BigTv News
October 18, 2022
Breaking News
ವಡೋದ: ಕಪುರೈ ಸೇತುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಐಷಾರಾಮಿ ಬಸ್ ಒಂದು ಟ್ರಕ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಗೋಧಿ ತುಂಬಿದ್ದ ಟ್ರಕ್ ಅನ್ನು ಬಸ್ ಹಿಂದಿಕ್ಕುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.ಗಾಯಾಳುಗಳನ್ನು ವಡೋದರಾದ ಸಯಾಜಿ ಆಸ್ಪತ್ರೆಗೆ ರವಾನಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ..
Read More »
BigTv News
October 18, 2022
Breaking News, ಬೆಂಗಳೂರು
ಬೆಂಗಳೂರು: ಪಕ್ಷಕ್ಕೆ ಡ್ಯಾಮೇಜ್ ಮಾಡುವ ಹೇಳಿಕೆ ನೀಡಿದ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಆಧಾರ ರಹಿತ ಆರೋಪ ಮಾಡಿರುವ ವಿಚಾರದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಹೈಕಮಾಂಡ್ ನೋಟಿಸ್ ಜಾರಿ ಮಾಡಿದೆ. ಈ ಕುರಿತು ಸ್ಪಷ್ಟಪಡಿಸಿರುವ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಯತ್ನಾಳ್ ಹೈಕಮಾಂಡ್ ನೋಟಿಸ್‌ಗೆ 7 ದಿನಗಳಲ್ಲಿ ಉತ್ತರ ನೀಡಬೇಕಿದೆ. ಜೊತೆಗೆ ಸರ್ಕಾರದ ವಿರುದ್ಧ ಹಾಗೂ ಪಕ್ಷದ ಹಿರಿಯ ನಾಯಕರ ಬಗ್ಗೆ ಮಾತನಾಡದಂತೆ …
Read More »
BigTv News
October 18, 2022
Breaking News, ಜಿಲ್ಲೆ, ಮೈಸೂರು
ಮೈಸೂರು : ಕನ್ನಡ ಚಿತ್ರರಂಗದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಅಪಮಾನ ಮಾಡಿರುವ ಹಿನ್ನೆಲೆ. ನಾನು ಖಂಡಿಸಿ ರಾಕೇಶ್ ಪಾಪಣ್ಣ ಅವರ ಮೈಸೂರಿನ ಮನೆ ಮುಂದೆ ಅಪ್ಪು ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ. ರಾಕೇಶ್ ಪಾಪಣ್ಣ ಅವರ ಸಂಬಂಧಿ ಪುಟ್ಟ ಎಂಬಾತನಿಂದ ನಿಂದನೆ ಮಾಡಲಾಗಿದ್ದು ಕೂಡಲೇ ಆತನನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
Read More »
BigTv News
October 18, 2022
Breaking News
ಕೋಲ್ಕತ್ತ: ಅತಿಸಾರ ಅಥವಾ ಇತರೆ ಯಾವುದೇ ಕಾರಣದಿಂದ ದೇಹ ನಿರ್ಜಲೀಕರಣಗೊಂಡಾಗ ನೀಡುವ ಓಆರ್‌ಎಸ್ (ORS) (ಓರಲ್ ರೀಹೈಡ್ರೇಷನ್ ಸೊಲ್ಯೂಷನ್) ಚಿಕಿತ್ಸೆ ಸಂಶೋಧಿಸುವ ಮೂಲಕ ವಿಶ್ವದಾದ್ಯಂತ ಕೋಟ್ಯಂತರ ಜೀವಗಳನ್ನು ಕಾಪಾಡಿದ್ದ ಖ್ಯಾತ ವೈದ್ಯ ಡಾ.ದಿಲೀಪ್ ಮಹಲ್ ನಬೀಸ್ (87) ಭಾನುವಾರ ಕೋಲ್ಕತ್ತದಲ್ಲಿ ನಿಧನರಾದರು. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ದಿಲೀಪ್ ಅವರನ್ನು 2 ವಾರಗಳ ಹಿಂದೆ ಪಶ್ಚಿಮ ಬಂಗಾಳ ರಾಜಧಾನಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಭಾನುವಾರ ರಾತ್ರಿ ಅವರು …
Read More »
BigTv News
October 17, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿ ಯಲ್ಲಿ ಬಂಗಾರದ ಅಂಗಡಿಗೆ ಕಣ್ಣು ಹಾಕಿ ಬಂಗಾರದ ಆಭರಣಗಳನ್ನು ಕಳವು ಮಾಡಿದ್ದಾರೆ. ಹುಬ್ಬಳ್ಳಿ ಘಂಟಿಗೇರಿ ಪೋಲಿಸ್ ಠಾಣೆಯ ಸರಹದ್ದು ಬರುವ ಹಳೆ ಸಂಗಮ ಅರಬಿ ಅಂಗಡಿ ಪಕ್ಕದಲ್ಲಿ ಇಬ್ಬರು ಹೆಣ್ಣು ಮಕ್ಕಳು ಬಂದು ಬಂಗರದ ಅಂಗಡಿ ಅವರಿಗೆ ಬೇರೆ ಬೇರೆ ಬಂಗಾರಗಳನ್ನು ತೋರಿಸಿ ಎಂದು ಕೇಳಿದ್ದಾಗ ಒಂದು ಜೋಡಿಯ ಬಂಗಾರದ ಆಭರಣಗಳನ್ನು ತಮ್ಮ ಸ್ವಂಟ್ ದಲ್ಲಿ ಇಟ್ಟುಕೊಂಡರು. ನಂತರ ಅಂಗಡಿ ಮಾಲಿಕರು ಅವರಿಗೆ ಪರಿಚಯ …
Read More »
BigTv News
October 17, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ನಗರದ ಹೊರವಲಯದ ಗಬ್ಬೂರು ಬಳಿಯ ರಿಂಗ್ ರೋಡ್ ಪಕ್ಕದ ಪುನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಘಟನೆಯಲ್ಲಿ ಸುಮಾರು 25 ರಿಂದ 30 ವರ್ಷದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ, ಮೃತದೇಹದ ಮೇಲೆ ಬಾರಿ ಗಾತ್ರದ ವಾಹನ ಹಾದು ಹೋದ ಪರಿಣಾಮ ಮುಖವು ಛಿದ್ರ ಛಿದ್ರವಾಗಿದ್ದು ವ್ಯಕ್ತಿಯ ಗುರುತು …
Read More »
BigTv News
October 17, 2022
Breaking News
ಕುಂದಗೋಳ : ತಾಲೂಕಿನ ಇನಾಮಕೊಪ್ಪ ಗ್ರಾಮದ ದುರ್ಗಾದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 3ಲಕ್ಷ. ರೂ. ಗಳ ಮೊತ್ತದ ಆರ್.ಟಿ.ಜಿ.ಎಸ್ (ಚೆಕ್) ಅನ್ನು ಮಾನ್ಯ ಕುಂದಗೋಳ ಮತಕ್ಷೇತ್ರದ ಶಾಸಕರಾದ ಶ್ರೀಮತಿ ಕುಸುಮಾವತಿ ಚ ಶಿವಳ್ಳಿ ಅವರು ವಿತರಿಸಿದರು. ಈ ಸಂದರ್ಭದಲ್ಲಿ ದುರ್ಗಾದೇವಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷರು ಉಪಾಧ್ಯಕ್ಷರು ಗ್ರಾಪಂ ಉಪಾಧ್ಯಕ್ಷ ರಾಜು ದೊಡಶಂಕರ ಗದಗಯ್ಯ ಹಿರೇಮಠ,,ಅಶೋಕ ಕೂದರಿ,ಹನಮಂತಪ್ಪ ಮಾದರ,ಇರವ್ವ ನಾಯ್ಕರ, ಮಂಜುನಾಥ ಮಾದರ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Read More »
BigTv News
October 17, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ವಿದ್ಯಾನಗರ ಆರ್ಟ್ಸ್ ಕಾಲೇಜ ಬಸ್ ನಿಲ್ದಾಣದಲ್ಲಿ ಹೆಣ್ಣು ಮಕ್ಕಳ ಮೈ ಮುಟ್ಟುತ್ತಾ ಬ್ಯಾಗ್ ಜಗ್ಗುವುದ ಮಾಡುತ್ತಿದ್ದ ಬೀದಿ ಕಾಮಣ್ಣನಿಗೆ ಸಾರ್ವಜನಿಕರಿಂದ ಧರ್ಮದೇಟು ಬಿದ್ದ ಘಟನೆ ನಡೆದಿದೆ. ಹೆಣ್ಣು ಮಕ್ಕಳಿಗೆ, ಯುವತಿಯರಿಗೆ ಪೀಡಿಸುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಯುವಕನನ್ನು ವಿಚಾರಿಸಿ ಧರ್ಮದೇಟು ನೀಡಿದ್ದಾರೆ ನಂತರ ಪೊಲೀಸರಿಗೆ ಆತನನ್ನು ಒಪ್ಪಿಸಿದ್ದಾರೆ.
Read More »
BigTv News
October 17, 2022
Breaking News, ಧಾರವಾಡ
ಧಾರವಾಡ: ಹಳ್ಳ ದಾಟಲು ಹೋದ ಮಹಿಳೆಯೊಬ್ಬರು ನೀರಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಗೊಂಗಡಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಧಾರವಾಡ ತಾಲೂಕಿನ ಸೋಮಾಪುರ ಗ್ರಾಮದ ಶಂಕ್ರವ್ವ ಹಡಪದ (50) ಎಂಬ ಮಹಿಳೆಯೇ ಸಾವನ್ನಪ್ಪಿದ್ದರು. ಹೊಲಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಶಂಕ್ರವ್ವ ಹಳ್ಳ ದಾಟಲು ಮುಂದಾದಾಗ ನೀರಿನ ರಭಸಕ್ಕೆ ಸಿಲುಕಿ, ಮುಳುಗಿ ಸಾವನ್ನಪ್ಪಿದ್ದಾರೆ. ಗ್ರಾಮಸ್ಥರೇ ಆಕೆಯ ಶವವನ್ನು ಹೊರತೆಗೆದಿದ್ದು, ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ದೂರು …
Read More »
BigTv News
October 17, 2022
Breaking News
ಪಾಟ್ನಾ, ಬಿಹಾರ್: ಬಿಹಾರದ ಪಾಟ್ನಾ ಮತ್ತು ಗಯಾ ಜಿಲ್ಲೆಗಳಲ್ಲಿ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ‘ಬ್ಲೂಟೂತ್ ಸಾಧನಗಳನ್ನು’ ಬಳಸಿದ ಆರೋಪದ ಮೇಲೆ 49 ಪರೀಕ್ಷಾರ್ಥಿಗಳನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಗಯಾದಾದ್ಯಂತ 36 ಮತ್ತು ಪಾಟ್ನಾದಲ್ಲಿ 13 ಪರೀಕ್ಷಾರ್ಥಿಗಳು ಬ್ಲೂಟೂತ್ ಸಾಧನಗಳನ್ನು ಬಳಸಿ ಸಿಕ್ಕಿಬಿದ್ದಿದ್ದಾರೆ. ಇಂತಹ ದಂಧೆ ನಡೆಸುವರ ಬಗ್ಗೆ ನಾವು ಮಾಹಿತಿಯನ್ನು ಈಗಾಗಲೇ ಹೊಂದಿದ್ದೇವೆ ಎಂದು ಗಯಾ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಹೇಳಿದರು. …
Read More »