Breaking News

Breaking News

ನೂತನ ಮೇಯರ್‌ ಗೆ ದೇವಾಂಗ ಸಮಾಜದಿಂದ ಸನ್ಮಾನ

ಹುಬ್ಬಳ್ಳಿ: ಹು.ಧಾ.ಮಹಾನಗರ ಪಾಲಿಕೆಯ ಮಹಾಪೌರರಾಗಿ ಆಯ್ಕೆಯಾದ ಈರೇಶ ಅಂಚಟಗೇರಿ ಅವರನ್ನು ಹುಬ್ಬಳ್ಳಿ ದೇವಾಂಗ ಸಮಾಜದ ಕೇಂದ್ರೀಯ ಸಮಿತಿಯಿಂದ ಸನ್ಮಾನಿಸಲಾಯಿತು. ಸಮಿತಿ ಗೌರವಾಧ್ಯಕ್ಷ ಕೆ.ಜಿ.ಬ್ಯಾಕೋಡಿ ಅಧ್ಯಕ್ಷ ನಾಗೇಶ್ ಬಾಫಿ , ಕಾರ್ಯದರ್ಶಿ ವೀರಣ್ಣ ನಿಂಬರಗಿ , ಶಿವಶಂಕರ ಬಿಜ್ಜಲ , ಮುಕುಂದಗೌಡ್ರು ಗುಗ್ರಿ ಅಶೋಕ್ ಬೀಳಗಿ , ವಿನಾಯಕ ಪೊಶೆಟ್ಟಿ , ಮಂಜುನಾಥ ವಡಕಣ್ಣವರ , ಶಂಕರ ಘಾರ್ಗಿ ಹಾಗೂ ಸಮಾಜದ ಇತರ ಮುಖಂಡರು ಇದ್ದರು .

Read More »

ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಮಾಡಿದ್ದು ಖಂಡನೀಯ

ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಮಾಡಿದ್ದು ಖಂಡನೀಯವಾಗಿದ್ದು , ಸೂಕ್ತ ಭದ್ರತೆ ನೀಡುವುದರಲ್ಲಿ ವಿಫಲವಾದ ರಾಜ್ಯ ಸರ್ಕಾರವೇ ಘಟನೆಗೆ ಕಾರಣ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದ್ದಾರೆ . ರಾಷ್ಟ್ರಮಟ್ಟದ ರೈತ ನಾಯಕ ರಾಕೇಶ್ ಟಿಕಾಯತ್‌ರವರು ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಸೂಕ್ತ ಭದ್ರತೆ ಒದಗಿಸಬೇಕಿತ್ತು . ಆದರೆ ರಾಜ್ಯ ಸರ್ಕಾರ ತೋರಿದ ನಿರ್ಲಕ್ಷದಿಂದಾಗಿ ಅಹಿತಕರ ಘಟನೆ ನಡೆದಿದೆ . ಸರ್ಕಾರ ತನಿಖೆ ಮಾಡಬೇಕು …

Read More »

ಬಡ ಮಕ್ಕಳಿಗೆ ನೋಟ್ ಬುಕ್ ವಿತರಣೆ

ಹುಬ್ಬಳ್ಳಿ: ವಿನೋಬಾ ನಗರದಲ್ಲಿರುವ ಜನತಾ ಸೇವಾ ಟ್ರಸ್ಟ್ ವತಿಯಿಂದ ಬಡ ಮಕ್ಕಳಿಗೆ ನೋಟ್ ಬುಕ್ , ಪೆನ್ನು , ಪೆನ್ಸಿಲ್ ವಿತರಿಸಲಾಯಿತು . ಈ ಸಂದರ್ಭದಲ್ಲಿ 58 ನೇ ವಾರ್ಡಿನ ಪಾಲಿಕೆಯ ಸದಸ್ಯೆ ಶ್ರೀಮತಿ ಶೃತಿ ಸಂತೋಷ್ ಚಲವಾದಿ , ಚಂದ್ರಕಾಂತ ಯಾದವ್ , ಇಬ್ರಾಹಿಂ ಹೊಸಪೇಟೆ , ಯುವ ಮುಖಂಡ ಸಂತೋಷ್ ಚಲವಾದಿ , ಡೇವಿಡನ್ , ವೆಂಕಟ್ , ಶ್ರೀನಿವಾಸ್ , ವಿಷ್ಣು , ಗುಂಡು ಇನ್ನೂ …

Read More »

