Breaking News

Breaking News

ಉಪ್ಪಿನ ಬೆಟಗೇರಿಯಲ್ಲಿ ಆರಂಭವಾಯ್ತು ಭಂಡಾರ ಜಾತ್ರೆ

ಧಾರವಾಡ: ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ 21 ವರ್ಷಗಳ ಬಳಿಕ ಗ್ರಾಮದೇವತೆಗಳ ಜಾತ್ರೆ ನಡೆಯುತ್ತಿದ್ದು, ಶನಿವಾರ ಹೊನ್ನಾಟ ಆರಂಭವಾಗಿದೆ. ಗ್ರಾಮ ದೇವತೆ ದೇವಸ್ಥಾನದಿಂದ ದ್ಯಾಮವ್ವ ಹಾಗೂ ದುರ್ಗಾದೇವಿಯ ಮೂರ್ತಿಗಳನ್ನು ಹೊತ್ತು ಯಲ್ಲಮ್ಮನ ದೇವಸ್ಥಾನಕ್ಕೆ ಹೊನ್ನಾಟಕ್ಕೆಂದು ಕರೆ ತರಲಾಯಿತು. ಮೆರವಣಿಗೆಯುದ್ದಕ್ಕೂ ಸಾವಿರಾರು ಜನ ಭಂಡಾರ ಎರಚಾಡಿ ಸಂಭ್ರಮಿಸಿದರು. ಒಂದು ರೀತಿಯಲ್ಲಿ ಇದು ಭಂಡಾರದ ಜಾತ್ರೆ ಎಂದೇ ಕರೆಯಿಸಿಕೊಳ್ಳುತ್ತದೆ. ಹೊನ್ನಾಟದ ಮೊದಲ ದಿನವಾದ ಶನಿವಾರ ರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ಇಬ್ಬರೂ ಗ್ರಾಮ …

Read More »

ಎಐಎಂಡಿ ಟ್ರಸ್ಟ್ ಉದ್ಯೋಗ ಒದಗಿಸುವ ಕಾರ್ಯ ನೀರ್ವಹಿಸುತ್ತೀದೆ : ಇಬ್ರಾಹಿಂ ಮುಜಾವರ

ಹುಬ್ಬಳ್ಳಿ: ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸ್ವಯಂ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಅಖಿಲ ಭಾರತ ಮಧ್ಯಮ ವರ್ಗದ ಅಭಿವೃದ್ಧಿ ( ಎಐಎಂಡಿ) ಹ್ಯೂಮನ್ ರಿಲೀಫ್ ಮತ್ತು ಚಾರಿಟೇಬಲ್ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ಇಬ್ರಾಹಿಂ ಮುಜಾವರ ತಿಳಿಸಿದರು. ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಸ್ಟ್ ನಿಂದ ಮಧ್ಯಮ ವರ್ಗ ಮತ್ತು ಬಡವರು ಆರ್ಥಿಕವಾಗಿ ಅಭಿವೃದ್ಧಿಗಾಗಿ ಸ್ವಯಂ ಉದ್ಯೋಗ ಮಾಡಲು ಉತ್ತೇಜನ, ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಉದ್ಯೋಗ …

Read More »

ಉಣಕಲ್ ಅನಧಿಕೃತ ಲೇಔಟ್ ತೆರವು ಕಾರ್ಯಾಚರಣೆ

ಹುಬ್ಬಳ್ಳಿ : ಉಣಕಲ್ ಗ್ರಾಮ ವ್ಯಾಪ್ತಿಯ ಅನಧಿಕೃತ ಲೇಔಟ್ ತೆರವು ಕಾರ್ಯಾಚರಣೆಯು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ ಹಾಗೂ ಆಯುಕ್ತ ಎನ್.ಹೆಚ್.ಕುಮ್ಮಣ್ಣವರ ನೇತೃತ್ವದಲ್ಲಿ ಜರುಗಿತು. ಈ ಸಂದರ್ಭದಲ್ಲಿ ನಗರ ಯೋಜನಾ ಸದಸ್ಯ ವಿವೇಕ ಕಾರೇಕರ, ಕಾರ್ಯನಿರ್ವಾಹಕ ಅಭಿಯಂತರ ಎಂ. ರಾಜಶೇಖರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜೇಂದ್ರ ಕೊಕ್ಕಳಕಿ, ಬಿ‌. ಎಸ್. ಪಾಟೀಲ, ಮುಕುಂದ ಜೋಶಿ, ಬಸವರಾಜ ದೇವಗಿರಿ, ಮೌನೇಶ ಬಡಿಗೇರ, ಆರ್. ಜಿ. ಪಾಟೀಲ ಹಾಗೂ …

Read More »

