Breaking News

ಎಐಎಂಡಿ ಟ್ರಸ್ಟ್ ಉದ್ಯೋಗ ಒದಗಿಸುವ ಕಾರ್ಯ ನೀರ್ವಹಿಸುತ್ತೀದೆ : ಇಬ್ರಾಹಿಂ ಮುಜಾವರ


ಹುಬ್ಬಳ್ಳಿ: ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸ್ವಯಂ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಅಖಿಲ ಭಾರತ ಮಧ್ಯಮ ವರ್ಗದ ಅಭಿವೃದ್ಧಿ ( ಎಐಎಂಡಿ) ಹ್ಯೂಮನ್ ರಿಲೀಫ್ ಮತ್ತು ಚಾರಿಟೇಬಲ್ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ಇಬ್ರಾಹಿಂ ಮುಜಾವರ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಸ್ಟ್ ನಿಂದ ಮಧ್ಯಮ ವರ್ಗ ಮತ್ತು ಬಡವರು ಆರ್ಥಿಕವಾಗಿ ಅಭಿವೃದ್ಧಿಗಾಗಿ ಸ್ವಯಂ ಉದ್ಯೋಗ ಮಾಡಲು ಉತ್ತೇಜನ, ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಉದ್ಯೋಗ ಆಧಾರಿತ ಕೋಸ್೯, ಹಾಸ್ಟೆಲ್,ಲೈಬ್ರರಿ, ಕ್ರೀಡೆ ಭಾಗವಹಿಸುವ ಆಸಕ್ತರಿಗೆ ಸೌಲಭ್ಯ ನೀಡಲಾಗುತ್ತದೆ ಎಂದರು.

ಪ್ರಸ್ತುತವಾಗಿ ಏಳು ಜಿಲ್ಲೆಗಳಾದ ಉತ್ತರ ಕನ್ನಡ, ಹಾವೇರಿ, ಧಾರವಾಡ, ಬೆಳಗಾವಿ, ಗದಗ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಎಲ್ಲ ಜಿಲ್ಲೆಗಳಿಗೆ ಸಾಮಾಜಿಕ ಮುಖ್ಯಸ್ಥರ, ೫೦ ತಾಲೂಕು ಮತ್ತು ಪಟ್ಟಣಗಳಿಗೆ ನೋಂದಾಯಿತ ವ್ಯವಸ್ಥಾಪಕರು ಮತ್ತು ಸಾಫ್ಟ್‌ವೇರ್ ಡೆವಲಪರ್ ನೇಮಿಸಿಕೊಳ್ಳಲು ಎಂಬಿಎ,ಎಂಸಿಎ ಪದವಿ ಹೊಂದಿದವರು ಅರ್ಜಿ ಆಹ್ವಾನಿಸಲಾಗಿದೆ‌ ಎಂದು ತಿಳಿಸಿದರು.

ಟ್ರಸ್ಟ್ ಸಿಇಒ ಪ್ರಕಾಶ ಗಾಮನಗಟ್ಟಿ, ಮಾನವ ಸಂಪನ್ಮೂಲ ವ್ಯವಸ್ಥಾಪಕ ರಮೇಶ ಹೊಸಳ್ಳಿ ಇದ್ದರು.

Share News

About admin

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *