Breaking News

Breaking News

ರಾಜ್ಯದಲ್ಲಿ 24 ಗಂಟೆಗಳಲ್ಲಿ 85 ಕೋವಿಡ್ ಪ್ರಕರಣಗಳು ದೃಢ

ಬೆಂಗಳೂರು: 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ 85 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಯಾವುದೇ ಸಾವು ಸಂಭವಿಸಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,686ಕ್ಕೆ ಏರಿದ್ದು, 70 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. 24 ಗಂಟೆಗಳಲ್ಲಿ 7,171 ಕೋವಿಡ್ ಪರೀಕ್ಷೆ ನಡೆಸಲಾಗಿದೆ.ಬೆಂಗಳೂರು ನಗರದಲ್ಲಿ 82 ಪ್ರಕರಣ, ವಿಜಯಪುರದಲ್ಲಿ 1 ಮತ್ತು ತುಮಕೂರಿನಲ್ಲಿ 2 ಪ್ರಕರಣ ದಾಖಲಾಗಿವೆ.

Read More »

ಸಿ.ಸಿ.ಪಾಟೀಲ್ ಮನೆ ಮುಂದೆ ದಿಂಗಾಲೇಶ್ವರ ಸ್ವಾಮೀಜಿ ಧರಣಿ..‌. ಯಾಕೆ ಗೊತ್ತಾ?

ಗದಗ : ಮೂರು ಸಾವಿರ ಮಠದ ಪಿಠಾಧಿಪತಿಯಾಗಲು ದಿಂಗಾಲೇಶ್ವರ ಸ್ವಾಮೀಜಿ ರೌಡಿಸಂ ಮಾಡಿದ್ದರು ಎಂಬ ಸಚಿವ ಸಿ.ಸಿ.ಪಾಟೀಲ್ ಆರೋಪವನ್ನು ಸಾಬೀತು ಮಾಡಬೇಕು ಎಂದು ಆಗ್ರಹಿಸಿ ಇಂದು ದಿಂಗಾಲೇಶ್ವರ ಸ್ವಾಮೀಜಿ ಧರಣಿ ನಡೆಸಲಿದ್ದಾರೆ. ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿರುವ ಸಚಿವ ಸಿ.ಸಿ.ಪಾಟೀಲ್ ಮನೆ ಮುಂದೆ ದಿಂಗಾಲೇಶ್ವರ ಸ್ವಾಮೀಜಿ ಧರಣಿ ನಡೆಸಲಿದ್ದಾರೆ. ತಮ್ಮ ವಿರುದ್ಧ ಸಚಿವ ಸಿ.ಸಿ.ಪಾಟೀಲ್ ಮಾಡಿರುವ ಆರೋಪಗಳ ಬಗ್ಗೆ ಏಪ್ರಿಲ್ 27 ರೊಳಗೆ ವಿವರಣೆ ನೀಡಬೇಕು ಎಂದು ದಿಂಗಾಲೇಶ್ವರ ಶ್ರೀಗಳು …

Read More »

ಇನ್ನೂ ಎರಡು ದಿನ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

ಬೆಂಗಳೂರು : ರಾಜ್ಯದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿತ್ರದುರ್ಗ, ಬೆಳಗಾವಿ, ಕೊಪ್ಪಳ, ವಿಜಯಪುರ, ಹಾವೇರಿ, ಗದಗ, ಧಾರವಾಡ, ಬಳ್ಳಾರಿ, ತುಮಕೂರು, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಆಗುವ ಸಾಧ್ಯತೆವಿದೆ.

Read More »

ಸಾಲಭಾದೆ ತಾಳಲಾರದೆ ಕೆರೆಗೆ ಹಾರಿ ಆತ್ಮಹತ್ಯೆ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಶಿವಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಲ್ಕಟ್ಟೆ ಕೆರೆಯಲ್ಲಿ ಬೆಟ್ಟಹಳ್ಳಿ ಗ್ರಾಮದ ವಿಜಯ್ ಸಾಲಭಾಧೆ ತಾಳಲಾರದೆ ಸೋಮವಾರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಸೋಮವಾರದಿಂದ ಅಗ್ನಿ ಶಾಮಕದಳದವರು ಶವ ಪತ್ತೆಗಾಗಿ ಪ್ರಯತ್ನಿಸಿದ್ದರು, ಶವ ಸಿಕ್ಕಿರಲಿಲ್ಲ ಮಂಗಳವಾರ ಬೆಳಗ್ಗೆ ಕಲ್ಕಟ್ಟೆ ಕೆರೆಯಲ್ಲಿ ವಿಜಯ್ ಶವ ದೊರೆತಿದೆ. ಆತ್ಮಹತ್ಯೆ ಮಾಡಿಕೊಂಡಿರುವ ವಿಜಯ್ ಗೆ 25 ಲಕ್ಷ ರೂಪಾಯಿಗಳ ಸಾಲ ಇತ್ತೆಂದು ಹೇಳಲಾಗಿದ್ದು, ಈ ಬಗ್ಗೆ ಸಾಲಗಾರರು ಮಾನಸಿಕವಾಗಿ ಕಿರುಕುಳ …

Read More »

ಸಿದ್ದಪ್ಪ ಕಂಬಳಿ ಪ್ರತಿಮೇಗೆ ಮಾಲಾರ್ಪಣೆ

ಹುಬ್ಬಳ್ಳಿ : ಸಿದ್ದಪ್ಪ ಕಂಬಳಿ ಪುಣ್ಯಸ್ಮರಣೆ ಅಂಗವಾಗಿ ನಗರದಲ್ಲಿ ಇಂದು  ಸಿದ್ದಪ್ಪ ಕಂಬಳಿ ಮಾರ್ಗದಲ್ಲಿನ ಚಿಟಗುಬ್ಬಿ ಆಸ್ಪತ್ರೆ ಹತ್ತಿರದಲ್ಲಿರುವ ಅವರ ಪ್ರತಿಮೇಗೆ  ಅವರ ಮಹಾನಗರ ಪಾಲಿಕೆ ವತಿಯಿಂದ ಪೂಜೆಯನ್ನು ಮಾಡಿ  ಮಾಲಾರ್ಪಣೆಯನ್ನು ಮಾಡಲಾಯಿತು.

Read More »

ಹುಬ್ಬಳ್ಳಿಯಲ್ಲಿ ಮಳೆಯ ಅವಾಂತರ:ರೈಲ್ವೆ ನಿಲ್ದಾಣದ ಅಂಡರ್ ಪಾಸ್ ನಲ್ಲಿ ನೀರು

ಹುಬ್ಬಳ್ಳಿ: ನಿನ್ನೆ ಹುಬ್ಬಳ್ಳಿಯಲ್ಲಿ ಸುರಿದ ಬಾರಿ ಮಳೆಯಿಂದ ಬಹುತೇಕ ಕಡೆಯಲ್ಲಿ ಅವಘಡಗಳು ಸಂಭವಿಸಿದ್ದು, ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಅಂಡರ್ ಪಾಸ್ ನಲ್ಲಿ ಕೂಡ ನೀರು ನಿಂತಕೊಂಡು ಪ್ರಯಾಣಿಕರು ಪರದಾಡುವಂತಾಗಿದೆ. ನಿನ್ನೆ ಸುರಿದ ಬಾರಿ ಮಳೆಯಿಂದ ಹುಬ್ಬಳ್ಳಿಯ ತಾಲೂಕಿನಲ್ಲಿ ಸಾಕಷ್ಟು ಹಾನಿಯಾಗಿದ್ದು, ರೈಲ್ವೆ ನಿಲ್ದಾಣದ ಅಂಡರ್ ಪಾಸ್ ನಲ್ಲಿ ಕೂಡ ನೀರು ಹೊಕ್ಕಿರುವುದು ನಿಜಕ್ಕೂ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಅಕಾಲಿಕ ಮಳೆಯು ಅವಾಂತರ ಸೃಷ್ಟಿಸುತ್ತಿದ್ದು, ನಿನ್ನೆಯ …

Read More »