ಕನ್ನಡದ ಹಾಸ್ಯನಟ ಮೋಹನ್ ನಿಧನ

ಬೆಂಗಳೂರು : ಕನ್ನಡದ ಅನೇಕ ಚಿತ್ರಗಳಲ್ಲಿ ಹಾಸ್ಯನಟರಾಗಿ ಕಾರ್ಯನಿರ್ವಹಿಸಿದ್ದ ನಟ ಮೋಹನ್ ಜುನೇಜಾ ನಿಧನರಾಗಿದ್ದಾರೆ. ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ಆಸ್ಪತ್ರೆಯಲ್ಲಿ ಮೋಹನ್ ಜುನೇಜಾ ವಿಧಿವಶರಾಗಿದ್ದಾರೆ.ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ , ಶಿವಣ್ಣ , ಸುದೀಪ್ , ಗಣೇಶ್ , ದರ್ಶನ್ , ರವಿಚಂದ್ರನ್ ಸೇರಿದಂತೆ ಎಲ್ಲಾ ನಟರ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೋಹನ್ ಜುನೇಜಾ , ಆನಾರೋಗ್ಯದಿಂದ ಅಸ್ಪತ್ರೆಗೆ ದಾಖಲಾಗಿದ್ದರು . ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ …

Read More »

ಇಂದು ಕೆಪಿಸಿಸಿ ಅಧ್ಯಕ್ಷ ಜಿಲ್ಲಾ ಪ್ರವಾಸ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಇಂದು ಧಾರವಾಡ ಮತ್ತು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ . ಬೆಳಗಾವಿ ಬೆಂಗಳೂರಿನಿಂದ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸುವ ಅವರು ಇಂದು ಮಧ್ಯಾಹ್ನ 12 : 00 ಕ್ಕೆ ಬೆಳಗಾವಿ ಗ್ರಾಮೀಣ ತಾಲೂಕಿನಲ್ಲಿರುವ ಆರಳಿಕಟ್ಟೆಮಠದ ಶಿವಮೂರ್ತಿ ಭಾಗವಹಿಸುವರು . ದೇವರ ಪಟ್ಟಾಭಿಷೇಕದ ಕಾರ್ಯಕ್ರಮದಲ್ಲಿ ಮಧ್ಯಾಹ್ನ 3 : 00 ಕ್ಕೆ ವಿಧಾನ ಪರಿಷತ್ತಿಗೆ ನೈಋತ್ಯ ಪದವೀಧರರ ಕ್ಷೇತ್ರದಿಂದ ಚುನಾವಣೆ ಬಗ್ಗೆ ಬೆಳಗಾವಿ ನಗರ , ಬೆಳಗಾವಿ ಗ್ರಾಮಾಂತರ …

Read More »

ಒಳಚರಂಡಿ ಕಾಮಗಾರಿಗೆ ಚಾಲನೆ ‌ನೀಡಿದ ಕಾಂಗ್ರೆಸ್ ಮುಖಂಡ

ಹುಬ್ಬಳ್ಳಿ: ನಗರದ ವಾರ್ಡ್ ನಂಬರ್ 76 ರ ಎನ್.ಏ ನಗರ ಡಿ . ಬ್ಲಾಕ್ ನಲ್ಲಿ ಒಳಚರಂಡಿ ಕಾಮಗಾರಿ ಪ್ರಾರಂಭಿಸಲಾಯಿತು . ಕಾಂಗ್ರೆಸ್ ಮುಖಂಡ ಮುನ್ನಾ ಕಿತ್ತೂರ ಅವರ ನೇತೃತ್ವದಲ್ಲಿಂದು ಒಳಚರಂಡಿ ಕಾಮಗಾರಿಗೆ ಇಂದು ಚಾಲನೆ ನೀಡಲಾಯಿತು . ಈ ಸಂಧರ್ಭದಲ್ಲಿ ಮುನ್ನಾ ಕಿತ್ತೂರ ಅವರು ತಾವೇ ಮುತವರ್ಜಿ ವಹಿಸಿ ಕಾಮಗಾರಿಯ ಪರಿಶೀಲನೆ ನಡೆಸಿದರು . ಅವರೊಂದಿಗೆ ಎನ್.ಏ ನಗರದ ನಾಗರೀಕರು , ಪಾಲಿಕೆ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು …

Read More »

ನಿಧಾನಗತಿಯಲ್ಲಿ‌ ಸಾಗುತ್ತಿದೆ ಗ್ಯಾಸ್ ಅಳವಡಿಕೆಯ ಕಾರ್ಯ

ಹುಬ್ಬಳ್ಳಿ : 2021 ಹಾಗೂ 2022 ರ ಮೇ ವರೆಗೆ ಸುಮಾರು 21 ಸಾವಿರ ಮನೆಗಳಿಗೆ ಪೈಪ್ಟ್ ನ್ಯಾಚುರಲ್ ಗ್ಯಾಸ್ ಅಳವಡಿಕೆಯ ಗುರಿಯನ್ನು ಐಓಸಿ ಮತ್ತು ಅಂದಾನಿ ಗ್ಯಾಸ್ ಕಂಪನಿಗೆ ಹೊಂದಿದ್ದವು . ಆದರೆ ಕೋವಿಡ್ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲವಾದ ಹಿನ್ನೆಲೆ ಇದೀಗ ಕೇವಲ 19 . 500 ಸಾವಿರ ಮನೆಗಳಿಗೆ ಪೈಪ್ ಲೈನ್ ಅಳವಡಿಸಲಾಗಿದೆ . ಸುಮಾರು ನಾಲ್ಕು ವರ್ಷದಲ್ಲಿ ಕೇವಲ …

Read More »

ಅವಳಿನಗರದಲ್ಲಿ‌ ಸ್ವಚ್ಛತಾ ಕಾರ್ಯ

ಹುಬ್ಬಳ್ಳಿ : ಅವಳಿ ನಗರದ ಮಹಾನಗರ ಪಾಲಿಕೆಯಿಂದ ಹುಬ್ಬಳ್ಳಿಯ ವಿವಿಧ ಬಡಾವಣೆಗಳಲ್ಲಿ ಸ್ವಚ್ಚತಾ ಕಾರ್ಯ ನಡೆಯಿತು . ಈ ಸಂಧರ್ಭದಲ್ಲಿ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು , ಪೌರ ಕಾರ್ಮಿಕರು ಬೆಳಗ್ಗೆಯಿಂದ ನಗರದ ವಿವಿದ ಬಡಾವಣೆಗಳಲ್ಲಿ ಸ್ವಚ್ಚತಾ ಕಾರ್ಯಗಳನ್ನು ಕೈಗೊಂಡರು . ಸಾರ್ವಜನಿಕರು ಪಾಲಿಕೆಯೊಂದಿಗೆ ನಗರದ ಸ್ವಚ್ಛತೆಗೆ ಸಹಕರಿಸಬೇಕೆಂದು ಪಾಲಿಕೆ ಅಧಿಕಾರಿಗಳು ವಿನಂತಿಸಿದರು .

Read More »

15 ಲಕ್ಷ ವೆಚ್ಚದ ಕಾಮಗಾರಿಗೆ ಸಚಿವರಿಂದ ಪೂಜೆ ಸಲ್ಲಿಕೆ

ನವಲಗುಂದ: ತಾಲೂಕಿನ ಬ್ಯಾಲ್ಯಾಳ ಗ್ರಾಮದಿಂದ ದಡೇರಕೊಪ್ಪ ಗ್ರಾಮದ ಸಂಪರ್ಕ ರಸ್ತೆಗೆ ಸುಮಾರು 15 ಲಕ್ಷ ವೆಚ್ಚದ ಕಾಮಗಾರಿಗೆ ಸಚಿವ ಎಸ್ಪಿ ಜನನ ಗುದ್ದಲಿ ಪೂಜೆ ನೆರವೇರಿಸಿದರು . ಇದೆ ವೇಳೆಯಲ್ಲಿ ಗ್ರಾಮಸ್ಥರ ಕುಂದು ಕೊರತೆಗಳನ್ನ ಸಚಿವರು ಆಲಿಸಿದರು . ಈ ಸಂದರ್ಭದಲ್ಲಿ ಗ್ರಾಮದ ಗುರು ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು. .

Read More »

ದಲಿತರ ಮನೆಯಲ್ಲಿ ಊಟ ಮಾಡಿದ ಆದಿತ್ಯನಾಥ್

ಲಕ್ನೋ:ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಶುಕ್ರವಾರ ಅಯೋಧ್ಯೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೊಳೆಗೇರಿಯ ದಲಿತರ ಮನೆಯಲ್ಲಿ ಊಟ ಮಾಡಿದರು. ತಮ್ಮ ಸರ್ಕಾರದ ಅತ್ಯುನ್ನತ ಔಚಿತ್ಯದ ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವ ಅವರ ದೃಷ್ಟಿಗೆ ಅನುಗುಣವಾಗಿ, ಮುಖ್ಯಮಂತ್ರಿಗಳು ತಮ್ಮ ಊಟದ ನಂತರ ದಲಿತ ಪ್ರಾಬಲ್ಯವಿರುವ ಪ್ರದೇಶದಲ್ಲಿ ಮಣಿರಾಮ್ ಮತ್ತು ಅವರ ಕುಟುಂಬದೊಂದಿಗೆ ಸಂವಾದ ನಡೆಸಿದರು.

Read More »