ಹಾಸನ: ಬಿಜೆಪಿ ಮುಖಂಡ ದೇವರಾಜೇಗೌಡ ಹಾಗು ಮಾಜಿ ಸಚಿವ ರೇವಣ್ಣ ಕುಟುಂಬ ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ವಾರದ ಹಿಂದೆ ಹಾಸನದಲ್ಲಿ ಸುದ್ದಿ ಗೋಷ್ಟಿ ನಡೆಸಿ ರೇವಣ್ಣ ಕುಟುಂಬದ ರಾಸಲೀಲೆ ವೀಡಿಯೋ ಇದೆ. ರೇವಣ್ಣ ಇನ್ನುಮುಂದೆ ಬಾಯಿಮುಚ್ಚಿಕೊಂಡು ಸುಮ್ಮನಿರಬೇಕು ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಹೇಳಿದರು.
ರೇವಣ್ಣ ಇನ್ನುಮುಂದೆ ಬಾಯಿಮುಚ್ಚಿಕೊಂಡು ಸುಮ್ಮನಿರಬೇಕು. ಇಲ್ಲವಾದರೆ ಹಾಸನದ ಪ್ರಮುಖ ವೃತ್ತದಲ್ಲಿ ಎಲ್ ಇ ಡಿ ಪರದೆ ಹಾಕಿ ವೀಡಿಯೋ ಪ್ಲೇ ಮಾಡೋದಾಗಿ ಮಾತನಾಡಿದ್ದ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಹೇಳಿಕೆಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ವಾಗ್ದಾಳಿ ನಡೆಸಿದ್ರು. ರೇವಣ್ಣರ ಹೇಳಿಕೆ ಬೆನ್ನಲ್ಲೇ ಸವಾಲು ಸ್ವೀಕಾರ ಮಾಡಿರೋದಾಗಿ ಮಾದ್ಯಮ ಗೋಷ್ಠಿ ಕರೆದ ದೇವರಾಜೇಗೌಡ. ರೇವಣ್ಣರ ಸವಾಲನ್ನು ಸಂತೋಷ ದಿಂದ ಸ್ವೀಕಾರ ಮಾಡಿದ್ದೇನೆ, ಒಂದು ವೀಡಿಯೋ ವನ್ನು ರಾಜ್ಯದ ಜನತೆ ಹಾಗು ದೇಶದ ನಾಗರೀಕರ ಮುಂದೆ ಇಡುತ್ತೇನೆ ಎಂದು ಮೆಸೇಜ್ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