ಡಿವೈಡರ್ ಗೆ ಡಿಕ್ಕಿ : ಅದೃಷ್ಟವಶಾತ್ ಪ್ರಣಾಪಾಯದಿಂದ ಪಾರು

ಹುಬ್ಬಳ್ಳಿ : ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ ಗದಗ ಮಾರ್ಗ ಮಧ್ಯೆ ಬರುವ ನಲವಡಿ ಟೋಲ್ ನಾಕಾ ಬಳಿ ನಿನ್ನೆ ಸಂಜೆ ಅಪಘಾತ ಸಂಭವಿಸಿದೆ. ರಾಯಚೂರಿನಿಂದ ಧಾರವಾಡಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ರಾಂಗ್ ರೂಟನಲ್ಲಿ ಬಂದು ಡಿವೈಡರ್ ಗೆ ಡಿಕ್ಕಿಯಾಗಿದೆ . ಇನ್ನು ಈ ಅವಘಾತಕ್ಕೆ ಚಾಲಕನ ಅಜಾಗ್ರತೆಯೇ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ . ಈ ಘಟನೆ ಕುರಿತು ಸಾರ್ವಜನಿಕರು ಪೊಲೀಸ್ ಠಾಣೆಗೆ ಕರೆ …

Read More »

ರಾಜ್ಯದಲ್ಲಿಂದು 197 ಮಂದಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿಂದು 17,716 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 197 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,52,102 ಕ್ಕೆ ಏರಿಕೆ ಆಗಿದೆ.‌ ಪಾಸಿಟಿವ್ ದರವೂ 1.11% ಕ್ಕೆ ಏರಿಕೆ ಕಂಡಿದೆ. ಇತ್ತ 273 ಸೋಂಕಿತರು ಗುಣಮುಖರಾಗಿದ್ದು, ಇಲ್ಲಿಯತನಕ ಒಟ್ಟು 39,09,966 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿಗೆ ಓರ್ವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 40,065 ರಷ್ಟಿದೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 2,029 ರಷ್ಟಿದೆ. ವಿಮಾನ‌ …

Read More »

ಮುಂದಿನ 3-4 ದಿನಗಳಲ್ಲಿ ಭಾರೀ ಮಳೆ ಸಾಧ್ಯತೆ

ಬೆಂಗಳೂರು : ಕರ್ನಾಟಕಕ್ಕೆ ಅಧಿಕೃತವಾಗಿ ನೈಋತ್ಯ ಮುಂಗಾರು ಪ್ರವೇಶವಾಗಿದ್ದು, ಮುಂದಿನ 3-4 ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಮುಂಗಾರು ಪ್ರಭಾವದಿಂದ ರಾಜ್ಯದ ಕಾರವಾರ, ಚಿಕ್ಕಮಗಳೂರು, ಬೆಂಗಳೂರು, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

Read More »

ಕಾಂಗ್ರೆಸ್‍ಗೆ ಗುಡ್ ಬೈ ಹೇಳಿದ ಬೃಜೇಶ್ ಕಾಳಪ್ಪ

ಹೊಸದಿಲ್ಲಿ: ಹಿರಿಯ ಸುಪ್ರೀಂಕೋರ್ಟ್ ವಕೀಲ ಕಪಿಲ್ ಸಿಬಾಲ್ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮತ್ತೊಬ್ಬ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಬೃಜೇಶ್ ಕಾಳಪ್ಪ ಕೂಡಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. “ಪಕ್ಷದ ಬಗ್ಗೆ ಚೈತನ್ಯ ಹಾಗೂ ಉತ್ಸಾಹ” ಇಲ್ಲ ಎಂಬ ಕಾರಣ ನೀಡಿ ಅವರು ರಾಜೀನಾಮೆ ನೀಡಿದ್ದಾರೆ.“ನನಗೆ ಹಲವು ಅವಕಾಶಗಳನ್ನು ನೀಡಿದ್ದಕ್ಕಾಗಿ ನಾನು ಹೃತ್ಪೂರ್ವಕ ಧನ್ಯವಾದ ಹೇಳುತ್ತಿದ್ದೇನೆ. ಈ ದೊಡ್ಡ ದೇಶದ ಎಲ್ಲ ಕಡೆಗಳಲ್ಲಿ ನನ್ನ ಮುಖ ಪರಿಚಿತವಾಗಿದ್ದರೆ ಅದಕ್ಕೆ ನಿಮ್ಮ …

Read More »

ಮಾಜಿ ಸಿಎಂ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು: ‘ಬಿಜೆಪಿ ಸರ್ಕಾರದ ಕಾರಣಪುರುಷ, ಆಹಿಂದ ಆದಿಪುರುಷ, ಕಾಂಗ್ರೆಸ್ ಮುಗಿಸಲು ಹೊರಟ ಸಿದ್ದಹಸ್ತ ಮಹಾಶಯ.. ಏನಯ್ಯಾ ನಿಮ್ಮ ರಾಜಕೀಯ?ಮುಸ್ಲಿಮರ ರಾಜಕೀಯ ನರಮೇಧಕ್ಕೆ ಇನ್ನೊಂದು ವಿನಾಶಕಾರಿ ಅಧ್ಯಾಯ ಆರಂಭಿಸಿದ್ದೀರಿ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ‘ಭಾಷಣ ಒಂದು, ರಾಜಕಾರಣ ಇನ್ನೊಂದು!!’, ಇದಯ್ಶಾ ಕಿಲಾಡಿರಾಮಯ್ಯನ ರಾಜನೀತಿ ಮತ್ತು ರಣನೀತಿ.5 ವರ್ಷಗಳ ನಿಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರ ಬರಲು ಕಾರಣರಾದ ಅಲ್ಪಸಂಖ್ಯಾತರನ್ನೇ ಅಯ್ಯೋ ಎನ್ನುವಂತೆ ಮಾಡುತ್ತಿದೀರಲ್ಲ..? …

Read More »

ಎಡ ಮತ್ತು ಬಲಪಂಥೀಯ ಸಿದ್ಧಾಂತಗಳ ಬೋಧನೆಗೆ ಅವಕಾಶ ಇರಬಾರದು : ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ಮೈಸೂರು : ‘ಇತಿಹಾಸವನ್ನು ತಿದ್ದದೇ ಅದು ಇರುವಂತೆಯೇ ಮಕ್ಕಳಿಗೆ ಬೋಧಿಸಬೇಕು.ಅಲ್ಲಿ ಎಡ ಮತ್ತು ಬಲಪಂಥೀಯ ಸಿದ್ಧಾಂತಗಳ ಬೋಧನೆಗೆ ಅವಕಾಶ ಇರಬಾರದು’ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಪಾದಿಸಿದರು. ಸುದ್ದಿಗಾರರೊಡನೆ ಮಾತನಾಡಿದ ಅವರು, ‘ಪ್ರಸ್ತುತ ಕಾಲಕ್ಕೆ ಅನುಗುಣವಾಗಿ ಪಠ್ಯವನ್ನು ಅಳವಡಿಸಬೇಕು’ ಎಂದರು.’ಪಾರಂಪರಿಕ ಕಟ್ಟಡಗಳ ಉಳಿವು ಎಂದರೆ ನೆಲಸಮ ಮಾಡಿ ಮರು ನಿರ್ಮಿಸುವುದಲ್ಲ. ಕಟ್ಟಡಗಳ ಪುನಶ್ಚೇತನಕ್ಕೆ ಅವಕಾಶ ಕಲ್ಪಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪುನಶ್ಚೇತನಕ್ಕೆ ಅವಕಾಶ ನೀಡುತ್ತಿಲ್ಲ’ ಎಂದು …

Read More »

ಎನ್ ಸಿ ಸಿ ವಿದ್ಯಾರ್ಥಿನಿಯರಿಂದ ವಿಶ್ವ ತಂಬಾಕು ನಿಷೇಧ ದಿನಾಚರಣೆ

ತಂಬಾಕು ಉತ್ಪನ್ನಗಳ ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಜಗತ್ತಿನಲ್ಲಿ ತಂಬಾಕು ಸೇವನೆಯಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವದು. ಆದ್ದರಿಂದ ತಂಬಾಕು ಉತ್ಪನ್ನಗಳನ್ನು ಬಳಸದೆ ಆರೋಗ್ಯದ ಬಗ್ಗೆ ಕಾಳಜಿ ವಹಿಸ ಬೇಕೆಂದು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ 5 ಕರ್ನಾಟಕ ಗರ್ಲ್ಸ್ ಬಟಾಲಿಯನ್ ದ ಎನ್ ಸಿ ಸಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಜೆ ಎಸ್ ಎಸ್ ಮಹಾವಿದ್ಯಾಲಯದ ವಿಧ್ಯಾರ್ಥಿನಿಯರು ಅಂಬೇಡ್ಕರ್ ನಗರದಲ್ಲಿ ಬೀದಿ ನಾಟಕ ಮೂಲಕ ತಂಬಾಕು ಸೇವನೆಯ ಪರಿಣಾಮ …

Read More »