು ಕಿಲಾಡಿಗಳು ಅಂಧರ

ಹುಬ್ಬಳ್ಳಿ: ಹುಬ್ಬಳ್ಳಿ ಉಪನಗರ ಪೊಲೀಸರ ಭರ್ಜರಿ ಬೇಟೆ.ಖೋಟಾ ನೋಟು ಚಲಾವಣೆ ಮಾಡಲು ಬಂದಿದ್ದ ಖರನಾಕ ಕಿಲಾಡಿಗಳ ಬಂಧನ ಬಿಜಾಪುರದಿಂದ ಖೋಟಾ ನೋಟು ಚಲಾವಣೆ ಮಾಡಲು ಹುಬ್ಬಳ್ಳಿಯ ಖಾಸಗಿ ಹೋಟೆಲ ಸನ್ಮಾನ ಲಾಡ್ಜನಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಮೇಲೆ ಉಪನಗರ ಪೋಲೀಸರು ಲಾಡ್ಜ ಮೇಲೆ ದಾಳಿ ಮಾಡಿದ್ದು ಇನ್ನು ದಾಳಿಯ ಸಮಯದಲ್ಲಿ ಮೂವರು ಆರೋಪಿಗಳು ಸಿಕ್ಕಿ ಬಿದ್ದು ಒಬ್ಬ ಆರೋಪಿ ಪರಾರಿ ಆಗಿದ್ದು .ಇನ್ನು ಬಂದಿತರಿಂದ 200 ರೂ ಮುಖ …

Read More »

ಮಹಿಳೆಯನ್ನು ಹತ್ಯೆಗೈದಿದ್ದ ಆರೋಪಿ ಜೈಲಿನಲ್ಲೇ ನೇಣಿಗೆ ಶರಣು

ಧಾರವಾಡ: ಜಿಲ್ಲಾ ಆಸ್ಪತ್ರೆ ಬಳಿ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ವಿಚಾರಣಾಧೀನ ಕೈದಿ ಆನಂದ ದುಧನಿ ಧಾರವಾಡದ ಕೇಂದ್ರ ಕಾರಾಗೃಹದಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸವಿತಾ ಕಿತ್ತೂರ ಎಂಬಾಕೆಯನ್ನು ಧಾರವಾಡದ ಸಿವಿಲ್ ಆಸ್ಪತ್ರೆ ಬಳಿ ಮೊನ್ನೆಯಷ್ಟೇ ಆನಂದ ಬರ್ಬರವಾಗಿ ಹತ್ಯೆ ಮಾಡಿದ್ದ. ಇದಾದ ಮೇಲೆ ಆರೋಪಿ ಆನಂದನನ್ನು ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಆನಂದ ಜೈಲಿನಲ್ಲೇ ಬೆಡ್‌ಶೀಟ್ ಹರಿದು ಅದರಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾರಾಗೃಹಕ್ಕೆ …

Read More »

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೇವಲ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತವೆ ಹೊರತು ಬಡವರ ಪರವಾಗಿ ಒಂದೇ ಒಂದು ಕೆಲಸ ಮಾಡಿಲ್ಲ

ಹುಬ್ಬಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೇವಲ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತವೆ ಹೊರತು ಬಡವರ ಪರವಾಗಿ ಒಂದೇ ಒಂದು ಕೆಲಸ ಮಾಡಿಲ್ಲ‌. ವೈಯಕ್ತಿಕ ಹಿತಾಸಕ್ತಿಯಿಂದಲೇ ಕೃಷಿ ಕಾಯಿದೆಯನ್ನು ಕೇಂದ್ರ ಸರ್ಕಾರ ವಾಪಾಸ್ ಪಡೆದರು ರಾಜ್ಯದಲ್ಲಿ ವಾಪಾಸ್ ಪಡೆದಿಲ್ಲ. ಈ ಹಿನ್ನೆಲೆಯಲ್ಲಿ ಬರುವ ಚಳಿಗಾಲದ ಅಧಿವೇಶದಲ್ಲಿ ಕಬ್ಬು ಬೆಳೆಗಾರರು ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿ ಕುರಿತಂತೆ ಶ್ವೇತ ಪತ್ರ ಹೊರಡಿಸಬೇಕೆಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ ರಾವ್ …

Read More »

ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷಿಯ ಚುನಾವಣೆಯಲ್ಲಿ ಖರ್ಗೆ ಜೀ ಗೆಲವು : ಕುಸುಮಾವತಿ ಶಿವಳ್ಳಿ

ಹುಬ್ಬಳ್ಳಿ : ದೇಶದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಕೆಲಸ ಮಾಡಲಿದ್ದಾರೆ ಯಂಬ ನಂಬಿಕೆ ದೇಶದ ಜನರಲ್ಲಿದೆ ಈ ಕುರಿತು ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಆಯ್ಕೆ ನಮಗಷ್ಟೇ ಅಲ್ಲ, ಇಡೀ ಭಾರತ ದೇಶದ ಜನತೆಗೆ ಖುಷಿ ತಂದಿದೆ. ಶ್ರೀ ಮಲ್ಲಿಕಾಜುನ ಖರ್ಗೆಯವರಿಗೆ ಈ ಅವಕಾಶ ನೀಡಿದ್ದಕ್ಕೆ ಶ್ರೀಮತಿ ಸೋನಿಯಾ ಗಾಂಧಿ …

Read More »

ಜೆಡಿಎಸ್‌ ಪಕ್ಷ ಪಂಚರತ್ನ ಕಾರ್ಯಕ್ರಮದ ಮೂಲಕ ರಾಜ್ಯದ ಜನತೆಗೆ ತಿಳಿಸಲಿದೆ : ಕುಮಾರಸ್ವಾಮಿ

ಮೈಸೂರು: ದೇಶದಲ್ಲೇ ಒಂದು ಚುನಾಯಿತ ಸರಕಾರ ಯಾವ ರೀತಿ ಕಾರ್ಯಕ್ರಮಗಳನ್ನು ಕೊಡಬಹುದು ಎಂಬುದನ್ನು ಜೆಡಿಎಸ್‌ ಪಕ್ಷ ಪಂಚರತ್ನ ಕಾರ್ಯಕ್ರಮದ ಮೂಲಕ ರಾಜ್ಯದ ಜನತೆಗೆ ತಿಳಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್​​ನಲ್ಲಿ 2 ದಿನಗಳ ಕಾಲ ನಡೆಯುತ್ತಿರುವ ಜೆಡಿಎಸ್ ಸಮಾಲೋಚನಾ ಕಾರ್ಯಾಗಾರಕ್ಕೆ ಚಾಲನೆ ನೀಡಿ, ಪಂಚರತ್ನ ರಥಯಾತ್ರೆಯ ಸಿಡಿ ಬಿಡುಗಡೆ ಮಾಡಿದರು. ‘ಉಚಿತ ಶಿಕ್ಷಣ, ಉಚಿತ ಆರೋಗ್ಯ, ಪ್ರತಿ ಕುಟುಂಬಕ್ಕೆ ಉದ್ಯೋಗ, ವಸತಿ ಸೌಲಭ್ಯವನ್ನು …

Read More »

ನಾನು ನನ್ನ ಜೀವನದಲ್ಲಿ ಹಲಾಲ್ ಕಟ್ ಮಾಂಸ ತಿಂದಿಲ್ಲ, ಮುಂದೆಯೂ ತಿನ್ನೋದಿಲ್ಲ ; ಈಶ್ವರಪ್ಪ

ಶಿವಮೊಗ್ಗ : ರಾಜ್ಯದಲ್ಲಿ ಮತ್ತೆ ಧರ್ಮದ ದಂಗಲ್ ಶುರುವಾಗಿದ್ದು, ಹಲಾಲ್ ಮುಕ್ತ ದೀಪಾವಳಿಗೆ ಹಿಂದೂಪರ ಸಂಘಟನೆಗಳು ಕರೆಕೊಟ್ಟಿವೆ. ಈ ಬಗ್ಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ನಾನು ನನ್ನ ಜೀವನದಲ್ಲಿ ಹಲಾಲ್ ಕಟ್ ಮಾಂಸ ತಿಂದಿಲ್ಲ, ಮುಂದೆಯೂ ತಿನ್ನೋದಿಲ್ಲ ಎಂದಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ನನಗೆ ಹಲಾಲ್ ಕಟ್ಟೋ, ಹಲ್ಕ ಕಟ್ಟೋ ಗೊತ್ತಿಲ್ಲ. ನಾವು ಏಕೆ ನಮ್ಮ ದೇವರಿಗೆ ಹಲಾಲ್ ಕಟ್ ಮಾಂಸ ಎಡೆ ಇಡೋಣ …

Read More »

ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ

ಬೆಂಗಳೂರು : ಚಾಮರಾಜನಗರ, ಮಂಡ್ಯ, ಕೊಡಗು,ಹಾಸನ ಸೇರಿದಂತೆ ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಶಿವಮೊಗ್ಗ, ತುಮಕೂರು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಸಂಬಂಧ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುನ್ಸೂಚನೆಯ ಪ್ರಕಾರ, ಮುಂದಿನ ಎರಡು ದಿನಗಳಲ್ಲಿ ಬೆಂಗಳೂರಿನಲ್ಲೂ ಭಾರಿ ಮಳೆಯಾಗಲಿದೆ. ಇದೇ ವೇಳೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಹಾವೇರಿ, ಬಾಗಲಕೋಟೆ, ಕಲಬುರಗಿ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಿಗೆ …

Read More »

ಜಾನುವಾರುಗಳಿಗೆ ಚರ್ಮಗಂಟು ರೋಗ : ಗೋಟ್‌ ಪಾಕ್ಸ್‌ ಲಸಿಕೆ ಅಭಿಯಾನ ಆರಂಭ

ದಾವಣಗೆರೆ: ಚರ್ಮಗಂಟು ರೋಗ (ಲಂಪಿ ಸ್ಕಿನ್‌ ಡಿಸೀಸ್‌) ಹರಡುವುದನ್ನು ನಿಯಂತ್ರಿಸಲು 50 ಸಾವಿರ ಗೋಟ್‌ ಪಾಕ್ಸ್‌ ಲಸಿಕೆ ಜಿಲ್ಲೆಗೆ ಬಂದಿದ್ದು, ಲಸಿಕೆ ಹಾಕುವ ಅಭಿಯಾನ ಆರಂಭಗೊಂಡಿದೆ. 134 ಜಾನುವಾರುಗಳು ಸಾವಿಗೀಡಾಗಿದ್ದವು. ವಿಪರೀತ ಜ್ವರ, ಕಣ್ಣಲ್ಲಿ ನೀರು, ಮೈಯಲ್ಲಿ ಗಂಟು ಉಂಟಾಗುವ ಈ ರೋಗವನ್ನು ನಿಯಂತ್ರಿಸಲು ಲಸಿಕೆ ಕಂಡು ಹಿಡಿಯಲು ಸಂಶೋಧನೆ ನಡೆದಿತ್ತು. ಶೀಪ್‌ ಪಾಕ್ಸ್‌(ಕುರಿ ಜ್ವರ), ಗೋಟ್‌ ಪಾಕ್ಸ್‌ಗೆ (ಮೇಕೆ ಜ್ವರ) ಕಾರಣವಾಗುವ ವೈರಾಣುವೇ ಈ ರೋಗಕ್ಕೂ ಕಾರಣ ಎಂಬುದನ್ನು …

Read More »

ಮಂಡ್ಯ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ : ಜಮೀರ್ ಅಹ್ಮದ್ ಖಾನ್ 5 ಲಕ್ಷ ರೂ. ಪರಿಹಾರ ಧನ ವಿತರಣೆ

ಮಂಡ್ಯ: ಕಾಮುಕ ಟ್ಯೂಶನ್ ಶಿಕ್ಷಕನಿಂದ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಮಳವಳ್ಳಿ ಪಟ್ಟಣದ ಬಾಲಕಿ ನಿವಾಸಕ್ಕೆ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಬಾಲಕಿ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ಮೃತ ಬಾಲಕಿ ಕುಟುಂಬಕ್ಕೆ ಶಾಸಕ ಜಮೀರ್ 5 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ. ಬಳಿಕ ಮಾತನಾಡಿದ …

Read More »

ಅ. 21 ರಂದು 3400 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಯೋಜನೆಗೆ ಪ್ರಧಾನಿ ಚಾಲನೆ

ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆ ಪ್ರಚಾರದ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತರಾಖಂಡ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಯಶಸ್ಸಿಗಾಗಿ ಕೇದರಾನಾಥ, ಬದರೀನಾಥ ದೇಗುಲದಲ್ಲಿ ವಿಶೇಷ ಪ್ರಾರ್ಥನೆ ಮಾಡಲಿದ್ದಾರೆ ಎಂಬ ಸುದ್ದಿಯಿದೆ. ಜೊತೆಗೆ 3400 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಸಂಪರ್ಕ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 2022ರ ಅಕ್ಟೋಬರ್ 21 ರಂದು ಉತ್ತರಾಖಂಡಕ್ಕೆ ಭೇಟಿ ನೀಡಲಿದ್ದಾರೆ. ಕೇದಾರನಾಥದಲ್ಲಿ ಬೆಳಗ್ಗೆ 8.30ಕ್ಕೆ ಕೇದಾರನಾಥ ದೇವಸ್ಥಾನದಲ್ಲಿ ದರ್ಶನ ಪಡೆದು, ಪೂಜೆ ನೆರವೇರಿಸಲಿದ್ದಾರೆ. …

Read More »