ಶಿಕ್ಷಕರ ಚುಣಾವಣೆಗೆ ನಾನು ಪ್ರಭಲ ಆಕಾಂಕ್ಷಿ: ದೇಶಪಾಂಡೆ

ಹುಬ್ಬಳ್ಳಿ: ಜೂನ್ 2022 ರಲ್ಲಿ ನಡೆಯುವ ಕರ್ನಾಟಕ ಪಶ್ಷಿಮ ಶಿಕ್ಷಕರ ಮತಕ್ಷೇತ್ರಕ್ಕೆ ಚುಣಾವಣೆಗೆ ಭಾರತೀಯ ಜನಾತಾ ಪಾರ್ಟಿ ಯ ವತಿಂಯಿಂದ ನಾನು ಚುಣಾವಣೆಗೆ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದನೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸುಧೀದ್ರ ದೇಶಪಾಂಡೆ ಹೇಳಿದರು.. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಮೂವತ್ತು ವರ್ಷಗಳಿಗಿಂತ ಹೆಚ್ಚಿನ ಕಾಲ ನಾನು ಶಿಕ್ಷಕರ ಕುಂದು ಕೋರತೆಗಳಿಗಾಗಿ ಹೋರಾಟ ಮಾಡಿದ್ದೆನೆ, ಮತ್ತು ಕಳೆದ 35 ವರ್ಷ ಗಳಿಂದ ಸಂಘ ಪರಿವಾರದ …

Read More »

ಮನನೊಂದು ಅಪಾರ್ಟ್‌ಮೆಂಟ್ ಮೇಲಿಂದ ಬಿದ್ದು ಸಾವನ್ನಪ್ಪಿದ ಶರಣ ಪಟ್ಟಣಶೆಟ್ಟಿ

ಹುಬ್ಬಳ್ಳಿ: ಮನನೊಂದು ವ್ಯಕ್ತಿಯೊಬ್ಬ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ಇಂದು ಬೆಳ್ಳಂಬೆಳಗ್ಗೆ ನಗರದ ಗೋಕುಲ್ ರಸ್ತೆಯಲ್ಲಿ ನಡೆದಿದೆ. 36 ವರ್ಷದ ಶರಣ ಪಟ್ಟಣಶೆಟ್ಟಿ ಎಂಬುವನೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಗೋಕುಲ್ ರಸ್ತೆಯ ಶ್ರಿಯಾ ಇನ್‌ಕ್ಲೂವ್ ಅಪಾರ್ಟ್‌ಮೆಂಟ್ ನಿಂದ ಬಿದ್ದು ಸಾವನ್ನಪ್ಪಿದ್ದಾನೆ. ಈ ಕುರಿತು ಗೋಕುಲ ರಸ್ತೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲಾ. ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ….

Read More »

ಸಾರ್ವಜನಿಕರಿಗೆ ವಂಚಿಸುತ್ತಿದ್ದ ವ್ಯಕ್ತಿ ಬಂಧನ

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ರಾಜಧಾನಿ ಕಾಲೋನಿ ಕ್ರಾಸ್ ಹತ್ತಿರ ಓಸಿ ಬರೆದು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಓರ್ವನನ್ನು ಗೋಕುಲ ರಸ್ತೆಯ ಪೊಲೀಸರು ಬಂಧಿಸಿ ಅವನಿಂದ ೯,೩೯೦ ರೂ. ವಶಪಡಿಸಿಕೊಂಡಿದ್ದಾರೆ.ಹಳೆ ಹುಬ್ಬಳ್ಳಿ ಅರವಿಂದ ನಗರದ ನಿವಾಸಿ ಮೋಹನ ಎ. ಎಂಬಾತ ಬಂಧಿತ ಆರೋಪಿ. ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಕರೆ ಮೂಲಕ ಅಪರಿಚಿತ ವ್ಯಕ್ತಿಯಿಂದ ಹಣ ವರ್ಗಾವಣೆ

ಹುಬ್ಬಳ್ಳಿ: ಬ್ಯಾಂಕ್ ಖಾತೆಯ ಕೆವೈಸಿ ಅಪಡೇಟ್ ಮಾಡಬೇಕು ಎಂದು ಚನ್ನವ್ವ ಸೂರಿಯವರಿಗೆ ಕರೆ ಮಾಡಿದ ವ್ಯಕ್ತಿ 1,52,934 ರೂ . ವಂಚಿಸಿದ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಅಪರಿಚಿತ ವ್ಯಕ್ತಿ ಚನ್ನವ್ವ ಅವರಿಗೆ ಕರೆ ಮಾಡಿ ನಿಮ್ಮಬ್ಯಾಂಕ್ ಸ್ಥಗಿತವಾಗುತ್ತೆ . ಕೆವೈಸಿ ಅಪಡೇಟ್ ಮಾಡಿಕೊಳ್ಳಬೇಕು ಎಂದು ನಂಬಿಸಿ ಎಟಿಎಂ ಕಾರ್ಡ್ ನಂಬರ ಮತ್ತು ಒಟಿಪಿ ಪಡೆದು ಖಾತೆಯಲ್ಲಿದ್ದ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ .

Read More »